Andolana originals

ಚಾಮರಾಜನಗರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರು, ಲಸಿಕೆಗೆ ಸಜ್ಜು

ಬೇಸಿಗೆ ಕಾರಣ ಗ್ರಾಮಮಟ್ಟದ ಸಿಮೆಂಟ್ ತೊಟ್ಟಿಗಳಿಗೆ ನೀರು ತುಂಬಿಸಲು ಜಿಲ್ಲಾಧಿಕಾರಿ, ಸಿಇಒ ಸೂಚನೆ 

ಚಾಮರಾಜನಗರ: ಬೇಸಿಗೆಯ ಈ ದಿನಗಳಲ್ಲಿ ಜಾನುವಾರುಗಳಿಗೆ ಆದಷ್ಟು ಕುಡಿಯುವ ನೀರು ಲಭ್ಯವಾಗುವಂತೆ ಗ್ರಾಮಮಟ್ಟದಲ್ಲಿರುವ ಸಿಮೆಂಟ್ ತೊಟ್ಟಿಗಳಲ್ಲಿ ನೀರು ತುಂಬಿಸಲು; ತಾಪಮಾನದ ಕಾರಣಕ್ಕೆ ಯಾವುದೇ ಕ್ಷಣ ತಲೆದೋರ ಬಹುದಾದ ಚರ್ಮಗಂಟು ರೋಗ, ಕಾಲು ಬಾಯಿ ಜ್ವರ ತಡೆಯಲು ಸದ್ಯದಲ್ಲೇ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ಕಳೆದ ಗಣತಿ ಪ್ರಕಾರ ಜಿಲ್ಲೆಯಲ್ಲಿ ೨.೨೦ ಲಕ್ಷ ದನಕರು, ಸುಮಾರು ೨.೯೦ ಲಕ್ಷ ಕುರಿ, ಮೇಕೆಗಳಿದ್ದು ಕುಡಿಯುವ ನೀರು ಹಾಗೂ ಸತ್ವಯುತ ಮೇವಿನ ಕೊರತೆಯಿಂದ ಬೇಸಿಗೆಯ ಈ ದಿನಗಳಲ್ಲಿ ಇವುಗಳಿಗೆ ವಿವಿಧ ರೋಗಗಳು ಬಾಧಿಸುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ದಶಕಗಳ ಹಿಂದೆಯೇ ಗ್ರಾಮಗಳಲ್ಲಿ ನಿರ್ಮಿಸಿರುವ ಸಿಮೆಂಟ್ ತೊಟ್ಟಿಗಳಿಗೆ ಕಡ್ಡಾಯವಾಗಿ ದಿನಾಲೂ ನೀರು ತುಂಬಿಸಿ ಜಾನುವಾರುಗಳಿಗೆ ಕುಡಿಯಲು ನೀರು ಲಭ್ಯ ಆಗುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ಆಯಾ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳಿಗೆ ಪಶುಪಾಲನಾ ಇಲಾಖೆ ಕೋರಿಕೆ ಮೇರೆಗೆ ಈಗಾಗಲೇ ಸೂಚನೆ ನೀಡಿದ್ದಾರೆ.

೩ ಅಡಿ ಎತ್ತರ, ೬ರಿಂದ ೭ಅಡಿ ಉದ್ದದ ಈ ನೀರಿನ ತೊಟ್ಟಿಗಳಲ್ಲಿ ಒಮ್ಮೆಗೆ ನೀರು ತುಂಬಿದರೆ ಆರೇಳು ದಿನಗಳು ಉಪಯೋಗಿಸಬಹುದು. ಇಂತಹ ಸಿಮೆಂಟ್ ತೊಟ್ಟಿಗಳು, ನೀರಾವರಿ ವ್ಯವಸ್ಥೆ ಇರುವ ಕಡೆ ಹೊರತುಪಡಿಸಿ ಉಳಿದಂತೆ ಬಹುತೇಕ ಕಡೆ ಊರ ಹೊರವಲಯದಲ್ಲಿದ್ದು, ಎಲ್ಲಿಯಾದರೂ ನೀರು ಸಂಗ್ರಹ ಆಗದೇ ಇದ್ದರೆ ಇಲಾಖೆ ಗಮನಕ್ಕೆ ತರುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.

ಏಪ್ರಿಲ್ ಮೂರನೇ ವಾರ ಕಾಲುಬಾಯಿ ಜ್ವರ ತಡೆ ಲಸಿಕೆ ನೀಡಲು, ಅದೇ ವೇಳೆ ಅಥವಾ ೧೦ ದಿನಗಳ ಅಂತರದಲ್ಲಿ ಚರ್ಮಗಂಟು ರೋಗ ತಡೆ ಲಸಿಕೆ ಹಾಕಲು ಅದಕ್ಕೆ ಬೇಕಾದ ಲಸಿಕೆಗಳನ್ನು ಸಂಗ್ರಹಿಸಿ ಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೇಸಿಗೆಯ ನಡುವೆಯೂ ಮುಂದಿನ ೧೮ವಾರಗಳಿಗೆ ಆಗುವಷ್ಟು ಮೇವು ಜಿಲ್ಲೆಯಲ್ಲಿ ಲಭ್ಯ ಇರುವುದಾಗಿ ಪಶು ಇಲಾಖೆ ವರದಿ ಹೇಳುತ್ತದೆ. ನೀರಾವರಿ ವ್ಯವಸ್ಥೆಯಲ್ಲಿ ಬೆಳೆದಿರುವ, ದೊಡ್ಡ ದೊಡ್ಡ ರೈತರು ಸಂಗ್ರಹ ಮಾಡಿಕೊಂಡಿರುವ ಮೇವನ್ನು ಆಧರಿಸಿ ಈ ವರದಿ ನೀಡಲಾಗಿದೆ. ಆದರೆ, ವಾಸ್ತವ ಪರಿಸ್ಥಿತಿ ಇಲಾಖೆ ನೀಡಿರುವ ವರದಿಯಂತಿಲ್ಲ!

ಮಳೆ ಆಶ್ರಿತ ರೈತರು,ಜಮೀನೇ ಇಲ್ಲದೇ ಹೈನುಗಾರಿಕೆ ಮಾಡುವವರು ತಮ್ಮ ದನಕರು ಸಾಕಲು ಬಹಳ ಕಷ್ಟ ಪಡುತ್ತಿದ್ದಾರೆ. ಮೇವು ಖರೀದಿಸಿ ಹೇಗೋ ಸಾಕಾಣಿಕೆ ಮಾಡುತ್ತಿದ್ದು, ಇಂತಹ ರೈತರು ಮಳೆ ಬೇಡುತ್ತಿದ್ದು ಪದೇ ಪದೇ ಮಳೆಯಾದರೆ ಬಯಲು ಮೇವು ಹುಟ್ಟುತ್ತದೆ. ಇದರಿಂದ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂಬುದು ಗೋಪಾಲಕರ ಅನಿಸಿಕೆ.

ಹೆಣ್ಣು ಕರುಗಳಿಗೆ ಮಾತ್ರ ಲಸಿಕೆ; ೧೫ಸಾವಿರ ಪತ್ತೆ ಬ್ರುಸೆಲ್ಲಾ ರೋಗದಿಂದ ಹೆಣ್ಣು ಕರುಗಳಲ್ಲಿ ಗರ್ಭಪಾತ ಮತ್ತು ಬಂಜೆತನ ಸಂಭವಿಸುತ್ತದೆ. ಇದರ ತಡೆಗೆ ೪ ರಿಂದ ೮ ತಿಂಗಳ ವಯಸ್ಸಿನ ಹೆಣ್ಣು ಕರುಗಳಿಗೆ ಬ್ರುಸೆಲ್ಲಾ ಲಸಿಕೆಯನ್ನು ವರ್ಷದಲ್ಲಿ ಮೂರು ಬಾರಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ೧೫ಸಾವಿರ ಹೆಣ್ಣು ಕರುಗಳಿಗೆ ಈ ಲಸಿಕೆ ಕೊಡಲಾಗಿದ್ದು ಇನ್ನು ೩ ತಿಂಗಳಲ್ಲಿ ಮತ್ತೆ ಈ ಲಸಿಕೆ ಕಾರ್ಯ ಶುರುವಾಗಲಿದೆ. ಈ ರೋಗ ಮನುಷ್ಯರಿಗೂ ಬರಬಹುದಾದ್ದರಿಂದ ಪ್ರತಿ ವರ್ಷ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಪಶು ಇಲಾಖೆ ಉಪನಿರ್ದೇಶಕರು ತಿಳಿಸಿದರು.

ಹಂದಿ ಜ್ವರ ಲಸಿಕೆ ಇನ್ನೂ ೧ ವಾರ ವಿಸ್ತರಣೆ: 

ಹಂದಿ ಜ್ವರದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮ ಸೋಮವಾರ (ಮಾ.೩೦) ಮುಗಿದಿದ್ದು ಇನ್ನೂ ಒಂದುವಾರ ಇದನ್ನು ವಿಸ್ತರಣೆ ಮಾಡಿದ್ದು ಬಿಟ್ಟು ಹೋಗಿದ್ದರೆ ತಿಳಿದು ಲಸಿಕೆ ಹಾಕಲಾಗುತ್ತದೆ. ಮಾ.೧೬ರಿಂದ ಲಸಿಕೆ ನೀಡಲಾಗುತ್ತಿದ್ದು ಮಾ.೩೦ರ ತನಕ ಜಿಲ್ಲೆಯಲ್ಲಿ ೨,೫೦೦ ಹಂದಿಗಳಿಗೆ ಲಸಿಕೆ ನೀಡಲಾಗಿದೆ. ಹಂದಿಯಿಂದ ಮನುಷ್ಯರಿಗೂ ಜ್ವರ ಬರುವ ಅಪಾಯ ಅರಿತು ಬಿಟ್ಟು ಹೋಗಿರುವ ಹಂದಿಗಳಿಗೆ ನೀಡಲು ಲಸಿಕೆ ಹಾಕುವ ಅವಧಿ ವಿಸ್ತರಣೆ ಮಾಡಲಾಗಿದೆ. ಹಂದಿಗಳಿಗೆ ಲಸಿಕೆ ನೀಡುವುದು ಸವಾಲಿನ ಕೆಲಸ. ಕೆಲವೊಂದು ಕಡೆ ಹಂದಿ ಮಾಲೀಕರಿಗೇ ತರಬೇತಿ ನೀಡಿ ಅವರ ನೆರವಿನೊಂದಿಗೆ ಲಸಿಕೆ ಹಾಕಲಾಗುತ್ತಿದೆ.

” ಜಾನುವಾರುಗಳಿಗೆ ನೀರು, ನೆರಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಿಸಿಲು ಜಾಸ್ತಿ ಇದ್ದಾಗ ಬಯಲಿಗೆ ಬಿಡಬಾರದು. ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ತಪ್ಪದೇ ಲಸಿಕೆ ಹಾಕಿಸಬೇಕು.”

ಡಾ.ಮಂಜುನಾಥ್, ಉಪನಿರ್ದೇಶಕರು, ಪಶುಪಾಲನಾ ಇಲಾಖೆ

 

 

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

9 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

14 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

18 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

18 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

18 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

21 hours ago