ಪರಭಾಷಾ ಚಿತ್ರಗಳ ಅಬ್ಬರದ ನಡುವೆ ಮೂರು ಕನ್ನಡ ಚಿತ್ರಗಳು
ಸಂಕ್ರಾಂತಿಯ ವೇಳೆ ಪರಭಾಷಾ ಚಿತ್ರಗಳದೇ ಕಾರುಬಾರು. ಪ್ರದರ್ಶಕರು, ವಿತರಕರು ಅವುಗಳ ಮೇಲೆ ತೋರಿಸುವ ಅಕ್ಕರೆಯನ್ನು ಕನ್ನಡ ಚಿತ್ರಗಳ ಮೇಲೆ ತೋರಿಸುತ್ತಿಲ್ಲ. ತಮಿಳಿನ ಎರಡು, ತೆಲುಗಿನ ಎರಡು ಅದ್ಧೂರಿ ಚಿತ್ರಗಳು ರಾಜ್ಯದ ಬಹುತೇಕ ಪರದೆಗಳನ್ನು ಇಂದಿನಿಂದ ಆವರಿಸುತ್ತಿದ್ದು (ಮೊನ್ನೆೆಯೇ ತಮಿಳು ಚಿತ್ರಗಳ ಬಿಡುಗಡೆ ಆಗಿದೆ) ಕನ್ನಡ ಚಿತ್ರಗಳ ಎತ್ತಂಗಡಿ ಆಗುತ್ತಿವೆ. ಹೀಗಿದ್ದೂ ಈ ವಾರ ಮೂರುಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿವೆ. ಅವುಗಳು ಸಮಾಧಾನ ಸಂಸ್ಥೆಗಾಗಿ ಬಿ.ಎಸ್.ಲಿಂಗದೇವರು ನಿರ್ದೇಶಿಸಿರುವ ‘ವಿರಾಟಪುರವಿರಾಗಿ’, ಮೈಸೂರಿನ ಯುವಕರೇ ಸೇರಿ ನಿರ್ಮಿಸಿರುವ ‘ಆರ್ಕೆಸ್ಟ್ರಾ ಮೈಸೂರು’ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ಬಿಗ್‌ಬಾಸ್ ವಿಜೇತ ರೂಪೇಶ್‌ಶೆಟ್ಟಿ ಅಭಿನಯದ‘ಮಂಕುಬಾಯಿ ಫಾಕ್ಸಿರಾಣಿ’ ಈ ಮೂರು ಚಿತ್ರಗಳು.
‘ವಿರಾಟಪುರ ವಿರಾಗಿ’
ಸವಾಧಾನ ಸಂಸ್ಥೆಯ ಮೂಲಕ ತಯಾರಾದ‘ವಿರಾಟಪುರ ವಿರಾಗಿ’ ಚಿತ್ರವನ್ನು ಬಿ.ಎಸ್.ಲಿಂಗದೇವರು ನಿರ್ದೇಶಿಸಿದ್ದಾರೆ. ಆಧುನಿಕ ಬಸವಣ್ಣ ಎಂದೇ ಹೆಸರಾಗಿದ್ದ, 20ನೇ ಶತಮಾನದ ಆರಂಭದಲ್ಲಿಯೇ ಹೊಸ ಮನ್ವಂತರಕ್ಕೆ ಭದ್ರ ಬುನಾದಿ ಹಾಕಿದ ಹಾನಗಲ್ಲ ಶ್ರೀ ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆ ಇದಾಗಿದ್ದು, ಕುಮಾರಸ್ವಾಮಿಗಳ ಪಾತ್ರದಲ್ಲಿ ಸುಚೇಂದ್ರಪ್ರಸಾದ್ ಅವರಿದ್ದು, ಅವರ ಬಾಲ್ಯದ ಪಾತ್ರಗಳಲ್ಲಿ ಮಾಸ್ಟರ್ ಸಮರ್ಥ ಮತ್ತು ಸಮರ್ಥ ಕಾಣಿಸಿಕೊಂಡಿದ್ದಾರೆ. ಕೆಲವು ಮಂದಿ ಸ್ವಾಮೀಜಿಗಳೂ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಮಣಿಕಾಂತ್‌ಕದ್ರಿ ಸಂಗೀತ ಸಂಯೋಜನೆ, ಅಶೋಕ್ ವಿ.ರಾಮನ್‌ಛಾಯಾಗ್ರಹಣ, ಎಸ್.ಗುಣಶೇಖರನ್ ಸಂಕಲನ ಈ ಚಿತ್ರಕ್ಕಿದೆ.
‘ಆರ್ಕೆಸ್ಟ್ರಾ ಮೈಸೂರು’
ಅಶ್ವಿನ್ ಕ್ರಿಯೇಶನ್ಸ್ ಮತ್ತು ದೀಕ್ಷಿತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಆರ್ಕೆಸ್ಟ್ರಾ ಮೈಸೂರು’ ವಾದ್ಯವೃಂದ ಸೇರಬೇಕೆಂದು ಹಂಬಲಿಸುವ ಯುವಕನೊಬ್ಬನ ಕಥಾನಕ ಎನ್ನಲಾಗಿದ್ದು, ನಗರದ ಪ್ರತಿಭಾವಂತರೇ ಈ ಚಿತ್ರದಲ್ಲಿದ್ದಾರೆ. ಸುನಿಲ್ ಮೈಸೂರು ನಿರ್ದೇಶನದ ಈ ಚಿತ್ರದ ತಾರಾಗಣದಲ್ಲಿ ಪೂರ್ಣಚಂದ್ರ ಮೈಸೂರು, ರಾಜಲಕ್ಷ್ಮೀ, ದಿಲೀಪ್‌ರಾಜ್, ಮಹೇಶ್‌ಕುಮಾರ್, ರವಿ ಹುಣಸೂರು, ಲಿಂಗರಾಜು, ಮಹದೇವ ಪ್ರಸಾದ್ ಮುಂತಾದವರಿದ್ದಾರೆ. ಜೋಸೆಫ್ ಕೆ.ರಾಜ ಛಾಯಾಗ್ರಹಣ, ಸಂಕಲನದ ಈ ಚಿತ್ರದ ಸಂಗೀತ ಸಂಯೋಜನೆ ನಿರ್ಮಾಪಕರಲ್ಲಿ ಒಬ್ಬರೂ ಆಗಿರುವ ರಘು ದೀಕ್ಷಿತ್.
‘ಮಂಕುಬಾಯಿ ಫಾಕ್ಸಿರಾಣಿ’
ಜೋಶ್ವಾ ಮೀಡಿಯಾ ಸಂಸ್ಥೆಯ ಮೂಲಕ ಜೋಶ್ವಾ ಜೈಶಾನ್ ಕ್ರಾಸ್ತಾ ನಿರ್ಮಿಸಿರುವ ಚಿತ್ರ ‘ಮಂಕುಬಾಯಿಫಾಕ್ಸಿರಾಣಿ’. ಗಗನ್ ಎಂ. ನಿರ್ದೇಶನದ ಈ ಚಿತ್ರ ಯುವಕನೊಬ್ಬ ತನ್ನ ಗೆಳೆಯರಿಗೆ ಇದ್ದ ಹಾಗೆ ತನಗೂ ಒಬ್ಬಾಕೆ ಗೆಳತಿ ಬೇಕು ಎಂದುಕೊಂಡು ಆಕೆಯ ಹುಡುಕಾಟದ ಕಥೆ ಎನ್ನಲಾಗಿದ್ದು, ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮುಖ್ಯಭೂಮಕೆಯಲ್ಲಿದ್ದಾರೆ. ಅವರೊಂದಿಗೆ ಗೀತಾ ಭಾರತಿ ಭಟ್, ಪಂಚಮಿ ರಾವ್, ಅರುಣ್‌ಕಜೆ, ಪ್ರಕಾಶ್ ತುಮಿನಾಡ್, ಶೈಲಶ್ರೀ ಮುಲ್ಕಿ ಮುಂತಾದವರಿದ್ದಾರೆ. ವಿನ್ಯಾಸ್ ಮಧ್ಯ ಶಮೀರ್ ಮುಡಿಪು ಸಂಗೀತ ಸಂಯೋಜನೆ, ಶಾಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…