ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು, ಜನವಸತಿ ಹೆಚ್ಚಿರುವ ಗ್ರಾಮದ ಮಧ್ಯೆ ಇರುವ ದೇವಸ್ಥಾನದಲ್ಲಿಯೇ ಕಳ್ಳತನ ನಡೆಯುತ್ತಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ದೇವಸ್ಥಾನ ಲೋಕಾರ್ಪಣೆಯಾಗಿತ್ತು. ಸುತ್ತೂರು ಶ್ರೀಗಳಿಂದ ಹಿಡಿದು ಹತ್ತಾರು ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕೂಡ ಸೇರಿದ್ದರು. ಇದಾದ ಎರಡೇ ದಿನಕ್ಕೆ ಗುರುವಾರ ಮುಂಜಾನೆ 2 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಕಳ್ಳತನ ನಡೆದಿದೆ. ದೇವರಿಗೆ ಚಿನ್ನಾಭರಣ ಅಲಂಕಾರ ಮಾಡಿದ್ದರು. ಈ ವೇಳೆ ಈ ಕೃತ್ಯ ನಡೆದಿದೆ.
ದೇವರನ್ನೆ ಹೊತ್ತೋಯ್ದ ಕಳ್ಳರು: ಬರಗಿ ಗ್ರಾಮದ ದೇವಸ್ಥಾನದ ಒಳಗೆ ಪಾರ್ವತಾಂಭೆ ದೇವರ ಬೆಳ್ಳಿ ವಿಗ್ರಹ ಮತ್ತು ಚಿನ್ನದ ತಾಳಿ, ಎರಡು ಕಾಸು, ನಾಲ್ಕು ಗುಂಡು, ಓಲೆ ಜುಮುಕಿ, ತಾಳಿ, ಬೆಳ್ಳಿ ಬಸವ, ಬೆಳ್ಳಿ ಚಂಬು, ಬೆಳ್ಳಿ ಛತ್ರಿ ಸುರಪಾನಿ, ಇರಿಸಲಾಗಿತ್ತು ಕಳ್ಳರು ಬಾಗಿಲ ಬೀಗದ ಚಿಲಕ ಕೂಯ್ದು ದೇವರನ್ನು ಇರಿಸಿದ್ದ ವಿಗ್ರಹನ್ನು ಹೊತ್ತೊಯ್ದಿದ್ದಾರೆ, ಸುಮಾರು 15 ಗ್ರಾಂ ಚಿನ್ನ, 5 ರಿಂದ 6 ಕೆ.ಜಿ ಬೆಳ್ಳಿ ಕಳವು ಮಾಡಿದ್ದಾರೆಂದು ಬರಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ಕಾರ್ಯವಾದ ಎರಡೇ ದಿನಕ್ಕೆ ಕಳ್ಳತನ ನಡೆಸುತ್ತಿರುವ ತಂಡ: ತಾಲ್ಲೂಕಿನ ಬನ್ನೀತಾಳಪುರ ಗ್ರಾಮ ಹಾಗೂ ಭೀಮನಭೀಡು ಗ್ರಾಮದಲ್ಲಿ ಗ್ರಾಮದ ಮಾರಿಹಬ್ಬ ಮತ್ತಿತರ ಕಾರ್ಯಕ್ರಮವಾದ ಎರಡೇ ದಿನಕ್ಕೆ ಐದಾರು ದೇವಸ್ಥಾನದಲ್ಲಿ ಕಳ್ಳತನ ಮಾಡಿರುವ ತಂಡವೇ ಇಲ್ಲಿ ಕಳ್ಳತನ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂಬುದು ಜನರ ಆರೋಪವಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರ ಭೇಟಿ: ಬರಗಿ ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ಬೆರಳಚ್ಚು ತಜ್ಞರು ಸ್ಯಾಂಪಲ್ ಕಲೆಹಾಕಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೂಡಲೇ ಆರೋಪಿಗಳ ಪತ್ತೆಗೆ ಬಲೆ ಬೀಸಬೇಕಿದೆ.
ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…
ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…
ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…
ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…