ಆಂದೋಲನ ಪುರವಣಿ

ಅರವಿಂದನಗರದಲ್ಲೊಂದು ಹಿರಿಯರ ಮನೆ

• ಪ್ರಶಾಂತ್ ಎಸ್.

ಇತ್ತೀಚೆಗೆ ಕುಟುಂಬದೊಳಗಿನ ಮಾನವ ಸಂಬಂಧಗಳ ಮೌಲ್ಯಗಳು ಕಡಿಮೆಯಾಗಿ ಹಿರಿಯ ಜೀವಗಳು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗಿದೆ. ಮುಪ್ಪಾಗುತ್ತಿದ್ದಂತೆ ಬಂಧು-ಬಾಂಧವರಿಂದ ದೂರ, ಸ್ವಂತ ಮಕ್ಕಳಿಂದ ತಾತ್ಸಾರ ಇವುಗಳ ನಡುವೆ ಹಿರಿಯರ ಬದುಕು ಅತಂತ್ರವಾಗುವುದಂತೂ ನಿಜ.

ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಿಮಾತ್ಯ ಜೀವನಶೈಲಿಗಳು ಅಳವಡಿಕೆ ಇಂದು ಕುಟುಂಬಗಳನ್ನು ಹೊಡೆಯುತ್ತಿದೆ ಎಂದರೆ ತಪ್ಪಾಗಲಾರದು. ಈ ಪದ್ಧತಿಗಳು ಅನೇಕ ವಯೋವೃದ್ಧರನ್ನು ಒಂಟಿ ಜೀವಿಗಳನ್ನಾಗಿಸಿದೆ.

ಹೀಗೆ ಕುಟುಂಬದಿಂದ ದೂರಾದ, ಮಕ್ಕಳ ಹಾರೈಕೆಯಿಂದ ವಂಚಿತರಾದ ಹಿರಿಯ ನೊಂದ ಜೀವಗಳಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಜೆಎಸ್ ಎಸ್ ಸಂಸ್ಥೆಯು ‘ಹಿರಿಯರ ಮನೆ’ಯನ್ನು ಆಗಸ್ಟ್ 11, 2000ರಂದು ಮೈಸೂರಿನಲ್ಲಿ ಆರಂಭಿಸಿತು.

ಇದರಲ್ಲಿ ಕುಟುಂಬದಿಂದ ಬೇರ್ಪಟ್ಟ ಹಿರಿಯರಿಗೆ ಉಚಿತ ವಸತಿ, ಬೋರ್ಡಿಂಗ್ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತದೆ. ಅಲ್ಲದೆ ಜೆಎಸ್ ಎಸ್ ಹಿರಿಯರ ಮನೆ ಸುತ್ತೂರು ಶ್ರೀಕ್ಷೇತ್ರದ ಪ್ರಶಾಂತ ಪರಿಸರದಲ್ಲಿ ಎರಡು ಹಿರಿಯ ನಾಗರಿಕರ ಮನೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಉಚಿತವಾಗಿದೆ. ಇಲ್ಲಿ ಐವತ್ತು ಮಂದಿ ಆಶ್ರಯ ಪಡೆದುಕೊಂಡಿದ್ದು, ತಮ್ಮ ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ.

1090 ಹಿರಿಯರ ಸಹಾಯವಾಣಿ

ಜೆಎಸ್‌ ಎಸ್ ವೃದ್ಧಾಶ್ರಮ ಸಾಕಷ್ಟು ಸೌಲಭ್ಯಗಳನ್ನು ಈ ಮನೆಗಳಲ್ಲಿ ಹಿರಿಯರಿಗೆ ಕಲ್ಪಿಸಿದೆ. ಈ ವೃದ್ಧಾಶ್ರಮದಲ್ಲಿ ಹಿರಿಯರಿಗಾಗಿ ಉಚಿತ ವಸತಿ, ಗ್ರಂಥಾಲಯ, 24 ಗಂಟೆಗಳ ಕಾಲ ಬ್ರಾಡ್‌ ಬ್ಯಾಂಡ್‌ ಇಂಟರ್ನೆಟ್ ಸಂಪರ್ಕ ಮತ್ತು ಕೇಬಲ್ ಟಿವಿ ಸೌಲಭ್ಯ, ಸುಂದರವಾದ ಉದ್ಯಾನವನ, ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ, ಸಮತೋಲನ ಆಹಾರ, ಆಗಾಗ್ಗೆ ದಾದಿಯರಿಂದ ಭೇಟಿ, ಕ್ರೀಡಾ ಚಟುವಟಿಕೆಗಳು, ನಿಯಮಿತ ಭಜನೆ ಮತ್ತು ಧ್ಯಾನ, ಯೋಗ, ಪ್ರಾಣಾಯಾಮ ಮಾಡಿಸುವ ಜತೆಗೆ ಪ್ರಕೃತಿ ಚಿಕಿತ್ಸೆ ಸೌಲಭ್ಯಗಳು, ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಎಲ್ಲ ರಾಷ್ಟ್ರೀಯ ಮತ್ತು ಇತರ ಹಬ್ಬಗಳ ಆಚರಣೆ ಮಾಡುವ ಮೂಲಕ ಹಿರಿಯರು ಒಂದಿಷ್ಟು ಸುಂದರ ಕ್ಷಣೆಗಳನ್ನು ಅನುಭವಿಸಲು ಇಲ್ಲಿ ಅವಕಾಶ ನೀಡಲಾಗುತ್ತದೆ.

ಜೆಎಸ್‌ ಎಸ್ ಹಿರಿಯರ ಮನೆಯ ವಿಳಾಸ ಮತ್ತು ಸಂಪರ್ಕ ಸಂಖ್ಯೆ: ಜೆಎಸ್ಎಸ್ ವೃದ್ಧಾಶ್ರಮ, ಅರವಿಂದನಗರ, ಮೈಸೂರು. ದೂರವಾಣಿ ಸಂಖ್ಯೆ: 0821-2548252 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಿರ್ದೇಶಕರು, ಸಾಮಾನ್ಯ ಅಭಿವೃದ್ಧಿ ವಿಭಾಗ, ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರು- 0821-2548206.

andolana

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

4 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

6 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

7 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

9 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

10 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

10 hours ago