ಇವರು ಮೈಸೂರಿನೊಳಗೇ ಸೇರಿಕೊಂಡಿರುವ ಬನ್ನೂರು ರಸ್ತೆ ಯರಗನಹಳ್ಳಿಯ ಸೋಬಾನೆ ಹಾಡುಗಾರ್ತಿ ನಿಂಗಮ್ಮ. ಉಸಿರೆತ್ತಿದರೆ ಇವರ ಬಾಯಿಂದ ಹಾಡುಗಳು ಬರುತ್ತವೆ. ಒಂದು ಕಾಲದಲ್ಲಿ ಮೈಸೂರಿನ ಸಾರೋಟು ಕುದುರೆಗಳಿಗೆ ಬೇಕಾದ ಹುಲ್ಲು ಕತ್ತರಿಸಿ ಮಾರಿ ಅದರಿಂದ ಬಂದ ಕಾಸಲ್ಲಿ ಭತ್ತ ರಾಗಿ ಕೊಂಡು ಅನ್ನ ಅಂಬಲಿ ಮಾಡಿ ತನ್ನ ಎಂಟು ಮಕ್ಕಳಿಗೂ ಕುಡಿಸಿ ತಾನು ಮಾತ್ರ ಹಸಿದು ಮಲಗಿದಾಕೆ. ಮೈಸೂರು ಸುತ್ತಮುತ್ತ ಹುಟ್ಟು, ಸಾವು, ಮದುವೆ, ಸೀಮಂತಗಳಿಗೆ ಹೋಗಿ ಮದುವೆ ಶಾಸ್ತ್ರದ ಹಾಡು, ಸೂತಕದ ಹಾಡು, ಎಣ್ಣೆ ಎರೆಯುವ ಹಾಡುಗಳನ್ನು ಹಾಡಿ ಅವರು ಇವರು ಕೊಟ್ಟ ಕಾಸು ಕೂಡಿಸಿ ಮೂಗಿಗೆ ಮೂಗುತಿ, ಕಿವಿಗೆ ವಾಲೆ ಮಾಡಿಸಿಕೊಂಡು ಒಂದಿಷ್ಟು ಸಂಭ್ರಮಿಸಿದಾಕೆ. ಬೆಂಗಳೂರು, ರಂಗಾಯಣ, ರಾಮನಗರ ಆಕಾಶವಾಣಿ ಇಲ್ಲೆಲ್ಲ ಹೋಗಿ ಹಾಡು ಹಸೆ ಹೇಳಿ ಒಂದಿಷ್ಟು ಕಾಸು ಕೂಡಿಸಿ ಅದರಲ್ಲೇ ಮಕ್ಕಳು ಮೊಮ್ಮಕ್ಕಳ ಬಾಣಂತನವನ್ನೂ ಮಾಡಿಸಿ ತನ್ನ ಯಜಮಾನಿಕೆ ತೋರಿಸಿದಾಕೆ.
ಈಗ ನಿಂಗಮ್ಮ ಊರು ಬಿಟ್ಟು ನಂಜನಗೂಡು, ಮಾದೇಶ್ವರನ ಬೆಟ್ಟ ಎಂದು ಸಿಟ್ಟಲ್ಲಿ ಕೊರಗಿಕೊಂಡು ಎಲ್ಲೆಲ್ಲೋ ತಿರುಗುತ್ತಿದ್ದಾರೆ. ಸಿಟ್ಟಿಗೆ ಕಾರಣ ಏನು ಎಂದು ಕೇಳಿದರೆ ದೊಡ್ಡ ಕಥೆಯನ್ನೇ ಹೇಳುತ್ತಾರೆ. ಅದು ಬಹಳ ದೊಡ್ಡ ನೋವಿನ ಕತೆ. ನೀವು ಈ ಹಾಡುಗಾರ್ತಿ ತಾಯಿಯನ್ನು ಎಲ್ಲಾದರೂ ದಾರಿಯಲ್ಲಿ ಕಂಡು ಪ್ರೀತಿಯಲ್ಲಿ ಮಾತನಾಡಿಸಿದರೆ ಖುಷಿಪಡುತ್ತಾರೆ. ಮನಸಾರೆ ಅಳುತ್ತಾರೆ ಮತ್ತು ತಮ್ಮ ಬದುಕಿನ ಕಥೆ ಹೇಳಿ ಮುಗಿಸಿ ಸಂಕಟದಲ್ಲಿ ಮುಗುಳ್ನಗುತ್ತಾರೆ.

andolana

Recent Posts

ಕೊಡಗು| ಆಸ್ತಿ ವಿಚಾರಕ್ಕೆ ಕಲಹ: ಅಣ್ಣನ ಮಗನ ಮೇಲೆ ಗುಂಡಿನ ದಾಳಿ

ಕೊಡಗು: ಆಸ್ತಿ ವಿಚಾರಕ್ಕೆ ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾವಾಡಿಯಲ್ಲಿ ನಡೆದಿದೆ.…

24 mins ago

ರಾಜ್ಯದಲ್ಲಿ ಶೀಘ್ರದಲ್ಲೇ ಅರ್ಹರಿಗೆ ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ: ಸಚಿವ ಮುನಿಯಪ್ಪ ಘೋಷಣೆ

ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅರ್ಹರಿಗೆ ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಘೋಷಣೆ…

34 mins ago

ನಾಳೆ ಡೆವಿಲ್‌ ಚಿತ್ರ ರಿಲೀಸ್:‌ ಜೈಲಿನಿಂದಲೇ ಅಭಿಮಾನಿಗಳಿಗೆ ದರ್ಶನ್‌ ಸಂದೇಶ

ಬೆಂಗಳೂರು: ನಾಳೆ ನಟ ದರ್ಶನ್‌ ಅಭಿನಯದ ಡೆವಿಲ್‌ ಚಿತ್ರ ರಿಲೀಸ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದಲೇ ಅಭಿಮಾನಿಗಳಿಗೆ ನಟ ದರ್ಶನ್‌…

47 mins ago

ಮೈಸೂರಿನಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌಡನಕಟ್ಟೆಯಲ್ಲಿ ತಾಯಿಯೊಂದಿಗೆ ಸೆರೆ ಸಿಕ್ಕಿದ್ದ ನಾಲ್ಕು ಹುಲಿ ಮರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹುಣಸೂರು…

1 hour ago

ಓದುಗರ ಪತ್ರ: ಅದಲು-ಬದಲು…!

ಓದುಗರ ಪತ್ರ: ಅದಲು-ಬದಲು...! ಬೆಂಗಳೂರಿನಿಂದ ಬೆಳಗಾವಿಗೆ ಬಲುದೂರ ದೂರ ಬಂತು ಚಳಿಗಾಲದ ಅಧಿವೇಶನ ! ವಿಧಾನ ಸೌಧದಿಂದ ಸುವರ್ಣ ಸೌಧಕ್ಕೆ…

1 hour ago

ಓದುಗರ ಪತ್ರ:  ಚರಂಡಿಯಲ್ಲಿ ಕಸ ತೆರವುಗೊಳಿಸಿ

ಮೈಸೂರಿನ ಶ್ರೀರಾಂಪುರ ಬಡಾವಣೆ ಎರಡನೇ ಹಂತದಲ್ಲಿ ಎಸ್‌ಬಿಎಂ ಕಾಲೋನಿಯಲ್ಲಿರುವ ನಂದಿನಿ ಹಾಲಿನ ಕೇಂದ್ರದ ಎದುರಿನ ಚರಂಡಿಯಲ್ಲಿ ಕಸ ಕಡ್ಡಿಗಳು ತುಂಬಿದ್ದು,…

2 hours ago