Andolana originals

‘ಡಾಕ್ಟರ್ ಸಾಹೇಬ್’ ರೂಪುಗೊಂಡ ರೀತಿ

“ಲೋಹಿಯಾರನ್ನು ನೋಡಿರುವ ‘ದಕ್ಷಿಣದ ಕಣ್ಣು’ ವಿಶಿಷ್ಟವಾದುದು”

‘ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ’ ಎಂಬ ಲೋಹಿಯಾರ ಸಮಗ್ರ ಜೀವನ ಚರಿತ್ರೆ ಬರೆದಿರುವ ನಟರಾಜ್ ಹುಳಿಯಾರ್ ಈ ಕೃತಿ ಹುಟ್ಟಿದ ಹಿನ್ನೆಲೆ ಕುರಿತು ಬರೆಯುತ್ತಾ, ಲೋಹಿಯಾ ತಮ್ಮೊಳಗೆ ಪ್ರವೇಶಿಸಿದ ಗಳಿಗೆಯನ್ನು ನೆನೆಯುತ್ತಾರೆ:

‘ಲೋಹಿಯಾ ನನ್ನೊಳಗೆ ಪ್ರವೇಶಿಸಿದ್ದು ಎಂ.ಡಿ. ನಂಜುಂಡ ಸ್ವಾಮಿ-ಪೂರ್ಣಚಂದ್ರ ತೇಜಸ್ವಿ ರೂಪಿಸಿದ ಲೋಹಿಯಾ ‘ರೆಡ್ ಬುಕ್ ಹಾಗೂ ಕೆ.ವಿ ಸುಬ್ಬಣ್ಣನವರ ರಾಜಕೀಯದ ಮಧ್ಯೆ ಬಿಡುವು ಅನುವಾದದ ಮೂಲಕ. ರೆಡ್ ಬುಕ್ ಪ್ರಕಟಿಸಿದವರು ಮೈಸೂರಿನ ತರುಣ ಸಮಾಜವಾದಿಗಳಾದ ಪ. ಮಲ್ಲೇಶ್ ಹಾಗೂ ಬಿ.ಎನ್. ಶ್ರೀರಾಮ್. ಲೋಹಿಯಾರ ತೀಕ್ಷ್ಣ ಮಾತುಗಳು ನನ್ನೊಳಗೆ ಇಳಿಯತೊಡಗಿದವು. ಅದರಲ್ಲೂ ಮುಖ್ಯವಾಗಿ, ರಾಷ್ಟ್ರಪತಿ ಬಾಬೂ ರಾಜೇಂದ್ರಪ ಸಾದ್ ಬಹಿರಂಗವಾಗಿ ಕಾಶಿಯಲ್ಲಿ ನೂರು ಜನ ಬ್ರಾಹ್ಮಣರ ಕಾಲು ತೊಳೆದಾಗ ಅದನ್ನು ಖಂಡಿಸುತ್ತಾ ಲೋಹಿಯಾ ಹೇಳಿದ ಮಾತು: ಬ್ರಾಹ್ಮಣರ ಪಾದಗಳನ್ನು ತೊಳೆಯುವ ಕೈಗಳು ಶೂದ್ರರನ್ನೂ ದಲಿತರನ್ನೂ ಒದೆಯುವ ಕಾಲುಗಳ ಜೊತೆಗೇ ಇರುತ್ತವೆ. ಆ ಕಾಲದಿಂದ ಇವತ್ತಿನವರೆಗೂ ನನ್ನಲ್ಲಿ ಉಳಿದಿರುವ ನೂರಾರು ಲೋಹಿಯಾ ಕಾಣ್ಕೆಗಳಲ್ಲಿ ಕೆಲವು ಹೀಗಿವೆ: ‘ಭಾರತೀಯರು ಇಡೀ ಜಗತ್ತಿನಲ್ಲೇ ಅಪಾರ ದುಃಖಿಗಳು; ಜಾತಿಭೇದ, ಲಿಂಗಭೇದ ಮಾಡುವ ಅವರ ಧೋರಣೆಯೇ ಈ ಮನಸ್ಥಿತಿಗೆ ಕಾರಣ. ಕೆಲವರನ್ನಾದರೂ ಕೋಪಾವಿಷ್ಠಗೊಳಿಸದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ.

೧೯೯೦ರ ಸುಮಾರಿಗೆ ಕರ್ನಾಟಕ ಸರ್ಕಾರ ರಾಮಮನೋಹರ ಲೋಹಿಯಾ ಸಂಪುಟಗಳ ಸಮಗ್ರ ಕೃತಿಗಳ ಅನುವಾದಗಳ ಸಂಪುಟಗಳ ಯೋಜನೆಯ ಕಾರ್ಯ ನಿರ್ವಾಹಕ ಸಂಪಾದಕೀಯ ಹೊಣೆ ನಟರಾಜ್ ಹುಳಿಯಾರ್ ಅವರ ಹೆಗಲೇರಿತು. ಆ ಕುರಿತು ಹುಳಿಯಾರ್ ಬರೆಯುತ್ತಾರೆ: ‘ಲೋಹಿಯಾ ಕನ್ನಡಾನುವಾದದ ಕೃತಿಗಳ ಸಂಪಾದಕರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ- ಜವಾಬ್ದಾರಿ-ಶ್ರಮ ಎಲ್ಲ ಬೆರೆತು ರೂಪಿಸತೊಡಗಿದ ಲೋಹಿಯಾ ಸಂಪುಟಗಳಿಗಾಗಿ ಏಳೆಂಟು ಸಾವಿರ ಪುಟಗಳನ್ನು ಅಪ್ಪಟ ಕನ್ನಡ ಪುಸ್ತಕಗಳಾಗುವಂತೆ ಸತತವಾಗಿ ಎಡಿಟ್ ಮಾಡಿದ ಬೌದ್ಧಿಕ ಶ್ರಮ ಮುಂದೆ ಡಾಕ್ಟರ್ ಸಾಹೇಬ್: ರಾಮಮನೋಹರ ಲೋಹಿಯಾ ಜೀವನಯಾನ ಬರೆಯುವವರೆಗೂ ನಡೆದು ಬಂದಂತಿದೆ.

ಇದೆಲ್ಲದರ ಫಲವಾಗಿ ‘ಡಾಕ್ಟರ್ ಸಾಹೇಬ್’ ಮೂರು ವರ್ಷಗಳ ಕೆಳಗೆ ಬರವಣಿಗೆ ಆರಂಭವಾದ ಕುತೂಹಲಕರ ಘಟ್ಟವನ್ನು ಹುಳಿಯಾರ್ ನೆನಪಿಸಿಕೊಳ್ಳುತ್ತಾರೆ: ‘ಒಂದು ಸಂಜೆ ಸುಧಾ ಕಾರ್ಯನಿರ್ವಾಹಕ ಸಂಪಾದಕ ಚ.ಹ ರಘುನಾಥ್, ಇದ್ದಕ್ಕಿದ್ದಂತೆ ಕಾದಂಬರಿ ಬರೀಲಿಲ್ವ ಸಾರ್? ಎಂದರು. ಧಾರಾವಾಹಿಗೆ ಬೇಕಾದ ಕಾದಂಬರಿಯೊಂದರ ಹುಡುಕಾಟದ ಸೂಚನೆಯೂ ಅವರ ಮಾತಿನಲ್ಲಿದ್ದಂತಿತ್ತು. ಥಟ್ಟನೆ, ಲೋಹಿಯಾ ಜೀವನ ಚರಿತ್ರೆ? ಅಂದೆ. ‘ಯಾಕಾಗಬಾರದು? ಎಂದರು ರಘು.

ಲೋಹಿಯಾ ಜೀವನಯಾನದ ಬರವಣಿಗೆಯ ಬಿತ್ತನೆಯ ಬೀಜ ಬಿದ್ದಿತ್ತು! ಮುಂದಿನ ಮೂರುನಾಲ್ಕು ತಿಂಗಳಲ್ಲಿ ಈ ಧಾರಾವಾಹಿ ಇಪ್ಪತ್ತೆರಡು ವಾರ ಮುನ್ನಡೆಯಿತು. ಓದುಗ, ಓದುಗಿಯರು ವಾರವಾರ ಸ್ಪಂದಿಸುತ್ತಿದ್ದರು. ಅದಾದ ನಂತರ ಇನ್ನಷ್ಟು ಸಂಶೋಧನೆ, ಬ್ರಿಟಿಷ್ ವಸಾಹತುಶಾಹಿಯ ದಾಖಲೆಗಳು, ಆರ್ಕೈವ್ ಸಾಮಗ್ರಿಗಳು, ಹತ್ತು ಹದಿನೈದು ಸಾವಿರ ಪುಟಗಳ ಓದು ಇವೆಲ್ಲ ಸೇರಿ ಡಾಕ್ಟರ್ ಸಾಹೇಬ್ ಹೊರ ಬಂದಿದೆ. ಈಗಾಗಲೇ ಇಂಗ್ಲಿಷ್ ಹಾಗೂ ಹಿಂದಿಗಳಲ್ಲಿ ಲೋಹಿಯಾರ ಜೀವನ ಚರಿತ್ರೆಗಳು ಬಂದಿವೆ. ಆದರೆ ನಟರಾಜ್ ಹುಳಿಯಾರ್ ತಿಳಿವಳಿಕೆಯ ಪ್ರಕಾರ, ‘ಲೋಹಿಯಾರ ಈ ಪ್ರಮಾಣದ ಸಮಗ್ರ ಜೀವನ ಚರಿತ್ರೆ ಈ ಬಗೆಯಲ್ಲಿ ಇಂಡಿಯಾದಲ್ಲಿ ಈತನಕ ಬಂದಂತಿಲ್ಲ. ಇಡೀ ಬರವಣಿಗೆಯಲ್ಲಿ ಶ್ರಮ ಎನ್ನುವುದು ಎಂದೂ ಬಳಲಿಸದಂತೆ ನನ್ನನ್ನು ಆವರಿಸಿಕೊಂಡ ಲೋಹಿಯಾರ ಬದುಕು, ಚಿಂತನೆ, ಬರಹ, ಮಾತು, ವ್ಯಗ್ರತೆ ಇನ್ನೂ ಏನೇನೋ ಸೇರಿ ‘ಡಾಕ್ಟರ್ ಸಾಹೇಬ್ ರೂಪುಗೊಂಡಿದೆ’.

‘ಡಾಕ್ಟರ್ ಸಾಹೇಬ್ ಕೃತಿಯಲ್ಲಿ ಲೋಹಿಯಾರನ್ನು ನೋಡಿರುವ ‘ದಕ್ಷಿಣದ ಕಣ್ಣು’ ವಿಶಿಷ್ಟವಾದುದು ಎಂದು ಲೇಖಕ ವಿಕ್ರಮ ವಿಸಾಜಿ ಹೇಳುತ್ತಾರೆ.

” ಇಂದು ಬಿಡುಗಡೆ ಐವತ್ತು ವಿಸ್ತೃತ ಅಧ್ಯಾಯಗಳನ್ನುಳ್ಳ ೫೦೦ ಪುಟಗಳ ಈ ಸಮಗ್ರ ಜೀವನಚರಿತ್ರೆ ಮೈಸೂರಿನ ರಮಾಗೋವಿಂದ ಸಭಾಂಗಣ, ನೃಪತುಂಗ ಶಾಲೆ ಆವರಣ, ರಾಮಕೃಷ್ಣ ನಗರ ಇಲ್ಲಿ ಅಕ್ಟೋಬರ್ ೩೧ರ ಶನಿವಾರ ಸಂಜೆ ೬ ಗಂಟೆಗೆ ಬಿಡುಗಡೆಯಾಗಲಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಇಂತಹವರನ್ನು ಸರ್ಕಾರ ಗೌರವಿಸಬೇಕು

ಮೈಸೂರು ನಗರದ, ಪ್ರತಿಷ್ಠಿತ ಔಷಧಿ ಸಂಸ್ಥೆಯಾದ ರಘುಲಾಲ್ ಅಂಡ್ ಕಂಪೆನಿಯ ಮಾಲೀಕರಾದ ರಾಘವನ್ ಅವರು ಮೈಸೂರು ನಗರವನ್ನು ಹಸಿರೀಕರಣ ಮಾಡಲು…

16 mins ago

ಓದುಗರ ಪತ್ರ: ಸುಧಾರಿತ ಸೈಬರ್ ಭದ್ರತೆ ಅಳವಡಿಸಿ

ಬೆಂಗಳೂರಿನಲ್ಲಿ ನೋಂದಣಿಯಾಗದೆ ನಡೆದಿರುವ ರೂ. ೫೦೦೦ ಕೋಟಿ ಕ್ರಿಪ್ಟ್ರೋ ಅಕ್ರಮ ವಹಿವಾಟು ದೇಶದ ಆರ್ಥಿಕ ಭದ್ರತೆಗೆ ಬಡಿದಿರುವ ಎಚ್ಚರಿಕೆ ಘಂಟೆಯಾಗಿದೆ.…

20 mins ago

ಓದುಗರ ಪತ್ರ: ಮನದ ಭಾಷೆಯಾಗಲಿ ಕನ್ನಡ

ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು.ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆಯೆಂದು ನೆನಸಿಕೊಂಡರೆ ಕನ್ನಡ ನಿಜವಾಗಿಯೂ ಬದುಕಿ ಬಾಳುವ ಭಾಷೆಯಾಗಿ ಉಳಿಯುತ್ತದೆಯೇ ಎಂದು…

22 mins ago

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ

ಭಾರತಿ ಸಜ್ಜನ್ ಏಳು ತಿಂಗಳಲ್ಲಿ ೪೨೧ಪ್ರಕರಣಗಳು ದಾಖಲು; ನೆರವಿಗೆ ‘ಸಖಿ’ ಕೇಂದ್ರ ಮೈಸೂರು: ಸಾಂಸ್ಕೃತಿಕ ನಗರಿ, ಸುಶಿಕ್ಷಿತರ ಜಿಲ್ಲೆ ಎಂಬೆಲ್ಲಾ…

38 mins ago

ಮೈಸೂರು-ಮಾನಂದವಾಡಿ ಹೆದ್ದಾರಿ ಅಪಘಾತಕ್ಕೆ ರಹದಾರಿ

ಪ್ರಶಾಂತ್ ಎಸ್. ಮೈಸೂರು: ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯಲ್ಲಿ ಇರುವ ಡಿ.ಸಾಲುಂಡಿ, ಧನಗಳ್ಳಿ, ಕೆರೆಹುಂಡಿ ಗ್ರಾಮಗಳಿಗೆ ತೆರಳುವವರು ತಿರುವು ತೆಗೆದುಕೊಳ್ಳುವಾಗ ಅಪಘಾತ…

42 mins ago

ಹಾಲಿನ ದರಾಘಾತಕ್ಕೆ ಜನಜೀವನ ತತ್ತರ

ಚಿರಂಜೀವಿ ಸಿ.ಹುಲ್ಲಹಳ್ಳಿ ನಿತ್ಯ ಬಳಕೆಯ ವಸ್ತುಗಳ ಬೆಲೆಯೇರಿಕೆ ನಡುವೆ ಹಾಲಿನ ದರ ಹೆಚ್ಚಳಕ್ಕೆ ಜನಾಕ್ರೋಶ ಮೈಸೂರು: ಅಕ್ಕಿ, ಸಕ್ಕರೆ ಸೇರಿದಂತೆ…

48 mins ago