ಆಂದೋಲನ ಪುರವಣಿ

ಅರ್ಜಿ ಬರೆದುಕೊಡುತ್ತಾ ಬರಹಗಾರನಾದೆ

 

ಮಧುಕರ ಮಳವಳ್ಳಿ
madhukaramalavalli@gmail.com

ಡಿಗ್ರಿ ಓದುವ ಸಮಯ ಮತ್ತು ಡಿಎಸ್‌ಎಸ್‌ನ ಚಳವಳಿಯ ಕಾವು ನನಗಿತ್ತು. ನಮ್ಮೂರು ಮಳವಳ್ಳಿ. ತಾಲ್ಲೂಕು ಕೇಂದ್ರ ಕೂಡ. ಸುತ್ತಮುತ್ತಲಿನ ಗ್ರಾಮದವರು ತಾಲ್ಲೂಕು ಕಚೇರಿಗೆ ಬರುತ್ತಿದ್ದರು. ಹಾಗೆ ಬಂದವರು ಟೀ-ಕಾಫಿ ಅಂಗಡಿಗೆ ಬಂದು ‘‘ಸ್ವಾಮಿ ಅಪ್ಪ’’ ಎನ್ನುತ್ತ ಜಾತಿ ಪ್ರಮಾಣಪತ್ರ, ಪೊಲೀಸ್ ಠಾಣೆಗೆ ಅರ್ಜಿ, ಪಿಂಚಣಿಗೆ ಇತ್ಯಾದಿಗೆ ಅರ್ಜಿ ಬರೆದುಕೊಡಿ ಎಂದು ಬಹಳ ಭಯ ಭಕ್ತಿಯಿಂದ ಕೇಳ್ತಿದ್ರು. ಇದ್ನೆಲ್ಲ ನೋಡುವಾಗ ಮನದಲ್ಲಿ ಒಂದು ರೀತಿಯ ತಾಕಲಾಟ.
ಒಂದಿನ ಸುಮಾರು ಪ್ರಾಯದ ಹೆಂಗಸು ಬಂದು ಟೀ ಕಂ ಸ್ಟೇಷನರಿ ಅಂಗಡಿಯ ಮುಂದೆ ಕುಳಿತಳು. ಸುಮಾರು ಹೊತ್ತು ಕಳೆದ ನಂತರ ಆ ಹೆಂಗಸು ‘ಅಣ್ಣ ಇಲ್ಲಿ ಅರ್ಜಿ ಬರ್ದು ಕೊಡ್ತಾರಲ್ಲಾ ಅವುತ್ರೃ ಬಂದಿಲ್ವಾ’ ಎಂದಳು. ‘ಯಾಕಮ್ಮ’ ಅಂದೆ. ‘ನಂಗೆ ಮುಂಡೆ ಪಿಂಚಣಿ ಮಾಡುಸ್ಬೇಕು’ ಅಂದಳು. ‘ಅಲ್ಲಮ್ಮ ನೀ ಓದಿಲ್ವಾ. ಒಂದ್ ಅರ್ಜಿ ಬರೆಯೋಕಾಗಲ್ವ’ ಅಂದೆ. ‘‘ಅಯ್ಯೋ ಹೆಣ್ಮಕ್ಳು ಹೆಚ್ಚು ಓದ್ಬಾರ್ದು ಅಂತ ನಮ್ ಮನೇಲಿ ಸ್ಕೂಲ್ ಬಿಡುಸ್ಬುಟ್ರು. ಅದು ಅಲ್ದೆ ನಾವು ತಳ’ ಆ ಜಾತಿಯವುತ್ರೃ. ನಮ್ಗೆ ಯಾಕಪ್ಪ ಓದು ಬರಹ, ನೀನು ಅರ್ಜಿ ಬರೆಯವ್ರ ತೋರ್ಸಪ್ಪ’’ ಅಂದಳು.

ಅರ್ಜಿ ಬರೆದುಕೊಡಲು ಇಪ್ಪತ್ತು ರೂಪಾಯಿ ಕೊಡಬೇಕಾಗುತ್ತೆ ಎಂದೆ. ಆ ಹೆಂಗಸು ‘ಫಸ್ಟ್ ಸರಿ ಬರುವ ಪಿಂಚಣಿಯ ಎಲ್ಲಾ ಅವರೆ ತಕ್ಕಳ್ಲಿ. ಅದು ಬರೋಹಂಗೆ ಮಾಡ್ಲಿ’ ಎನ್ನುತ್ತ ಕಣ್ಣೀರು ಹಾಕಿ ‘ನಂಗೆ ಯಾರು ದಿಕ್ಕುದೆಸೆ ಇಲ್ಲ. ಆ ಮುಂಡೆಮಗ ಏಡ್ ಮಕ್ಕಳ ಕೊಟ್ಬುಟ್ಟು ಮಣ್ ಪಾಲಾದ. ಕೂಲಿನಾಲಿ ಮಾಡಿ ಮಕ್ಕಳ ಸಾಕ್ತೀನಿ. ಸಣ್ಣಪುಟ್ಟ ಸಾಲ ಮಾಡುದ್ರೆ ಈ ದುಡ್ಡಿಂದ ಆ ಸಾಲ ತೀರುಸ್ಬಹುದು’ ಎಂದು ಧೈರ್ಯದಿಂದಲೇ ಹೇಳಿದಳು. ತಕ್ಷಣವೇ ಅಂಗಡಿಯಲ್ಲಿ ಹಾಳೆ ತೆಕ್ಕೊಂಡು ನನಗೆ ತಿಳಿದ ರೀತಿಯಲ್ಲಿ ಅರ್ಜಿ ಬರೆದುಕೊಟ್ಟೆ. ‘ಟೀ ನಾದ್ರು ಕುಡ್ಕಪ್ಪ’ ಎನ್ನುತ್ತ ಐದು ರುಪಾಯಿ ನೋಟ ಕೈಗಿಟ್ಟು ಹೊರಟಳು.

ಆಗ ನಾಲ್ಕು ಸಾಲು ಅರ್ಜಿ ಬರಸ್ಕೋಳೋಕೆ ಜನ ಅಕ್ಷರ ಜ್ಞಾನವಿಲ್ಲದೇ ಯಾಕ್ ಪರ್ದಾಡ್‌ಬೇಕು. ಇದಕ್ಕೆ ಏನಾರ ಮಾಡ್ಬೇಕು. ಅಂತ ಯೋಚನೆ ಶುರುವಾಯ್ತು. ಆಗ ಮನ್ಸಿಗೆ ಮೂಡಿದ್ದು ನಮ್ ಜನಕ್ಕೆ ಶಿಕ್ಷಣದ ಅರಿವು ಮೂಡುಸ್ಬೇಕು. ಅದನ್ನ ಹೇಳೋರೀತಿ ಹೆಂಗೆ ಅಂತ ಯೋಚ್ನೆ ಮಾಡಿ ಕವಿತೆ ಬರಿೋಂಕೆ ಶುರುಮಾಡ್ದೆ. ಒಂದೆರಡು ಕವಿತೆಗಳು ಸ್ಥಳೀಯ ಪತ್ರಿಕೇಲಿ ಪ್ರಕಟವಾದ್ವು. ಮತ್ತೆ ಯೋಚನೆ ಶುರುವಾಯ್ತು. ಓದುಬರಹ ತಿಳಿಯದ ಜನಕ್ಕೆ ಕವಿತೆ ಓದಿ ಹೇಳೋರ್ಯಾರು ಅಂತ. ಆಗ ಬೀದಿ ನಾಟಕಗಳ ಚಳವಳಿ ತುಂಬಾ ಇತ್ತು. ನಾನು ಒಂದ್ ತಂಡ ಸೇರ್ಕಂಡು ನಾಟ್ಕ ಮಾಡ್ತ ಹಳ್ಳಿಗಳಿಗೆ ಹೋದಾಗ ಎಲ್ಲರಿಗೂ ಶಿಕ್ಷಣ ಪಡಿಬೇಕು ಅಂತ ಹೇಳೋಕ್ ಶುರುಮಾಡ್ದೆ. ಇಂತ ಘಟನೆಗಳೇ ನನ್ನೊಳಗಿನ ಬರಹಗಾರನನ್ನು ಉಂಟುಮಾಡಿವೆ.

andolana

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

13 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

14 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

15 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

16 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

19 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

19 hours ago