‘ಆದಿಪುರುಷ್’ ಸಿನಿಮಾವು 7000 ಪರದೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ಹಿಂದೆ ಈ ಸಿನಿಮಾವು ಕೆಲ ವಿವಾದಗಳನ್ನು ಎದುರಿಸಿತ್ತು. ಈಗ ಈ ಸಿನಿಮಾ ವಿಚಾರವಾಗಿ ನೇಪಾಳದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ‘ಆದಿಪುರುಷ್’ ಸಿನಿಮಾದಲ್ಲಿ ಸೀತೆಯ ಕುರಿತಂತೆ ಇರುವ ಡೈಲಾಗ್‌ವೊಂದು ನೇಪಾಳದಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸಿಟಿ ಮೇಯರ್ ಬಲೆನ್ ಶಾ ಸೋಶಿಯಲ್ ಮೀಡಿಯಾ ಪೋಸ್ಟ್
ಕಠ್ಮಂಡು ಮೆಟ್ರೊಪೊಲಿಟನ್ ಸಿಟಿ ಮೇಯರ್ ಬಲೆನ್ ಶಾ ಅವರು “ಆದಿಪುರುಷ್ ಸಿನಿಮಾದಲ್ಲಿ ಸೀತಾ ಡೈಲಾಗ್ ಬಗ್ಗೆ ಹೇಳಿದ್ದ ಡೈಲಾಗ್ ಸರಿ ಮಾಡಿಲ್ಲ ಎಂದರೆ ದೇಶದಲ್ಲಿ ಓಂ ರಾವುತ್ ಅವರ ಮುಂದಿನ ಸಿನಿಮಾಗಳು ಇಲ್ಲಿ ರಿಲೀಸ್ ಮಾಡೋದಿಲ್ಲ” ಎಂದು ಹೇಳಿದ್ದಾರೆ.
ಹಿಂದಿ ಸಿನಿಮಾ ರಿಲೀಸ್ ಮಾಡಲ್ಲ ಎಂದು ಎಚ್ಚರಿಕೆ
“ಜಾನಕಿ ಭಾರತದ ಮಗಳು ಎಂದು ಸಿನಿಮಾದಲ್ಲಿದೆ. ಇದು ಸತ್ಯವಲ್ಲ, ಜಾನಕಿ ನೇಪಾಳದ ಮಗಳು. ಆದಿಪುರುಷ್ ಸಿನಿಮಾದಲ್ಲಿರುವ ಈ ತಪ್ಪನ್ನು ಸರಿ ಮಾಡಿಲ್ಲ ಎಂದರೆ ಕಠ್ಮಂಡುವಿನಲ್ಲಿ ಹಿಂದಿ ಸಿನಿಮಾ ರಿಲೀಸ್ ಮಾಡೋದಿಲ್ಲ” ಎಂದು ಬಲೆನ್ ಶಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಮಾಯಣದ ಪ್ರಕಾರ ಸೀತೆ ಹುಟ್ಟಿದ್ದು ಎಲ್ಲಿ?
ಇದೇ ಕಾರಣಕ್ಕೆ ನೇಪಾಳದ ಸೆನ್ಸಾರ್ ಬೋರ್ಡ್ ಕೂಡ ಈ ಚಿತ್ರವನ್ನು ಹೋಲ್ಡ್ ಮಾಡಿಡಲು ನಿರ್ಧಾರ ಮಾಡಿದೆಯಂತೆ. ಇನ್ನು ‘ಆದಿಪುರುಷ್ ಟ್ರೇಲರ್‌ನಲ್ಲಿ ಸೀತೆ ಭಾರತದ ಮಗಳು ಎಂದಿದೆ. ರಾಮಾಯಣದ ಪ್ರಕಾರ ನೇಪಾಳದ ಜನಕಪುರದಲ್ಲಿ ಸೀತೆ ಜನಿಸುತ್ತಾಳೆ. ಆಮೇಲೆ ಅವಳನ್ನು ರಾಮ ಮದುವೆ ಆಗುತ್ತಾನೆ’ ಎಂದಿದೆ.
ಯಾರು ಯಾವ ಚಿತ್ರದಲ್ಲಿ ನಟಿಸಿದ್ದಾರೆ?
‘ಆದಿಪುರುಷ್’ ಸಿನಿಮಾವನ್ನು ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನ ಪಾತ್ರವನ್ನು ನಟ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ಅವರು ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಜಯ್ ಅತುಲ್, ಸಚೇತ್ ಪರಂಪರಾ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಆದಿಪುರುಷ್ ಸಿನಿಮಾ ಹೇಗಿದೆಯಂತೆ?
ಈ ಸಿನಿಮಾದಲ್ಲಿ ಪ್ರಭಾಸ್, ಕೃತಿ ಸನೋನ್ ನಟನೆಗೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ವಿಎಫ್‌ಎಕ್ಸ್ ಚೆನ್ನಾಗಿಲ್ಲ ಎಂದು ದೂರಿದ್ದಾರೆ.
ಫ್ರೀ ಟಿಕೆಟ್ ವಿತರಣೆ
ನಟ ರಾಮ್ ಚರಣ್ ತೇಜ, ರಣಬೀರ್ ಕಪೂರ್, ಅಭಿಷೇಕ್ ಅಗರ್‌ವಾಲ್ ಸೇರಿದಂತೆ ಕೆಲವರು 10 ಸಾವಿರ ಟಿಕೆಟ್‌ಗಳನ್ನು ಅಸಹಾಯಕರಿಗೆ, ಮಕ್ಕಳಿಗೆ ನೀಡುತ್ತೇವೆ ಎಂದು ಹೇಳಿದ್ದರು. ಈ ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ಕುತೂಹಲ ಶುರುವಾಗಿದೆ.
ಬಿಗ್ ಬಾಸ್ ಪ್ರಥಮ್ ಪೋಸ್ಟ್ ಏನು?
“ನನ್ನ ನಿಶ್ಚಿತಾರ್ಥ ಅರ್ಥಪೂರ್ಣವಾಗಿರಲಿ ಎಂಬ ಕಾರಣಕ್ಕೆ 200 ಜನ ಅಶಕ್ತರನ್ನು ಗುರುತಿಸಿ ಆದಿಪುರುಷ್ ಟಿಕೆಟ್ ಕೊಡ್ತಾ ಇದೀನಿ, ರಾಮ ಬರೀ ದೇವರಷ್ಟೇ ಅಲ್ಲ..ನನ್ನ ಪೂರ್ವಜರು. ಭಾರತೀಯರೆಲ್ಲರಿಗೂ ರಾಮನೇ ಪೂರ್ವಜ, ರಾಮನೇ ದೇವರು, ಆದಿಪುರುಷ್ ನಮ್ಮ ಹೆಮ್ಮೆ. ದಯವಿಟ್ಟು ಥಿಯೇಟರ್‌ಲ್ಲಿ ನೋಡಿ. ಕೈಮುಗಿದು ಪ್ರಾರ್ಥನೆ..” ಎಂದು ಒಳ್ಳೆ ಹುಡ್ಗ ಪ್ರಥಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ 5 ಲಕ್ಷ ನಿವೇಶನ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ…
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ…
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…