ಮಂಜು ಕೋಟೆ
ಮೈತ್ರಿ ಪಕ್ಷದ ೮ ಮಂದಿ ನಿರ್ದೇಶಕರ ರಾಜೀನಾಮೆ ಅಂಗೀಕಾರ; ಅಧಿಕಾರದಿಂದ ಕೆಳಗಿಳಿದ ಕಾಂಗ್ರೆಸ್
ಎಚ್.ಡಿ.ಕೋಟೆ: ಜಾ.ದಳ ಮತ್ತು ಬಿಜೆಪಿ ಮೈತ್ರಿಯ ೮ ಮಂದಿ ನಿರ್ದೇಶಕರು ನೀಡಿದ ರಾಜೀನಾಮೆ ಅಂಗೀಕಾರ ಆಗಿರುವ ಹಿನ್ನೆಲೆಯಲ್ಲಿ ಕೋರಂ ಅಭಾವದಿಂದಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಕೆಳಗಿಳಿದಿದ್ದು, ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ವಿಶೇಷ ಅಧಿಕಾರಿ ನೇಮಕಗೊಂಡಿದ್ದಾರೆ. ಎರಡು ತಿಂಗಳುಗಳಿಂದ ಕಾಂಗ್ರೆಸ್ ಮತ್ತು ಜಾ.ದಳ, ಬಿಜೆಪಿ ಮೈತ್ರಿ ಪಕ್ಷಗಳು ನಡೆಸುತ್ತಿದ್ದ ಪರಸ್ಪರ ಕಾರ್ಯತಂತ್ರಗಳಿಗೆ ಈಗ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ೧೫ ಸ್ಥಾನಗಳ ಪೈಕಿಕಾಂಗ್ರೆಸ್ ಪಕ್ಷದವರು ೭ ಸ್ಥಾನಗಳು, ಬಿಜೆಪಿ-ಜಾ.ದಳ ಮೈತ್ರಿ ಪಕ್ಷದವರು ೮ ಸ್ಥಾನಗಳನ್ನು ಗಳಿಸಿದ್ದರು. ಸೆಪ್ಟೆಂಬರ್ ೧೦ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರೇಹಳ್ಳಿ ಸೋಮೇಶ್ ಅಧ್ಯಕ್ಷರಾಗಿ, ಶಿವನಂಜಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಹುಮತ ಪಡೆದಿದ್ದ ಮೈತ್ರಿ ಪಕ್ಷದ ನಿರ್ದೇಶಕರುಗಳಾದ ಮೊತ್ತ ಬಸವರಾಜಪ್ಪ ಮತ್ತು ನೂರ್ ಅಹ್ಮದ್ರವರ ಸ್ಥಾನವನ್ನು ಕೆಲವೊಂದು ಕಾರಣ ಗಳಿಂದಾಗಿ ತಾತ್ಕಾಲಿಕವಾಗಿ ಅಮಾನತ್ತುಗೊಳಿಸಲಾಗಿತ್ತು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಮೊತ್ತ ಬಸವರಾಜಪ್ಪ ನೇತೃತ್ವದಲ್ಲಿ ೮ ಮಂದಿ ನಿರ್ದೇಶಕರು ತಮ್ಮ ಸ್ಥಾನಗಳಿಗೆ ಅಂದೇ ಸಂಘದ ಸಿಇಒ ನಿಂಗರಾಜು ಅವರಿಗೆ ರಾಜೀನಾಮೆ ನೀಡಿದ್ದರು.
ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸಹಕಾರ ಸಂಘಗಳ ನಿಬಂಧಕರಾದ ಬಿರಾದರ್ ಅವರು ೮ ಜನರ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಿದ್ದು, ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಬಹುಮತ ಮತ್ತು ಕೋರಂ ಇಲ್ಲದ ಕಾರಣ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆಡಳಿತ ನಡೆಸಲು ಸಹಕಾರ ಸಂಘಗಳ ಉಪನಿಬಂಧಕರಾದ ಅನಸೂಯ ಅವರನ್ನು ವಿಶೇಷ ಅಧಿಕಾರಿಯಾಗಿ ೨-೩ ದಿನಗಳ ಹಿಂದೆ ನೇಮಕ ಮಾಡಿದ್ದಾರೆ. ಅದರಂತೆ ಅನಸೂಯ ಅವರು ಶುಕ್ರವಾರ ಟಿಎಪಿಸಿಎಂಎಸ್ ಕಚೇರಿಗೆ ಆಗಮಿಸಿ ಸಂಘದ ಸಿಇಒ ನಿಂಗರಾಜು ಅವರಿಂದ ಅಧಿಕಾರ ವಹಿಸಿಕೊಂಡರು.
” ಕಾಂಗ್ರೆಸ್ ಪಕ್ಷದವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅನೇಕ ಕಾರ್ಯತಂತ್ರ ನಡೆಸಿ ಟಿಎಪಿಸಿಎಂಎಸ್ನ ಅಧಿಕಾರ ಹಿಡಿದು ಆಡಳಿತ ನಡೆಸಲು ಮುಂದಾಗಿದ್ದರು. ಶಾಸಕರ ಮತ್ತು ಕೆಲ ಮುಖಂಡರುಗಳ ನಡವಳಿಕೆಯಿಂದ ಬೇಸತ್ತು ನಾವು ಮೈತ್ರಿಯವರು ಎಂಟು ಜನರು ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್ ಪಕ್ಷದವರು ಅಧಿಕಾರ ಕಳೆದುಕೊಂಡು ಮುಖಭಂಗವಾಗಿದೆ.”
-ಮೊತ್ತ ಬಸವರಾಜಪ್ಪ, ಮುಖಂಡರು
” ಸಂಘದಲ್ಲಿ ಎಂಟು ಜನ ನಿರ್ದೇಶಕರ ರಾಜೀನಾಮೆ ಪತ್ರಅಂಗೀಕಾರವಾಗಿದ್ದು ಸಂಘವನ್ನು ರದ್ದುಗೊಳಿಸಲಾಗಿದೆ. ಮುಂದಿನ ಚುನಾವಣೆ ನಡೆಯುವವರೆಗೂ ಸಂಘದಲ್ಲಿ ವಿಶೇಷ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ.”
-ಬಿರಾದರ್, ಸಹಕಾರ ಸಂಘಗಳ ನಿಬಂಧಕರು
” ಸಂಘದಲ್ಲಿ ೧೨ ಜನರು ಚುನಾಯಿತರಾಗಿದ್ದು, ಎಂಸಿಡಿಸಿಸಿ ಬ್ಯಾಂಕಿನ ಪ್ರತಿನಿಧಿ, ಸಂಘದ ಪ್ರತಿನಿಧಿ, ನಿಬಂಧಕರ ಪ್ರತಿನಿಧಿ ಈ ಮೂವರು ಸೇರಿ ೧೫ ಜನರಿದ್ದು, ಬಿ ತರಗತಿಯಿಂದ ಆಯ್ಕೆಯಾದ ಎಂಟು ನಿರ್ದೇಶಕರ ಪೈಕಿ ಮೊತ್ತ ಬಸವರಾಜಪ್ಪ ಮತ್ತು ನೂರ್ಅಹಮದ್ರವರು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಸಂಬಂಧಿಕರಿಗೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಿದ್ದರಿಂದ ಕಾಲಂ ೨೯ ಸಿ ರನ್ವಯ ಸಹಕಾರ ಇಲಾಖೆಯವರು ಇಬ್ಬರ ನಿರ್ದೇಶಕರ ಸ್ಥಾನಗಳನ್ನು ಅಮಾನತ್ತಿನಲ್ಲಿಟ್ಟಿದ್ದಾರೆ. ಈ ಪ್ರಕರಣ ವಿಚಾರಣೆ ಹಂತದಲ್ಲಿದ್ದು ಇವರ ರಾಜೀನಾಮೆ ಅಂಗೀಕಾರ ವಾಗಿರುವುದಿಲ್ಲ. ಹಾಗಾಗಿ ಆಡಳಿತ ಮಂಡಳಿ ಇನ್ನೂ ರದ್ದಾಗಿಲ್ಲ. ಆಡಳಿತ ಮಂಡಳಿಯ ಸಭೆ ಮತ್ತು ದೈನಂದಿಕ ವಹಿವಾಟು ನಡೆಸಲು ಕೋರಂ ಅಭಾವ ಇರುವ ಕಾರಣ ವಿಶೇಷ ಅಧಿಕಾರಿಗಳ ನೇಮಕವಾಗಿದೆ.”
-ಹಿರೇಹಳ್ಳಿ ಸೋಮೇಶ್, ಅಧ್ಯಕ್ಷರು, ಟಿಎಪಿಸಿಎಂಎಸ್
“ಲೋಹಿಯಾರನ್ನು ನೋಡಿರುವ ‘ದಕ್ಷಿಣದ ಕಣ್ಣು’ ವಿಶಿಷ್ಟವಾದುದು" ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಎಂಬ ಲೋಹಿಯಾರ ಸಮಗ್ರ ಜೀವನ ಚರಿತ್ರೆ…
ಭಾರತಿ ಸಜ್ಜನ್ ಏಳು ತಿಂಗಳಲ್ಲಿ ೪೨೧ಪ್ರಕರಣಗಳು ದಾಖಲು; ನೆರವಿಗೆ ‘ಸಖಿ’ ಕೇಂದ್ರ ಮೈಸೂರು: ಸಾಂಸ್ಕೃತಿಕ ನಗರಿ, ಸುಶಿಕ್ಷಿತರ ಜಿಲ್ಲೆ ಎಂಬೆಲ್ಲಾ…
ಪ್ರಶಾಂತ್ ಎಸ್. ಮೈಸೂರು: ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಇರುವ ಡಿ.ಸಾಲುಂಡಿ, ಧನಗಳ್ಳಿ, ಕೆರೆಹುಂಡಿ ಗ್ರಾಮಗಳಿಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ…
ಚಿರಂಜೀವಿ ಸಿ.ಹುಲ್ಲಹಳ್ಳಿ ನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆ ನಡುವೆ ಹಾಲಿನ ದರ ಹೆಚ್ಚಳಕ್ಕೆ ಜನಾಕ್ರೋಶ ಮೈಸೂರು: ಅಕ್ಕಿ, ಸಕ್ಕರೆ ಸೇರಿದಂತೆ…
ಕೈವ್: ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಮಾರಕ ಡ್ರೋನ್ ದಾಳಿ ನಡೆದಿದೆ. ಉಕ್ರೇನ್ನ ಡ್ನಿಪ್ರೊ ನಗರದ ಮುಖ್ಯ ರೈಲು ನಿಲ್ದಾಣದ ಮೇಲೆ…