ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್‌ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ ಬಗ್ಗೆ ಈಗಾಗಲೇ ಪ್ರಕಟವಾಗಿದ್ದು, ಈ ಬಗ್ಗೆ ಆಕ್ಷೇಪಣೆಗಳು ಮತ್ತು ತಕರಾರುಗಳನ್ನು ಸಾರ್ವಜನಿಕರು ಎತ್ತಿದ್ದಾರೆ. ರಾಜ್ಯದ ಮುಖ್ಯ ಚುನಾವಣಾ ಆಯುಕ್ತರು ಕೂಡ ನಿವಾಸಿಗಳಿರುವ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಲು ತಿಳಿಸಿದ್ದಾರೆ. ಆದರೆ ನಾವು ವಾಸಿಸುವ ಬಡಾವಣೆಗೆ ಬಿಎಲಒಗಳು ಬಂದು ಅಗತ್ಯ ಫಾರಂಗಳನ್ನು ನೀಡಿ, ಅವುಗಳನ್ನು ಭರ್ತಿ ಮಾಡುವ ಬಗ್ಗೆ ತಿಳಿವಳಿಕೆ ನೀಡಿ ಅವುಗಳನ್ನು ಭರ್ತಿ ಮಾಡಿದ ನಂತರ ನಾವೇ ಬರುತ್ತೇವೆ ಅಥವಾ ನಾವಿರುವ ಶಾಲೆಗೆ ಬಂದೂ ನೀಡಬಹುದು ಎಂದು ತಿಳಿಸಿ ಹೋಗಿರುತ್ತಾರೆ.
ಆದರೆ ದಿನಾಂಕ ೪.೭.೨೦೨೬ ರಂದು ನಮ್ಮ ಮನೆಯ ಮತದಾರರ ವಿವರಗಳ -ರಂ ಅನ್ನು ತುಂಬಿಸಿ ನಾನು ನಗರದ ಹೆಬ್ಬಾಳಿನಲ್ಲಿನ ಅವರಿದ್ದ ಶಾಲೆಗೆ ಹೋದಾಗ, ಅಲ್ಲಿ ಕಂಡು ಬಂದದ್ದು, ಶಾಲೆಯ ಆಡಳಿತ ವರ್ಗ ಅವರನ್ನು ಕೆಲಸಕ್ಕೆ ಅನುವು ಮಾಡದೇ ಇರುವುದು. ಅದಾಗಲೇ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಅಲ್ಲಿಗೆ ಬಂದಿದ್ದು ಮತ್ತು ಅವರಿಗೆ ಕನಿಷ್ಟ ಸೌಜನ್ಯವನ್ನೂ ತೋರದೆ ಅವರು ರಸ್ತೆಯಲ್ಲಿಯೇ ನಿಂತಿದ್ದನ್ನು ನೋಡಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳೇ ಹೀಗೆ ಸರ್ಕಾರಿ ಕೆಲಸಕ್ಕೆ ನಿಯೋಜನೆಯಾಗುವ ಶಿಕ್ಷಕರಿಗೆ ಕೆಲಸಕ್ಕೆ ಅನುವು ಮಾಡದಿರುವ ಬಗ್ಗೆ ಗೊಂದಲ ಮೂಡುತ್ತಿದೆ. ಇಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಕೆಲಸಗಳಿಗೆ ಕೈ ಜೋಡಿಸುವ ಬದಲು, ತಮ್ಮ ಸಿಬ್ಬಂದಿ ಶಿಕ್ಷಕರನ್ನು ನಿಯೋಜಿಸದೆ, ಇಲಾಖೆಯ ಕೆಂಗಣ್ಣಿಗೆ ಗುರಿಯಾಗುವಂತೆ ನಡೆದುಕೊಳ್ಳುವ ವರ್ತನೆ ಸಲ್ಲ.
ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಂಬಂಽಸಿದ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಎಚ್ಚರಿಕೆ ನೀಡಿ, ನಿಯೋಜಿಸುವ ಶಿಕ್ಷಕ ವೃಂದಕ್ಕೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ತಿಳಿಸುವುದು ಅವಶ್ಯ.
– ವಿಜಯ್ ಹೆಮ್ಮಿಗೆ, ಮೈಸೂರು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…