ಮಹಿಳೆ ಸಬಲೆ

ಮಹಿಳೆಯರಿಗಾಗಿ ಉದ್ಯೋಗಿನಿ

ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವತ್ತ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹತ್ತರ ಹೆಜ್ಜೆಯನ್ನಿಟ್ಟು, ಒಂದೂವರೆ ದಶಕಗಳೇ ಕಳೆದಿವೆ. ಅನೇಕ ಮಹಿಳೆಯರು ಉದ್ಯೋಗಿನಿ ಯೋಜನೆಯನ್ನು ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.

ಬುಕ್ ಬೈಂಡಿಂಗ್ ಮತ್ತು ನೋಟ್‌ಬುಕ್‌ಗಳ ತಯಾರಿಕೆ, ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ, ಹಪ್ಪಳ ತಯಾರಿಕೆ, ಸೀರೆ ಮತ್ತು ಕಸೂತಿ ಕೆಲಸ ಸೇರಿದಂತೆ ಹಲವಾರು ಉದ್ಯಮಗಳ ಕನಸನ್ನು ಸಾಕಾರಗೊಳಿಸಲು ಉದ್ಯೋಗಿನಿ ಯೋಜನೆ ನೆರವಾಗಿದೆ. ೧೯೯೭-೯೮ನೇ ಸಾಲಿನಲ್ಲಿ ಜಾರಿಯಾದ ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಗರಿಷ್ಟ ಒಂದು ಲಕ್ಷ ರೂ. ಗಳವರೆಗೆ ಬ್ಯಾಂಕ್ ಮೂಲಕ ಸಾಲ ನೀಡುವ ಕಾರ್ಯಕ್ರಮ ರೂಪಿಸಿದೆ.

ಈ ಹಣಕಾಸು ಸಂಸ್ಥೆಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ನಿಗಮದಿಂದ ಸಹಾಯಧನ ಮಂಜೂರು ಮಾಡಲು ಅವಕಾಶವಿದೆ. ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. ೨೦ರಷ್ಟು ಅಥವಾ ಗರಿಷ್ಟ ಏಳೂವರೆ ಸಾವಿರ ರೂಪಾಯಿಗಳು ಮೀರದಂತೆ ಮತ್ತು ವಿಶೇಷ ವರ್ಗದವರಿಗೆ (ಅಂಗವಿಕಲರು/ವಿಧವೆ/ಸಂಕಷ್ಟಕ್ಕೊಳಗಾದ ಮಹಿಳೆಯರಿಗೆ) ಶೇ. ೩೦ರಷ್ಟು ಅಥವಾ ಗರಿಷ್ಟ ಹತ್ತು ಸಾವಿರ ರೂಪಾಯಿಗಳಂತೆ ಹಾಗೂ (ಪ. ಜಾತಿ/ಪ. ಪಂ)ದವರಿಗೆ ಶೇ. ೫೦ರಷ್ಟು ಅಥವಾ ಗರಿಷ್ಟ ರೂ. ೫೦,೦೦೦ಗಳಷ್ಟು ಸಹಾಯಧನವನ್ನು ಈ ಯೋಜನೆಯಿಂದ ಪಡೆಯಬಹುದಾಗಿದೆ.

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

8 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

11 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

12 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

12 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

12 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

12 hours ago