ಪದವೀಧರೆ ಸವಿತ ಅನುಕೂಲಸ್ಥ ಮನೆಯ ಸೊಸೆಯಾಗಿ ಹೋದಾಗ ಆಕೆ ಕೆಲಸಕ್ಕೆ ಹೋಗುವುದು ಬೇಡ ಎನ್ನುವ ನಿರ್ಧಾರ ಅವಳಿಗೂ ಒಪ್ಪಿಗೆಯಾಗಿತ್ತು. ಆದರೆ ಗಂಡ ಪ್ರತೀ ಮಾತಿಗೂ ‘ನೀನೂ ನಿನ್ನ ತಂಗಿ ಅನಿತಾಳ ಹಾಗೆ ಹೊರಗೆ ಹೋಗಿ ದುಡಿದಿದ್ದರೆ ತಿಳೀತಿತ್ತು’; ‘ಅವಳು ನೋಡು ಎಷ್ಟು ಸ್ಮಾರ್ಟ್’ ಎನ್ನುವ ಮಾತುಗಳನ್ನು ಪದೇಪದೆ ಹೇಳುತ್ತಾ ಅವಳನ್ನು, ಅವಳ ಯಾವ ಮಾತನ್ನೂ ಮನೆಯಲ್ಲಿ ಯಾರೂ ಗಣನೆಗೆ ತೆಗೆದುಕೊಳ್ಳದಂತೆ ಮಾಡಿಬಿಟ್ಟಿದ್ದ. ಹೋಲಿಕೆ ಮಾಡುವುದು ಮನುಷ್ಯನ ಸಹಜ ಸ್ವಭಾವ.
ಆದರೆ ಆ ಹೋಲಿಕೆ ಯಾರ ಜೊತೆ, ಯಾವ ಸಂದರ್ಭದಲ್ಲಿ ಮತ್ತು ಉದ್ದೇಶದಿಂದ ಮಾಡಲಾಗುತ್ತದೆ ಎನ್ನುವುದೂ ಮಾನಸಿಕ ಕಿರುಕುಳವೇ, ದೌರ್ಜನ್ಯವೇ ಅಥವಾ ಹಿಂಸೆಯೇ ಎನ್ನುವುದು ನಿರ್ಧಾರ ಆಗುತ್ತದೆ. ಒಮ್ಮೆ ಗಂಡ -ಹೆಂಡತಿ ಟಿವಿ ನೋಡುತ್ತಿದ್ದರು. ಒಂದು ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಅಭಿಷೇಕ್ ಬಚ್ಚನ್ ಅವರು ಬರುತ್ತಿದ್ದರು. ಹೆಂಡತಿ ಶಿಲ್ಪಾಳ ಲೆಹೆಂಗಾ ಎಷ್ಟು ಚೆನ್ನಾಗಿದೆ ಅಲ್ವಾ ಎಂದಳು. ಕೂಡಲೇ ಗಂಡ ನೀನೂ ಶಿಲ್ಪಾ ಶೆಟ್ಟಿ ತರಹ ತೆಳ್ಳಗಾದರೆ ಅದನ್ನು ಕೊಡಿಸುತ್ತೇನೆ ಅಂದ. ತಕ್ಷಣ ಹೆಂಡತಿ ನೀನು ಅಭಿಷೇಕ್ ಬಚ್ಚನ್ ಅಷ್ಟು ಎತ್ತರವಾದರೆ ನಾನು ಶಿಲ್ಪಾ ಶೆಟ್ಟಿ ತರಹ ಆಗ್ತೀನಿ ಅಂದಳು. ಇಂತಹ ನವಿರಾದ ಮಾತುಗಳು ಸಂಬಂಧಗಳಲ್ಲಿ ಪ್ರಫುಲ್ಲತೆಯನ್ನು ಉಳಿಸಿ ಕೊಡುತ್ತವೆ. ಆದರೆ ಹೋಲಿಕೆಯು ಅವಮಾನಕ್ಕೆ, ನಿಂದನೆಗೆ ತಿರುಗದಂತೆ ಎಚ್ಚರಿಕೆ ವಹಿಸುವುದು ಇಬ್ಬರದೂ ಜವಾಬ್ದಾರಿ.
ಇದನ್ನು ಓದಿ: ಮೈಸೂರು | ಆಕಸ್ಮಿವಾಗಿ ಕಟ್ಟಡದಿಂದ ಕೆಳಗೆ ಬಿದ್ದ ವ್ಯಕ್ತಿ ಸಾವು : ಮತ್ತೋರ್ವ ಗಂಭೀರ
ಪತಿ- ಪತ್ನಿ ಸಂಬಂಧ ಬಹಳವೇ ಸೂಕ್ಷ್ಮವಾದದ್ದು. ಯಾರೊಡನೆಯ ಹೋಲಿಕೆ ಮೂಲಕ ತಿಳಿಹೇಳುವ ಪ್ರಯತ್ನ ಮಾಡುವ ಬದಲು ಆಗಬೇಕಾದ್ದನ್ನು ಸಮಂಜಸವಾದ ಮಾತುಗಳಿಂದ ಆಗಿಸಿಕೊಳ್ಳುವ ಸಾಧ್ಯತೆ ಇರುವ ಭಾವಬಂಧ. ಅತ್ತೆ , ಸೊಸೆ ಯನ್ನು ಅವಳ ರೂಪ, ಬಣ್ಣದ ವಿಷಯವಾಗಿ ಮೂದಲಿಸುವುದು, ಅತ್ತಿಗೆ, ನಾದಿನಿಯ ದೈಹಿಕ ನ್ಯೂನತೆಯನ್ನು ಹಿಡಿದು ನಿಂದಿಸುವುದು, ಗಂಡ ಮತ್ತು ಆತನ ಯಾವುದೇ ನಂಟರು ಸೊಸೆಯಾಗಿ ಬಂದವಳನ್ನು ಹಂಗಿಸಿ ಅದರಿಂದ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದರೆ, ಖಿನ್ನತೆಗೆ ಒಳಗಾದರೆ, ಅಂಗವಿಕಲೆಯಾದರೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೮೫ರ ಪ್ರಕಾರ ಅಂತಹ ನಿಂದನೆ, ಮೂದಲಿಕೆ ಮತ್ತು ಹಂಗಿಸುವಿಕೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ ಮತ್ತು ದಂಡ ಸಹಿತ ಮೂರು ವರ್ಷಗಳ ಕಾಲದ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಸೆಕ್ಷನ್ ೮೬ರಲ್ಲಿ ಹಿಂಸೆಗೆ, ದೌರ್ಜನ್ಯಕ್ಕೆ ಒಂದು ನಿರ್ದಿಷ್ಟವಾದ ವ್ಯಾಖ್ಯಾನವಿದೆ. ಕಿರುಕುಳ ಎನ್ನುವುದು ವ್ಯಕ್ತಿಯ ಆಗಿನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಅದರ ಪ್ರಕಾರ ಅಂತಹ ಒತ್ತಡದಲ್ಲಿ ಮಹಿಳೆಯಿಂದ ಆಸ್ತಿ ಪಡೆಯುವುದು, ಹಣಕಾಸಿನ ಲಾಭ ಪಡೆಯುವುದು ಮಾಡಿದರೆ ಅದೂ ಶಿಕ್ಷಾರ್ಹ ಅಪರಾಧ ಆಗಿರುತ್ತದೆ.
ಸಂಬಂಧಗಳು ಮೇಲೇರುವ ಏಣಿಯಂತಾಗದೆ ಬಲೆಯಂತೆ ಹರಡಿಕೊಳ್ಳುವುದು ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಅವಶ್ಯಕವಾದ ಅಂಶವಾಗಿದೆ. ಅದಕ್ಕಾಗಿಯೇ ಸಮಂಜಸವಾದ ಭಾಷೆಯಲ್ಲಿ ಸಮಾಧಾನಕರವಾಗಿ ಮಾತನಾಡುವುದು ಮತ್ತು ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ ಎನ್ನುವುದನ್ನು ಗಮನಪೂರ್ವಕವಾಗಿ ಅರ್ಥ ಮಾಡಿಕೊಳ್ಳುವುದು ಜರೂರಾಗಿ ಆಗಬೇಕಿದೆ.
(ಲೇಖಕರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)
-ಅಂಜಲಿ ರಾಮಣ್ಣ
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…