ಹಾಡು ಪಾಡು

ಯಾರೋ ಕಥೆ ಬರಿ ಮಾರಾಯ ಅಂದಿದ್ದರು. ನನಗೆ ಈ ಹುಡುಗ ನೆನಪಾದ

ಮಡಿಕೇರಿ ದಸರಾದ ಹತ್ತು ದಿನಗಳ ಕಾಲ ನಾವೊಂದು ಕ್ಯಾಂಟಿನ್ ಮಾಡಿದ್ದೆವು. ಒಂದು ದಿನ ಗಿರಾಕಿಗಳು ಕಡಿಮೆ ಇದ್ದರಿಂದ ಕ್ಯಾಂಟಿನ್ ಬಾಗಿಲನ್ನು ರಾತ್ರಿ ಒಂದು ಗಂಟೆಗೇ ಮುಚ್ಚಿ, ಮಲಗಲು ಹೊರಡುವ ಸಮಯ. ನೆಲಕ್ಕೆ ಟಾರ್ಪಲ್, ಗೋಣಿಚೀಲ ಹಾಕಿ ನಾನು ಬೆಡ್ ನಿರ್ಮಾಣ ಮಾಡುತ್ತಿದ್ದೆ. ವೇದಿಕೆ ಬಳಿಯೇ ನಮ್ಮ ಕ್ಯಾಂಟಿನ್ ಇದ್ದರಿಂದ ಸಾಂಸ್ಕ ತಿಕ ಕಾರ್ಯಕ್ರಮ ನೋಡಲು ಬಂದಿದ್ದ ಜನರೆಲ್ಲಾ ಹೋಗಿ, ವೇದಿಕೆಯ ಕರಾಳ ಕರ್ಕಶ ಸದ್ದೆಲ್ಲವೂ ಬಂದಾಗಿ ಹೊರೆಗಲ್ಲಾ ಬಿಕೊ ಅನ್ನುತ್ತಿತ್ತು.

ಹೊರಗೆ ಇಣುಕಿ ನೋಡಿದ ನನಗೆ ಬೀದಿ ದೀಪದ ಕೆಳಗೆ ಹುಡುಗನೊಬ್ಬ ಒಂಟಿಯಾಗಿ ನಿಂತಿರುವುದು ಕಂಡಿತು. ಆ ನಡುರಾತ್ರಿ ಒಂಟಿ ಹುಡುಗನ್ನು ನೋಡಿ ನನಗೆ ಆಶ್ಚರ್ಯ. ಪಕ್ಕಕ್ಕೆ ಕರೆದು, ವಿಚಾರಿಸಲು ತೊಡಗಿದೆ. ಜೊತೆಗಿದ್ದ ಹುಡುಗರು ‘ಯಾರಾದರೂ ನಿಂತರೆ ನಮಗೇನಾಣ್ಣ.. ಬನ್ನಿ ಸುಮ್ನೆ ಮಲಗಿಕೊಳ್ಳಿ” ಎಂದು ಉಪದೇಶ ನೀಡಿದರು‘ ನಾನು ಮಾನವೀಯತೆ ಇಲ್ಲದವರು ಎಂದು ಹುಡುಗರನ್ನು ಗದರಿದೆ. ಕಾಲೇಜಿನ ರಜೆಯಲ್ಲಿ ನಮ್ಮೊಡನೆ ಕ್ಯಾಂಟಿನ್ ಕೆಲಸಕ್ಕೆ ಬಂದಿದ್ದ ಹುಡುಗರಿಗೆ ನಿದ್ರೆ ಎಳೆಯುತ್ತಿತ್ತು. ಅವರು ಸುಮ್ಮನೆ ಮಲಗಿದರು.

ಹುಡುಗನನ್ನು ಕ್ಯಾಂಟಿನಿನ ಒಳಗೆ ಕರೆದೆ. ಮುದ್ದಾದ ಹುಡುಗ. ಉಡುಗೆಯಲ್ಲೂ ಶ್ರೀಮಂತ ಮನೆಯ ಹುಡುಗನಂತೆ ಕಾಣುತ್ತಿದ್ದ. ಮನೆಯಲ್ಲಿ ಮುದ್ದಾಗಿ ಬೆಳಸಿದಂತಹಾ ಆರೋಗ್ಯಕರ ದೇಹ ಹುಡುಗನದ್ದು. ನಾವು ಹುಡುಗನನ್ನು ವಿಚಾರಿಸಿ ಉಳಿದಿದ್ದ ಎಗ್ ಫ್ರ್ತ್ಯೈಡ್ ರೈಸ್ ತಿನ್ನಿಸಿ, ಮನೆ ಎಲ್ಲಿ ಎಂದು ಕೇಳಿ ತಿಳಿದೆವು.

ಅವನನ್ನುಜೊತೆಗಿದ್ದ ಗೆಳೆಯ ಕೌಸರ್ ಡ್ರಾಪ್ ಮಾಡಿ ಇಂದು ಮನೆಗೆ ಹೋಗುವುದು, ನಾವು ಟೆಂಟಲ್ಲಿಯೇ ಮಲಗುವುದು ಎಂದು ನಿರ್ಧರಿಸಿದೆವು. ಅದರಂತೆ ಹುಡುಗನ್ನು ಕೌಸರ್ ಮಧ್ಯರಾತ್ರಿ ತನ್ನ ಬೈಕಿನಲ್ಲಿ ಕರೆದುಕೊಂಡು ಹೋದ. ನಮ್ಮ ನಿರ್ಧಾರದ ಕುರಿತು ನಮ್ಮ ಕ್ಯಾಂಟಿನ್ ಹುಡುಗರು ಅಸಮಾಧಾನ ವ್ಯಕ್ತಪಡಿಸಿದರು. ಅವನು ಯಾರೋ? ಏನೋ? ಇಷ್ಟು ರಾತ್ರಿಯಲ್ಲಿ ನೀವು ಅವನನ್ನು ಕೌಸರ್ ಅಣ್ಣನ ಜೊತೆ ಕಳುಹಿಸಿದ್ದು ಸರಿ ಅಲ್ಲ ಎಂದು ನನ್ನ ಮೇಲೆ ಅಸಮಾಧಾನ ಹೊರಹಾಕಿದರು. ಹೋಗಿ ಹದಿನೈದು ನಿಮಿಷ ಕಳೆದರೂ ಕೌಸರ್ ಕರೆ ಮಾಡದ್ದು ನೋಡಿ ನನಗೆ ಭಯ ಶುರುವಾಯಿತು.
ಇದ್ಯಾರೋ ದರೋಡೆ ಕೋರರ ತಂಡದ ಹುಡುಗ ಆಗಿದ್ದು, ಕೌಸರ್ ನನ್ನು ಕರೆದುಕೊಂಡು ಹೋಗಿ ಏನಾದರೂ ಅನಾಹುತ ಮಾಡಿದರೇ ? ಎಂದು ನನಗೆ ತಲೆನೋವು ಶುರುವಾಯಿತು. ಮೊಬೈಲ್ ತೆಗೆದು ಫೋನ್ ಮಾಡಿದೆ. ಆ ಕಡೆಯಿಂದ ಫೋನ್ ತುಂಡಾಯಿತು, ಮತ್ತೇ ಮಾಡಿದೆ. ಫೋನ್ ರಿಸಿವ್ ಆಯಿತಾದರೂ ಅವನು ಮಾತನಾಡುತ್ತಿಲ್ಲ. ಜೋರಾಗಿ ಗಲಾಟೆ ಸದ್ದು ಕೇಳಿ ಬರುತ್ತಿತ್ತು. ನನಗೆ ಆ ನಡುರಾತ್ರಿಯೂ ಚಳಿಯಲ್ಲೂ ಬೆವರು ಕಿತ್ತುಕೊಂಡು ಬರತೊಡಗಿತು.

ಪುನಃ ಆಚೆಯಿಂದ ಹತ್ತು ನಿಮಿಷ ಕಳೆದು ಕರೆಬಂತು. ಆ ಕಡೆಯಿಂದ ಬೇರೆ ಯಾರೋ ಮಾತನಾಡುತ್ತಿದ್ದರು.
‘ಇಷ್ಟೊತ್ತಿಗೆ ಹೀಗೆ ಇಲ್ಲಿಗೆ ಬರುವುದು ಸರಿಯಲ್ಲ. ಇವನನ್ನು ನಾವು ಸುಮ್ಮನೆ ಬಿಡಲ್ಲಾ’ ಎಂಬಿತ್ಯಾದಿ ಮಾತುಗಳು ಕೇಳಿಸುತ್ತಿದ್ದವು.

ಆ ಬಾಲಕ ಇತ್ತೀಚಿಗೆ ಮಡಿಕೇಇಯಲ್ಲಿ ನಡೆದ ಸರಣಿಗಳ್ಳತನದ ಮುಖ್ಯ ಬಾಲ ಆರೋಪಿಯಾಗಿದ್ದ ಹಾಗೂ ಆ ಬಾಲಕನ ಮನೆಯಲ್ಲಿ ಅವನ ತಾಯಿ ಒಂಟಿಯಾಗಿದ್ದಳು. ಅವರ ಮನೆಯ ಬಳಿ ಕೌಸರ್ನನ್ನು ಕಂಡಾಗ ಆ ಏರಿಯಾದ ಹುಡುಗನೊಬ್ಬ ಇಲ್ಲೇನೋ ಅವ್ಯವಹಾರ ನಡೆಯುತ್ತಿದೆ ಎಂದು ತಪ್ಪಾಗಿ ತಿಳಿದಿದ್ದ.  ಇಷ್ಟೆಲ್ಲಾ ನಡೆದು ಕೊನೆಗೆ ಕೌಸರ್ ಮನೆಗೆ ತಲುಪಿದ್ದ. ನಿದ್ರೆ ಹಾಳಾಯಿತು ಎಂದು ಹುಡುಗರು ನನಗೆ ಬೈಯುತ್ತಾ ನಿದ್ರೆ ಹೋಗಿದ್ದರು.

ಈ ಗಲಾಟೆ ನಡುವೆ ಕ್ಯಾಂಟಿನಿನ ಒಳಗೆ ಬೀದಿ ನಾಯೊಂದು ನುಗ್ಗಿ, ನಮ್ಮ ಜೊತೆ ಮಲಗಿತ್ತು. ಅದನ್ನು ಓಡಿಸಲು ನನಗೆ ಧ್ವನಿಹೊರಡುತ್ತಿರಲಿಲ್ಲ. ನಿನ್ನೆ ಯಾರೋ ಕಥೆ ಬರಿ ಮಾರಾಯ ಅಂದಿದ್ದರು. ನನಗೆ ಈ ಹುಡುಗ ನೆನಪಾದ

andolana

Recent Posts

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

5 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

5 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

7 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

12 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

19 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

19 hours ago