Andolana originals

ಮೊಬೈಲ್ ವ್ಯಸನ; ಕೊರೊನಾ ಸಂದರ್ಭ ಮೂಲ ಕಾರಣ

ಕೆ.ಎಸ್.ಚಂದ್ರಶೇಖರಮೂರ್ತಿ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಚಿಂತನೆಗೆ ಶಿಕ್ಷಕ ವೃಂದ ಸ್ವಾಗತ 

ಮೈಸೂರು: ಆಧುನಿಕತೆ ಬೆಳೆಯುತ್ತಾ ಹೋದಂತೆ ಆಧುನಿಕ ತಂತ್ರಜನ ಕೂಡ ನಮ್ಮ ಜೀವನ ಶೈಲಿಯೊಳಗೆ ಬೆರೆತುಕೊಳ್ಳುತ್ತದೆ. ಕೆಲ ದಶಕಗಳಿಂದ ಜೀವನಕ್ಕೆ ಅತ್ಯ ವಶ್ಯಕವಾದ ಆಹಾರ, ನೀರು, ವಸತಿ ಜೊತೆಗೆ ಮೊಬೈಲ್ ಫೋನ್ ಕೂಡ ಸೇರ್ಪಡೆಯಾಗಿದೆ. ಇಂದಿನ ಬಹುತೇಕ ಮಕ್ಕಳು ಒಂದ್ಹೊತ್ತು ಊಟ ಬಿಡುತ್ತಾರೆಯೇ ಹೊರತು, ಫೋನ್ ಬಿಟ್ಟು ಇರಲಾರರು. ಅಷ್ಟರ ಮಟ್ಟಿಗೆ ಈ ಮೊಬೈಲ್ ಗೀಳಿಗೆ ಅಂಟಿಕೊಂಡಿರುವುದುಂಟು.

ಇನ್ನು ಪ್ರೌಢಾವಸ್ಥೆಯಲ್ಲಿ ಇರುವ ಅಂದರೆ ಹದಿನಾರು ವರ್ಷದವರೆಗಿನ ಮಕ್ಕಳ ಕಥೆ ಅದಕ್ಕಿಂತ ಭಿನ್ನವಾಗಿದೆ. ಮೊಬೈಲ್ ಬಳಕೆಯಲ್ಲಿ ಹದಿಹರೆಯದ ಮಕ್ಕಳು ತಮ್ಮ ವಯೋ ಮಾನಕ್ಕನುಗುಣವಾಗಿ ಅಗತ್ಯಕ್ಕೆಮೀರಿದ ವಿಚಾರಗಳನ್ನು ತಿಳಿದು ಕೊಂಡು ಓದಿನ ಕಡೆಗಿನ ಆಸಕ್ತಿ ಕಳೆದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ.

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಆರಂಭ ವಾದ ಈ ಆನ್‌ಲೈನ್ ತರಗತಿಗಳ ಪರಿಣಾಮವಾಗಿ ಪ್ರಾಥಮಿಕ ಶಾಲೆ ಮಕ್ಕಳಿಂದ, ಪದವಿವಿದ್ಯಾರ್ಥಿಗಳ ವರೆಗೂ ಮೊಬೈಲ್ ಅನಿವಾರ್ಯ ಎಂಬಂತಾಗಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಹಿಡಿದುಕೊಂಡು ಫೇಸ್‌ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮೊಬೈಲ್ಬಳಕೆಯಿಂದಾಗಿ ಅವರ ನಡೆ ನುಡಿಯಲ್ಲಿ ಬದಲಾವಣೆ, ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತ, ವೈಚಾರಿಕ, ವೈಜ್ಞಾನಿಕ, ಮೌಲ್ಯ ಆಧಾರಿತ ಶಿಕ್ಷಣ ಸೇರಿದಂತೆ ಮಕ್ಕಳ ವ್ಯಕ್ತಿತ್ವ ವಿಕಸನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ೧೬ ವರ್ಷ ಅಂದರೆ ಎಸ್‌ಎಸ್‌ಎಲ್‌ಸಿವರೆಗಿನ ಮಕ್ಕಳು ಬಳಕೆ ಮಾಡುವುದನ್ನು ನಿರ್ಬಂಧಿಸಬೇಕು ಎಂಬ ಆಲೋಚನೆ ಮಾಡಿದೆ.

ಹದಿನಾರು ವರ್ಷ ವಯೋ ಮಾನದ ಒಳಗಿನ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸುವ ಸಂಬಂಧ ನೀತಿ ರೂಪಿಸಲು ಮಿತಿಯೊಂದನ್ನು ರಚನೆ ಮಾಡಲಿದ್ದು, ಈ ಸಮಿತಿ ಯಲ್ಲಿ ಶಿಕ್ಷಣ ತಜ್ಞರು, ತಾಂತ್ರಿಕ ತಜ್ಞರು, ತರಬೇತಿ ಸಂಸ್ಥೆಗಳು, ಮನೋವೈದ್ಯರು ಇರಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಯುರೋಪ್ ಆಸ್ಟ್ರೇಲಿಯಾಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ನೀತಿ ಯಿದ್ದು, ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕೂಡ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿರ್ಬಂಧ ನೀತಿಯನ್ನು ರೂಪಿಸುವ ಚಿಂತನೆ ನಡೆ ಯುತ್ತಿದೆ. ಒಟ್ಟಾರೆಯಾಗಿ ಸರ್ಕಾರದ ಈ ಚಿಂತನೆಗೆ ಸಾರ್ವಜನಿಕ ವಲಯ, ಪೋಷಕರು, ಶಿಕ್ಷಕ ವೃಂದ ಸ್ವಾಗತ ವ್ಯಕ್ತವಾಗುತ್ತಿದೆ

“ಮೊಬೈಲ್ ಫೋನ್ ಬಳಕೆಯಿಂದಾಗಿ ನಾವು ಗೂಗಲ್‌ನಲ್ಲಿ ಶೈಕ್ಷಣಿಕ ವಿಚಾರವಾಗಿ ಹೆಚ್ಚುಮಾಹಿತಿಯನ್ನು ಪಡೆಯಬಹುದು.ಶಾಲೆಗಳಿಂದ ಯಾವುದೇಮಾಹಿತಿ ಇದ್ದರೂ ಗ್ರೂಪ್ನಲ್ಲಿ ಪಡೆದುಕೊಳ್ಳುತ್ತೇವೆ. ಆದರೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಅಡ್ಡದಾರಿ ಹಿಡಿಯಬಾರದು. ಫೋನ್‌ನ್ನು ಸದುಪಯೋಗ ಮಾಡಿಕೊಳ್ಳಬೇಕೇ ಹೊರತು ದುರುಪಯೋಗ ಮಾಡಿಕೊಳ್ಳಬಾರದು.”

-ರಕ್ಷಿತಾ, ವಿದ್ಯಾರ್ಥಿನಿ, ೮ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕುಕ್ಕರಹಳ್ಳಿ

” ಬಹಳ ವರ್ಷಗಳಿಂದಲೇ ಶಾಲಾ ಆವರಣದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿ ಆರಂಭವಾದ ದಿನಗಳಿಂದ ಮಕ್ಕಳು ಫೋನ್‌ಗಳಿಗೆ ವ್ಯಸನಿಗಳಂತಾಗಿದ್ದಾರೆ. ಮೊಬೈಲ್ ಬಳಕೆಯಲ್ಲಿ ಇತಿಮಿತಿಯ ಜೊತೆಗೆ ಭವಿಷ್ಯ ರೂಪಿಸುವ ಮಾಹಿತಿ ವಿಚಾರವನ್ನು ತಿಳಿದು ಕೊಳ್ಳಲು ಬಳಸಿದರೆ ಉಪಯುಕ್ತವಾಗಿರುತ್ತದೆ.”

-ಆರ್.ಚಂದ್ರು, ಮುಖ್ಯ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕುಕ್ಕರಹಳ್ಳಿ

” ಸರ್ಕಾರದ ಆಲೋಚನೆ ಸೂಕ್ತವಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರತ್ತದೆ ಎಂಬುದು ಪ್ರಶ್ನೆಯಾಗಿದೆ.ಕೊರೊನಾ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಕೊಟ್ಟಿದ್ದೇ ನಮ್ಮ ವ್ಯವಸ್ಥೆ. ಈಗ ಮಕ್ಕಳಿಂದ ಮೊಬೈಲ್ ವಾಪಸ್ ಪಡೆಯಲು ಆಗುತ್ತಿಲ್ಲ. ಅಷ್ಟರಮಟ್ಟಿಗೆ ಮಕ್ಕಳು ಮೊಬೈಲ್ ಫೋನ್‌ಗಳಿಗೆ ಅಂಟಿಕೊಂಡಿದ್ದಾರೆ. ಪೋಷಕರು ಮನಸ್ಸು ಮಾಡಿ ಮಕ್ಕಳಿಗೆ ಈ ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವುದು ಸೂಕ್ತ.”

-ರಾಮಚಂದ್ರ ಭಟ್, ಮುಖ್ಯ ಶಿಕ್ಷಕರು, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು

” ಮೊಬೈಲ್ ಬಳಕೆ ನಿಷೇಧ ಒಳ್ಳೆಯದು. ಆದರೆ ಶೈಕ್ಷಣಿಕವಾಗಿ ಉಪಯುಕ್ತ ಅಂಶಗಳನ್ನು ಬಳಸುವಂತೆಮಾಡಿ ಸಾಮಾಜಿಕ ಜಾಲತಾಣ ಸೇರಿದಂತೆ ಅನಗತ್ಯ ಎಲ್ಲಾ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ನಿರ್ಬಂಧ ಮಾಡುವುದು ಸೂಕ್ತವಾಗಿರುತ್ತದೆ. ಮೊಬೈಲ್ ಬಳಕೆ ಬದಲು ನಾವು ಲ್ಯಾಪ್‌ಟಾಪ್ ಬಳಸಿ ಶೈಕ್ಷಣಿಕ ವಿಚಾರಗಳನ್ನು ಹೆಚ್ಚು ಅರಿಯಲು ಮುಂದಾಗಬೇಕು.”

-ಅಭಿನವ್, ೮ನೇ ತರಗತಿ, ವಿದ್ಯಾರ್ಥಿ, ಸದ್ವಿದ್ಯಾ ಪ್ರೌಢಶಾಲೆ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

19 mins ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

21 mins ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

23 mins ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

27 mins ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

31 mins ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

3 hours ago