Andolana originals

ಗಾಂಯನ್ನು ಇನ್ನೊಮ್ಮೆ ಇಣುಕಿ ನೋಡುವ ‘ಆಂದೋಲನ’ದ ಪ್ರಯತ್ನ ಶ್ಲಾಘನೀಯ

ಸದಾನಂದ ಆರ್., ಆಂಗ್ಲ ಭಾಷಾ ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಹುಣಸೂರು

ಇತ್ತೀಚೆಗೆ ದೆಹಲಿಯ ಹಾದಿ ಬೀದಿಗಳಲ್ಲಿ ಜಿರಲೆಗಳು ಹರಿದಾಡುವಾಗ, ಇಲ್ಲವೇ ಜಂತರ್ ಮಂತರ್‌ನಲ್ಲಿ ಉಪವಾಸ ಕೂತಾಗ ಗಾಂಧಿ ದೊಡ್ಡ ಆಲದ ಮರದ ರೂಪದಲ್ಲಿ ಉಪಸ್ಥಿತರಿದ್ದರು. ಮೊಬೈಲ್ ಫೋನ್ ಮೂಲಕ ತುಸು ಅಶ್ಲೀಲದ ಗಡಿಯನ್ನು ದಾಟಿದವು ಎನ್ನಬಹುದಾದ ಮೀಮ್‌ಗಳನ್ನು ಇದೇ ಜಿರಲೆಗಳು ರಚಿಸುತ್ತಾ ಇಲ್ಲವೇ ಹಂಚಿಕೊಳ್ಳುತ್ತಾ ಸರ್ಕಾರದ ನಿದ್ದೆಗೆಡೆಸಿದಾಗ, ಇದೇ ಗಾಂಧಿ ಸರಿ-ತಪ್ಪುಗಳ ಒರೆಗಲ್ಲಾಗಿ ಅವರೊಂದಿಗಿದ್ದರು. ಗಾಂಧಿ ಎನ್ನುವ ಗಡಿ ರೇಖೆಯೊಳಗೆ ತಮ್ಮ ಚಟುವಟಿಕೆ ನಡೆಸಿದ ಜಿರಲೆಗಳು ಪೊಲೀಸರಿಗೆ ಮುಖಾಮುಖಿಯಾದ ರೀತಿ ಗಂಭೀರ ಅಧ್ಯಯನಕ್ಕೆ ಒಳಾಗಗಬೇಕಿರುವ ಪ್ರಕ್ರಿಯೆಯಾಗಿದೆ. ಫೋನ್ ಮಾರಿಯ ಹಿಡಿತಕ್ಕೆ ಸಿಕ್ಕವರು; ಸೋಮಾರಿಗಳು; ತಾಳ್ಮೆರಹಿತರು ಇತ್ಯಾದಿ ಹಣೆಪಟ್ಟಿಗಳಿಂದ ಗುರುತಿಸಲ್ಪಡುವ ಜೆನ್‌ಝೀಗಳು ಜಿರಲೆಗಳಾಗಿ ತಮ್ಮ ಪ್ರತಿರೋಧ ದಾಖಲಿಸಲು ಆರಿಸಿಕೊಂಡ ಮಾರ್ಗ ಗಾಂಧಿ ಮಾರ್ಗವಾಗಿತ್ತು. ಒಂದು ದಶಕದಿಂದೀಚೆಗೆ ಕೇವಲ ಸ್ವಚ್ಛತೆಯ ಗುರುತಾಗಿದ್ದ ಗಾಂಧೀಜಿಯ ಕನ್ನಡಕ,ನಿಂತ ನೀರಾಗಿದ್ದ ಸಾಮಾಜಿಕ ಬದುಕಿಗೊಂದು ಮುಂದಣ ಹಾದಿಯನ್ನು ತೋರುವ ಸಾಧನವಾಗಿದ್ದು ಈ ಕಾಲದ ಪ್ರಮುಖ ಬೆಳವಣಿಗೆಗಳಲ್ಲಿ ಒಂದಾಗಿದೆ.

ಹೀಗೆ ಜಿರಲೆಗಳ ಸಾಮಾಜಿಕ ಚಳವಳಿಯ ಭಾಗವಾಗಿ ದೇಶದ ಸಾಮಾಜಿಕ ಬದುಕಿನಲ್ಲಿ ಮರು ರೂಪಿತವಾದ ಗಾಂಧಿಯನ್ನು ಇನ್ನೊಮ್ಮೆ ಇಣುಕಿ ನೋಡುವ ‘ಆಂದೋಲನ’ದ ಪ್ರಯತ್ನ ಶ್ಲಾಘನೀಯವಾಗಿದೆ. ಸಾಮಾಜಿಕ ಬದುಕಿನ ದಿಕ್ಸೂಚಿಗಳನ್ನು ಓದುಗರ ವಲಯದ ನೆನಪಿನ ಕೋಶದಿಂದ ಮಾಸದಂತೆ ಕಾಪಾಡುವುದು ಜನಪರ ಪತ್ರಿಕೆಯ ಮೂಲ ಕರ್ತವ್ಯಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ‘ಆಂದೋಲನ’ ತನ್ನ ಪತ್ರಿಕಾ ಧರ್ಮವನ್ನು ನಿಭಾಯಿಸಿದೆ.

ಮುಖ್ಯವಾಗಿ ಗಾಂಧಿ ಎನ್ನುವ ವ್ಯಕ್ತಿತ್ವವನ್ನು ಫೋಟೋದ ಚೌಕಟ್ಟಿನ ಆಚೆಗೆ ತಂದಿಟ್ಟು ಜನಸಾಮಾನ್ಯರೊಂದಿಗೆ ಮುಕ್ತ ಮುಖಾಮುಖಿಗೆ ಅವಕಾಶ ನೀಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಏಕೆಂದರೆ, ಯಾವುದೇ ಸಾಧಕನನ್ನು ಪೋಟೋ ಫ್ರೇಂನ ಕಟ್ಟು-ಗಾಜುಗಳ ನಡುವೆ ಬಂಧಿಸಿಟ್ಟು ಗೋಡೆಗೆ ನೇತು ಹಾಕುವ ಸ್ವಭಾವ ಭಾರತೀಯರ ರಕ್ತದಲ್ಲಿ ಹರಿಯುತ್ತಿದೆ. ವ್ಯಕ್ತಿಯನ್ನು ದೇವರಾಗಿಸಿದೊಡನೆಯೇ, ಸಮಾಜ ಕಟ್ಟಿದ ವ್ಯಕ್ತಿತ್ವ ಸಮಾಜಘಾತುಕ ವ್ಯಕ್ತಿತ್ವವಾಗಿ ಮರುರೂಪ ಪಡೆದುಕೊಳ್ಳುವ ಅಪಾಯವಿರುತ್ತದೆ. ಮನುಷ್ಯ ಮಾತ್ರದವರಾದ ನಾವು, ಫೋಟೋದಲ್ಲಿರುವ ಮಹಾತ್ಮರ ಆಶೀರ್ವಾದದ ಬೆಂಬಲವಿಲ್ಲದೆ ಉದ್ಧಾರವಾಗಲಾರೆವು ಎಂದಾಗಿ ಬಿಡುತ್ತದೆ. ಪವಾಡವೊಂದರ ಆಗಮನವನ್ನು ನಿರೀಕ್ಷಿಸುತ್ತಾ ಫೋಟೋ ನೇತು ಹಾಕಿದವರು ಕಾಯುತ್ತಾರೆ. ಹೀಗಾದಾಗ, ಬದುಕೆಂದರೆ ಇಷ್ಟೇ ಎನ್ನುವ ಮಾನಸಿ ಕತೆ ರೂಪುಗೊಂಡು, ಮಾನಸಿಕ ಗುಲಾಮತಕ್ಕೆ ಶರಣಾದ ಜನಸಮೂಹ ನಿರ್ಮಾಣವಾಗುತ್ತದೆ. ಹೀಗಾದೊಡನೆ, ಪ್ರಜಾಪ್ರಭುತ್ವ ಹಿಂದಾಗಿ, ಫ್ಯಾಸಿಸಂ ಮುಂದಾಗುತ್ತದೆ. ಪ್ರಶ್ನಿಸುವ ಸ್ವಭಾವ ಹೋಗಿ, ಹೇಳಿದ್ದನ್ನು ಮಾರುಮಾತಿಲ್ಲದೆ ಕೇಳಿ ಅನುಸರಿಸುವ ಸ್ವಭಾವ ರೂಪುಗೊಳ್ಳುತ್ತದೆ. ಇಂತಹ ಗುಲಾಮ ಸಮಾಜವನ್ನು ಇಲ್ಲವಾಗಿಸಲು ಇರುವ ಪ್ರಬಲವಾದ ಮಾರ್ಗ ಗಾಂಧಿ ಮಾರ್ಗವಾಗಿದೆ.

‘ಆಂದೋಲನ’ ಗಾಂಧಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಗಾಂಽಯನ್ನು ಮರುಮಂಡಿಸುವ ಜೊತೆಗೆ ಜೆನ್ ಅಲ್ಛಾಗಳಿಗೆ‘ಗಾಂಧಿಯತ್ವವನ್ನು’ ಪರಿಚಯಿಸುವ ಕೆಲಸವನ್ನು ಮಾಡಿದೆ. ಜೆನ್‌ಝೀಗಳು ತಂತ್ರಜ್ಞಾನ ನೀಡಿದ ಸಾಮಾಜಿಕ ಜಾಲತಾಣಗಳ ಜೊತೆ ಜೊತೆಗೆ ಬೆಳೆದು ದೊಡ್ಡವರಾದವರು. ಇವರಿಗೆ ಇಂಟರ್‌ನೆಟ್ ಇರದಿದ್ದ ಕಾಲವೊಂದಿತ್ತು ಎನ್ನುವ ಕನಿಷ್ಠ ಅರಿವಾದರೂ ಇದೆ. ಆದರೆ ಜೆನ್ ಆಲ್ಛಾಗಳಿಗೆ ಇಂಟರ್‌ನೆಟ್ ರಹಿತ ಕಾಲ ಎನ್ನುವುದು ಹಳೆ ಶಿಲಾಯುಗದ ಕಾಲ ಎಂಬಂತಾಗುತ್ತದೆ. ಇಂತಹವರಿಗೆ ಗಾಂಧಿ ವಿಚಾರಗಳನ್ನು ಓದುವ, ಓದಿ ತಮ್ಮ ಅಭಿಪ್ರಾಯ ವನ್ನು ಬರವಣಿಗೆಯ ಮೂಲಕ ದಾಖಲಿಸುವ ಅವಕಾಶ ಸೃಷ್ಟಿಸಿದ್ದು ಮಾನವ ಸಮಾಜದ ಭವಿಷ್ಯವನ್ನು ಭದ್ರಗೊಳಿಸುವ ಹಾದಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ವ್ಯಕ್ತಿತ್ವ ವ್ಯಕ್ತಿಯ ‘ಸ್ವಚಿತ್ರ’ವನ್ನು (Self ) ಅವಲಂಬಿಸಿರುತ್ತದೆ. ಈ Self ಅನ್ನುವುದು ಸಮಾಜ -ವ್ಯಕ್ತಿಗಳ ನಡುವಿನ ಜುಗಲ್ ಬಂದಿಯಿಂದ ರೂಪುಗೊಳ್ಳುವಂತಹುದು. ಒಮ್ಮೆ ವ್ಯಕ್ತಿ ಸರಿಯಿದ್ದರೆ, ಕೆಲವೊಮ್ಮೆ ಸಮಾಜ ತಪ್ಪಿರುತ್ತದೆ. ಈ ಜುಗಲ್‌ಬಂದಿಯಲ್ಲಿ ಗಾಂಧಿ ಬರಬೇಕು. ಹಾಗೆ ಎ. ಆರ್.ರೆಹಮಾನ್ ಸಂಗೀತ ಸಂಯೋಜಿಸಿರುವ ರಾಮಾಯಣ ಸಿನಿಮಾದ ಹಾಡುಗಳು ಬರಬೇಕು. ಇಂತಹ ಸನ್ನಿವೇಶ ದಲ್ಲಿ ಮಕ್ಕಳ Self ಮಾನವ ಸಮಾಜದ ಓರೆಕೋರೆಗಳ ಅರಿವಿನೊಂದಿಗೆ ರೂಪುಗೊಳ್ಳು ತ್ತದೆ. ಈ ಅರಿವು ಅವರ ಭವಿಷ್ಯದ ಜೀವನ ಕಥೆಯನ್ನು ರೂಪಿಸಿಕೊಳ್ಳುವ ಬಗೆ ಯನ್ನು ವಿವರಿಸುತ್ತದೆ. “ವ್ಯಕ್ತಿಗಳು ತಮ್ಮ ಜೀವನ ಕಥೆಯನ್ನು ನಿರೂಪಿಸುವ ಕಾರ್ಯದಲ್ಲಿ ತಮ್ಮ ಬದುಕಿನ ಮೌಲ್ಯವನ್ನು ಮರುನಿರ್ಣಯಿಸುವ (Refle
ctive appraisal) ಅವಕಾಶವನ್ನು ಪಡೆಯುತ್ತಾರೆ.

ಈ ಪ್ರಕ್ರಿಯೆಯಲ್ಲಿ ಅವರ ಬದುಕಿನಲ್ಲಿ ನಿರ್ಣಾಯಕ ಪಾತ್ರವಹಿಸಿದವರು ಮತ್ತವರ ವರ್ತನೆಗಳ ಆಧಾರದ ಮೇಲೆ ತಮ್ಮ ಸ್ವಮೌಲ್ಯದ ಅಂದಾಜನ್ನು ರೂಪಿಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಜನ ಯಾವಾಗಲೂ ತಮ್ಮ ಬಗ್ಗೆ ತಾವು ಹೊಂದಿರುವ ‘ಸ್ವ ಚಿತ್ರಣದ’ ಆಧಾರದ ಮೇಲೆಯೆ ವರ್ತಿಸುತ್ತಾರೆ ಮತ್ತು ಅದಕ್ಕೆ ವ್ಯತಿರಿಕ್ತವಾದ ಯಾವುದೇ ವರ್ತನೆ ನಡೆದರೂ ಅದನ್ನು ಅಪಾಯವೆಂದು ಪರಿಗಣಿಸುತ್ತಾರೆ” ಎಂದು ಜಗತ್ತಿನ ಪ್ರಮುಖ ಸಮಾಜ ಶಾಸ್ತ್ರಜ್ಞರಲ್ಲಿ ಒಬ್ಬರಾದ ನೀಲ್‌ಗ್ರಾಸ್ ಪ್ರತಿಪಾದಿಸುತ್ತಾರೆ. ಜೆನ್ ಆಲ್ಛಾಗಳ ಸ್ವಚಿತ್ರಣದ ರೂಪಿಸುವಿಕೆಯಲ್ಲಿ ಗಾಂಧಿಯ ಇರುವಿಕೆಯನ್ನು ಖಾತರಿಗೊಳಿಸುವ ‘ಆಂದೋಲನ’ ಪತ್ರಿಕೆಯ ಯತ್ನ ದೂರ ದೃಷ್ಟಿಯ ಯತ್ನವಾಗಿದೆ. ದಶಕಗಳ ಹಿಂದೆ ಕಟ್ಟಿದ ಪ್ರಯಾಣಿಕ ತಂಗು ದಾಣಗಳು ಇಂದಿಗೂ ನೆರಳು ನೀಡುತ್ತಿರುವಂತೆ, ಗಾಂಧಿ ಒಡನಾಟದಲ್ಲಿ ಸ್ಪಂದಿಸಿರುವ ಜೆನ್ ಆಲ್ಛಾಗಳು ಮುಂಬ ರುವ ದಿನಗಳಲ್ಲಿ ಮಾನವತೆಯ ನೆರಳನ್ನು ಎಲ್ಲರಿಗೂ ನೀಡಲು ‘ಆಂದೋಲನ’ ಪತ್ರಿಕೆ ಅವಕಾಶ ಕಲ್ಪಿಸಿದೆ.

ಆಂದೋಲನ ಡೆಸ್ಕ್

Recent Posts

ಒಂದು ಅಪೂರ್ವ, ಸಾರ್ಥಕ ಪ್ರಯತ್ನ

ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ…

7 mins ago

ಗಾಂಧೀಜಿಯವರನ್ನು ಮತ್ತೊಮ್ಮೆ ಓದೋಣ..

ರವಿ ಕೋಟೆ, ಸಂಪಾದಕ  ಗಾಂಧೀಜಿಯವರ ಬಗ್ಗೆ ಮಾತನಾಡುವವರು ಇಂದು ಬಹಳ ಮಂದಿ; ಅವರನ್ನು ಹೊಗಳುವವರೂ ಇದ್ದಾರೆ, ತೆಗಳುವವರೂ ಇದ್ದಾರೆ. ಆದರೆ,…

29 mins ago

ನೇಪಾಳ ಪ್ರವಾಹದಲ್ಲಿ ನಾಪತ್ತೆಯಾದ 213 ಭಾರತೀಯರು: ಮರಣ ಘೋಷಣೆ ಪ್ರಕ್ರಿಯೆ ಆರಂಭ

ಕಠ್ಮಂಡು: ನೇಪಾಳದ ಭೀಕರ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 213 ಭಾರತೀಯರನ್ನು ಕಾನೂನುಬದ್ಧವಾಗಿ ಮೃತಪಟ್ಟಿದ್ದಾರೆಂದು ಘೋಷಿಸುವ ಪ್ರಕ್ರಿಯೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ ಎಂದು…

1 day ago

ನ.30ಕ್ಕೆ ಲೋಕಸಭೆ, ಡಿ.2ಕ್ಕೆ ರಾಜ್ಯಸಭೆ ಕಲಾಪ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಯಾಗುತ್ತಾ?

ನವದೆಹಲಿ: ಸಂಸತ್ತಿನ ಉಭಯ ಸದನಗಳು ಮತ್ತೆ ಸಮಾವೇಶಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿದೆ. ನವೆಂಬರ್‌ 30ರ ಸೋಮವಾರ ಬೆಳಗ್ಗೆ ಲೋಕಸಭೆ…

1 day ago

ಹಾಸನದ ನಿಡುಡಿ ಬಳಿ ಹಾಡಹಗಲೇ ಜೋಡಿ ಚಿರತೆ ಪ್ರತ್ಯಕ್ಷ | ಗ್ರಾಮಸ್ಥರಲ್ಲಿ ಆತಂಕ

ಹಾಸನ: ಜನರು ಓಡಾಡುವ ರಸ್ತೆಯಲ್ಲೇ ಹಾಡಹಗಲು ಎರಡು ಚಿರತೆಗಳು ಕಾಣಿಸಿಕೊಂಡಿವೆ. ಈ ಘಟನೆ ನಡೆದದ್ದು ಹಾಸನ ತಾಲೂಕಿನ ನಿಡುಡಿ ಗ್ರಾಮದ…

1 day ago