ಪುನೀತ್ ಮಡಿಕೇರಿ
ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಮತ್ತು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ನಗರದ ಹೋಂಸ್ಟೇಗಳಿಗೆ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಕ್ರಮ ಕಂಡುಬಂದರೆ ನೋಟಿಸ್ ನೀಡುತ್ತಿದ್ದಾರೆ.
ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಹಲವು ಅನಧಿಕೃತ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದು, ಹಲವರು ತಮ್ಮ ಹೋಂಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, ಕೆಲವರು ಇನ್ನೂ ಪರವಾನಗಿ ಪಡೆಯದೇ ಅನಧಿಕೃತವಾಗಿ ಹೋಂಸ್ಟೇ ನಡೆಸುತ್ತಿದ್ದಾರೆ. ಅಂತಹ ಹೋಂಸ್ಟೇಗಳಿಗೆ ಇದೀಗ ನಗರಸಭೆಯಿಂದ ನೋಟಿಸ್ ನೀಡಲಾಗುತ್ತಿದೆ. ಜತೆಗೆ ಲೈಸನ್ಸ್ ಪಡೆದಿದ್ದೂ ನಿಯಮಗಳನ್ನು ಪಾಲಿಸದೇ ಇರುವವರಿಗೂ ನಗರಸಭೆ ಸಿಬ್ಬಂದಿ ನೋಟಿಸ್ ನೀಡುತ್ತಿದ್ದಾರೆ.
ಹೋಂಸ್ಟೇ ನಡೆಸುವವರು ಅಲ್ಲಿಯೇ ವಾಸವಿದ್ದು, ಬಂದ ಅತಿಥಿಗಳಿಗೆ ಮನೆಯಲ್ಲಿಯೇ ಊಟ ನೀಡಿ ಸತ್ಕರಿಸುವುದು ನಿಜವಾದ ಹೋಂಸ್ಟೇ ಪರಿಕಲ್ಪನೆ. ಅದರಲ್ಲೂ ೫ ರೂಂಗಳು ಮಾತ್ರ ಇರಬೇಕು ಎಂಬ ನಿಯಮವಿದೆ. ಆದರೆ ನಗರದಲ್ಲೀಗ ಬಾಡಿಗೆ ಹೋಂಸ್ಟೇಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ಮಾಲೀಕರು ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಲೈಸನ್ಸ್ ಪಡೆದಿದ್ದರೂ ತಾವಲ್ಲಿ ವಾಸವಿರುವುದಿಲ್ಲ. ಬದಲಿಗೆ ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಿರುತ್ತಾರೆ. ಹೀಗೆ ಬಾಡಿಗೆ ಅಥವಾ ಭೋಗ್ಯಕ್ಕೆ ಪಡೆದುಕೊಂಡವರು ಕೆಲಸದವರನ್ನಿಟ್ಟು ಹೋಂಸ್ಟೇ ನಡೆಸುತ್ತಾರೆ. ಅಲ್ಲಿ ನಿಜವಾದ ಮಾಲೀಕರಾಗಲೀ, ಭೋಗ್ಯಕ್ಕೆ ಪಡೆದವರಾಗಲೀ ಇರುವುದೇ ಇಲ್ಲ. ಹೀಗೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಇಂತಹ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಈ ಹಿಂದೆ ನಡೆದ ಪೊಲೀಸ್ ಇಲಾಖೆ ,ಸಾರ್ವಜನಿಕ ಸಂಕರ್ಪ ಸಭೆ ಮತ್ತು ಪ್ರವಾಸೋದ್ಯಮ ಸಮಿತಿ ಸಭೆಗಳಲ್ಲಿ ಕೇಳಿಬಂದಿತ್ತು. ಇದೀಗ ನಗರಸಭೆ ಕ್ರಮಕ್ಕೆ ಮುಂದಾಗಿದೆ.
ಹೋಂಸ್ಟೇ ಲೈಸನ್ಸ್ ಪಡೆಯುವಾಗಲೇ ಮಾಲೀಕರು ಅಲ್ಲಿಯೇ ವಾಸ ಮಾಡುತ್ತಿರುವುದಕ್ಕೆ ಸಂಬಂಽಸಿದಂತೆ ವಾಸ ದೃಢೀಕರಣ ಪತ್ರ ಪಡೆಯಲಾಗುತ್ತದೆ. ಮಾಲೀಕರ ಮಕ್ಕಳು, ಅಣ್ಣ, ಅಕ್ಕ, ಹೀಗೆ ರಕ್ತ ಸಂಬಂಽಗಳು ಅಲ್ಲಿಯೇ ಇದ್ದು,ಹೋಂಸ್ಟೇ ನಡೆಸುವುದಾದರೆ ಮಾಲೀಕರು ಅಲ್ಲಿರ ಬೇಕು ಎಂದೇನಿಲ್ಲ. ಆದರೆ ಅಲ್ಲಿ ಒಬ್ಬರೋ ಇಬ್ಬರೋ ಕೆಲಸದವರನ್ನಿರಿಸಿ ಮಾಲೀಕರು ಬೇರೆಲ್ಲೋ ಇರುವುದು, ಬಾಡಿಗೆ ಅಥವಾ ಗುತ್ತಿಗೆ ಪಡೆದವರು ಕೇರ್ ಟೇಕರ್ ಒಬ್ಬರನ್ನು ಇರಿಸಿ ವ್ಯವಹಾರ ನಡೆಸುವುದು ಕಾನೂನು ಬಾಹಿರವಾಗಿದೆ.
ಕೆಲಸದವರು ಇದ್ದರೂ ಮಾಲೀಕರು ಅಲ್ಲಿಯೇ ಇರುವುದು ಕಡ್ಡಾಯ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ಹಲವು ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಮಾಹಿತಿ ನೀಡಿದ್ದಾರೆ.
” ಕೆಲವರು ಲೈಸನ್ಸ್ ಪಡೆಯದೇ ಬಾಡಿಗೆ ಮನೆಗಳನ್ನು ಹೋಂಸ್ಟೇ ಗಳಾಗಿ ಪರಿವರ್ತಿಸಿ ನಡೆಸುತ್ತಿದ್ದಾರೆ. ಕೆಲವರು ಲೈಸನ್ಸ್ ಪಡೆದುಕೊಂಡು ಬೇರೆ ಯಾರಿಗೋ ಬಾಡಿಗೆ ನೀಡಿದ್ದಾರೆ. ಹೀಗೆ ಬಾಡಿಗೆ ಪಡೆದು ನಡೆಸುವವರು ನಗರದಲ್ಲೇ ಹಲವು ಹೋಂಸ್ಟೇಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಇಂತಹ ಹೋಂಸ್ಟೇಗಳಿಗೆ ನೋಟಿಸ್ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.”
-ಎಚ್.ಆರ್.ರಮೇಶ್, ಪೌರಾಯುಕ್ತ, ಮಡಿಕೇರಿ ನಗರಸಭೆ
ಬಾಡಿಗೆ ಮನೆಗಳೇ ಸಿಗದ ಪರಿಸ್ಥಿತಿ..!:
ಜಿಲ್ಲೆಯಲ್ಲಿ ಅಧಿಕೃತ ಮತ್ತು ಅನಧಿಕೃತ ಹೋಂಸ್ಟೇಗಳು ಸಾವಿರಾರು ಇವೆ. ಮಡಿಕೇರಿ ನಗರದ ಪ್ರತಿ ಬಡಾವಣೆ,ಗಲ್ಲಿ ಗಲ್ಲಿಗಳಲ್ಲೂ ಹೋಂಸ್ಟೇಗಳಿವೆ. ಜಿಲ್ಲೆಯ ಹೊರಭಾಗದಲ್ಲಿರುವ ನೂರಾರು ಮಾಲೀಕರೂ ಇಲ್ಲಿರುವ ತಮ್ಮ ಮನೆಯನ್ನು ಹೋಂಸ್ಟೇ ನಡೆಸುವ ಉದ್ದೇಶಕ್ಕೆ ಬಾಡಿಗೆಗೆ ನೀಡಿದ್ದಾರೆ. ಮನೆಯನ್ನು ಬಾಡಿಗೆಗೆ ನೀಡುವ ಬದಲು ಹೋಂಸ್ಟೇಯಾಗಿ ಪರಿವರ್ತಿಸಿ ನೀಡಿದರೆ ಹೆಚ್ಚು ಬಾಡಿಗೆ ಸಿಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಜಿಲ್ಲೆಯವರಲ್ಲದೆ ಹೊರ ಜಿಲ್ಲೆಗಳವರೂ ಬಾಡಿಗೆ ಪಡೆದು ಹೋಂಸ್ಟೇಗಳನ್ನು ನಡೆಸುತ್ತಿದ್ದು, ಒಬ್ಬೊಬ್ಬರಿಗೆ ೫-೬ ಹೋಂಸ್ಟೇಗಳೂ ಇವೆ. ಹೀಗಾಗಿ ನಗರದಲ್ಲಿ ಬಾಡಿಗೆಗೆ ಮನೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆಗೆ ಮನೆ ಇದ್ದರೂ ಹೋಂಸ್ಟೇ ಲೆಕ್ಕದಲ್ಲೇ ದುಬಾರಿ ಬಾಡಿಗೆ ಕೇಳುತ್ತಾರೆ ಎಂದು ಪೌರಾಯುಕ್ತ ರಮೇಶ್ ತಿಳಿಸಿದ್ದಾರೆ.
ಒಡಿಶಾ ರಾಜ್ಯದ ಮುಖ್ಯಮಂತ್ರಿ ಮೋಹನ ಚರಣ ಮಾಂಝಿ ಅವರು ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ( ವೈದ್ಯಕೀಯ, ಇಂಜಿನಿಯರಿಂಗ್, ಫಾರ್ಮಸಿ, ಕೃಷಿ,…
ಮೈಸೂರು ನಗರದಲ್ಲಿ ಬೀದಿ ನಾಯಿಗಳ ಉಪಟಳ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ ನಾಯಿ ಕಡಿತದ ನೂರಾರು ಪ್ರಕರಣಗಳು ವರದಿಯಾಗುತ್ತಿವೆ. ಮೈಸೂರು…
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಎರಡು ಕೋಟಿ ರೂ.ಗಳಿಗೂ ಅಧಿಕ ಅನುದಾನ ದುರ್ಬಳಕೆಯ ಹಗರಣ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಗೆ…
ಪಂಚ ಗ್ಯಾರಂಟಿಗಳ ಪೈಕಿ ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’ ಯೋಜನೆಗಳು ದುರುಪಯೋಗ ಆಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವುಗಳ ಪರಿಷ್ಕರಣೆಗೆ ಸರ್ಕಾರ ಮುಂದಾಗಿರುವುದು…
ಮಂಜು ಕೋಟೆ ಕೋಟೆ: ಯುವಕನ ಪ್ರತಿಭೆ ಗುರುತಿಸಿ ಅವಕಾಶ ನೀಡಿರುವ ಕಾಲಘಟ್ಟ ಚಿತ್ರತಂಡ; ಜೂ.೧೯ರಂದು ಚಿತ್ರ ಬಿಡುಗಡೆ ಎಚ್.ಡಿ.ಕೋಟೆ: ತಾಲ್ಲೂಕಿನ…
ಮಹೇಂದ್ರ ಹಸಗೂಲಿ ನಷ್ಟ ಹೊಂದಿದ ರೈತರಿಗೆ ಬೆಳೆ ವಿಮೆ ನೋಂದಣಿ ಜೊತೆಗೆ ಎಕರೆಗೆ ೫೦ ಸಾವಿರ ರೂ. ಪರಿಹಾರ ಭರಿಸಲು…