Categories: ಮೈಸೂರು

ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ 20ನೇ ವರ್ಷದ ಸಂಭ್ರಮ

ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ ಹೂಡಿಕೆ ಮಾಡಬೇಕು, ಒಂದು ಸೈಟ್ ಖರೀದಿಸಬೇಕು, ಇಂತಹ ಪ್ರಶಾಂತವಾದ ನಗರದಲ್ಲಿ ನಮ್ಮದೇ ಒಂದು ಮನೆ ಮಾಡಬೇಕು ಎಂದು ಈಗ ಎಷ್ಟೋ ಜನರು ಕನಸು ಕಾಣುವಂತೆ ಆಗಲೂ ಎಷ್ಟೋ ಜನರು ಯೋಚಿಸುತ್ತಿದ್ದರು. ಆದರೆ ಇವರಿಗೆ ಸೈಟ್ ಖರೀದಿಸುವ, ಮನೆ ನಿರ್ಮಿಸುವ ಹಾದಿಯಲ್ಲಿ ವೃತ್ತಿಪರ ಮಾರ್ಗದರ್ಶನ ನೀಡುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟೇ ಇತ್ತು. ಮೈಸೂರಿನಲ್ಲಿ ಒಂದು ನಂಬಿಕಾರ್ಹರಿಯಲ್ ಎಸ್ಟೇಟ್ ಸಂಸ್ಥೆ ಆರಂಭಕ್ಕೆ ಆ ಸಮಯ ಸೂಕ್ತ ವೇದಿಕೆ ಸೃಷ್ಟಿಮಾಡಿಕೊಟ್ಟಿತ್ತು. ಆಗ ಹುಟ್ಟಿದ್ದೇ ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್. ೨೦೨೬ ಆಗಸ್ಟ್ ೧೯ಕ್ಕೆ ಅಲಯನ್ಸ್ ಸ್ಕ್ವೇರ್ ಪ್ರಾಪರ್ಟೀಸ್‌ಗೆ ೨೦ ವರ್ಷಗಳು ತುಂಬಿದ ಸಂಭ್ರಮ.

ಸೇಫ್ ವ್ಹೀಲ್ಸ್‌ನ ಅಂಗಸಂಸ್ಥೆ ೧೯೯೯ರಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿ ಬಿ.ಎಸ್. ಪ್ರಶಾಂತ್ ಅವರಿಂದ ಆರಂಭವಾದ ಸೇಫ್ ವ್ಹೀಲ್ಸ್ ಟೂರ್ಸ್ ಅಂಡ್ ಟ್ರಾವಲ್ಸ್. ಇದರ ಭಾಗವಾಗಿ ಹುಟ್ಟಿದ್ದು ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪೆನೀಸ್ ಎಂಬ ವಿಶಾಲ ಪರಿಕಲ್ಪನೆ. ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪೆನೀಸ್‌ನ ಭಾಗವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್. ಪ್ರಶಾಂತ್ ೨೦೦೬ರಲ್ಲಿ ಪ್ರಾಪರ್ಟೀಸ್ ಇನ್ ಮೈಸೂರು ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಅದಕ್ಕೆ ಅಲಯನ್ಸ್ ಸ್ಕೆ ರ್ ಎಂದು ಮರು ನಾಮಕರಣ ಮಾಡಲಾಯಿತು. ಮೈಸೂರಿನಲ್ಲಿ ಹಾಗೂ ಮೈಸೂರಿನ ಸುತ್ತಮುತ್ತ ವಿವಿಧ ಬಡಾವಣೆಗಳನ್ನು, ಪ್ರಾಪರ್ಟಿಗಳ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಜವಾಬ್ದಾರಿಯನ್ನು ೨೦ ವರ್ಷಗಳಿಂದ ಈ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದೆ.

ಡೆವಲಪರ್‌ಗಳು ಅಭಿವೃದ್ಧಿಪಡಿಸಿದ ಅತ್ಯು ತ್ತಮ ನಿವೇಶನಗಳನ್ನು ಅಲಯನ್ಸ್ ಸ್ಕ್ವೇರ್ ತಮ್ಮಲ್ಲಿರುವ ತಂಡದ ಮೂಲಕ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಮಾಡಿಸುತ್ತದೆ. ಗ್ರಾಹಕರು ಒಮ್ಮೆ ಸೈಟ್ ಖರೀದಿಸಬೇಕೆಂದು ನಿರ್ಧಾರ ಮಾಡಿದರೆ ಸಾಕಷ್ಟೆ. ಅವರಿಗೆ ವಿವಿಧ ಬಜೆಟ್‌ನ, ವಿವಿಧ ಅಳತೆಯ, ವಿವಿಧ ಸ್ಥಳ ಗಳಲ್ಲಿರುವ ನಿವೇಶನಗಳನ್ನು ತೋರಿಸಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ, ಬ್ಯಾಂಕ್ ಲೋನ್ ಹಾಗೂ ಇನ್ನಿತರ ಪೇಪರ್ ವರ್ಕ್ಗಳನ್ನು ಮಾಡಿಕೊಟ್ಟು ಕೊನೆಗೆ ನಿವೇಶನ ನೋಂದಣಿಯಾಗುವವರೆಗೂ ಎಲ್ಲಾ ಪ್ರಕ್ರಿಯೆಯನ್ನೂ ಅಲಯನ್ಸ್ ಸ್ಕ್ವೇರ್ ತಂಡ ನೋಡಿಕೊಳ್ಳುತ್ತದೆ.

ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಎಂದರೆ ಎಲ್ಲರೂ ಹೆದರುತ್ತಾರೆ, ಅನುಮಾನಿಸುತ್ತಾರೆ. ದಾಖಲೆಗಳು ಸರಿ ಇರುತ್ತವೆಯೋ ಇಲ್ಲವೋ, ಹಣದ ವಿಷಯದಲ್ಲಿ ಮೋಸವಾಗುತ್ತದೇನೋ ಎಂಬಿತ್ಯಾದಿ ಗೊಂದಲಗಳು ಇರುವುದು ಸಹಜ. ಬಹುತೇಕ ಜನರಿಗೆ ಒಂದು ಸೈಟ್ ಖರೀದಿ ಜೀವನದ ಒಂದು ದೊಡ್ಡ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲು ಒಂದೊಂದು ರೂಪಾಯಿಯನ್ನೂ ಆಸ್ಥೆಯಿಂದ ಕೂಡಿಸಿದ ಮೇಲೆ ನಂಬಿಕೆ ಇಲ್ಲದ ಯಾರ ಬಳಿಯೋ ಅದನ್ನು ಹೂಡಿಕೆ ಮಾಡುವುದು ಹೇಗೆ ಸಾಧ್ಯ? ನಂಬಿಕಾರ್ಹ ರಿಯಲ್ ಎಸ್ಟೇಟ್ ವ್ಯವಹಾರ ಎಂಬ ವಿಷಯ ಬಂದಾಗ ಮೈಸೂರಿನ ಜನರ ಮನಸ್ಸಿನಲ್ಲಿ ಮೊದಲು ಬರುವ ಹೆಸರು ಅಲಯನ್ಸ್ ಸ್ಕ್ವೇರ್. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ನಂಬಿಕಾರ್ಹ ಏಜನ್ಸಿಗಳು ಇರುತ್ತವೆ, ಸಂಪೂರ್ಣ ಪಾರದರ್ಶಕವಾಗಿ ಹಣಕಾಸಿನ ವ್ಯವಹಾರ ಮಾಡುವ ಮೂಲಕ ಸೈಟ್ ಖರೀದಿಸುವ ಕನಸನ್ನು ನನಸು ಮಾಡು ತ್ತವೆ ಎಂಬುದನ್ನು ಮೈಸೂರಿನ ಜನರಿಗೆ ತಿಳಿಸಿದ್ದು ಅಲಯನ್ಸ್ ಸ್ಕ್ವೇರ್ ಸಂಸ್ಥೆ. ಈವರೆಗೂ ಸಂಸ್ಥೆಯಿಂದ ಒಟ್ಟು ೪೫ಕ್ಕೂ ಹೆಚ್ಚು ಬಡಾವಣೆಗಳ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಮಾಡಲಾಗಿದೆ.

ಈಗ ನಮ್ಮದು ೪ ಸಾವಿರಕ್ಕೂ ಹೆಚ್ಚು ನಂಬಿಕಾರ್ಹ ಗ್ರಾಹಕರನ್ನು ಹೊಂದಿರುವ ದೊಡ್ಡ ಕುಟುಂಬ ಎನ್ನುತ್ತಾರೆ ಅಲಯನ್ಸ್ ಸ್ಕೆ ರ್‌ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್.ಪ್ರಶಾಂತ್. ಅಲಯನ್ಸ್ ಸ್ಕ್ವೇರ್ನ ಇಪ್ಪತ್ತು ವರ್ಷಗಳ ಈ ಯಶಸ್ಸು ಈವರೆಗೂ ಸಂಸ್ಥೆಯ ಮೂಲಕ ಮೈಸೂರಿನಲ್ಲಿ ಸೈಟ್ ಖರೀದಿಸಿದ ಪ್ರತಿಯೊಬ್ಬ ಗ್ರಾಹಕರಿಗೆ, ಈ ಪಯಣದಲ್ಲಿ ಜೊತೆಯಾಗಿರುವ ಹೂಡಿಕೆದಾರರು ಹಾಗೂ ಡೆವಲಪರ್ ಗಳಿಗೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸತತ ಎರಡು ದಶಕಗಳಿಂದ ಸಂಸ್ಥೆಯನ್ನು ಇದೇ ಮಟ್ಟದಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿರುವ ಇಡೀ ಅಲಯನ್ಸ್ ಸ್ಕ್ವೇರ್ ತಂಡಕ್ಕೆ ಸಲ್ಲುತ್ತದೆ.

” ಮೈಸೂರಿನಲ್ಲಿ ಸೈಟ್ ಖರೀದಿಸುವುದು ಬಹುತೇಕ ಜನರ ಕನಸು. ಈ ಕನಸನ್ನು ೨೦ ವರ್ಷಗಳಿಂದ ನನಸು ಮಾಡುತ್ತಾ ಬಂದಿರುವುದಕ್ಕೆ ನನಗೆ ನಮ್ಮ ತಂಡದ ಬಗ್ಗೆ ಹೆಮ್ಮೆ ಇದೆ. ಮೈಸೂರು ಈಗ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಪೆರಿಫೆರಲ್ ರಿಂಗ್ ರಸ್ತೆ, ವಿವಿಧ ಕಂಪನಿಗಳು, ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಮೈಸೂರಿಗೆಬರುತ್ತಿವೆ. ಮೈಸೂರಿನಲ್ಲಿ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿದೆ. ಭೂಮಿಯ ಮೇಲೆ ಹೂಡಿಕೆ ಮಾಡಬೇಕು ಎಂಬುದು ನಿಮ್ಮ ಯೋಚನೆಯಾಗಿದ್ದರೆ ಅದಕ್ಕೆ ಇದೇ ಸೂಕ್ತ ಸಮಯ. ಮೈಸೂರಿನ ಪ್ರೀಮಿಯಂ ಲೊಕೇಶನ್‌ಗಳಲ್ಲಿ ವಿವಿಧ ಅಳತೆಯ, ವಿವಿಧ ಬಜೆಟ್‌ನ ಅಭಿವೃದ್ಧಿ ಹೊಂದಿದ ಅತ್ಯುತ್ತಮ ನಿವೇಶನಗಳು ಅಲಯನ್ಸ್ ಸ್ಕ್ವೇರ್‌ನಲ್ಲಿ ಲಭ್ಯವಿದೆ.”

– ಬಿ.ಎಸ್.ಪ್ರಶಾಂತ್, ವ್ಯವಸ್ಥಾಪಕ ನಿರ್ದೇಶಕರು

ಅಲಯನ್ಸ್‌ ಸ್ಕ್ವೇರ್‌ ಪ್ರಾಪರ್ಟೀಸ್‌ಗೆ
ಗ್ರಾಹಕ ಸ್ನೇಹಿಯಾದ ಮೈಸೂರಿನ ನಂಬಿಕಾರ್ಹ ರಿಯಲ್‌ ಎಸ್ಟೇಟ್‌ ಸಂಸ್ಥೆ
20ನೇ ವರ್ಷದ ಸಂಭ್ರಮ(0821-2541100)

ಆಂದೋಲನ ಡೆಸ್ಕ್

Recent Posts

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

5 mins ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

10 mins ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

38 mins ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

46 mins ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

5 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

5 hours ago