ಹಾಡು ಪಾಡು

ಈಸ್ಟರಿನಂದು ನೆನಪಾದ ಜಾನಿ ಅಜ್ಜ

ಉಷಾ ಆಂಬ್ರೋಸ್

ಆ ಕಾಲದ ಕಂದಾಚಾರಗಳು, ಧಾರ್ಮಿಕ ಅಸಮಾನತೆಗಳು, ಬಹಿಷ್ಕಾರ, ಅನ್ಯಾಯಗಳನ್ನು ಕುರಿತು ಪ್ರಶ್ನಿಸಿದ್ದಕ್ಕಾಗಿ ಅಂದಿನ ವ್ಯವಸ್ಥೆ ಏಸುಕ್ರಿಸ್ತನನ್ನು ಮರಣದಂಡನೆಗೆ ಗುರಿಪಡಿಸುತ್ತದೆ.

ವಸಂತಕಾಲ ಆರಂಭವಾಗುತ್ತಿರುವಂತೆ ಪ್ರಕೃತಿ ನಳನಳಿಸಿ ಮಾವು ಚಿಗುರಿ ಬೇವು ಹೂಬಿಟ್ಟಾಗ ಯುಗಾದಿ ಬಂದಂತೆ, ಕೊಂದೆ ಹೂ (ಗೋಲ್ಡನ್ ಶವರ್) ಚಿನ್ನದ ಮಳೆಯಂತೆ ಆಕಾಶಧಾರೆಯಾಗಿ ಇಳಿಬೀಳತೊಡಗಿದಂತೆ ವಿಶು (ಬಿಸು ಪರ್ಬ) ಹತ್ತಿರ ಬಂದಂತೆ ಒಂದೊಂದು ದೇಶಕಾಲಕ್ಕೆ ಅದರದ್ದೇ ಆದ ಪ್ರಕೃತಿಯೊಂದಿಗಿನ ಒಡನಾಟ ಒಂದು ವಿಸ್ಮಯ. ಒಂದೊಂದು ಹಬ್ಬಕ್ಕೆ ಒಂದೊಂದು ಗುರುತು…

ಒಂದೊಂದು ಪರಿಮಳ… ಒಂದೊಂದು ನೆನಪು. ನನಗೆ ನೆನಪಿರುವಂತೆ, ನಾವು ಚಿಕ್ಕವರಾಗಿದ್ದಾಗ ನಮ್ಮ ಹಬ್ಬಗಳು ಎಲ್ಲರೂ ಕೂಡಿದ ಕುಟುಂಬವಾಗಿ ಅಜ್ಜನ ಮನೆಯಲ್ಲಿ ಆಗುತ್ತಿದ್ದವು. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳಲ್ಲಿ ನನ್ನ ಅಜ್ಜಿಗೆ ದೂರದ ಸಂಬಂಧದಲ್ಲಿ ಅಣ್ಣನಾಗಿದ್ದ ನಾವು ‘ಜಾನಿ ಅಜ್ಜ’ ಎಂದು ಕರೆಯುತ್ತಿದ್ದ ಅಜ್ಜ ಒಬ್ಬರು ಬರುತ್ತಿದ್ದರು. ನನ್ನ ಅಜ್ಜಮ್ಮ ಬಿಟ್ಟರೆ ಅವರಿಗೆ ಬೇರೆ ಸಂಬಂಧಿಕರು ಇದ್ದಂತೆ ಇರಲಿಲ್ಲ. ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳಿಗೆ ಸಾಕಷ್ಟು ಮುಂಚಿತವಾಗಿ ಬರುತ್ತಿದ್ದ ಅವರು ನಮ್ಮೆಲ್ಲರ ಜೊತೆ ಖುಷಿಯಿಂದ ಇದ್ದು ಹಿಂದಿರುಗುತ್ತಿದ್ದರು. ‘ಜಾನಿ ಅಜ್ಜ’ ಸುಂದರವಾಗಿ ಮೌತ್ ಆರ್ಗನ್ ನುಡಿಸುತ್ತಿದ್ದರು. ಬಹುಶಃ ಅವರು ಮಿಶನ್ ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದರು. ಅಜ್ಜ ಮಕ್ಕಳೆಲ್ಲರಿಗೂ ಸಾಕಷ್ಟು ತಿನಿಸು ಮತ್ತು ಉಡುಗೊರೆಗಳನ್ನು ತರುತ್ತಿದ್ದರು.

ಅಮ್ಮ ಮತ್ತು ಚಿಕ್ಕಮ್ಮಂದಿರ ‘ಜಾನಿ ಮಾಮ’ ಕ್ರಿಸ್ಮಸ್ ತಾತನಂತೆ ವರ್ಷಕ್ಕೆ ಎರಡು ಸಲ ಬಂದು ನಮ್ಮನ್ನೆಲ್ಲ ಸಂತೋಷಪಡಿಸಿ ಹಿಂದಿರುಗುತ್ತಿದ್ದರು. ಅವರಿಲ್ಲದ ಹಬ್ಬ ಇರಲಿಲ್ಲ. ಅವರು ಬರುವುದನ್ನೇ ನಾವೆಲ್ಲ ಕಾಯುತ್ತಿದ್ದೆವು. ಬಹುಶಃ ನಮ್ಮೆಲ್ಲರ ಜೊತೆಗಿರಲು ಅವರೂ. ಈಸ್ಟರ್ ಹಬ್ಬದ ಕುರಿತು ‘ಗರಿಗಳ ಭಾನುವಾರ’ ಕಳೆಯುತ್ತಿದ್ದಂತೆ ಈಸ್ಟರ್ ಹಬ್ಬ ಬಂತೆಂದು ಲೆಕ್ಕ. ಜೆರುಸಲೆಮ್ ನಗರಕ್ಕೆ ರಾಜನಂತೆ ಪ್ರವೇಶಿಸಿದ ಯೇಸುಕ್ರಿಸ್ತನನ್ನು ಜನಸಮೂಹವು ಖರ್ಜೂರದ ಗರಿಗಳನ್ನು ಕೈಯಲ್ಲಿ ಹಿಡಿದು ಮಾರ್ಗದಲ್ಲಿ ಬಟ್ಟೆಗಳನ್ನು ಹಾಸಿ ಚಿಗುರನ್ನು ಚೆಲ್ಲಿ ಮಹಾ ಉತ್ಸಾಹದಿಂದ ಬರಮಾಡಿಕೊಳ್ಳುತ್ತಾರೆ. ಈ ನೆನಪಿಗಾಗಿ ಈಸ್ಟರ್ ಬಾನುವಾರದ ಹಿಂದಿನ ಭಾನುವಾರ ‘ಪಾಮ್ ಸಂಡೇ’ ಆಚರಿಸಲಾಗುತ್ತದೆ. ಕ್ರಿಸ್ತನ ಬಲಿ ಮರಣವನ್ನು ಧ್ಯಾನಿಸುವ ನಲ್ವತ್ತು ದಿನಗಳಲ್ಲಿ ಮುಂದಿನ ಒಂದು ವಾರ ಕಾಲ ಪವಿತ್ರ ವಾರವಾಗಿರುತ್ತದೆ. ಯೇಸುಕ್ರಿಸ್ತನು ಅನುಭವಿಸಿದ ಕ್ರೂರ ಹಿಂಸೆ ಹಾಗೂ ಮರಣದಂಡನೆಯನ್ನು ಧ್ಯಾನ ಮತ್ತು ಆರಾಧನೆಗಳ ಮೂಲಕ ನೆನಪಿಸಿಕೊಳ್ಳಲಾಗುತ್ತದೆ. ಕ್ರೈಸ್ತರು ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ.

ತನಗೆ ದಂಡನೆ ಕಾದಿದೆ ಎಂಬುದು ತಿಳಿದಿದ್ದರೂ ಯೇಸು ಜೆರುಸಲೆಮ್ ನಗರವನ್ನು ರಾಜನಂತೆ ಪ್ರವೇಶಿಸುತ್ತಾನೆ. ತಾನು ನಡೆದು ತೋರಿದ ಹಾದಿಯಲ್ಲಿ ನಡೆಯುವಂತೆ ಜನಸಾಮಾನ್ಯರ ನಡುವೆ ಸೇವೆ ಮಾಡುವಂತೆ ತನ್ನ ಶಿಷ್ಯರಿಗೆ ಕರೆ ಕೊಡುತ್ತಾನೆ. ತನ್ನ ಶಿಷ್ಯರ ಸಂಗಡ ಕುಳಿತು ಕೊನೆಯ ಭೋಜನವನ್ನು ಮಾಡುತ್ತಾನೆ. ಭೋಜನಕ್ಕೆ ಕೂಡುವ ಮುನ್ನ ಶಿಷ್ಯರ ಪಾದಗಳನ್ನು ಕೈಯಲ್ಲಿ ತೆಗೆದುಕೊಂಡು ನೀರಿನಿಂದ ತೊಳೆದು ವಸ್ತ್ರದಿಂದ ಒರೆಸುವ ಮೂಲಕ ತನ್ನನ್ನು ನಿರಾಕರಿಸಿಕೊಂಡು ಅಧಿಕಾರ ಪದವಿಗಳನ್ನು ತೊರೆದು ದೀನತೆಯಿಂದ ಪ್ರೇಮ ಕರುಣೆಗಳಿಂದ ಸೇವೆ ಮಾಡುವುದು ಎಂದರೆ ಏನು ಎಂದು ತೋರಿಸಿಕೊಡುತ್ತಾನೆ. ತಾನು ನಂಬಿದ್ದ ಶಿಷ್ಯರಲ್ಲೊಬ್ಬನೇ ಆತನನ್ನು ಹಿಡಿದುಕೊಡುತ್ತಾನೆ. ಅಧಿಕಾರಿಗಳ ಮುಂದೆಯೂ ರಾಜರ ಮುಂದೆಯೂ ಹಿಡಿದು ತಂದು ನಿಲ್ಲಿಸಿದಾಗಲೂ ಧೈರ್ಯದಿಂದ ಸತ್ಯಕ್ಕೆ ಬದ್ಧನಾಗಿರುತ್ತಾನೆ. ಆತನನ್ನು ನಿಂದೆ, ಅಪಹಾಸ್ಯ, ಕ್ರೂರ ದಂಡನೆಗಳ ಮೂಲಕ ಶಿಲುಬೆಗೇರಿಸಲಾಗತ್ತದೆ. ಶಿಲುಬೆ ಮೇಲೆ ಮರಣ ಹೊಂದಿದ ಕ್ರಿಸ್ತನನ್ನು ಸಮಾಽಯಲ್ಲಿ ಹೂಳಲಾಗುತ್ತದೆ. ಮರಣವನ್ನು ಜಯಿಸಿದ ಕ್ರಿಸ್ತನು ಮೂರನೆಯ ದಿನದಲ್ಲಿ ಪುನರುತ್ಥಾನಗೊಳ್ಳುತ್ತಾನೆ. ಕ್ರಿಸ್ತನ ಪುನರುತ್ಥಾನದ ಈ ಭಾನುವಾರವನ್ನು ‘ಈಸ್ಟರ್ ಸಂಡೇ’ ಎಂದು ಜಗತ್ತಿನಾದ್ಯಂತ ಕ್ರೈಸ್ತ ವಿಶ್ವಾಸಿಗಳು ಶ್ರದ್ಧೆಯಿಂದ ಆಚರಿಸುತ್ತಾರೆ.

ಅಂದಿನ ಸಮಾಜದಲ್ಲಿದ್ದ ಕಂದಾಚಾರಗಳು, ಧಾರ್ಮಿಕ ಅಸಮಾನತೆಗಳು – ಬಹಿಷ್ಕಾರ – ಅನ್ಯಾಯಗಳ ನಡುವೆ ಸಾಮಾನ್ಯ ಜನರಿಗಾಗಿ, ಸ್ತ್ರೀಯರಿಗಾಗಿ, ಮಕ್ಕಳಿಗಾಗಿ, ದಿಕ್ಕಿಲ್ಲದವರಿಗಾಗಿ, ರೋಗಿಗಳಿಗಾಗಿ ಪ್ರೇಮ ಕರುಣೆಗಳಿಂದ ಮಿಡಿದ ಯೇಸುಕ್ರಿಸ್ತನನ್ನು, ಅನ್ಯಾಯವನ್ನು ಪ್ರಶ್ನಿಸಿದ್ದಕ್ಕಾಗಿ ಧಾರ್ಮಿಕ ಢಾಂಬಿಕತೆಯನ್ನು ರಾಜ್ಯಾಧಿಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಅಂದಿನ ವ್ಯವಸ್ಥೆ ಮರಣದಂಡನೆಗೆ ಗುರಿಪಡಿಸುತ್ತದೆ. ಸರಳವಾದ ಹಲವು ಸಂದೇಶಗಳ ಮೂಲಕ ಸಾಮಾನ್ಯ ಜನಸಮೂಹದೊಂದಿಗೆ ಬೆರೆತು ಬೋಧಿಸಿದ ಯೇಸುಕ್ರಿಸ್ತನೇ ಹೇಳಿದಂತೆ ಗೋಧಿಯ ಕಾಳೊಂದು ಮಣ್ಣಿನಲ್ಲಿ ಹುದುಗಿ ಹೂಣಿಡಲ್ಪಡದಿದ್ದರೆ ಅದು ಸತ್ತು ಮೊಳೆಯುವುದಿಲ್ಲ. ಹೀಗೆ ಕೆಡುಕಿನ ಪಾಲಿಗೆ ಸತ್ತು ಮತ್ತೆ ಮೊಳೆತ ಗೋಧಿಯ ಕಾಳು ಪೈರಾಗಿ ಬೆಳೆದು ತನ್ನಲ್ಲಿ ತೆನೆಯಾಗಿ ಹೊತ್ತ ಒಳಿತಿನ ಬಹು ಫಲವನ್ನು ನೀಡುತ್ತದೆ.

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

5 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

18 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

19 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

19 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

19 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

19 hours ago