Andolana originals

ಎಸ್‌ಐಆರ್: ಮಿಶ್ರ ಪ್ರತಿಕ್ರಿಯೆ

ಕೆ.ಎಸ್.ಚಂದ್ರಶೇಖರ ಮೂರ್ತಿ

‘ಸಂವಿಧಾನಬದ್ಧ ಪ್ರಕ್ರಿಯೆ; ಕಾರ್ಯವಿಧಾನದ ಬಗ್ಗೆ ಅಸಮಾಧಾನ’ ಸಾಹಿತಿಗಳು, ಗಣ್ಯರು, ಮುಖಂಡರ ಅಭಿಪ್ರಾಯ

ಮೈಸೂರು: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಚಾಲನೆಗೊಂಡಿದೆ. ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳು ವೋಟರ್ ಲಿಸ್ಟ್ ಹಿಡಿದು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

ಇವರ ಸಹಾಯಕರಾಗಿ ಆಯಾಯ ಪಕ್ಷಗಳ ಕಾರ್ಯಕರ್ತರು ಬೂತ್ ಮಟ್ಟದ ಏಜೆಂಟ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಬಗ್ಗೆ ಹಲವರು ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಕೆಲ ಮುಖಂಡರು, ಸಾಹಿತಿಗಳು, ಲೇಖಕರು ಎಸ್‌ಐಆರ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ‘ಆಂದೋಲನ’ದ ಜೊತೆಗೆ ಹಂಚಿಕೊಂಡಿದ್ದಾರೆ.

” ಎಸ್‌ಐಆರ್‌ಗೆ ಪ್ರಕ್ರಿಯೆಗೆ ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಬೇಕು. ನಮ್ಮ ದಾಖಲೆಗಳಲ್ಲಿ ಹೆಸರು ತಪ್ಪಾಗಿದ್ದರೆ ಅಥವಾ ಇನ್ನಿತರ ಯಾವುದೇ ತಪ್ಪುಗಳನ್ನು ಈ ಸಂದರ್ಭದಲ್ಲಿ ಸರಿಪಡಿಸಿಕೊಳ್ಳಬೇಕು. ಇದಕ್ಕೆ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮುಕ್ತವಾಗಿ ಸ್ಪಂದಿಸಬೇಕು. ಎಸ್‌ಐಆರ್‌ನಿಂದ ನಕಲಿ ಮತದಾರರನ್ನು ಗುರುತಿಸಿ ಮತಪಟ್ಟಿಯಿಂದ ಅವರ ಹೆಸರುಗಳನ್ನು ತೆಗೆದುಹಾಕಬಹುದು. ನಮ್ಮ ಹೆಸರುಗಳನ್ನು ಡಿಲೀಟ್ ಮಾಡುತ್ತಾರೆ ಎಂಬ ಆತಂಕ ಕೆಲವರಲ್ಲಿ ಇದೆ. ಯಾರ ಹೆಸರುಗಳನ್ನುಡಿಲಿಟ್ ಮಾಡುವುದಿಲ್ಲ. ಎಸ್ ಐಆರ್‌ನಿಂದ ನಾವು ಭಾರತೀಯ ಪ್ರಜೆಗಳು ಎಂಬುದನ್ನು ಸಾಕ್ಷೀಕರಿಸುವ ಕಾರ್ಯವಾಗಿದೆ.”

– ಸೈಯದ್ ಇಸಾಕ್, ಸಮಾಜ ಸೇವಕರು, ಸಾರ್ವಜನಿಕ ಗ್ರಂಥಾಲಯ

” ಎಸ್‌ಐಆರ್ ಅನ್ನೋದು ಸಾಂವಿಧಾನಿಕವಾಗಿ ಕಾಲಕಾಲಕ್ಕೆ ಮಾಡಬೇಕಾದ ಕರ್ತವ್ಯಗಳಲ್ಲಿ ಒಂದಾಗಿದೆ. ಈ ಹಿಂದೆ ಎಸ್‌ಐಆರ್ ರೀತಿಯದ್ದು ಆಗಿದೆ. ಆದರೆ ಈ ಬಾರಿ ಮಾತ್ರ ಸಂವಿಧಾನದ ಆಶಯದ ಒಂದು ಮರೆಯಲ್ಲಿ ಗುರಾಣಿಯ ರೀತಿ ಹಿಡಿದುಕೊಂಡು ಅತ್ಯಂತ ಪೂರ್ವಗ್ರಹ ಪೀಡಿತವಾದಂತಹ ಮತದಾರರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡುತ್ತಿದೆ. ಇದರ ಉದ್ದೇಶವೇನೆಂದರೆ ಮುಸ್ಲಿಮರು, ದಲಿತರು ಆದಿವಾಸಿಗಳು… ಇಂತಹ ಸಮುದಾಯದವರು ಹಾಗೂ ಬಿಜೆಪಿ ಆಶಯದ ಮತದಾರರು ಅಲ್ಲದವರನ್ನು ಪಟ್ಟಿಯಿಂದ ಹೊರಗಿಡುವಂತಹ ಒಂದು ಅತ್ಯಂತ ವಿಕೃತವಾದ ಪ್ರಯತ್ನವಾಗಿದೆ.”

-ಕೆ.ಪಿ.ಸುರೇಶ್, ಲೇಖಕರು, ಮೈಸೂರು

” ಮತದಾರರ ಪಟ್ಟಿಯ ವಿಶೇಷ ಸಮಗ್ ಪರಿಷ್ಕರಣೆ ಕಾಲ ಕಾಲಕ್ಕೆ ಮಾಡಬೇಕಾ ಗುತ್ತದೆ. ಇದು ಚುನಾವಣಾ ಆಯೋಗದ ಕರ್ತವ್ಯ. ಎಸ್‌ಐಆರ್ ಎಂಬುದು ಸಂವಿಧಾನ ಮೂಲಭೂತ ಆಶಯಕ್ಕೆ ಪೂರಕವಾಗಿದೆ. ಹಾಗಾಗಿ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ತೆಗೆದು ಹಾಕಬಾರದು. ತಕ್ಷಣಕ್ಕೆ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ಅರ್ಹ ಮತದಾರರಿಗೆ ಮತ್ತೊಂದು ಅವಕಾಶ ಕೊಡಬೇಕು.”

-ಅ.ಮ.ಭಾಸ್ಕರ, ವಕೀಲರು, ಮೈಸೂರು

” ಎಸ್‌ಐಆರ್ ಕುರಿತು ನನ್ನ ಪ್ರಕಾರ ಎರಡು ರೀತಿಯಲ್ಲಿ ಹೇಳಬಹುದು. ಒಂದು ಕಾನೂನಾತ್ಮಕವಾಗಿ, ಇನ್ನೊಂದು ವಾಸ್ತವಿಕ ಪ್ರಾಯೋಗಿಕವಾಗಿ. ಮೊದಲನೆಯದು ಎಸ್‌ಐಆರ್‌ನಿಂದ ಪೌರತ್ವ ಸಾಬೀತು ಮಾಡುವ ಒಂದು ಪ್ರಯತ್ನದಂತೆ ಕಾಣುತ್ತದೆ. ಇದನ್ನು ರಾಷ್ಟ್ರೀಯ ಚುನಾವಣಾ ಆಯೋಗ ಮಾಡುತ್ತಿದೆ. ಆದರೆ ಇದನ್ನು ಕೇವಲ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಮಾತ್ರ ಮಾಡಬಹುದು. ಭಾರತೀಯ ಚುನಾವಣಾ ಆಯೋಗಕ್ಕೆ ಇದರ ಅಧಿಕಾರ ಇಲ್ಲ. ಅವರು ಕುಟುಂಬದ ಮಾಹಿತಿಯಲ್ಲಿ ಜನ್ಮ ದಿನಾಂಕ, ಹುಟ್ಟಿದ ಸ್ಥಳ ಕೇಳುತ್ತಾರೆ ಹಾಗೂ ಜನನ ಪ್ರಮಾಣ ಪತ್ರ… ಹೀಗೆ ಮುಂತಾದ ಡಾಕ್ಯುಮೆಂಟ್ ಕೇಳುತ್ತಾರೆ. ಇದರಿಂದ ಪ್ರಾಯೋಗಿಕ ಸಮಸ್ಯೆ ಕಂಡು ಬರುತ್ತದೆ.”‌

-ಸುಧೀರ್ ಒಂಬತ್ಕೆರೆ, ನಿವೃತ ಮೇಜರ್ ಜನರಲ್, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

6 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

7 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

7 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

7 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

8 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

12 hours ago