Andolana originals

ಮೈಸೂರು-ಮಾನಂದವಾಡಿ ಹೆದ್ದಾರಿ ಅಪಘಾತಕ್ಕೆ ರಹದಾರಿ

ಪ್ರಶಾಂತ್ ಎಸ್.

ಮೈಸೂರು: ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಇರುವ ಡಿ.ಸಾಲುಂಡಿ, ಧನಗಳ್ಳಿ, ಕೆರೆಹುಂಡಿ ಗ್ರಾಮಗಳಿಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ ಸಂಭವಿ ಸುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಇಲ್ಲೆಲ್ಲ ವಾಹನಗಳ ವೇಗಕ್ಕೆ ಕಡಿವಾಣ ಹಾಕುವುದಕ್ಕೆ ಯಾವುದೇ ಹಂಪ್ಗಳು ಅಥವಾ ಬ್ಯಾರಿಕೇಡ್‌ಗಳು ಇಲ್ಲ. ಹಾಗಾಗಿ ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ.

ಪ್ರಾಣಾಪಾಯದ ಸ್ಥಳ: ಡಿ.ಸಾಲುಂಡಿ, ದೊಡ್ಡಹುಂಡಿ ಗ್ರಾಮಸ್ಥರ ಪೈಕಿ ಬಹುತೇಕ ಮಂದಿ ಪ್ರತಿದಿನ ಕೆಲಸ ಕಾರ್ಯಗಳ ನಿಮಿತ್ತ ದ್ವಿಚಕ್ರ ವಾಹನಗಳಲ್ಲಿ ಮೈಸೂರಿಗೆ ಬಂದು ಹೋಗುತ್ತಾರೆ. ಅಲ್ಲದೆ, ಈ ಗ್ರಾಮದ ಮಾರ್ಗವಾಗಿ ಧನಗಳ್ಳಿ, ಗೋಪಾಲಪುರ, ಜಯಪುರ, ದಾರಿಪುರ, ದೊಡ್ಡಹುಂಡಿ, ಬಲ್ಲೇನಹಳ್ಳಿ ಮುಂತಾದ ಗ್ರಾಮಗಳ ಕಡೆಯಿಂದ ಪ್ರತಿದಿನ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜನ ಓಡಾಡುತ್ತಾರೆ. ಸರಕು ಸಾಗಣೆಯ ನಾನಾ ರೀತಿಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇಲ್ಲಿ ಸಂಭವಿಸಿದ ಕೆಲ ಅಪಘಾತಗಳಲ್ಲಿ ಪ್ರಾಣಹಾನಿ ಕೂಡ ಆಗಿದೆ.

ಹಂಪ್, ಬ್ಯಾರಿಕೇಡ್ ಇಲ್ಲದೇ ಅಪಘಾತ: ಜಯಪುರ ದಾರಿಪುರ, ಡಿ. ಸಾಲುಂಡಿ ರಸ್ತೆಯ ಕಡೆಯಿಂದ ಮೈಸೂರಿನತ್ತ ಸಂಚರಿಸುವ ವಾಹನಗಳು ಈ ಹೆದ್ದಾರಿಯ ಮುಖಾಂತರವೇ ಹಾದು ಹೋಗಬೇಕಿದೆ. ಈ ರಸ್ತೆಯಲ್ಲಿ ಯಾವುದೇ ಹಂಪ್ ಗಳು ಅಥವಾ ಬ್ಯಾರಿಕೇಡ್‌ಗಳು ಇಲ್ಲದಿರುವ ಕಾರಣ ಅಪಘಾತಗಳು ಆಗಾಗ್ಗೆ ನಡೆಯುತ್ತಿರುತ್ತವೆ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸುತ್ತಾರೆ.

ಇನ್ನಷ್ಟು ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಡಿ.ಸಾಲುಂಡಿ, ಧನಗಳ್ಳಿ, ಗೋಪಾಲಪುರ ರಸ್ತೆಯಿಂದ ಮೈಸೂರು- ಮಾನಂದವಾಡಿ ಹೆದ್ದಾರಿಯ ತಿರುವಿಗೆ ಮುಂಚೆಯೇ ಅನತಿ ದೂರದಲ್ಲಿ ಎರಡೂ ಕಡೆ ರಸ್ತೆ ಹಂಪ್ ಅಥವಾ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಲ್ಲಿ ಹೇಳೋರು- ಕೇಳೋರಿಲ್ಲ: ಅತೀ ಹೆಚ್ಚು ಸಂಚಾರದಟ್ಟಣೆ ಉಂಟಾಗುವ ಡಿ.ಸಾಲುಂಡಿ ವೃತ್ತದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವುದೇ ಅಪರೂಪಕ್ಕೆ ಎನ್ನುವಂತಾಗಿದೆ. ಇನ್ನು ಸಾಯಂಕಾಲದ ಸಮಯದಲ್ಲಿ ವಾಹನದಟ್ಟಣೆಯಿಂದ ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿರುತ್ತದೆ. ಈ ಬಗ್ಗೆ ಸಂಬಂಽಸಿ ದವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ.

ಡಿ.ಸಾಲುಂಡಿ, ಧನಗಳ್ಳಿ, ಮುಳ್ಳೂರು, ಗೋಪಾಲಪುರ ರಸ್ತೆಯ ಕಡೆಗೆ ತಿರುಗುವ ಜಾಗದಲ್ಲಿ ಹಂಪ್‌ಗಳು, ಬ್ಯಾರಿಕೇಡ್‌ಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ಸುಮಾರು ೧೫ ದಿನಗಳ ಹಿಂದೆಯೇ ಕನಕ ಸಂಗೊಳ್ಳಿರಾಯಣ್ಣ ಯುವಕರ ಸಂಘದವರು ಜಯಪುರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ.

” ಈ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಅನೇಕರು ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ದ್ವಿಚಕ್ರವಾಹನ ಹಾಗೂ ಇತರೆ ವಾಹನ ಸವಾರರು ಅತಿಯಾದ ವೇಗದಲ್ಲಿ ಸಂಚರಿಸುತ್ತಾರೆ. ಆದ್ದರಿಂದ ಸೂಚನಾ ಫಲಕ ಅಳವಡಿಸಿ ಅಪಘಾತಗಳಾಗದಂತೆ ಸುಗಮ ಸಂಚಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.”

-ಬಸಪ್ಪ, ಡಿ.ಸಾಲುಂಡಿ

” ಎಲ್ಲಾ ವಾಹನ ಸವಾರರು ಈ ರಸ್ತೆಯಲ್ಲಿ ತುಂಬಾ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಸಣ್ಣ ಪುಟ್ಟ ಮಕ್ಕಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಜೀವ ಭಯದಲ್ಲೇ ಇಲ್ಲಿ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಬೇಕಿದೆ.”

-ಬಸವೇಗೌಡ, ಗೋಪಾಲಪುರ

 

 

 

ಆಂದೋಲನ ಡೆಸ್ಕ್

Recent Posts

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ

ಭಾರತಿ ಸಜ್ಜನ್ ಏಳು ತಿಂಗಳಲ್ಲಿ ೪೨೧ಪ್ರಕರಣಗಳು ದಾಖಲು; ನೆರವಿಗೆ ‘ಸಖಿ’ ಕೇಂದ್ರ ಮೈಸೂರು: ಸಾಂಸ್ಕೃತಿಕ ನಗರಿ, ಸುಶಿಕ್ಷಿತರ ಜಿಲ್ಲೆ ಎಂಬೆಲ್ಲಾ…

46 seconds ago

ಹಾಲಿನ ದರಾಘಾತಕ್ಕೆ ಜನಜೀವನ ತತ್ತರ

ಚಿರಂಜೀವಿ ಸಿ.ಹುಲ್ಲಹಳ್ಳಿ ನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆ ನಡುವೆ ಹಾಲಿನ ದರ ಹೆಚ್ಚಳಕ್ಕೆ ಜನಾಕ್ರೋಶ ಮೈಸೂರು: ಅಕ್ಕಿ, ಸಕ್ಕರೆ ಸೇರಿದಂತೆ…

11 mins ago

ಕೋಟೆ ಟಿಎಪಿಸಿಎಂಎಸ್‌ಗೆ ವಿಶೇಷ ಅಧಿಕಾರಿ ನೇಮಕ

ಮಂಜು ಕೋಟೆ ಮೈತ್ರಿ ಪಕ್ಷದ ೮ ಮಂದಿ ನಿರ್ದೇಶಕರ ರಾಜೀನಾಮೆ ಅಂಗೀಕಾರ; ಅಧಿಕಾರದಿಂದ ಕೆಳಗಿಳಿದ ಕಾಂಗ್ರೆಸ್ ಎಚ್.ಡಿ.ಕೋಟೆ: ಜಾ.ದಳ ಮತ್ತು…

23 mins ago

ಉಕ್ರೇನ್‌ ರೈಲು ನಿಲ್ದಾಣದ ಮೇಲೆ ರಷ್ಯಾ ಡ್ರೋನ್‌ ದಾಳಿ: 14 ಮಂದಿ ಸಾವು!

ಕೈವ್:‌ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಮಾರಕ ಡ್ರೋನ್‌ ದಾಳಿ ನಡೆದಿದೆ. ಉಕ್ರೇನ್‌ನ ಡ್ನಿಪ್ರೊ ನಗರದ ಮುಖ್ಯ ರೈಲು ನಿಲ್ದಾಣದ ಮೇಲೆ…

1 day ago

ಚಳಿಗಾಲ ಶುರು: ಕರ್ನಾಟಕದ ಗಾಳಿಯ ಗುಣಮಟ್ಟದಲ್ಲಿ ಕೊಂಚ ಇಳಿಕೆ!

ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆ ವಾಯು ಗುಣಮಟ್ಟ…

1 day ago