Andolana originals

ಮಕ್ಳಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ನನ್ನ ಮನಸ್ಸಿನಲ್ಲಿ ಆಳವಾಗಿ ಇಳಿದ ಗಾಂಧಿಯವರ ಅಹಿಂಸಾ ಮಾರ್ಗ

ಗಾಂಧಿಜಿ ಅವರ ಅಹಿಂಸಾ ಮಾರ್ಗ ಮತ್ತು ಸತ್ಯಾಗ್ರಹ ಚಳವಳಿಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಪ್ರಭಾವ ಬೀರಿವೆ. ಅವರ ಆದರ್ಶಗಳು ಇಂದಿಗೂ ವಿಶ್ವಕ್ಕೆ ಬೆಳಕು. ಗಾಂಧಿಜಿಯವರ ಜೀವನವು ನಮಗೆ ಅಹಿಂಸೆಯ ಬಲ ಮತ್ತು ಸತ್ಯದ ಮಾರ್ಗವನ್ನು ಕಲಿಸುತ್ತದೆ. ನಾವು ಅವರ ಆದರ್ಶಗಳನ್ನು ಅನುಸರಿಸಿದರೆ ಸಮಾಜ ಶಾಂತಿಯುತವಾಗುತ್ತದೆ. ಇಂದಿನ ಯುವಜನತೆಗೆ ಗಾಂಧಿಜಿಯವರು ಸೂರ್ತಿ.

ಅವರ ಜೀವನವು ನಮಗೆ ಸತ್ಯವೇ ದೇವರು, ಅಹಿಂಸೆಯೇ ಸಾಧನೆಯ ಮಾರ್ಗ ಎಂಬ ಸಂದೇಶವನ್ನು ನೀಡುತ್ತದೆ. ಭಾರತದ ರಾಜಕೀಯ ರಂಗದಲ್ಲಿ ಮಹಾತ್ಮ ಗಾಂಧಿಯವರು ನಿರ್ವಹಿಸಿದ ಪಾತ್ರ ಅವಿಸ್ಮರಣೀಯ. ಭಾರತದ ಸ್ವಾತಂತ್ರ್ಯ ಹೋರಾಟದ ಆ ಬಿರುಸಿನ ದಿನಗಳಲ್ಲಿ ಗಾಂಧಿ ಅನೇಕ ಬಾರಿ ಜೈಲುವಾಸ ಅನುಭವಿಸಿದರು. ಆದರೆ ಮಾತೃಭೂಮಿಯ ಸ್ವಾತಂತ್ರ್ಯವು ಅವರು ಪಾಲಿಸಬೇಕಾದ ಗುರಿಯಾಗಿ ಉಳಿಯಿತು ಹಾಗೂ ಅದನ್ನು ಸಾಧಿಸಿದರು. ಅಂತಿಮವಾಗಿ ಗಾಂಧಿಜಿ ಅವರು ಯಾವುದೇ ಸಂದರ್ಭದಲ್ಲೂ ಸೋಲಿಸಲಾಗದ ವ್ಯಕ್ತಿಯಾದರು ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕರಾದರು.

ಸ್ವಾತಿ ಸಿ., ೯th ಸದ್ವಿದ್ಯಾ ಪ್ರೌಢಶಾಲೆ, ಮೈಸೂರು

 

ದೇಶ-ವಿದೇಶಗಳ ಜನರ ಮನದಲ್ಲಿ ಮನೆ ಮಾಡಿದ್ದ ಗಾಂಧಿ…

ಆದರ್ಶಪ್ರಾಯ, ಮಾನವೀಯ ಮೌಲ್ಯ, ಸೇವಾ ಮನೋಭಾವನೆ, ಸರಳ ವ್ಯಕ್ತಿತ್ವದ ಮೂಲಕ ದೇಶ-ವಿದೇಶಗಳ ಜನರ ಮನದಲ್ಲಿ ಮನೆ ಮಾಡಿರುವುದಕ್ಕೆ ಮಹಾತ್ಮ ಗಾಂಧಿ ಅವರು ರಾಷ್ಟ್ರಪಿತ ಎನಿಸಿಕೊಂಡಿದ್ದಾರೆ. ಅವರ ಜೀವನಮೌಲ್ಯಗಳನ್ನು ನಾವು ಅನುಸರಿಸಬೇಕು ಮತ್ತು ಎಲ್ಲರೂ ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಗಾಂಧಿಜಿ ಅವರ ಬದ್ಧತೆ ಮತ್ತು ಸತ್ಯ ಸಂಧತೆ ಇಂದಿನ ಯುವಜನಾಂಗಕ್ಕೆ ದಾರಿದೀಪವಾಗಿದೆ. ದೀನ ದಲಿತರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಹೃದಯ ವೈಶಾಲ್ಯತೆ ಸತ್ಯಾರ್ಹವಾದುದು. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜಿ ಅವರ ಪಾತ್ರ ವಿಶಿಷ್ಟವಾದುದು. ಅವರು ಜೀವನದುದ್ದಕ್ಕೂ ನಡೆದು ಬಂದ ದಾರಿ ಐತಿಹಾಸಿಕ ದಾಖಲೆಯಾಗಿದೆ. ಅದಕ್ಕಾಗಿ ಅವರು ಆದರ್ಶಪ್ರಾಯವಾಗಿದ್ದಾರೆ.

ಮಮತ ಕೆ., ೯th ಬಾಲಕಿಯರ ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ), ಮೈಸೂರು

 

ಭಾರತದ ಆತ್ಮಹಳ್ಳಿಗಳಲ್ಲಿ ಇದೆ ಎಂದಿದ್ದರು ಬಾಪೂಜಿ…

ಗಾಂಧಿ ಕೇವಲ ಫೋಟೋ ಅಥವಾ ಪುಸ್ತಕದ ಪಾತ್ರವಲ್ಲ. ಗಾಂಧಿಜಿ ಅವರ ಬದುಕು ಮತ್ತು ಆದರ್ಶಗಳು ನನ್ನ ಮನಸ್ಸಿನ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ. ನನಗೆ ಗೊತ್ತಿರುವ ಗಾಂಧಿಜಿ ಇತಿಹಾಸ ಪುಟಗಳಲ್ಲಿರುವ ವ್ಯಕ್ತಿಗಿಂತ ಹೆಚ್ಚಾಗಿ ಇಂದಿಗೂ ನಮ್ಮ ಬದುಕಿಗೆ ದಾರಿ ತೋರುವ ಬೆಳಕಿನ ಕಿರಣ. ಇಂದಿಗೂ ಅವರು ನನ್ನ ದೈನಂದಿನ ಜೀವನದ ನಿರ್ಧಾರಗಳಲ್ಲಿ, ನನ್ನ ಮನಸ್ಸಿನಲ್ಲಿ ಪ್ರಭಾವ ಬೀರುತ್ತಿದ್ದಾರೆ.

ಭಾರತದ ಆತ್ಮವು ಹಳ್ಳಿಗಳಲ್ಲಿದೆ ಎಂದು ಅವರು ನಂಬಿದ್ದರು. ಗ್ರಾಮ ಸ್ವರಾಜ್ಯ ಅವರ ಕನಸಾಗಿತ್ತು. ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಹೋರಾಡಿದರು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಇಂದು ಗಾಂಧಿಜಿ ಅವರ ಪಾಠಗಳು ಹೆಚ್ಚು ಪ್ರಸ್ತುತವಾಗಿವೆ. ಗಾಂಧಿ ಬಡತನವನ್ನು ಆಚರಿಸಲು ಹೇಳುವುದಿಲ್ಲ. ಬದಲಿಗೆ ಅವರು ದುರಾಸೆಯನ್ನು ನಿಯಂತ್ರಿಸಲು ಕಲಿಸುತ್ತಾರೆ.

ಮೋನಿಷ ಜಿ., ೯th ಶ್ರೀ ಶಾರದಾ ಪಬ್ಲಿಕ್ ಶಾಲೆ, ಆರ್.ಟಿ.ನಗರ, ಮೈಸೂರು

ಮಾನವೀಯತೆಯ ಜೀವಂತ ರೂಪಕ ಮಹಾತ ಗಾಂಧಿಜಿ…

ನನ್ನ ದೃಷ್ಟಿಯಲ್ಲಿ ಗಾಂಧಿಜಿ ಅವರು ರಾಷ್ಟ್ರಪಿತ ಅಷ್ಟೇ ಅಲ್ಲ. ಸತ್ಯ, ಅಹಿಂಸೆ, ಸರಳತೆ ಮತ್ತು ಮಾನವೀಯತೆಯ ಜೀವಂತ ರೂಪಕ. ಅವರ ಜೀವನವೇ ಒಂದು ಪಠ್ಯಪುಸ್ತಕ. ಅವರ ನಡೆ ನುಡಿಗಳೇ ನಮಗೆ ಜೀವನದ ಪಾಠ. ಇಂದಿಗೂ ಅವರ ಮೌಲ್ಯಗಳು ನಮ್ಮ ಜೀವನಕ್ಕೆ ಬೆಳಕಿನ ದಾರಿ ತೋರುತ್ತವೆ. ಸತ್ಯದ ಹಾದಿಯಲ್ಲಿ ನಡೆಯಲು, ಅಹಿಂಸೆಯ ಮಾರ್ಗದಲ್ಲಿ ಹೋರಾಡಲು, ಧೈರ್ಯ ದಿಂದ ಬದುಕಲು ಪ್ರತಿ ದಿನವೂ ನನ್ನನ್ನು ಪ್ರೇರೇಪಿಸುತ್ತಾರೆ. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದ ಮೂಲ ಸ್ತಂಭ. ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಆಧಾರದ ಮೇಲೆ ಅವರು ನಡೆಸಿದ ಚಳವಳಿಗಳು ಬ್ರಿಟೀಷರ ಆಡಳಿತವನ್ನುನಡುಗಿಸಿದವು. ಅವರ ನಾಯಕತ್ವದಿಂದಾಗಿ ಸಾಮಾನ್ಯ ಜನರಿಂದ ಹಿಡಿದು, ಬಡ ರೈತರು, ಕಾರ್ಮಿಕರು, ಮಹಿಳೆಯರವರೆಗೂ ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯ ಹೋರಾಟವು ಜನಚಳವಳಿಯಾಗಿ ರೂಪುಗೊಂಡಿತು.

ಸಂಕಲ್ಪ ಎನ್. ೯th  ಜಿಎಸ್‌ಎಸ್‌ಎಸ್ ಬಂಟ್ವಾಳ ಮಾಧವ ಶೆಣೈ ಪ್ರೌಢಶಾಲೆ, ಸಿದ್ಧಾರ್ಥನಗರ, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

18 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

18 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

18 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

18 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

18 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

18 hours ago