ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ ನಿರ್ಧಾರವಾಗಿದೆ. ದುಬಾರಿ ಖಾಸಗಿ ಶಿಕ್ಷಣ ಶುಲ್ಕ ಭರಿಸಲಾಗದ ಬಡ ವಿದ್ಯಾರ್ಥಿಗಳಿಗೆ ಇದು ಹೊಸ ಭರವಸೆ ಮೂಡಿಸಿದೆ. ಆದರೆ, ರಾಜ್ಯದ ಶೇಕಡಾ ೬೫ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಕಲಿಯುತ್ತಿರುವುದರಿಂದ, ಪ್ರಸ್ತುತ ನೀಡಲಾಗಿರುವ ಶೇ.೭.೫ರಷ್ಟು ಮೀಸಲಾತಿಯು ಅವರ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಸಾಲದು.
ಈ ನೀತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೆಲವು ತಕ್ಷಣದ ಕ್ರಮಗಳು ಅಗತ್ಯವಾಗಿವೆ. ಮೊದಲನೆಯದಾಗಿ, ಸರ್ಕಾರಿ ಶಾಲಾ ಮಕ್ಕಳ ಮೀಸಲಾತಿಯನ್ನು ಹಂತ ಹಂತವಾಗಿ ಶೇ. ೧೦ಕ್ಕೆ ಹೆಚ್ಚಿಸಬೇಕು. ಎರಡನೆಯದಾಗಿ, ವೃತ್ತಿಪರ ಶಿಕ್ಷಣಕ್ಕೆ ಸೇರುವ ಈ ವಿದ್ಯಾರ್ಥಿಗಳಿಗೆ ಕೌಶಲ ಹಾಗೂ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಬೆಳೆಸಲು ವಿಶೇಷ ಸೇತುಬಂಧ ತರಬೇತಿ ನೀಡಬೇಕು.
ಅಂತಿಮವಾಗಿ, ಶಾಲಾ ಹಂತದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತ ತರಬೇತಿ ಒದಗಿಸಿದರೆ, ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.
-ಡಾ. ಎಚ್. ಕೆ.ವಿಜಯಕುಮಾರ್, ಬೆಂಗಳೂರು
ಆದರ್ಶ ಜೀವನಕ್ಕೆ ಪ್ರೇರಣೆ: ಮಹಾತ್ಮ ಗಾಂಧೀಜಿ ಬಗ್ಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಶಿಕ್ಷಕರಾದ ಯಶೋಧ ಮಿಸ್ ನನಗೆ ಪ್ರೇರಣೆ…
ಕೆ.ಪಿ.ಸುರೇಶ್ ರಾಷ್ಟ್ರಪಿತ ಗಾಂಧಿ ಎಂಬ ಅಸ್ತಿತ್ವ ಗಾಳಿಯಷ್ಟೇ ಸಲೀಸು ಎಂಬ ವಾತಾವರಣ ಇತ್ತು. ಆದರೆ ಕಳೆದೊಂದು ದಶಕದಿಂದ ಗಾಂಧಿಯ ಚಾರಿತ್ರ್ಯಹನನ, ಅಪಮಾಹಿತಿಯ…
ಕೆ.ವಿ.ಸುರೇಶ್, ರೀಡರ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಗಾಂಧಿ ಅಭಿಯಾನ ಅರಿವಿನಯಾನ ವಿಷಯ ಕುರಿತ ‘ಆಂದೋಲನ’ ದಿನಪತ್ರಿಕೆಯಸರಣಿ ಲೇಖನಗಳು, ಮುಗ್ಧ…
ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ…
ಸದಾನಂದ ಆರ್., ಆಂಗ್ಲ ಭಾಷಾ ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಹುಣಸೂರು ಇತ್ತೀಚೆಗೆ ದೆಹಲಿಯ ಹಾದಿ ಬೀದಿಗಳಲ್ಲಿ ಜಿರಲೆಗಳು…
ರವಿ ಕೋಟೆ, ಸಂಪಾದಕ ಗಾಂಧೀಜಿಯವರ ಬಗ್ಗೆ ಮಾತನಾಡುವವರು ಇಂದು ಬಹಳ ಮಂದಿ; ಅವರನ್ನು ಹೊಗಳುವವರೂ ಇದ್ದಾರೆ, ತೆಗಳುವವರೂ ಇದ್ದಾರೆ. ಆದರೆ,…