ಚಿತ್ರ ಮಂಜರಿ

ಆರ್ಟಿಕಲ್ 370 ಸಿನಿಮಾ ಟ್ರೈಲರ್‌ನಲ್ಲಿ ಮೋದಿ, ಅಮಿತ್ ಶಾ

ಪಂಚಭಾಷಾ ನಟಿ ಪ್ರಿಯಾಮಣಿ ಹಾಗೂ ಬಾಲಿವುಡ್‌ನ ಖ್ಯಾತ ನಟಿ ಯಾಮಿ ಗೌತಮ್ ಜೊತೆಯಾಗಿ ನಟಿಸಿರುವ ಆರ್ಟಿಕಲ್ 370 ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಅಂಗಳದಲ್ಲಿ ಭರವಸೆ ಹುಟ್ಟುಹಾಕಿದೆ.

ಈ ಸಿನಿಮಾದ ಟ್ರೈಲರ್ 2 ನಿಮಿಷ 40 ಸೆಂಕೆಡ್‌ಗಳಿದ್ದು, ಟ್ರೈಲರ್‌ನಲ್ಲಿ ಭಾರತದ ಪ್ರಸ್ತುತ ಪ್ರಧಾನ ಮಂತ್ರಿ ಮೋದಿಯವರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರಗಳಿರುವುದು ವಿಶೇಷವಾಗಿದೆ. ಜಮ್ಮುಕಾಶ್ಮೀರದ ವಿಶೇಷಾಧಿಕಾರವಾಗಿದ್ದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಹಂತವನ್ನು ಈ ಸಿನಿಮಾ ಹೊಂದಿದೆ.

ಟ್ರೈಲರ್‌ನಲ್ಲಿ ʼಪೂರಾ ಕಾ ಪೂರಾ ಕಾಶ್ಮೀರ್, ಭಾರತ್ ದೇಶ್ ಕಾ ಹಿಸ್ಸಾ ಥಾ ಹೇ ಔರ್ ರೆಹೇಗಾʼ ಎಂಬ ಮಾತು ಹಾಗೂ ಕಾಶ್ಮೀರ ಭಯೋತ್ಪಾದನೆ, ಭಯೋತ್ಪಾದನೆ ಕುತಂತ್ರ, ಸೇನಾಧಿಕಾರಿಗಳ ಹೋರಾಟ, ಮತ್ತು ಆರ್ಟಿಕಲ್ 370ಯನ್ನು ತೆಗೆದರೆ ಏನೆಲ್ಲ ಆಗಲಿದೆ ಎಂಬ ಅಂಶಗಳನ್ನು ತೋರಿಸಲಾಗಿದೆ. ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ನೋಡುಗರ ಗಮನ ಸೆಳೆದಿದೆ. ಯಾಮಿ ಗೌತಮ್ ಎನ್.ಐ.ಎ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರವು ಫೆಬ್ರವರಿ 23ಕ್ಕೆ ತೆರೆ ಕಾಣಲಿದೆ. ಇದುವರೆಗೂ ಕಾಶ್ಮೀರ ಕುರಿತಂತೆ ತೆರೆಗೆ ಬಂದಿರುವ ಯಾವ ಚಿತ್ರವೂ ಸೋತಿಲ್ಲದೆ ಬಾಕ್ಸ್ ಆಫೀನ್‌ನಲ್ಲಿ ಕೋಟಿ ಕೋಟಿ ಹಣಗಳಿಕೆ ಮಾಡಿರುವುದರಿಂದ ಈ ಚಿತ್ರದ ಟ್ರೈಲರ್‌ ರಿಲೀಸ್‌ ಆದ ಬಳಿಕ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿವೆ.

andolana

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

4 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

5 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

6 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

6 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

6 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

9 hours ago