Andolana originals

ಬಂಡೀಪುರದಲ್ಲಿ ಸಫಾರಿ ಪಾರ್ಕಿಂಗ್ ಶುಲ್ಕ ಬಲು ದುಬಾರಿ

ಮಹೇಂದ್ರ ಹಸಗೂಲಿ

ಒಂದು ಕಾರು ಪಾರ್ಕಿಂಗ್‌ಗೆ ೧೧೮ ರೂ. ಶುಲ್ಕ ; ಪ್ರವಾಸಿಗರ ಆಕ್ರೋಶ 

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಟಿಕೆಟ್ ದರಗಳು ಗಣನೀಯವಾಗಿ ಹೆಚ್ಚಾಗಿರುವ ಜತೆಗೆ ಈಗ ಪಾರ್ಕಿಂಗ್ ಶುಲ್ಕವೂ ದುಬಾರಿಯಾಗಿದೆ.

ಇತ್ತೀಚಿನ ಪರಿಷ್ಕರಣೆಯ ಪ್ರಕಾರ ಬಸ್ ಮತ್ತು ಜೀಪ್ ಸಫಾರಿಗಳ ದರವನ್ನು ಬಹುತೇಕ ದುಪ್ಪಟ್ಟು ಮಾಡಲಾಗಿತ್ತು. ಅರಣ್ಯ ಇಲಾಖೆಯ ಆದೇಶದಂತೆ ಬಸ್ ಸಫಾರಿಗೆ (ವಯಸ್ಕರು) ಹಿಂದೆ ೬೫೦ ರೂ. ಇದ್ದ ಟಿಕೆಟ್ ದರವನ್ನು ಈಗ ೧,೦೦೦ ರೂ.ಗೆ ಹೆಚ್ಚಿಸಲಾಗಿದೆ.

೧೨ ವರ್ಷದೊಳಗಿನ ಮಕ್ಕಳಿಗೆ ೩೫೦ ರೂ. ಇದ್ದ ದರವನ್ನು ೫೦೦ ರೂ.ಗೆ ಏರಿಸಲಾಗಿದೆ. ಜೀಪ್ ಸಫಾರಿಗೆ (ವಯಸ್ಕರು) ೭೫೦ ರೂ. ಇದ್ದ ದರವನ್ನು ಶೇ.೧೦೦ ರಷ್ಟು ಹೆಚ್ಚಿಸಿ ೧,೫೦೦ ರೂ.ಗೆ ಹೆಚ್ಚಿಸಲಾಗಿದೆ. ಜೀಪ್ ಸಫಾರಿ ಮಕ್ಕಳಿಗೆ ಪ್ರತಿ ಟಿಕೆಟ್‌ಗೆ ೭೫೦ ರೂ. ದರವಿರುತ್ತದೆ.

ಕ್ಯಾಮೆರಾ ಶುಲ್ಕ: ೨೦೦ ಎಂಎಂಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಪ್ರತಿ ಟ್ರಿಪ್‌ಗೆ ಹೆಚ್ಚುವರಿಯಾಗಿ ೧,೫೦೦ ರೂ. ಮತ್ತು ಜಿಎಸ್ಟಿ ಸೇರಿದರೆ ೧,೮೦೦ ರೂ. ಪಾವತಿಸಬೇಕಾಗುತ್ತದೆ.

ಇದರ ಜೊತೆಗೆ ಪ್ರತ್ಯೇಕವಾಗಿ ಪಾರ್ಕಿಂಗ್ ಮತ್ತು ಕ್ಯಾಮೆರಾ ಶುಲ್ಕಗಳನ್ನು ಪಾವತಿಸ ಬೇಕಾಗಿರುವುದು ಪ್ರವಾಸಿಗರ ಅಸಮಾ ಧಾನಕ್ಕೆ ಕಾರಣವಾಗಿದೆ.ಒಂದು ಕಾರು ಪಾರ್ಕಿಂಗ್ ಮಾಡಿದರೆ ೧೧೮ ರೂ. ಪಾರ್ಕಿಂಗ್ ಶುಲ್ಕ, ಟಿಟಿ ಇನ್ನಿತರ ವಾಹನಗಳಿಗೆ ೨೩೮ ರೂ., ಬಸ್ಸುಗಳಿಗೆ ೩೫೪ ರೂ. ಪಾರ್ಕಿಂಗ್ ಶುಲ್ಕ ವಿಧಿಸಲಾಗಿದೆ.

ಪ್ರವಾಸಿಗರು ದುಪ್ಪಟ್ಟು ಹಣವನ್ನು ಸಫಾರಿಗೆ ನೀಡಿ, ಪಾರ್ಕಿಂಗ್‌ಗೆ ಕೂಡ ನೂರಾರು ರೂ.ಗಳನ್ನು ನೀಡುವುದು ಪ್ರವಾಸಿಗರಿಗೆ ಹೊರೆಯಾಗಿದೆ. ಮೊದಲು ಪಾರ್ಕಿಂಗ್‌ಗೆ ೫೦ ರೂ. ಇತ್ತು, ಈಗ ದುಪ್ಪಟ್ಟು ಹೆಚ್ಚಿಸಿದ್ದಾರೆ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

” ಸಫಾರಿಯಿಂದ ಕಾಡುಪ್ರಾಣಿಗಳು ನಾಡಿನತ್ತ ಬಂದು ಮನುಷ್ಯನ ಮೇಲೆ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಆದರೆ ಅರಣ್ಯ ಇಲಾಖೆ ಸಫಾರಿ, ಪಾರ್ಕಿಂಗ್ ಶುಲ್ಕ ಮೂಲಕ ಕೋಟಿ, ಕೋಟಿ ರೂ. ವಸೂಲಿ ಮಾಡುತ್ತಿದ್ದು, ಇದರ ಬಳಕೆಯ ಬಗ್ಗೆ ಇದುವರೆಗೂ ಮಾಹಿತಿ ನೀಡುತ್ತಿಲ್ಲ. ಸರ್ಕಾರ ಕೂಡಲೇ ಸಫಾರಿ ಬಂದ್ ಮಾಡಬೇಕು.”

ಹೊನ್ನೂರು ಪ್ರಕಾಶ್, ರೈತ ಮುಖಂಡ

” ನಾವು ಸಫಾರಿಗೆ ಹೋಗಿದ್ದಾಗ ಕಾರ್ ಪಾರ್ಕಿಂಗ್‌ಗೆ ೧೧೮ ರೂ. ಸಫಾರಿಗೆ ಸಾವಿರ ರೂ. ಕಟ್ಟಿಸಿಕೊಂಡರು. ಇಷ್ಟೊಂದು ಹಣ ಸಂಗ್ರಹವಾಗುತ್ತಿದ್ದರೂ ಅದರಿಂದ ಅರಣ್ಯ ಪ್ರದೇಶದ ಅಭಿವೃದ್ಧಿಗೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಏನು ಅನುಕೂಲ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ. ಸಫಾರಿ, ಪಾರ್ಕಿಂಗ್ ಶುಲ್ಕ ಅತಿ ದುಬಾರಿಯಾಗಿದ್ದು, ಕೂಡಲೇ ಕಡಿಮೆ ಮಾಡಬೇಕು.”

ಗವಿಸ್ವಾಮಿ, ಪ್ರವಾಸಿಗ 

 

ಆಂದೋಲನ ಡೆಸ್ಕ್

Recent Posts

ಕಾಡುಪ್ರಾಣಿಗಳ ಹಾವಳಿಗೆ ಕಂಗಾಲಾದ ಕೃಷಿಕರು

ಲಕ್ಷ್ಮೀಕಾಂತ್ ಕೊಮಾರಪ್ಪ ಭತ್ತದ ಪೈರು, ಕಾಳುಮೆಣಸಿನ ಬಳ್ಳಿಗಳಿಗೆ ಹಾನಿ; ಫಸಲು ಉಳಿಸಿಕೊಳ್ಳಲು ರಾತ್ರಿ ಕಾವಲು ಸೋಮವಾರಪೇಟೆ: ಮಳೆ ಕೊರತೆ ಮೊದಲಾದ…

3 mins ago

ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದ ಮಡಿಕೇರಿಯ ಯೋಗೇಶ್

ಮಡಿಕೇರಿ: ಮಗನನ್ನು ಕಳೆದುಕೊಳ್ಳುವ ನೋವಿನ ನಡುವೆಯೂ, ಆತನ ಅಂಗಾಂಗಗಳು ಮತ್ತೊಬ್ಬರ ಬದುಕಿಗೆ ಆಸರೆಯಾಗಲಿ ಎಂದು ಕುಟುಂಬವೊಂದು ಮಾನವೀಯ ನಿರ್ಧಾರ ಕೈಗೊಂಡಿದೆ.…

18 hours ago

ಕೇಂದ್ರ ಹಣ ಕೊಟ್ಟರೆ ದರ ಹೆಚ್ಚಿಸಲ್ಲ’; ಬೆಲೆ ಏರಿಕೆ ಅನಿವಾರ್ಯ ಎಂದ ಡಿಸಿಎಂ ಪರಮೇಶ್ವರ್‌!

ಬೆಂಗಳೂರು: ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್‌, ರಾಜ್ಯ ಸರ್ಕಾರಕ್ಕೆ ಕೆಲವು ದರ ಏರಿಕೆಗಳು ಅನಿವಾರ್ಯವಾಗಿವೆ…

18 hours ago

ಪಿರಿಯಾಪಟ್ಟಣದಲ್ಲಿ ಮಲೆ ಮಹದೇಶ್ವರ ಜಾತ್ರೆಯ ಸಂಭ್ರಮ; ವಿಜೃಂಭಣೆಯ ರಥೋತ್ಸವ!

ಪಿರಿಯಾಪಟ್ಟಣ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.…

18 hours ago

ಹಾಸನಾಂಬೆ ದರ್ಶನಕ್ಕೆ ತೆರೆ; ಗರ್ಭಗುಡಿ ಬಾಗಿಲಿಗೆ ಬೀಗ!

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ನವೆಂಬರ್‌ 11ರ ಮಧ್ಯಾಹ್ನ ದೇವಾಲಯದ…

20 hours ago