ವಾರದ ಮುಖ
ಕನ್ನಡದ ಕಥೆಗಾರ ಬನ್ನೂರಿನ ಅದೀಬ್ ಅಖ್ತರ್ ಬಳಿ ನೀವು ಈಗ ಯಾಕೆ ಬರೆಯುತ್ತಿಲ್ಲ ಸಾಹೇಬರೇ ಎಂದು ಕೇಳಿದರೆ ‘ಒಂದು ಕಥೆ ಬರೆದಿಟ್ಟಿರುವೆ. ಆದರೆ ಅದಕ್ಕೆ ಇನ್ನೂ ಹೆಸರು ಇಟ್ಟಿಲ್ಲ. ಹಾಗಾಗಿ ಅದು ನನ್ನಲ್ಲೇ ಉಳಿದು ಬಿಟ್ಟಿದೆ’ ಎಂದು ಮಗುವಿನ ಹಾಗೆ ನಗುತ್ತಾರೆ. ಆದರೆ ನಿಜವಾದ ವಿಷಯ ಏನೆಂದರೆ ಮೂರು ವರ್ಷಗಳ ಹಿಂದೆ ಮಿದುಳಿಗೆ ಲಘು ಆಘಾತಗೊಂಡು ಪ್ರಜ್ಞಾಹೀನರಾಗಿದ್ದ ಅದೀಬ್ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಮಡದಿ ರಶೀದಾ ಭಾನು ಪತಿಗೆ ಕಿವಿ ಮತ್ತು ಮಾತಿನ ಹಾಗೆ ಸಾಥ್ ನೀಡುತ್ತಿದ್ದಾರೆ. ಬನ್ನೂರಿನ ಮುಖ್ಯ ರಸ್ತೆಯಲ್ಲಿ ಪುಟ್ಟದೊಂದು ಚಪ್ಪಲಿ ಅಂಗಡಿ ಇಟ್ಟುಕೊಂಡು ಬದುಕುತ್ತಿರುವ ಅದೀಬ್ ಅವರ ನಿಜವಾದ ಹೆಸರು ಇಕ್ಬಾಲ್ ಅಹಮದ್. ಅದೀಬ್ ಅಖ್ತರ್ ಅನ್ನುವುದು ಅವರ ಕಾವ್ಯನಾಮ. ಮೊದಲು ಉರ್ದುವಿನಲ್ಲಿ ಬರೆಯುತ್ತಿದ್ದ ಅದೀಬ್ ತಮ್ಮ ೪೪ ನೆಯ ವಯಸ್ಸಿನಲ್ಲಿ ಕನ್ನಡದ ಅ ಆ ಇ ಈ ಕಲಿತು ಆಮೇಲೆ ಕನ್ನಡದಲ್ಲೇ ಐದು ಪುಸ್ತಕಗಳನ್ನು ಬರೆದರು.
ಇದೀಗ ೬೭ ವರ್ಷ ತಲುಪಿರುವ ಅದೀಬ್ ಅವರಿಗೆ ಕನ್ನಡದಲ್ಲಿ ಇನ್ನೂ ಬರೆಯುವ ಆಸೆ. ಅವರ ಮಡದಿ ರಶೀದಾರಿಗೂ ತನ್ನ ಗಂಡ ಕನ್ನಡದಲ್ಲಿ ಇನ್ನಷ್ಟು ಬರೆದು, ಇನ್ನಷ್ಟು ಖ್ಯಾತರಾಗಬೇಕು ಎನ್ನುವ ಆಸೆ. ಅದೀಬ್ ಇನ್ನೂ ಚೇತರಿಸಿಕೊಂಡು ಕನ್ನಡದಲ್ಲಿ ಮತ್ತಷ್ಟು ಬರೆಯಬೇಕು ಎನ್ನುವುದು ಕನ್ನಡದ ಅವರ ಅಭಿಮಾನಿ ಓದುಗರ ಹಂಬಲ.
ತುಮಕೂರು: ಸಿದ್ಧಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿಂದು ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ. ಇಂದು ಬೆಳಿಗ್ಗೆಯಿಂದಲೇ ಪೂಜಾ…
ಬೆಂಗಳೂರು: ಕಾಪಿ ರೈಟ್ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ನಟ ರಕ್ಷಿತ್ ಶೆಟ್ಟಿ ಅವರಿಗೆ ದೆಹಲಿ ಹೈಕೋರ್ಟ್ 25 ಲಕ್ಷ ದಂಡ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದ ಅಂಗವಾಗಿ ಶ್ರೀ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಿಂಗನ ಕಟ್ಟೆ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಹಿಟಾಚಿ ವಾಹನಗಳಲ್ಲಿ…
ನಾಲ್ಕು ಸಾವಿರಕ್ಕೂ ಹೆಚು ಜನರಿಗೆ ಬದುಕು ರೂಪಿಸಿದ ಉತ್ಥಾನ್ ಕಲೆಕ್ಟಿವ್ ‘ಉತ್ಥಾನ್ ಕಲೆಕ್ಟಿವ್’ ಎಂಬುದು ಅಪಹರಣ ಸಂತ್ರಸ್ತೆಯರಿಗೆ ಆಶ್ರಯ ನೀಡಿ,…
ಬೇಸಿಗೆ ಕಾರಣ ಗ್ರಾಮಮಟ್ಟದ ಸಿಮೆಂಟ್ ತೊಟ್ಟಿಗಳಿಗೆ ನೀರು ತುಂಬಿಸಲು ಜಿಲ್ಲಾಧಿಕಾರಿ, ಸಿಇಒ ಸೂಚನೆ ಚಾಮರಾಜನಗರ: ಬೇಸಿಗೆಯ ಈ ದಿನಗಳಲ್ಲಿ ಜಾನುವಾರುಗಳಿಗೆ…