Andolana originals

ಓದುಗರ ಪತ್ರ: ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಸಿಗಲಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ಸ್ಥಾನ ಪಡೆದಿದೆ. ಅದರಲ್ಲೂ ಬೆಂಗಳೂರು ಜಗತಿಕ ಐಟಿ ಹಬ್ ಎಂದೇ ಪ್ರಸಿದ್ಧಿ ಪಡೆದಿದೆ.

ಆದರೆ ಇದೇ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಐಟಿ ಕಂಪೆನಿಗಳಲ್ಲಿ ಕನ್ನಡಿಗ ನೌಕರರಿಗೆ ಸೂಕ್ತ ಅವಕಾಶ, ಗೌರವ ಮತ್ತು ಆದ್ಯತೆ ದೊರೆಯದಿರುವುದು ವಿಷಾದನೀಯ. ಕನ್ನಡಿಗರ ನೆಲ, ಜಲ, ಸಂಪನ್ಮೂಲ ಹಾಗೂ ಪ್ರತಿಭೆಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿರುವ ಕಂಪೆನಿಗಳು ಸ್ಥಳೀಯ ಉದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ತಾರತಮ್ಯ ತೋರಬಾರದು.

ಅರ್ಹತೆ ಮತ್ತು ಪ್ರತಿಭೆಯೇ ನೇಮಕಾತಿಯ ಮಾನದಂಡವಾಗಿರಬೇಕು. ಆದರೆ ಸ್ಥಳೀಯ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿ, ಅವರಿಗೆ ಭಾಷೆ ಅಥವಾ ಪ್ರಾದೇಶಿಕ ಹಿನ್ನೆಲೆಯ ಆಧಾರದ ಮೇಲೆ ಅನ್ಯಾಯ ಮಾಡುವುದು ಸರಿಯಲ್ಲ. ಕನ್ನಡಿಗರು ಉದ್ಯೋಗಕ್ಕಾಗಿ ತಮ್ಮದೇ ನೆಲದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು.

ಕಂಪೆನಿಗಳು ಸ್ಥಳೀಯ ಯುವಜನರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ, ಸಮಾನ ಅವಕಾಶಗಳನ್ನು ಒದಗಿಸಬೇಕು. ಅರ್ಹತೆಗೆ ಮನ್ನಣೆ, ಸ್ಥಳೀಯರಿಗೆ ನ್ಯಾಯ ಮತ್ತು ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತಾಗಲಿ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪದಗಳನ್ನು ಬಳಸುವಾಗ ರಾಜಕಾರಣಿಗಳಿಗೆ ಎಚ್ಚರ ಅಗತ್ಯ

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರನ್ನು ಅವರೇನು ಹಳ್ಳಿ ಗುಗ್ಗುನಾ? ಎಂದು…

4 mins ago

ಓದುಗರ ಪತ್ರ: ಇಂಧನ ಆಯ್ಕೆ ಬಳಕೆ ಹಕ್ಕನ್ನು ಗ್ರಾಹಕರಿಗೆ ನೀಡಲಿ

ರಾಜ್ಯದ ೬೩ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಮಾದರಿಗಳನ್ನುಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇಂಧನದಲ್ಲಿ ಶೇಕಡಾ ೩೫ರಷ್ಟು ಎಥೆನಾಲ್ ಮಿಶ್ರಣವಾಗಿರುವುದು…

6 mins ago

ಸಮೋಸ ಕಾಕಸ್, ಅವಿವೇಕಿ ರಾಮಸ್ವಾಮಿ!

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ಅಮೆರಿಕ ಮಧ್ಯಂತರ ಚುನಾವಣೆಯ ಸ್ವಾರಸ್ಯಗಳು ಮೊನ್ನೆಯ ಚುನಾವಣೆಯಲ್ಲಿ, ಅಮೆರಿಕದ ಸಂಸತ್ತಿನ ಮೇಲ್ಮನೆಗೆ (ಸೆನೆಟ್)…

15 mins ago

ವಿಶೇಷ ಮಕ್ಕಳ ತಾಯಂದಿರಿಗೆ ಚೇತನ ನೀಡುವ ಮಹಾ ತಾಯಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ೨೦೨೧ರಲ್ಲಿ ‘ಸ್ನೇಹ ಸಾಂದ್ರಂ ಚಾರಿಟೆಬಲ್ ಟ್ರಸ್ಟ್’ ಅಸ್ತಿತ್ವಕ್ಕೆ  ೨೦೧೦ರ ಮಾರ್ಚ್ ೨೫ರಂದು ಕೇರಳದ ತಿರುವನಂತರಪುರದ…

21 mins ago

ಕಾಡುಪ್ರಾಣಿಗಳ ಹಾವಳಿಗೆ ಕಂಗಾಲಾದ ಕೃಷಿಕರು

ಲಕ್ಷ್ಮೀಕಾಂತ್ ಕೊಮಾರಪ್ಪ ಭತ್ತದ ಪೈರು, ಕಾಳುಮೆಣಸಿನ ಬಳ್ಳಿಗಳಿಗೆ ಹಾನಿ; ಫಸಲು ಉಳಿಸಿಕೊಳ್ಳಲು ರಾತ್ರಿ ಕಾವಲು ಸೋಮವಾರಪೇಟೆ: ಮಳೆ ಕೊರತೆ ಮೊದಲಾದ…

27 mins ago

ಬಂಡೀಪುರದಲ್ಲಿ ಸಫಾರಿ ಪಾರ್ಕಿಂಗ್ ಶುಲ್ಕ ಬಲು ದುಬಾರಿ

ಮಹೇಂದ್ರ ಹಸಗೂಲಿ ಒಂದು ಕಾರು ಪಾರ್ಕಿಂಗ್‌ಗೆ ೧೧೮ ರೂ. ಶುಲ್ಕ ; ಪ್ರವಾಸಿಗರ ಆಕ್ರೋಶ  ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ…

32 mins ago