ಹಾಡು ಪಾಡು

ಹುಲಿ ಯಾಕೆ ನೀರು ಕುಡಿಯಲಿಲ್ಲ?

ಕೀರ್ತಿ ಬೈಂದೂರು

ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು

ಬೆಳಗಿನ ಜಾವದ ಹೊತ್ತಿನಲ್ಲಿ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಕಾಡಲ್ಲಿ ಸಫಾರಿ ಹೋಗಿದ್ದೆವು . ‘ಇದೇ ಕೆರೆ ಪಕ್ಕನೇ ನೋಡ್ತಿರಿ. ಹುಲಿ ಬಂದು ನೀರು ಕುಡ್ಕೊಂಡು ಹೋಗತ್ತೆ’ ಅಂತ ಡ್ರೈವರ್‌ ಹೇಳಿದ. ಆಗವರು ಬರಿಯ ಡ್ರೈವರ್‌ ಆಗಿರಲಿಲ್ಲ. ಜಗತ್ತಿನ ಯಾವುದೋ ಅನೂಹ್ಯ ಲೋಕವನ್ನು ತೋರುವ ವಿಸ್ಮಯಕಾರನಾಗಿದ್ದ.

ಕಾದಿದ್ದಕ್ಕೂ ಸಾರ್ಥಕ, ಹುಲಿ ಬಂತು. ಜೀಪಿನಲ್ಲಿದ್ದ ಏಳು ಜನರೂ ಬೆಕ್ಕಸ ಬೆರಗಾಗಿ ಹುಲಿ ಹೇಗೆ ನೀರು ಕುಡಿಯುತ್ತದೆ ಎಂಬುದನ್ನು ನೋಡಲು ಕಾತರರಾಗಿದ್ದರು. ನಾನೂ ಮೊಬೈಲ್ ತೆಗೆದು, ವಿಡಿಯೋ ಮಾಡಿಕೊಳ್ಳತೊಡಗಿದೆ. ಅಚ್ಚರಿ ಎಂದರೆ ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು. ಉಳಿದವರೆಲ್ಲ, ‘ವಾವ್! ಎಷ್ಟು ಚೆನ್ನಾಗಿದೆ. ಹುಲಿ ನೀರು ಕುಡಿದು ಹೊರಡ್ತು’ ಎಂದೆಲ್ಲ ಬಾಯಿ ತೆಗೆಯುತ್ತಿದ್ದರು. ನಾನು ಮಾತ್ರ ಹುಲಿ ನೀರೇ ಕುಡಿದಿಲ್ಲವಲ್ಲಾ ಎಂದು ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದೆ. ಆಮೇಲೆ ಗೊತ್ತಾಗಿದ್ದು ಬೆಳಗಿನ ನಿತ್ಯ ಕರ್ಮಗಳನ್ನೆಲ್ಲ ಪೂರೈಸಿದ್ದ ಹುಲಿ ತನ್ನ ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದರ ಭಾಗವಾಗಿ ತನ್ನ ಹಿಂಭಾಗವನ್ನು ನೀರಿಗೆ ಅದ್ದಿಕೊಂಡಿತ್ತು!

ಕಾಡಿನ ನಡುವೆ ರಾತ್ರಿ ಒಮ್ಮೆ ಗರ್ಜನೆ ಮತ್ತು ಆರ್ತನಾದ ಒಟ್ಟಿಗೇ ಕೇಳಿಸಿತು. ಎದೆ ಝಲ್ ಎಂದ ಅನುಭವ! ಇಲ್ಲೇ ಪಕ್ಕದಲ್ಲೆಲ್ಲೋ ಬೇಟೆ ನಡೆಯಿತೆನ್ನುವ ಭಾವ. ದೈತ್ಯ ಪ್ರಾಣಿಯೊಂದು ಅಸಹಾಯಕ ಪ್ರಾಣಿಯೊಂದನ್ನು ಹಿಡಿದಿರಬಹುದು ಎಂಬುದನ್ನು ಊಹೆ ಮಾಡಿಕೊಂಡು, ಕುಳಿತಿದ್ದವರೆಲ್ಲ ಭಯಭೀತರಾಗಿ ಕೋಣೆಯೊಳಕ್ಕೆ ತೆರಳಿದ್ದೆವು. ನಟ್ಟಿರುಳ ರಾತ್ರಿಯಲ್ಲಿ ಘಟಿಸಿರಬಹುದಾದ ಸನ್ನಿವೇಶವನ್ನು ಕಿವಿಯ ಸಹಾಯದಿಂದ ಮತ್ತೆ ಮರುಕಟ್ಟುತ್ತಾ, ನಿದ್ರೆಗೆ ಜಾರಿದ್ದೆವು.

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

6 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

19 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

19 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

20 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

20 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

20 hours ago