Andolana originals

ಓದುಗರ ಪತ್ರ: ಇಂಧನ ಆಯ್ಕೆ ಬಳಕೆ ಹಕ್ಕನ್ನು ಗ್ರಾಹಕರಿಗೆ ನೀಡಲಿ

ರಾಜ್ಯದ ೬೩ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಮಾದರಿಗಳನ್ನುಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇಂಧನದಲ್ಲಿ ಶೇಕಡಾ ೩೫ರಷ್ಟು ಎಥೆನಾಲ್ ಮಿಶ್ರಣವಾಗಿರುವುದು ದೃಢಪಟ್ಟಿದೆ. ನಿಗದಿತ ಇ೨೦ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಸೇರಿಸುತ್ತಿರುವುದು ಸಾರ್ವಜನಿಕರಿಗೆ ಎಸಗುತ್ತಿರುವ ಶೋಷಣೆ ಮತ್ತು ಧನ ವಂಚನೆಯಾಗಿದೆ.

ಗ್ರಾಹಕರು ಪಾವತಿಸುವ ಹಣಕ್ಕೆ ತಕ್ಕಂತೆ ಶುದ್ಧ ಹಾಗೂ ಗುಣಮಟ್ಟದ ಇಂಧನವನ್ನು ಪಡೆಯುವುದು ಅವರ ಹಕ್ಕು. ಅತಿಯಾದ ಎಥೆನಾಲ್ ಮಿಶ್ರಣದಿಂದಾಗಿ ವಾಹನಗಳ ಎಂಜಿನ್‌ಗಳಿಗೆ ಹಾನಿಯಾಗುತ್ತಿದ್ದು ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಈ ಗಂಭೀರ ವಿಚಾರದಲ್ಲಿ ತೈಲ ಕಂಪೆನಿಗಳು ಸ್ಪಷ್ಟವಾದ ಉತ್ತರ ನೀಡದೆ ಜಾರಿಕೊಳ್ಳುತ್ತಿರುವುದು ಖಂಡನೀಯ. ಇಂಧನ ಮಾರಾಟ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಇ೧೦, ಇ೨೦ ಅಥವಾ ಇತರ ಆಯ್ಕೆಯ ಇಂಧನವನ್ನು ಬಳಸುವ ಸಂಪೂರ್ಣ ಹಕ್ಕನ್ನು ಗ್ರಾಹಕರಿಗೆ ನೀಡಬೇಕು ಹಾಗೂ ಈ ಅಕ್ರಮ ಎಸಗಿದ ಜವಾಬ್ದಾರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಸಿಗಲಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ಸ್ಥಾನ ಪಡೆದಿದೆ. ಅದರಲ್ಲೂ ಬೆಂಗಳೂರು ಜಗತಿಕ ಐಟಿ ಹಬ್ ಎಂದೇ ಪ್ರಸಿದ್ಧಿ ಪಡೆದಿದೆ.…

2 mins ago

ಓದುಗರ ಪತ್ರ: ಪದಗಳನ್ನು ಬಳಸುವಾಗ ರಾಜಕಾರಣಿಗಳಿಗೆ ಎಚ್ಚರ ಅಗತ್ಯ

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರನ್ನು ಅವರೇನು ಹಳ್ಳಿ ಗುಗ್ಗುನಾ? ಎಂದು…

4 mins ago

ಸಮೋಸ ಕಾಕಸ್, ಅವಿವೇಕಿ ರಾಮಸ್ವಾಮಿ!

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ಅಮೆರಿಕ ಮಧ್ಯಂತರ ಚುನಾವಣೆಯ ಸ್ವಾರಸ್ಯಗಳು ಮೊನ್ನೆಯ ಚುನಾವಣೆಯಲ್ಲಿ, ಅಮೆರಿಕದ ಸಂಸತ್ತಿನ ಮೇಲ್ಮನೆಗೆ (ಸೆನೆಟ್)…

15 mins ago

ವಿಶೇಷ ಮಕ್ಕಳ ತಾಯಂದಿರಿಗೆ ಚೇತನ ನೀಡುವ ಮಹಾ ತಾಯಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ೨೦೨೧ರಲ್ಲಿ ‘ಸ್ನೇಹ ಸಾಂದ್ರಂ ಚಾರಿಟೆಬಲ್ ಟ್ರಸ್ಟ್’ ಅಸ್ತಿತ್ವಕ್ಕೆ  ೨೦೧೦ರ ಮಾರ್ಚ್ ೨೫ರಂದು ಕೇರಳದ ತಿರುವನಂತರಪುರದ…

22 mins ago

ಕಾಡುಪ್ರಾಣಿಗಳ ಹಾವಳಿಗೆ ಕಂಗಾಲಾದ ಕೃಷಿಕರು

ಲಕ್ಷ್ಮೀಕಾಂತ್ ಕೊಮಾರಪ್ಪ ಭತ್ತದ ಪೈರು, ಕಾಳುಮೆಣಸಿನ ಬಳ್ಳಿಗಳಿಗೆ ಹಾನಿ; ಫಸಲು ಉಳಿಸಿಕೊಳ್ಳಲು ರಾತ್ರಿ ಕಾವಲು ಸೋಮವಾರಪೇಟೆ: ಮಳೆ ಕೊರತೆ ಮೊದಲಾದ…

27 mins ago

ಬಂಡೀಪುರದಲ್ಲಿ ಸಫಾರಿ ಪಾರ್ಕಿಂಗ್ ಶುಲ್ಕ ಬಲು ದುಬಾರಿ

ಮಹೇಂದ್ರ ಹಸಗೂಲಿ ಒಂದು ಕಾರು ಪಾರ್ಕಿಂಗ್‌ಗೆ ೧೧೮ ರೂ. ಶುಲ್ಕ ; ಪ್ರವಾಸಿಗರ ಆಕ್ರೋಶ  ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ…

33 mins ago