Andolana originals

ಭಾರತದ ಗಾಂಧಿ ಮತ್ತು ಆಫ್ರಿಕಾದ ಗಾಂಧಿ

ಡಾ.ಎಂ.ಡಿ.ಉಮೇಶ

ನೆಲ್ಸನ್ ಮಂಡೇಲಾರವರ ಮೇಲೆ ಗಾಂಧೀಜಿ ಅವರು ಆಳವಾದ ಪ್ರಭಾವವನ್ನು ಬೀರಿದ್ದರು. ಮುಖ್ಯವಾಗಿ ಅಹಿಂಸಾತ್ಮಕ ಪ್ರತಿರೋಧ ಮತ್ತು ಸತ್ಯಾಗ್ರಹದ ಮೂಲಕ ವರ್ಣಬೇಧ ನೀತಿಯ ವಿರುದ್ಧ ಹೋರಾಡಲು ಮಂಡೇಲಾರವರು ಗಾಂಧಿಜಿಯವರನ್ನು ತಮ್ಮ ಆದರ್ಶ ಎಂದು ಪರಿಗಣಿಸಿ, ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರೀತಿ, ಕ್ಷಮೆ ಮತ್ತು ಸಹಾನು ಭೂತಿಯ ತತ್ವಗಳನ್ನು ಅಳವಡಿಸಿಕೊಂಡು ಜಗತ್ತಿಗೆ ಮಾದರಿಯಾದರು. ಇದಕ್ಕಾಗಿಯೇ ಅವರನ್ನು ‘ದಕ್ಷಿಣ ಆಫ್ರಿಕಾದ ಗಾಂಧಿ’ ಎಂದು ಕರೆಯಲಾಗಿದೆ.

ಗಾಂಧಿಯವರ ಅಹಿಂಸಾತ್ಮಕ ಹೋರಾಟದ ತಂತ್ರಗಳು ಮಂಡೇಲಾರವರ ವರ್ಣಬೇಧ ವಿರೋಧಿ ಆಂದೋಲನಗಳಿಗೆ ಸೂರ್ತಿಯಾದವು. ಮಂಡೇಲಾ ಮತ್ತು ಗಾಂಧಿಜಿಯವರು ಎಂದಿಗೂ ಭೇಟಿಯಾಗದಿದ್ದರೂ ಇಬ್ಬರೂ ದಬ್ಬಾಳಿಕೆಯನ್ನು ಕೊನೆಗಾಣಿಸಲು ಮತ್ತು ಬದಲಾವಣೆಯನ್ನು ತರುವ ಉತ್ಸಾಹದಿಂದ ಪರಸ್ಪರ ಸಂಬಂಧ ಹೊಂದಿದ್ದರು ಮತ್ತು ತಮ್ಮ ವಸಹಾತು ಶಾಹಿ ದೇಶಗಳು ಮತ್ತು ಅವುಗಳ ಅಧಿನದಲ್ಲಿರುವ ಜನರ ಪರ ವಾಗಿ ಹೋರಾಡಿದರು. ದಬ್ಬಾಳಿಕೆಯನ್ನು ವಿರೋಧಿಸಲು ಅವರನ್ನು ಪ್ರೇರೇಪಿಸಿದರು. ಗಾಂಧಿಜಿಯವರ ಹೋರಾಟದ ವಿಧಾನವು ಮಂಡೇಲಾರವರ ಮೇಲೆ ಅಳಿಸಲಾಗದ ಗುರುತು ಬಿಟ್ಟಿತ್ತು ಮತ್ತು ಅದು ದಕ್ಷಿಣ ಆಫ್ರಿಕಾದಲ್ಲಿ ಅವರ ಸಾಮಾಜಿಕ, ರಾಜಕೀಯ ಪ್ರಯಾಣವನ್ನು ರೂಪಿಸಿತು. ರಾಬೇನ್ ದ್ವೀಪದ ಜೈಲಿನಲ್ಲಿ ಮಂಡೇಲಾ ಅವರು ೨೭ ವರ್ಷಗಳ ಕಾಲ ಜೈಲು ಬಂದಿಯಾಗಿದ್ದರು.

ಜೈಲಿನಿಂದ ಬಿಡುಗಡೆಯಾದ ಮಂಡೇಲಾ ಅವರನ್ನು ಪತ್ರಕರ್ತರು ಸುದೀರ್ಘ ಜೈಲು ದಿನಗಳನ್ನು ಹೇಗೆ ಕಳೆದಿರಿ ಎಂದು ಪ್ರಶ್ನಿಸಿದಾಗ ಮಂಡೇಲಾ ಉತ್ತರ ಹೀಗಿತ್ತು. ‘ಗಾಂಧಿಜಿ ಮತ್ತು ಇತರ ಶ್ರೇಷ್ಠ ವ್ಯಕ್ತಿಗಳ ಕುರಿತ ಪುಸ್ತಕಗಳಿಂದ ನನ್ನ ಕೊಠಡಿ ತುಂಬಿತ್ತು’. ಮುಂದು ವರಿದು ಮಂಡೇಲಾ ಕ್ಷಮೆ ಮತ್ತು ಸಹಾನುಭೂತಿಯ ಸದ್ಗುಣಗಳನ್ನು ಗಾಂಧಿಜಿಯವರ ಆದರ್ಶಗಳಿಂದ ಕಲಿತೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧದ ಹೋರಾಟದಲ್ಲಿ ಗಾಂಧಿಜಿಯವರು ೨೧ ವರ್ಷಗಳ ಕಾಲ ನಡೆಸಿದ ಹೋರಾಟವು ಮಂಡೇಲಾ ಅವರಿಗೆ ದಾರಿದೀಪವಾಯಿತು. ಗಾಂಧಿಜಿಯವರ ತತ್ವಗಳನ್ನು ಪಾಲಿಸಿದ ನೆಲ್ಸನ್ ಮಂಡೇಲಾ ಅವರಿಗೆ ೧೯೯೦ರಲ್ಲಿ ಭಾರತ ಸರ್ಕಾರವು ‘ಭಾರತ ರತ್ನ’ ಮತ್ತು ನಂತರ ಅಂತರ ‘ರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ’ ನೀಡಿ ಗೌರವಿಸಿತು.

ಮಂಡೇಲಾ ಅವರು ಮಹಾತ್ಮ ಗಾಂಧಿಜಿಯವರ ಶಾಂತಿ ಮತ್ತು ಅಹಿಂಸಾ ಮಾರ್ಗವು ೨೧ನೇ ಶತಮಾನದಲ್ಲಿದ್ದರೂ ಮಾನವನ ಉಳಿವಿಗೆ ಅತ್ಯಗತ್ಯ ಎಂದು ನಂಬಿದ್ದರು. ನೆಲ್ಸನ್ ಮಂಡೇಲಾ ಮತ್ತು ಮಹಾತ್ಮ ಗಾಂಧಿಯವರು ವಿಭಿನ್ನ ತಲೆಮಾರುಗಳಿಗೆ ಸೇರಿದವರಾಗಿದ್ದರೂ ಹಾಗೂ ವಿಭಿನ್ನ ದೇಶಗಳಲ್ಲಿ ಹೋರಾಡಿದರೂ ಅಹಿಂಸಾತ್ಮಕ ಪ್ರತಿರೋಧದ ಮೂಲಕ ಜನಾಂಗೀಯ ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿತ್ತು.

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಗಾಂಧಿಯವರ ಹೋರಾಟವು ಅವರ ಸತ್ಯಾಗ್ರಹದ ಆಲೋಚನೆಗಳನ್ನು ರೂಪಿಸಿತು. ವರ್ಣಭೇದ ನೀತಿಯ ವಿರುದ್ಧದ ತಮ್ಮ ಜೀವಮಾನದ ಅಭಿಯಾನದಲ್ಲಿ ಮಂಡೇಲಾರವರು ನಂತರ ಈ ತತ್ವಗಳನ್ನು ಬಳಸಿಕೊಂಡರು. ಹಾಗಾದರೆ ಮಂಡೇಲಾ ಅವರನ್ನು ‘ಆಫ್ರಿಕಾದ ಗಾಂಧಿ’ ಎಂದು ಕರೆಯಲಾಗುತ್ತಿರುವುದು.

ಕಾಕತಾಳೀಯವಲ್ಲ. ಈ ಹೋಲಿಕೆ ಕೇವಲ ಸಾಂಕೇತಿಕವಲ್ಲ. ಬದಲಾಗಿ ಅದು ಹಂಚಿಕೆಯ ಮೌಲ್ಯಗಳು, ಅನುಭವಗಳಲ್ಲಿ ಬೇರೂರಿದೆ. ಈ ಅಂಶಗಳು ಏನನ್ನು ಸೂಚಿಸುತ್ತವೆ ಎಂದರೆ ನೆಲ್ಸನ್ ಮಂಡೇಲಾ ಅವರು ಗಾಂಧಿಯವರು ಹೋರಾಟ ಮಾಡಿದಂತಹ ಅಹಿಂಸಾ ವಿಧಾನಗಳು ಮತ್ತು ಪರಂಪರೆಯ ಬಗ್ಗೆ ಹೊಂದಿದ್ದ ಆಳವಾದ ಗೌರವ. ಮಂಡೇಲಾ ಅವರು ಗಾಂಧಿಯವರ ಕುರಿತು ಒಂದು ಅದ್ಭುತವಾದ ಮಾತನ್ನು ಹೇಳಿದ್ದಾರೆ. ‘ಮಹಾತ್ಮರ ಜನ್ಮಸ್ಥಳ; ದಕ್ಷಿಣ ಆಫ್ರಿಕಾ ಅವರು ದತ್ತು ಪಡೆದ ದೇಶ. ಅವರು ಎರಡೂ ದೇಶಗಳನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡರು ಮತ್ತು ತಮ್ಮ ಸೇವೆಗಳನ್ನು ಎರಡಕ್ಕೂ ಮುಡಿಪಾಗಿಟ್ಟರು. ಮಂಡೇಲಾ ಅವರು ಭಾರತವನ್ನು ಕೇವಲ ಒಂದು ದೂರದ ರಾಷ್ಟ್ರವಾಗಿ ನೋಡದೆ ನೈತಿಕ ದಿಕ್ಸೂಚಿಯಾಗಿಯೂ ನೋಡಿದರು. ಗಾಂಧಿಜಿಯವ ರಂತೆಯೇ, ಮಂಡೇಲಾ ಅವರ ದೊಡ್ಡಶಕ್ತಿ ನೈತಿಕ ನಾಯಕತ್ವವಾಗಿತ್ತು.

(ಲೇಖಕರು ಗಾಂಧಿ ಅಧ್ಯಯನ ಕೇಂದ್ರ, ಮಾನಸ ಗಂಗೋತ್ರಿ, ಮೈಸೂರು ಇಲ್ಲಿ ಉಪನ್ಯಾಸಕರು)

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

21 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

21 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

21 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

21 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

21 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

22 hours ago