Andolana originals

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ

ಭಾರತಿ ಸಜ್ಜನ್

ಏಳು ತಿಂಗಳಲ್ಲಿ ೪೨೧ಪ್ರಕರಣಗಳು ದಾಖಲು; ನೆರವಿಗೆ ‘ಸಖಿ’ ಕೇಂದ್ರ

ಮೈಸೂರು: ಸಾಂಸ್ಕೃತಿಕ ನಗರಿ, ಸುಶಿಕ್ಷಿತರ ಜಿಲ್ಲೆ ಎಂಬೆಲ್ಲಾ ಅನ್ವರ್ಥ ನಾಮಗಳನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅದರಲ್ಲೂ ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.

ಸಂಕಷ್ಟದಲ್ಲಿರುವ ಅಥವಾ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಅಗತ್ಯ ತುರ್ತು ನೆರವು ಮತ್ತು ಇತರೆ ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ಭಯಾ ನಿಧಿ ಯೋಜನೆಯಡಿ ಜಾರಿಗೆ ತಂದಿರುವ ‘ಸಖಿ ಒನ್ ಸ್ಟಾಪ್ ಸೆಂಟರ್’ಗೆ ಈಗ ಬಿಡುವಿಲ್ಲದ ಕೆಲಸ. ಕೌಟುಂಬಿಕ ಕಲಹ, ಮಾನಸಿಕ ಹಿಂಸೆ, ವರದಕ್ಷಿಣೆ, ಅಪಹರಣ, ಪೋಕ್ಸೋ ಸೇರಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಆಶ್ರಯವಾಗಿರುವ ‘ಸಖಿ’ ಒನ್ ಸ್ಟಾಪ್ ಕೇಂದ್ರಕ್ಕೆ ನಿತ್ಯ ಹತ್ತಾರು ಜನರು ಎಡತಾಕುವಂತಾಗಿರುವುದು ಸಮಾಜ ಎತ್ತ ಸಾಗುತ್ತಿದೆ ಎಂಬ ಕಳವಳಕ್ಕೆ ಕಾರಣವಾಗಿದೆ.

ಪೋಕ್ಸೋ ಸೇರಿದಂತೆ ಕೌಟುಂಬಿಕ ದೌರ್ಜನ್ಯ, ಬಾಲ್ಯವಿವಾಹ, ಸುಡುವ ಪ್ರಕರಣ, ಅಪಹರಣ, ಲೈಂಗಿಕ ಕಿರುಕುಳ ಹೀಗೆ ವಿವಿಧ ಮಹಿಳೆಯರಿಗೆ ಸಂಬಂಧಿಸಿದ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಇಲ್ಲಿ ದಾಖಲಾಗುತ್ತಿವೆ. ಇದರಲ್ಲಿ ವರದಕ್ಷಿಣೆ, ಆಸ್ತಿ ವಿವಾದ ಹಾಗೂ ಕುಟುಂಬದಲ್ಲಿ ಹೊಂದಾಣಿಕೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಾನಸಿಕ, ದೈಹಿಕ, ಹಾಗೂ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ಒಳಗಾದವರು ನಿತ್ಯ ಒಂದಲ್ಲಾ ಒಂದು ಪ್ರಕರಣಗಳನ್ನು ಇಲ್ಲಿಗೆ ಹೊತ್ತುತರುತ್ತಿದ್ದಾರೆ.

ಮೈಸೂರು ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದು ಹಾಗೂ ಹುಣಸೂರು ಪಟ್ಟಣದಲ್ಲಿ ಒಂದು ಸಖಿ ಒನ್ ಸ್ಟಾಪ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಏಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ ಇಲ್ಲಿ ಒಟ್ಟು ೪೨೧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮುಖ್ಯವಾಗಿ ೧೧೯ ಪೋಕ್ಸೋ ಪ್ರಕರಣಗಳು, ೧೦೫ ಕೌಟುಂಬಿಕ ದೌರ್ಜನ್ಯ, ೮೦ ಅಪಹರಣ ಹಾಗೂ ನಾಪತ್ತೆ ಪ್ರಕರಣಗಳು, ೩೩ ಬಾಲ್ಯವಿವಾಹ, ೧೯ ಅತ್ಯಾಚಾರ ಪ್ರಕರಣಗಳು ಹಾಗೂ ೬೨ ಇತರೆ ಪ್ರಕರಣಗಳು ಕಳೆದ ಏಳು ತಿಂಗಳುಗಳಲ್ಲಿ ವರದಿಯಾಗಿವೆ.

೨೦೨೫ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ ಮೈಸೂರು ಘಟಕವೊಂದರಲ್ಲೇ ಒಟ್ಟು ೫೫೯ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೧೩೨ ಕೌಟುಂಬಿಕ ದೌರ್ಜನ್ಯ, ೧೮೭ ಪೋಕ್ಸೋ, ೧೦೨ ಅಪಹರಣ ಹಾಗೂ ನಾಪತ್ತೆ, ೩೮ ಬಾಲ್ಯ ವಿವಾಹ, ೧೧ ಅತ್ಯಾಚಾರ, ೩ ಸೈಬರ್ ಕ್ರೈಂ, ೧ ವರದಕ್ಷಿಣೆ ಹಾಗೂ ೮೫ ಇತರೆ ಪ್ರಕರಣಗಳು] ದಾಖಲಾಗಿವೆ. ೨೦೮ ಪ್ರಕರಣಗಳಿಗೆ ಪರಿಹಾರ ದೊರಕಿದ್ದು, ಉಳಿದಂತೆ ಇನ್ನೂ ಚಾಲ್ತಿಯಲ್ಲಿರುವುದು ಕಂಡುಬಂದಿದೆ. ಅದೇ ರೀತಿ ಹುಣಸೂರಿನ ಘಟಕದಲ್ಲಿ ಒಟ್ಟು ೧೧೧ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ೪೧ ಕೌಟುಂಬಿಕ ದೌರ್ಜನ್ಯ, ೨೬ ಪೋಕ್ಸೋ, ೧೬ ಅಪಹರಣ ಹಾಗೂ ನಾಪತ್ತೆ, ೨ ಲೈಂಗಿಕ ಕಿರುಕುಳ, ೧ ಅತ್ಯಾಚಾರ, ೬ ಬಾಲ್ಯವಿವಾಹ, ೧೯ ಇತರೆ ಪ್ರಕರಣಗಳು ದಾಖಲಾಗಿವೆ.

ವೈದ್ಯಕೀಯ ನೆರವು: ಈ ಕೇಂದ್ರದಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ತಕ್ಷಣದ ಪ್ರಥಮ ಚಿಕಿತ್ಸೆ, ವೈದ್ಯಕೀಯ ಪರೀಕ್ಷೆ ದೊರೆಯುತ್ತದೆ. ಪೊಲೀಸ್ ನೆರವು: ಎಫ್ಐಆರ್ ದಾಖಲಿಸಲು ಅಥವಾ ಪೊಲೀಸ್ ವಿಚಾರಣೆಗೆ ಸಹಾಯ, ಉಚಿತ ಕಾನೂನು ನೆರವು, ಮಾನಸಿಕ ಮತ್ತು ಸಾಮಾಜಿಕ ಸಮಾಲೋಚನೆ, ಸಂತ್ರಸ್ತ ಮಹಿಳೆಯರು ಹಾಗೂ ಅವರ ಮಕ್ಕಳಿಗೆ ೩ ರಿಂದ ೭ದಿನಗಳವರೆಗೆ ತಾತ್ಕಾಲಿಕ ವಸತಿ ಸೌಲಭ್ಯವನ್ನೂ ಈ ಕೇಂದ್ರದ ಮೂಲಕ ಒದಗಿಸಲಾಗುತ್ತದೆ ಎಂದು ಮೈಸೂರಿನ ‘ಸಖಿ’ ಒನ್ ಸ್ಟಾಪ್ ಕೇಂದ್ರದ ಸಿಬ್ಬಂದಿಯೊಬ್ಬರು ‘ಆಂದೋಲನ’ ಪತ್ರಿಕೆಗೆ ತಿಳಿಸಿದ್ದಾರೆ.

” ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ದೌರ್ಜನ್ಯ, ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ‘ಸಖಿ’ ಒಂದು ಅತ್ಯುತ್ತಮ ಸೇವೆಯಾಗಿದೆ. ಒಂದೇ ಸೂರಿನಡಿ ಐದು ರೀತಿಯ ಉಚಿತ ಸೇವೆಗಳು ದೊರೆಯಲಿದ್ದು, ಇದೊಂದು ಮಹಿಳಾ ಸ್ನೇಹಿ ಕೇಂದ್ರವಾಗಿದೆ.”

ಆರ್. ನಾಗರಾಜ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಇಂತಹವರನ್ನು ಸರ್ಕಾರ ಗೌರವಿಸಬೇಕು

ಮೈಸೂರು ನಗರದ, ಪ್ರತಿಷ್ಠಿತ ಔಷಧಿ ಸಂಸ್ಥೆಯಾದ ರಘುಲಾಲ್ ಅಂಡ್ ಕಂಪೆನಿಯ ಮಾಲೀಕರಾದ ರಾಘವನ್ ಅವರು ಮೈಸೂರು ನಗರವನ್ನು ಹಸಿರೀಕರಣ ಮಾಡಲು…

1 hour ago

ಓದುಗರ ಪತ್ರ: ಸುಧಾರಿತ ಸೈಬರ್ ಭದ್ರತೆ ಅಳವಡಿಸಿ

ಬೆಂಗಳೂರಿನಲ್ಲಿ ನೋಂದಣಿಯಾಗದೆ ನಡೆದಿರುವ ರೂ. ೫೦೦೦ ಕೋಟಿ ಕ್ರಿಪ್ಟ್ರೋ ಅಕ್ರಮ ವಹಿವಾಟು ದೇಶದ ಆರ್ಥಿಕ ಭದ್ರತೆಗೆ ಬಡಿದಿರುವ ಎಚ್ಚರಿಕೆ ಘಂಟೆಯಾಗಿದೆ.…

1 hour ago

ಓದುಗರ ಪತ್ರ: ಮನದ ಭಾಷೆಯಾಗಲಿ ಕನ್ನಡ

ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು.ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆಯೆಂದು ನೆನಸಿಕೊಂಡರೆ ಕನ್ನಡ ನಿಜವಾಗಿಯೂ ಬದುಕಿ ಬಾಳುವ ಭಾಷೆಯಾಗಿ ಉಳಿಯುತ್ತದೆಯೇ ಎಂದು…

1 hour ago

‘ಡಾಕ್ಟರ್ ಸಾಹೇಬ್’ ರೂಪುಗೊಂಡ ರೀತಿ

“ಲೋಹಿಯಾರನ್ನು ನೋಡಿರುವ ‘ದಕ್ಷಿಣದ ಕಣ್ಣು’ ವಿಶಿಷ್ಟವಾದುದು" ‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಎಂಬ ಲೋಹಿಯಾರ ಸಮಗ್ರ ಜೀವನ ಚರಿತ್ರೆ…

1 hour ago

ಮೈಸೂರು-ಮಾನಂದವಾಡಿ ಹೆದ್ದಾರಿ ಅಪಘಾತಕ್ಕೆ ರಹದಾರಿ

ಪ್ರಶಾಂತ್ ಎಸ್. ಮೈಸೂರು: ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಇರುವ ಡಿ.ಸಾಲುಂಡಿ, ಧನಗಳ್ಳಿ, ಕೆರೆಹುಂಡಿ ಗ್ರಾಮಗಳಿಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ…

2 hours ago

ಹಾಲಿನ ದರಾಘಾತಕ್ಕೆ ಜನಜೀವನ ತತ್ತರ

ಚಿರಂಜೀವಿ ಸಿ.ಹುಲ್ಲಹಳ್ಳಿ ನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆ ನಡುವೆ ಹಾಲಿನ ದರ ಹೆಚ್ಚಳಕ್ಕೆ ಜನಾಕ್ರೋಶ ಮೈಸೂರು: ಅಕ್ಕಿ, ಸಕ್ಕರೆ ಸೇರಿದಂತೆ…

2 hours ago