ಮಲ್ಲೇಶ್ ಮೇಷ್ಟ್ರು
ಅದು ನಮ್ಮ ಪ್ರಾಥಮಿಕ ಶಾಲಾ ದಿನಗಳು ನಾನು 6ನೇ ತರಗತಿ ಓದುತ್ತಿದ್ದ ಸಂದರ್ಭ. ಆಗಷ್ಟೇ ತಮ್ಮ ಟಿಸಿಎಚ್ ಮುಗಿಸಿ ಶಿಕ್ಷಕರ ಹುದ್ದೆಯನ್ನು ಪಡೆದು ನಮ್ಮೂರ ಶಾಲೆಗೆ ಮೊದಲ ಬಾರಿಗೆ ಶಿಕ್ಷಕರಾಗಿ ಬಂದವರೇ ಮಲ್ಲೇಶ್ ಎಂಬ ನಮ್ಮೆಲ್ಲರ ನೆಚ್ಚಿನ ಮೇಷ್ಟ್ರು.
ಮಲ್ಲೇಶ್ ಸರ್ ಆಗಷ್ಟೇ ತರಬೇತಿ ಮುಗಿಸಿ ಬಂದು ಉತ್ಸಾಹದಲ್ಲಿದ್ದರು. ಅವರ ಬೋಧನಾ ಕ್ರಮ, ಶಿಸ್ತು ಬದ್ಧ ಕೆಲಸಗಳು, ಸಮಯ ಪ್ರಜ್ಞೆ, ಆದರ್ಶನೀಯವಾದ ಬದುಕು, ಅವರ ನಡೆ ನುಡಿ ನಮಗೆಲ್ಲ ಅತ್ಯಂತ ಆಕರ್ಷನೀಯವಾಗಿದ್ದವು.
ನಮಗೆ ಸಮಾಜ ವಿಜ್ಞಾನ ವಿಷಯ ಬೋಧಿಸುತ್ತಿದ್ದ ಅವರು ಅಂದಿನ ಕಾಲದಲ್ಲೇ ನಮ್ಮಲ್ಲಿ ಬಸವಣ್ಣ ಅವರ ಸಮ ಸಮಾಜದ ಕನಸನ್ನು ಬಿತ್ತಿದ್ದಂತವರು. ಜೊತೆಗೆ ಸಮಾಜದಲ್ಲಿ ಆದರ್ಶನೀಯವಾಗಿ ಹೇಗೆ ಬದುಕಬೇಕೆಂಬುದನ್ನು ತಿಳಿ ಹೇಳಿದಂತವರು.
ನಮ್ಮೂರಿನ ಸರ್ಕಾರಿ ಶಾಲೆಗೆ ಕೀರ್ತಿತಂದ ಪ್ರಮುಖ ಶಿಕ್ಷಕರಲ್ಲಿ ಇವರೂ ಒಬ್ಬರು. ವಿದ್ಯಾರ್ಥಿಗಳ ಮನದಾಳವನ್ನು ಅರಿತು ಬೋಧಿಸುತ್ತಿದ್ದ ಅಪರೂಪದ ಶಿಕ್ಷರಾಗಿದ್ದ ನಮ್ಮೆಲ್ಲರ ಮೆಚ್ಚಿನ ಈ ಮೇಷ್ಟ್ರು ನಾಟಕ ಪ್ರಿಯರಾಗಿದ್ದರು. ಅದು ನಮಗೆಲ್ಲ ಅಂದಿಗೆ ಸೋಜಿಗ…! ನಾಟಕವೆಂದರೆ ಅವರಿಗೆ ಅಷ್ಟೊಂದು ಅಕ್ಕರೆ. ಅದಕ್ಕೆ ನಿರ್ದಶನವೆಂಬಂತೆ ನಮ್ಮ ಮೇಷ್ಟ್ರು ಅವರ ಊರಿನಲ್ಲಿ ನಡೆಯುತ್ತಿದ್ದ ಸಾಮಾಜಿಕ ನಾಟಕಗಳಲ್ಲಿ ಭಾಗವಹಿಸಿ ಅದ್ಭುತವಾಗಿ ನಟಿಸುತ್ತಾ ಜನರ ಮನ ಗೆದ್ದಿದ್ದರು. ಅದ್ಭುತವಾಗಿ ಅಭಿನಯಿಸುತ್ತಿದ್ದ ಅವರ ಪ್ರತಿಭೆಯನ್ನು ಕಂಡು ನಾವೇ ರೋಮಾಂಚಿತರಾಗಿದ್ದೆವು.
ಇಂತಹ ಸಕಲಕಲಾ ವಲ್ಲಭರಂತಹ ಮಲ್ಲೇಶ್ ಮೇಷ್ಟ್ರನ್ನು ಪಡೆದ ನಾವೇ ಧನ್ಯರು. ನಾವು ಇಂದು ಏನಾದರೂ ಅಷ್ಟೋ ಇಷ್ಟೋ ಆದರ್ಶನೀಯವಾಗಿ ಬದುಕುತ್ತಿದ್ದೇವೆಂದರೆ ಇಂತಹ ಆದರ್ಶನೀಯವಾದ ಗುರುಗಳ ಒಡನಾಟ ಹಾಗೂ ಮಾರ್ಗದರ್ಶನವೇ ಕಾರಣ. ಥ್ಯಾಂಕ್ಯೂ ಡಿಯರ್ ಮಲ್ಲೇಶ್ ಸರ್.
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…