ಎಲ್ಲೆಂದರಲ್ಲಿ ಗಿಡ ಗಂಟಿಗಳು, ಕಸದ ರಾಶಿ
ಮೈಸೂರು: ಇಲ್ಲಿನ ರಾಜೀವ್ ನಗರದ ಉದ್ಯಾನ ಉದ್ದೇಶಕ್ಕೆ ಬಳಕೆಯಾಗದೆ ಪಾಳು ಬಿದ್ದಿದೆ. ಉದ್ಯಾನದ ತುಂಬ ಗಿಡ-ಗಂಟಿಗಳು ಬೆಳೆದಿದ್ದು, ಎಲ್ಲೆಂದರಲ್ಲಿ ಕಸ ರಾಶಿ ಹಾಕಲಾಗಿದೆ. ಉದ್ಯಾನ ವನಕ್ಕೆ ಬಂದವರು ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ಉದ್ದೇಶದಿಂದ ಕುಳಿತುಕೊಳ್ಳಲು ಅಳವಡಿಸಿದ್ದ ಕಾಂಕ್ರೀಟ್ ಆಸನಗಳು ಶಿಥಿಲಗೊಂಡಿವೆ.
ಒಂದು ಬಡಾವಣೆಯಲ್ಲಿ ಉದ್ಯಾನ ನಿರ್ಮಿಸಬೇಕು ಎಂಬ ನಿಯಮ ಪಾಲನೆ ಮಾಡುವ ಉದ್ದೇಶದಿಂದ ಮಾತ್ರ ಇಲ್ಲಿ ಉದ್ಯಾನವನ ನಿರ್ಮಿಸಿದಂತೆ ಇದೆ. ಈ ದುಸ್ಥಿತಿಯಿಂದಾಗಿ ವಾಯು ವಿಹಾರಕ್ಕೆ ಯಾರೂ ಬರುತ್ತಿಲ್ಲ. ಆದ್ದರಿಂದ, ಉದ್ಯಾನವನದ ಉದ್ದೇಶವೇ ಮರೆಯಾದಂತಿದೆ. ಆದರೆ ಉದ್ಯಾನವನದ ಸ್ವಲ್ಪ ಭಾಗವನ್ನು ಮಕ್ಕಳು ಆಟವಾಡಲು ಬಳಸಿಕೊಳ್ಳುತ್ತಿದ್ದಾರೆ.
ಪ್ರವೇಶಿಸಲು ಇರುವ ದ್ವಾರದ ಬಳಿಯೇ ಕಸದ ರಾಶಿ ಹಾಕಲಾಗಿದೆ. ಇದರಿಂದಾಗಿ ಒಳಗೆ ಹೋಗಬೇಕೆಂಬ ಇಚ್ಛೆ ಇದ್ದರೂ ಹೋಗಲು ಸಾಧ್ಯವಾಗದಂತಹ ಸ್ಥಿತಿ ಇದೆ. ಉದ್ಯಾನದ ದುಸ್ಥಿತಿ ಬಗ್ಗೆ ಇಲ್ಲಿನ ಸಾರ್ವಜನಿಕರನ್ನು ಪ್ರಶ್ನಿಸಿದರೆ ಅವರು ನಿರಾಸಕ್ತಿ ತೋರುತ್ತಾರೆ. ಉದ್ಯಾನವನ್ನು ಇಲ್ಲಿ ನಿರ್ಮಿಸುವುದು ಬೇಡವಾಗಿತ್ತೇನೋ ಎಂಬ ಭಾವನೆ ವ್ಯಕ್ತಪಡಿಸುತ್ತಾರೆ.
ರಾಜೀವ್ ನಗರದ ಉದ್ಯಾನದ ಕಥೆ ಹೀಗಾದರೆ, ಈ ಬಡಾವಣೆಯ ಬಹುತೇಕ ರಸ್ತೆಗಳ ಇಕ್ಕೆಲಗಳಲ್ಲೂ ಕಸ, ನಿರುಪಯುಕ್ತ ತ್ಯಾಜ್ಯದ ರಾಶಿಯೇ ಕಂಡುಬರುತ್ತದೆ. ರಾಜೀವ್ ನಗರದ ಮಾದೇಗೌಡ ವೃತ್ತದ ಬಳಿ ಇರುವ ಅಶ್ವತ್ಥ ವೃಕ್ಷದ ಸುತ್ತ-ಮುತ್ತಲಿನ ಜಾಗದಲ್ಲೂ ಸ್ವಚ್ಛತೆ ಮರೀಚಿಕೆಯಾಗಿದೆ. ಈ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ಸಾರ್ವಜನಿಕರು.
” ರಾಜೀವ್ ನಗರದ ಉದ್ಯಾನದ ದುಸ್ಥಿತಿಯಿಂದಾಗಿ ಯಾರೂ ಒಳಗೆ ಪ್ರವೇಶ ಮಾಡದ ಹಾಗಾಗಿದೆ. ತಕ್ಷಣ ಸಂಬಂಧಪಟ್ಟವರು ಇತ್ತ ಗಮನಹರಿಸಿ ಉದ್ಯಾನವನ್ನು ಸ್ವಚ್ಛಗೊಳಿಸಬೇಕಿದೆ.”
-ವಸೀಮ್, ರಾಜೀವ್ ನಗರ ನಿವಾಸಿ
” ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ. ಯುವಜನರು ಹೋರಾಟವನ್ನೇ ಉಸಿರಾಗಿಸಿ ಕೊಳ್ಳಬೇಕು. ಅಂಬೇಡ್ಕರ್ ಹೋರಾಟದ ಬದುಕನ್ನು ಎಲ್ಲರೂ ಅರಿಯಬೇಕು.”
-ಅಹಿಂದ ಜವರಪ್ಪ
” ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ರಾಜೀವ್ ನಗರದ ಉದ್ಯಾನ ಹಾಳಾಗಿದೆ. ಇದರಿಂದಾಗಿ ಯಾರೂ ಪ್ರವೇಶಿಸದಂತಾಗಿದೆ. ಉದ್ಯಾನಕ್ಕೆ ಕಾಯಕಲ್ಪ ಅಗತ್ಯವಾಗಿದೆ.”
-ನಾಸಿರ್, ರಾಜೀವ್ ನಗರ ನಿವಾಸಿ
ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…
ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…
ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…
ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…