ಹಾಡು ಪಾಡು

ಧಾನ್ಯಗಳ ದೇವತೆ ಕೊಂತಿಗೆ ಹುಚ್ಚೆಳ್ಳು ಅವರೆ ತುಂಬೆ ಹೂ ಪೂಜೆ

 ಡಾ. ಎಂ.ಎ. ರಾಧಾಮಣಿ

“ಒನ್ಕೊಂತಿ ಪೂಜೆ, ಒನ್ನೆಲ್ವ ತಾರ್ಸಿ ಧಾನ್ಯಗಳ ದೇವತೆ ಕೊಂತಿಗೆ ಹುಚ್ಚೆಳ್ಳು ಅವರೆ ತುಂಬೆ ಹೂ ಪೂಜೆ ಇಂಬಿಗೆ ಹೋದಣ್ಣ, ಏನೇನು ತಂದಾನು ಇಂಬಾಳೆ ತಂದಾನು, ಮುಂಬಾಳೆ ತಂದಾನು ಇಷ್ಟೆಲ್ಲನೂ ತಂದೋನೂ ನಮ್ಕೊಂತಿಗೆ ಹೂವೇಕೆ ತರಲಿಲ್ಲವೋ” ಇದು ಕುಂತಿಪೂಜೆಯ ಸಂದರ್ಭದಲ್ಲಿ ಹೆಂಗಸರು ಹಾಡುವ ನಾಂದಿಪದ್ಯ. ‘ಕುಂತಿ’ ಎಂಬುದು ಜನರ ಬಾಯಲ್ಲಿ ‘ಕೊಂತಿ’ಯಾಗಿ ಅದನ್ನು ‘ಕೊಂತಿಪೂಜೆ’ಯೆಂದೇ ಕರೆಯುವರು. ದೀಪಾವಳಿ ಹಬ್ಬದ ನಂತರದಲ್ಲಿ ಆಚರಿಸಲ್ಪಡುವ ಒಂದು ಜನಪದ ಆಚರಣೆ. ಇದು ವಿಶೇಷವಾಗಿ ದಕ್ಷಿಣ ಕರ್ನಾಟಕದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಈಗಲೂ ಕೊಂತಿಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದು ಕೃಷಿ ಸಂಸ್ಕ ತಿಯನ್ನು ಪ್ರತಿಪಾದಿಸುವ ಪೂಜೆ. ಹೆಸರೇ ಸೂಚಿಸುವಂತೆ ಈ ಆಚರಣೆಯಲ್ಲಿ ಪಾಂಡವರ ತಾಯಿಯಾದ ಕುಂತಿಯನ್ನು ಆರಾಧಿಸಲಾಗುವುದು. ಕುಂತಿ ಧಾನ್ಯಗಳ ದೇವತೆ ಎಂಬುದು ಜನಪದರ ನಂಬಿಕೆ. ಹಾಗಾಗಿ ಸುಗ್ಗಿಕಾಲದಲ್ಲಿ ಈ ಆಚರಣೆಯನ್ನು ಮಾಡುವುದು ರೂಢಿ.

ನಾನು ಬಾಲ್ಯದಲ್ಲಿದ್ದಾಗ ನಮ್ಮ ಊರಿನಲ್ಲಿಯೂ ಕೊಂತಿಪೂಜೆ ಮಾಡುತ್ತಿದ್ದರು. ಇದು ರಾತ್ರಿಹೊತ್ತು ಆಚರಿಸುವ ಹಬ್ಬವಾಗಿರುವುದರಿಂದ ನಾನು ನನ್ನ ಅಜ್ಜಿ ಮತ್ತು ಅಮ್ಮನ ಜೊತೆ ಹೋಗಿ ನಿದ್ದೆಗೆಟ್ಟು ಅಲ್ಲಿನ ಹಾಡು ಕಥೆಗಳನ್ನು ಕೇಳಿ ಸಂಭ್ರಮಿಸುತ್ತಿದ್ದೆ. ಈಗಲೂ ಆ ದೃಶ್ಯ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಪೂಜೆ ವೇಳೆಯಲ್ಲಿ ಮಹಾಭಾರತದ ಕುಂತಿಯ ಪ್ರಸಂಗಗಳನ್ನು ಕತೆ ಮತ್ತು ಹಾಡಿನ ಮೂಲಕ ಹೇಳುವುದರಿಂದ ಬಾಲ್ಯದಲ್ಲಿಯೇ ಮಹಾಭಾರತದ ಕತೆ ನಮ್ಮ ಕಿವಿಯ ಮೇಲೆ ಬೀಳುತ್ತಿತ್ತು. ಆ ಕತೆಗಳು ನನ್ನೊಳಗೆ ಕೌತುಕವನ್ನು ಹುಟ್ಟು ಹಾಕುತ್ತಿದ್ದವು. ಆದರೆ ಇಂದಿನ ಮಕ್ಕಳಿಗೆ ಇಂತಹ ಆಚರಣೆಯ ಪರಿಚಯವೇ ಇಲ್ಲದಂತಾಗಿದೆ.

ರಾತ್ರಿ ಮನೆಗೆಲಸ ಮುಗಿಸಿದ ಮೇಲೆ ಹೆಂಗಸರು ಒಂದೆಡೆ ಸೇರಿ ಗೋವಿನ ಸಗಣಿಯಿಂದ ನೆಲ ತಾರಿಸಿ ಸ್ವಚ್ಛಗೊಳಿಸಿದ ಪಡಸಾಲೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ, ನೆಲದಿಂದ ಒಂದು ಮೊಳ ಮೇಲಕ್ಕೆ, ಹಸಿ ಎರೆಮಣ್ಣಿನಿಂದ ಅಥವಾ ಗೋವಿನ ಸಗಣಿಯಿಂದ ಕುದುರೆಗೊರಸಿನ ಆಕೃತಿಯ ಒಂದು ಪ್ರಾಕಾರವನ್ನು ಬಿಡಿಸುತ್ತಾರೆ. ಇದು ಋತುಮತಿಯಾದ ಕೊಂತಿಯನ್ನು ಕೂರಿಸುವ ಗುಡಿಸಲು. ಪೂಜೆಯ ಕೊನೆಯ ದಿನ ಒಳಗಡೆ ಎರೆಮಣ್ಣಿನಿಂದ ಸ್ತ್ರೀ ವಿಗ್ರಹವನ್ನು ಮಾಡಿ ಅದಕ್ಕೆ ಸೀರೆ, ಬಳೆಗಳಿಂದ ಅಲಂಕರಿಸಿ, ಹುಚ್ಚೆಳ್ಳು, ಅವರೆ, ತುಂಬೆ ಮುಂತಾದ ಹೂವುಗಳಿಂದ ಅಲಂಕರಿಸುತ್ತಾರೆ.

ಪೂಜೆಯನ್ನು ಸಲ್ಲಿಸಿದ ಬಳಿಕ ದಾಸೋಹ ನೀಡುತ್ತಾರೆ. ಇದು ಪ್ರತಿವರ್ಷದ ಮೊದಲ ಕಾರ್ತಿಕ ಮಾಸದ ಹುಣ್ಣಿಮೆ ರಾತ್ರಿಗಳಲ್ಲಿ ಹದಿನಾರು ದಿವಸಗಳವರೆಗೆ ನಿರಂತರವಾಗಿ ನಡೆಯುತ್ತದೆ. ‘ನಮ್ಮ ಬದುಕನ್ನುಸಮೃದ್ಧಗೊಳಿಸು’ ಎಂದು ಬೇಡಿಕೊಂಡು ಅವರೆ ಅಥವಾ ಹುರುಳಿ ಹೊಲಗಳಲ್ಲಿ ವಿಸರ್ಜಿಸಲಾಗುತ್ತದೆ. ಕೊಂತಿಪೂಜೆಯಲ್ಲಿ ಎರಡು ಮೂರ್ತಿಗಳನ್ನು ಇಡುವುದು ವಿಶೇಷ. ಇವೆರಡರಲ್ಲಿ ಒಂದು ಕುಂತಿಯನ್ನು ಮತ್ತೊಂದು ಮಾದ್ರಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ

ಆರಾಧನೆಗೆ ಒಳಗಾಗುವುದು ಕುಂತಿಯಾದರೂ, ಅವಳ ಸವತಿಯಾದ ಮಾದ್ರಿಯನ್ನು ಜೊತೆಗಿರಿಸುವುದು ವಿಶೇಷ. ಸವತಿ ಮಾತ್ಸರ್ಯವಿದ್ದರೂ ಕುಂತಿ ಅದನ್ನು ಮೀರಿ ಮಾನವೀಯತೆಯಿಂದ ವರ್ತಿಸುವುದು ಹೆಣ್ಣಿನ ಹೃದಯ ವೈಶಾಲ್ಯತೆಯನ್ನು ಕೂಡಿ ಬದುಕುವ ಗುಣವನ್ನು ಸೂಚಿಸುತ್ತದೆ. ಯಾವುದೇ ಆಚರಣೆಗಳು ಸಡಗರ ಸಂಭ್ರಮದಿಂದ ಕೂಡಿದ್ದರೂ ಅವುಗಳ ಆಂತರ್ಯದಲ್ಲಿ ಇಂತಹ ಜೀವನಮೌಲ್ಯಗಳು ಅಡಗಿರುತ್ತವೆ ಎಂಬುದು ಗಮನಾರ್ಹ ಸಂಗತಿ. ‘ಹೂವಿನಿಂದ ನಾರು ಸ್ವರ್ಗ ಸೇರಿತು’ ಎಂಬಂತೆ ಕುಂತಿಯಿಂದ ಮಾದ್ರಿಯ ಹೆಸರು ಉಳಿಯುವಂತಾಯಿತು.

ಕೊಂತಿ ಆದರ್ಶ ಸತಿ, ಆದರ್ಶ ಮಾತೆ, ಮಿಗಿಲಾಗಿ ಒಳ್ಳೆಯ ಸಂತಾನ ಪಡೆದ ಆದರ್ಶ ಮಹಿಳೆ ಎಂಬುದು ಪುರಾಣ ಕಾಲದಿಂದಲೂ ನಂಬಿಕೊಂಡು ಬರಲಾಗು ತ್ತಿರುವ ಮೌಲ್ಯವಾಗಿದ್ದು, ತಮಗೂ ಅವಳಂತೆಯೇ ಒಳ್ಳೆಯ ಸಂತಾನ, ಸತ್ಕೀರ್ತಿ ಸಿಗಲೆಂಬ ಅಭಿಲಾಷೆಯಿಂದ ಹಳ್ಳಿಯ ಜನ ಕೊಂತಿಯನ್ನು ತಮ್ಮ ಇಷ್ಟದೇವತೆಯೆಂದು ಪರಿಗಣಿಸಿ ಪೂಜಿಸುತ್ತ ಬಂದಿದ್ದಾರೆ. ಮೈನೆರೆದ ಹೆಣ್ಣು ಮಕ್ಕಳಿಗೆ ಗುಡ್ಲು ಕೂರಿಸುವ ಶಾಸ್ತ್ರಕ್ಕೂ ಕೊಂತಿಪೂಜೆಗೂ ಸಂಬಂಧವಿದೆ ಎಂದು ಹೇಳುವುದುಂಟು. ಈ ಪೂಜೆಯ ಮೂಲ ಆಶಯವೇ ಸಂತಾನಾಭಿಲಾಷೆ ಆಗಿದೆ.  ಜಾನಪದ ಹಾಡುಗಳ ಮೂಲಕ ಕುಂತಿಯ ಕಥೆ, ಅವಳ ಬಾಲ್ಯ, ಮದುವೆ ಮತ್ತು ಮಕ್ಕಳ ಕುರಿತಾದ ಜೀವನಗಾಥೆಯನ್ನು ಹೇಳಲಾಗುತ್ತದೆ.

ಪಾಂಡವರೊಂದಿಗೆ ಆ ಮಹಾತಾಯಿ ಕೊಂತಿ ಆ ಕಾಲದಲ್ಲಿ ತಮ್ಮ ಗ್ರಾಮಗಳಲ್ಲೆಲ್ಲ ಅಡ್ಡಾಡಿ ಹೋಗಿದ್ದಾಳೆಎಂಬುದು ಜನಪದರ ನಂಬಿಕೆ. ಆಕೆ ಬಿಟ್ಟು ಹೋದಗುರುತು ಆದರ್ಶಗುಣ, ಧರ್ಮ ಇತ್ಯಾದಿಗಳನ್ನು ನೆನೆಪಿಸಿಕೊಂಡು ಹಾಡುವುದು ಸಂಪ್ರದಾಯ

” ಇದು ಕೃಷಿ ಸಂಸ್ಕ ತಿಯನ್ನು ಪ್ರತಿಪಾದಿಸುವಪೂಜೆ. ಕುಂತಿ ಧಾನ್ಯಗಳ ದೇವತೆ ಎಂಬುದುಜನಪದರ ನಂಬಿಕೆ. ಹಾಗಾಗಿ ಸುಗ್ಗಿಕಾಲದಲ್ಲಿ ಈ ಆಚರಣೆಯನ್ನು ಮಾಡುವುದು ಪದ್ಧತಿ”

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

9 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

22 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

22 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

22 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

22 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

22 hours ago