Andolana originals

‘ಮೈಸೂರು ಮತ್ತೆ ಸ್ವಚ್ಛ ನಗರಿ ಗರಿ ಧರಿಸಬೇಕು’

ಪ್ರಶಾಂತ್ ಎನ್.ಮಲ್ಲಿಕ್

ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್

ಮೈಸೂರು: ನಗರಪಾಲಿಕೆಯ ಸ್ವಚ್ಛ ಸರ್ವೇಕ್ಷಣ ೨೦೨೬ರ ರಾಯ ಭಾರಿ ಗಳಾಗಿ ಆಯ್ಕೆಯಾಗಿರುವ ೬ ಮಂದಿ ಪೈಕಿ ಇಬ್ಬರು ಕಲಾವಿದರು ಹಾಗೂ ಒಬ್ಬರು ಚಲನಚಿತ್ರ ಗಾಯಕರು ಆಯ್ಕೆಯಾಗಿದ್ದು, ದೇಶದಲ್ಲೇ ಮೈಸೂರು ಮತ್ತೆ ಪ್ರಥಮ ಸ್ವಚ್ಛನಗರಿಯಾಗಬೇಕು ಎಂಬ ಆಶಯವನ್ನು ಮೂವರೂ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸ್ವಚ್ಛತೆ ಅಭಿಯಾನ ಮತ್ತು ಅದರ ಮಹತ್ವವನ್ನು ಕುರಿತು ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಜನರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಸಿನಿಮಾ ಕಲಾವಿದ ದಂಪತಿ ಹರಿಪ್ರಿಯಾ, ವಸಿಷ್ಠ ಸಿಂಹ ಮತ್ತು ಗಾಯಕರಾದ ಅನನ್ಯಾ ಭಟ್ ಅವರು ‘ಆಂದೋಲನ’ದೊಂದಿಗೆ ಮಾತನಾಡಿದ್ದು, ಅವರ ಮಾತುಗಳು ಇಂತಿವೆ

ಮೈಸೂರು ನನ್ನ ಊರು. ಇಲ್ಲಿ ನನ್ನ ಬಾಲ್ಯವನ್ನು ಕಳೆದಿದ್ದೇನೆ. ಶಾಲಾ ದಿನಗಳನ್ನು ಅನುಭವಿಸಿದ್ದೇನೆ. ೨೦೧೪ರಲ್ಲಿ ಆರಂಭವಾದ ಸ್ವಚ್ಛ ಭಾರತ್ ಅಭಿಯಾನದ ವೇಳೆ ಮೈಸೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿತ್ತು. ಆ ಗೌರವವನ್ನು ಮತ್ತೆ ತರುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಮೈಸೂರು ಮಹಾನಗರ ಪಾಲಿಕೆ, ಪೌರ ಕಾರ್ಮಿಕರು ಮತ್ತು ಅಧಿಕಾರಿಗಳ ಶ್ರಮ ಸ್ಛೂರ್ತಿದಾಯಕ. ಸ್ವಚ್ಛತಾ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಅದನ್ನು ನಮ್ಮ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನೀಡಬಹುದಾದ ದೊಡ್ಡ ಉಡುಗೊರೆ ಸ್ವಚ್ಛ ಮತ್ತು ಸುಂದರ ಮೈಸೂರು. ಮಕ್ಕಳಿಗೆ ಆಸ್ತಿ ಮಾತ್ರವಲ್ಲ, ಶುದ್ಧ ಗಾಳಿ ಮತ್ತು ಉತ್ತಮ ಪರಿಸರ ಕಲ್ಪಿಸುವುದು ನಮ್ಮ ಕರ್ತವ್ಯ. ಸ್ವಚ್ಛತೆಯ ಕೊರತೆಯಿಂದ ಹರಡುವ ರೋಗಗಳಿಂದ ಸಮಾಜವನ್ನು ರಕ್ಷಿಸುವುದಕ್ಕೆ ಇದು ಕೂಡ ಒಂದು ದಾರಿ.

-ವಸಿಷ್ಠ ಸಿಂಹ, ನಟ ಹಾಗೂ ಸ್ವಚ್ಛತಾ ಬ್ರ್ಯಾಂಡ್‌ ಅಂಬಾಸಿಡರ್,

ಮೈಸೂರು ನಗರಪಾಲಿಕೆ ಮೈಸೂರಿನೊಂದಿಗೆ ನನ್ನ ಸಂಬಂಧ ಅಪಾರ. ಸ್ವಚ್ಛತೆ ಮನೆಮಾತಾಗಬೇಕು; ಅದು ನಮ್ಮ ಮನೆಯಿಂದಲೇ ಆರಂಭವಾಗಬೇಕು. ನಾವು ನಮ್ಮ ಮನೆ, ವಾಹನ ಹಾಗೂ ಮನೆಮುಂದಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಗರ ಸುಂದರವಾಗುತ್ತದೆ. ಮೈಸೂರು ಹಿಂದೆ ಅಗ್ರಸ್ಥಾನದಲ್ಲಿತ್ತು; ಪ್ರತಿ ವರ್ಷವೂ ಅದೇ ಸ್ಥಾನದಲ್ಲಿ ಕಾಣಬೇಕು ಎಂಬುದು ನನ್ನ ಆಶಯ. ಈಗಿನ ‘ಸ್ವಚ್ಛತಾ ಲೀಗ್’ ಜನರನ್ನು ಒಗ್ಗೂಡಿಸುವ ಉತ್ತಮ ಪರಿಕಲ್ಪನೆ. ಯಾರು ನಂಬರ್ ೧ ಎನ್ನುವುದಕ್ಕಿಂತ, ನಮ್ಮ ನಗರ ಗೆಲ್ಲುವುದು ಮುಖ್ಯ. ನಮ್ಮ ಕಣ್ಣ ಮುಂದೆ ಕಸ ಕಂಡರೆ ಎತ್ತಿ ಸ್ವಚ್ಛ ಮಾಡುವ ಶಪಥ ಮಾಡೋಣ. ಮುಂದಿನ ಪೀಳಿಗೆಗೆ ಸ್ವಚ್ಛ, ಸುಂದರ ಮೈಸೂರನ್ನು ನೀಡೋಣ.

-ಹರಿಪ್ರಿಯಾ, ನಟಿ ಹಾಗೂ ಸ್ವಚ್ಛತಾ ಬ್ರ್ಯಾಂಡ್‌ ಅಂಬಾಸಿಡರ್,

ಮೈಸೂರು ನಗರಪಾಲಿಕೆ ‘ಮೈಸೂರಿನ ಸ್ವಚ್ಛತಾ ರಾಯಭಾರಿಯಾಗಿ ಆಯ್ಕೆಯಾಗಿರುವುದು ನನಗೆ ಅಪಾರ ಸಂತೋಷ ತಂದಿದೆ. ಇದು ಗೌರವ ಮಾತ್ರವಲ್ಲ, ದೊಡ್ಡ ಜವಾಬ್ದಾರಿಯೂ ಹೌದು. ಮೈಸೂರು ಈಗಾಗಲೇ ಸ್ವಚ್ಛ ನಗರವಾಗಿ ಹೆಸರು ಪಡೆದಿದೆ. ಪ್ರವಾಸಿಗರು  ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳನ್ನು ಇನ್ನಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶಾಲಾ ಮಕ್ಕಳನ್ನು ವಾರಾಂತ್ಯಗಳಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗಿಸುವ ಮೂಲಕ ಮುಂದಿನ ತಲೆಮಾರಿಗೆ ಜಾಗೃತಿ ಮೂಡಿಸಬಹುದು. ಸಾರ್ವಜನಿಕರು ಕಸವನ್ನು ಕಂಡ ಕಂಡ ಜಾಗದಲ್ಲೆಲ್ಲ ಎಸೆಯದೆ ಡಸ್ಟ್‌ಬಿನ್‌ಗಳಲ್ಲಿ ಹಾಕುವ ಅಭ್ಯಾಸ ಬೆಳೆಸಬೇಕು. ಸ್ವಚ್ಛತಾ ಕಾರ್ಮಿಕರನ್ನು ಗೌರವದಿಂದ ಕಾಣಬೇಕು; ಅವರು ನಮ್ಮ ಸಮುದಾಯದ ಹೆಮ್ಮೆ. ಮೈಸೂರು ನಗರ ಪಾಲಿಕೆ ಸಹಕಾರದಿಂದ ಮೈಸೂರನ್ನು ಇನ್ನಷ್ಟು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸಲು ಸಾರ್ವಜನಿಕರು ಕೈಜೋಡಿಸಬೇಕು.

-ಅನನ್ಯಾ ಭಟ್, ಗಾಯಕಿ, ಹಾಗೂ ಸ್ವಚ್ಛತಾ ಬ್ರ್ಯಾಂಡ್ ಅಂಬಾಸಿಡರ್, ಮೈಸೂರು ನಗರಪಾಲಿಕೆ

 

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

10 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

11 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

12 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

14 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

15 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

16 hours ago