ಹಾಡು ಪಾಡು

ಚಹಾದ ಸುತ್ತಮುತ್ತ ಹೀಗೊಂದು ಮಾತುಕತೆ

ಚಂದ್ರಶೇಖರ್‌ ಮೂರ್ತಿ.ಕೆ.ಎಸ್‌

ಟೀ ಅಂದರೆ ಬೇರೆ, ಚಹ ಅಂದರೆ ಬೇರೆ ಎಂದು ಹೇಳಿ ಚಕಿತಗೊಳಿಸಿದವರು ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ‘ಕಪ್ ಕಲ್ಚರ್ ಟೀ’ ಎಂಬ ವಿನೂತನ ಟೀ ಶಾಪ್ ನಡೆಸುತ್ತಿರುವ ಮಲ್ಲಮ್ಮ ಗಾಣಿಗಿ. ಇಪ್ಪತ್ತು ವರ್ಷಗಳಷ್ಟು ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ಇದೀಗ ಚಹ ಪರಿಮಳಕ್ಕೆ ಮಾರು ಹೋಗಿ ತಮ್ಮದೇ ಟೀ ಅಂಗಡಿ ತೆರೆದಿರುವ, ಹವ್ಯಾಸಿ ರೂಪದರ್ಶಿಯೂ ಆಗಿರುವ ಮಲ್ಲಮ್ಮ ಚಹ ಕುರಿತು ಕೇಳಿದರೆ ಪಟಪಟನೆ ಮಾತು ಶುರು ಮಾಡುತ್ತಾರೆ.

ಟೀ ಅನ್ನೋದು ಮೊದಲು ಆರಂಭವಾಗಿದ್ದು ಚೀನಾದಲ್ಲಿ. ಒಬ್ಬ ವಿಜ್ಞಾನಿಯೂ, ಉದ್ಯಮಿಯೂ ಆಗಿದ್ದಾತ ದಣಿವಾಗಿ ಲ್ಯಾಬ್‌ನಿಂದ ಹೊರಬಂದು ತನ್ನ ಸಹಾಯಕನಿಗೆ ಒಂದು ಲೋಟ ನೀರು ಕೇಳುತ್ತಾನೆ. ಇತ್ತ ವಿಜ್ಞಾನಿಯ ಸಹಾಯಕ ನೀರು ತಂದು ಪಕ್ಕದಲ್ಲಿ ಇಟ್ಟು ಹೊರಟು ಹೋಗುತ್ತಾನೆ. ಆಗ ಗಾಳಿಯ ಅಲೆಗೆ ಎಲೆಯೊಂದು ಬಂದು ತಂದಿಟ್ಟಿದ್ದ ನೀರಿನ ಲೋಟಕ್ಕೆ ಬೀಳುತ್ತದೆ. ನೀರನ್ನು ಕುಡಿದ ನಂತರ ವಿಜ್ಞಾನಿಗೆ ಏನೋ ಒಂದು ರೀತಿಯ ಆಹ್ಲಾದಕರ ಅನುಭವ ಆಗುತ್ತದೆ. ಆಗ ಎಲೆಯ ಮೂಲ ತಿಳಿಯಲು ಹೊರಟ ವಿಜ್ಞಾನಿ ಆ ಎಲೆಯನ್ನೇ ಹುಡುಕಿ ಅದನ್ನು ನೀರಿಗೆ ಬೆರೆಸಿ ಕುಡಿಯಲು ಆರಂಭಿಸುತ್ತಾನೆ. ಇದರಿಂದ ಅವನಿಗೆ ಒತ್ತಡ ನಿವಾರಣೆ ಆಗಿ ದಿನನಿತ್ಯ ಚುರುಕಾಗಿ ಆಹ್ಲಾದಕರವಾಗಿ ಇರಲು ಸಾಧ್ಯವಾಗುತ್ತದೆ.

ಹೀಗೆ ತನಗೆ ಆದ ಅನುಭವವನ್ನು ಇಡೀ ದೇಶಕ್ಕೆ ತಿಳಿಸಿ ಇದನ್ನು ಬಳಸುವಂತೆ ತಿಳಿಸುತ್ತಾನೆ. ಆಗ ಇದಕ್ಕೆ ಚಾ ಎಂದು ಹೆಸರು ಇಡುತ್ತಾರೆ. ಇದಾದ ನಂತರ ಚೀನಾ ದೇಶದಿಂದ ಇಂಗ್ಲೆಂಡಿಗೂ ಪ್ರಚಾರವಾಗಿ ಚಹ ಸೇವನೆಯ ಹವ್ಯಾಸ ಶುರುವಾಗುತ್ತದೆ. ನಂತರ ಟೀ ಕುಡಿಯುವ ಪದ್ಧತಿ ಭಾರತಕ್ಕೂ ಪ್ರವೇಶ ಪಡೆಯುತ್ತದೆ ಎಂದು ಕಪ್ ಕಲ್ಚರ್ ಸ್ಥಾಪಕಿ ಮಲ್ಲಮ್ಮ ಗಾಣಿಗಿ ಅವರು ಮಾಹಿತಿ ನೀಡುತ್ತಾರೆ. ಹೋಟೆಲ್‌ನಲ್ಲಿಯೋ, ಬೇಕರಿಗೆ ಹೋಗಿಯೋ, ಸಣ್ಣಪುಟ್ಟ ಟೀ ಸ್ಟಾಲ್‌ಗಳಿಗೆ ಹೋಗಿಯೋ ‘ಅಣ್ಣಾ ಒಂದ್ ಟೀ ಕೊಡಿ’ ಎಂದು ಕೇಳಿ ಆತ ಕೊಟ್ಟ ಟೀ ಕುಡಿದು ಹೋಗೋ ನಮಗೆ ಟೀಯಲ್ಲೂ ಕೂಡ ೨೭ ಬಗೆಯ ವಿವಿಧ ರೀತಿಯ ಟೀಗಳಿವೆ ಅನ್ನುತ್ತಾರೆ ಮಲ್ಲಮ್ಮ.

ಕಪ್ ಕಲ್ಚರ್ ಟೀ ಶಾಪ್‌ನಲ್ಲಿ ೨೭ ರೀತಿಯ ವಿವಿಧ ಟೀ ಸಿಗುತ್ತವೆ. ಚಹಾವನ್ನು ಎಷ್ಟು ನಿಮಿಷ ಕುದಿಸುತ್ತೇವೆ ಅನ್ನೋದು ಬಹಳ ಮುಖ್ಯವಾಗುತ್ತದೆ. ನಾವು ಮಾಡುವ ಸಿಗ್ನೇಚರ್ ಟೀ ವಿಶೇಷ. ಸಿಗ್ನೇಚರ್ ಟೀ ಅಲ್ಲಿ ಎಲ್ಲ ರೀತಿಯ ಮಸಾಲೆ ಪದಾರ್ಥಗಳನ್ನೂ ಉಪಯೋಗಿಸಿಕೊಂಡು ತಯಾರಿಸುತ್ತಿದ್ದೇವೆ. ಕಪ್ ಕಲ್ಚರ್ ರೆಗ್ಯುಲರ್ ಚಾಯ್, ಬೆಲ್ಲದ ಚಾಯ್, ಮಸಾಲಾ ಚಾಯ್, ಏಲಕ್ಕಿ ಚಾಯ್, ಶುಂಠಿ ಚಾಯ್, ಬೆಲ್ಲದ ಶುಂಠಿ ಚಾಯ್, ಲೆಮನ್ ಗ್ರಾಸ್ ಚಾಯ್. ಪ್ರೀಮಿಯಂ ಚಾಯ್‌ನಲ್ಲಿ ಅಶ್ವಗಂಧ ಚಾಯ್, ಐಸ್ಡ್ ಚಾಯ್, ಬೋಬಾ ಚಾಯ್, ಜಾಯಿಕಾಯಿ ಚಾಯ್, ಸಿನ್ನಮಾನ್ ಚಾಯ್, ಡಾರ್ಕ್ ಕೊಕಾ ಚಾಯ್, ಚಿಲ್ಲಿ ಚಾಯ್, ಬೆಲ್ಲ ಶುಂಠಿ ಮೆಣಸು ಮಿಶ್ರಿತವಾಗಿರುವ ಜಾಗರಿ ಪೆಪ್ಪರ್ ಜಿಂಜರ್ ಚಾಯ್ ವಿಶೇಷವಾದರೆ, ಸೆರಿನಿಟಿ ವಾಟರ್ ಬೇಸ್ಡ್ ಚಾಯ್ ವಿಭಾಗದಲ್ಲಿ ಡಾರ್ಜಿಲಿಂಗ್ ವೈಟ್ ಟೀ ಪ್ಲಸ್ ಬೊಟಾನಿಕಲ್ಸ್, ನೀಲ್‌ಗಿರೀಸ್ ಓಲಾಂಗ್ ಟೀ ಪ್ಲಸ್ ಬೊಟಾನಿಕಲ್ಸ್, ಅಸ್ಸಾಂ ಬ್ಲಾಕ್ ಟೀ ಪ್ಲಸ್ ಬೊಟಾನಿಕಲ್ಸ್, ಲೆವೆಂಡರ್ ಟೀ, ಗ್ರೀನ್ ಟೀ, ಅವರಾಮ್ ಪೂ ಟೀ ಎಂಬ ೨೭ ಬಗೆಯ ಟೀ ರುಚಿಗಳಿವೆ. ಟೀ ಅಂದ್ರೆ ಟೀ ಎಲೆಗಳನ್ನು ಕತ್ತರಿಸಿ ಪುಡಿ ಮಾಡಿ ಹಾಲು- ಸಕ್ಕರೆ ಬೆರೆಸದೇ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯೋದನ್ನು ಟೀ ಎಂದು ಕರೆಯಲಾಗುತ್ತದೆ. ಅದೇ ರೀತಿ ಸಿಟಿಸಿ ಪ್ರೋಸೆಸ್ ಎಂದು ಕರೆಯಲ್ಪಡುವ ಸಂದರ್ಭದಲ್ಲಿ ಹಾಲು ಸಕ್ಕರೆ ಬೆರೆಸಿ ಕುಡಿಯೋದನ್ನು ಚಾಯ್ ಎಂದು ಕರೆಯಲಾಗುತ್ತದೆ. ನಮ್ಮ ಭಾರತದಲ್ಲಿ ಶೇಕಡಾ ೯೦ ರಷ್ಟು ಜನ ಚಹ ಕುಡಿಯೋದೇ ಹೊರತು ಟೀ ಅಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಟೀ ಕುಡಿಯುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ನಾವು ವಿವಿಧ ಬಗೆಯ ಟೀ ಮಾಡಿಕೊಡುತ್ತಿದ್ದೇವೆ ಎನ್ನುತ್ತಾರೆ ಸ್ವತಃ ಟೀ ಅಭಿಮಾನಿ ಮಲ್ಲಮ್ಮ.

chandira2095@gmail.com

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

6 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

7 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

7 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

8 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

8 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

14 hours ago