ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ
ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ ಮತ್ತು ಹಬ್ಬಿಸುತ್ತಿರುವ ಕಾಲದಲ್ಲಿಯೇ ಈ ಪುಸ್ತಕ ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದವಾಗುತ್ತಲೇ ಇದೆ. ಪ್ರತಿ ವರ್ಷ ಹೊಸ ಆವೃತ್ತಿಗಳು ಬರುತ್ತಲೇ ಇವೆ.
ಲಕ್ಷ್ಮಣ್ ಗೋಲೆ ಪ್ರಕರಣ: ಲಕ್ಷ್ಮಣ ಗೋಲೆ ಮಹಾರಾಷ್ಟ್ರದ ಒಬ್ಬ ಯುವಕ. ತಾಯಿ ತೀರಿಕೊಂಡ ಮೇಲೆ ತಂದೆ ಇನ್ನೊಂದು ಮದುವೆಯಾದ ಎಂದು ತಂದೆಯೊಡನೆ ಜಗಳವಾಡಿಕೊಂಡು ಮುಂಬೈನ ಸ್ಲಂ ಸೇರುತ್ತಾನೆ. ಕೊಲೆ ಮತ್ತು ಅತ್ಯಾಚಾರ ಬಿಟ್ಟು ಎಲ್ಲ ಕ್ರಿಮಿನಲ್ ಕೆಲಸಗಳನ್ನೂ ಮಾಡುತ್ತಾನೆ. ಜೈಲಿಗೆ ಹೋಗುವುದು ರೂಢಿಯೇ ಆಗುತ್ತದೆ.
ಇಂತಹ ಒಂದು ಜೈಲುವಾಸದ ಸಮಯದಲ್ಲಿ ಆತನಿಗೆ ಜೈಲನ್ನು ಸಂದರ್ಶಿಸುವ ಸರ್ವೋದಯ ಕಾರ್ಯಕರ್ತರು ‘ನನ್ನ ಸತ್ಯಾನ್ವೇಷಣೆ’ಯ ಪ್ರತಿ ನೀಡುತ್ತಾರೆ. ಹೀಗೆ ಏನೇನೋ ಓದಲು ಯಾರ್ಯಾರೋ ಕೊಡುತ್ತಿರುತ್ತಾರೆ. ಹಾಗೆಂದು ಈತ ಕಾಲಕಳೆಯಲು ಓದಲು ಆರಂಭಿಸುತ್ತಾನೆ. ರಾತ್ರಿಯಿಡೀ ಓದುತ್ತಾನೆ. ಮತ್ತೆ ಮತ್ತೆ ಓದುತ್ತಾನೆ.
ತನ್ನ ಈವರೆಗಿನ ಬದುಕು ಅನ್ಯಾಯವಾಯಿತು. ಮುಂದಿನ ಬದುಕನ್ನು ಚೆನ್ನಾಗಿ ಬದುಕಲು ಸಾಧ್ಯ ಎಂದೆನಿಸಿ ನ್ಯಾಯಾಲಯದಲ್ಲಿ ಎಲ್ಲ ತಪ್ಪುಗಳನ್ನೂ ಒಪ್ಪಿಕೊಂಡು ತಾನು ಹೊಸ ಬದುಕು ಕಟ್ಟಿಕೊಳ್ಳುವುದಾಗಿ ನಿರ್ಧಾರ ಹೇಳುತ್ತಾನೆ. ಜೈಲು ಅವಧಿ ಮುಗಿದ ನಂತರ ಆತ ಸರ್ಕಾರದ ಅನುಮತಿ ಪಡೆದು ಎಲ್ಲ ಜೈಲುಗಳಿಗೂ ಹೋಗಿ ಅಲ್ಲಿ ಕೈದಿಗಳೊಂದಿಗೆ ಸಂವಾದ ಮಾಡುತ್ತಾನೆ. ಆತ ಮದುವೆಯಾಗುತ್ತಾನೆ. ಪತ್ನಿ, ನೀನು ಈ ಕೆಲಸ ಮಾಡು, ನಾನು ಮನೆ ನಿರ್ವಹಿಸುತ್ತೇನೆ ಎಂದು ಭರವಸೆ ಕೊಡುತ್ತಾಳೆ. ಅಪರಾಧ ಮಾಡಿ ಜೈಲಿಗೆ ಹೋದರೆ ಅಪರಾಧ ಮಾಡಿದವನಿಗೆ ಆಗುವ ಶಿಕ್ಷೆಗಿಂತ ಆತನ ಕುಟುಂಬದ ಮೇಲೆ ಆಗುವ ಪರಿಣಾಮ ಘೋರ ಎಂಬುದು ಆತನ ಅನುಭವ ಜನ್ಯ ಮಾತು.
ಆತ ತನ್ನ ಕಾರ್ಯಕ್ರಮದ ಅಂಗವಾಗಿ ಚಾಮರಾಜನಗರಕ್ಕೂ ಬಂದಿದ್ದ. ಅಲ್ಲಿ ಅವನ ಹಿಂದಿ ಭಾಷಣವನ್ನು ನಾನು ಕನ್ನಡಿಸಿದೆ. ಆನಂತರ ವಿದುರಾಶ್ವತ್ತದಲ್ಲಿ ನಡೆದ ಸರ್ವೋದಯ ಮೇಳಕ್ಕೂ ಆತ ಬಂದಿದ್ದ. ಆತನ ಜೀವನದ ಕತೆ ಸಣ್ಣ ಪುಸ್ತಿಕೆಯ ರೂಪದಲ್ಲಿ ಕನ್ನಡಕ್ಕೂ ಬಂದಿದೆ. (ಅನುವಾದ: ಡಾ.ಹೆಚ್.ಎಸ್.ಸುರೇಶ್) ಇಂತಹ ಪುಸ್ತಕದ ನೂರು ವರ್ಷದ ಆಚರಣೆಯನ್ನು ಗಾಂಧಿ ಸ್ಮಾರಕ ನಿಧಿ, ಮೈಸೂರು ವಿ.ವಿ.ಯ ಗಾಂಧಿ ಭವನ ಮತ್ತು ಮೈಸೂರಿನ ಜನಪ್ರಿಯ ಪತ್ರಿಕೆ ‘ಆಂದೋಲನ’ ಒಟ್ಟಿಗೆ ಸೇರಿ ಸಾರ್ಥಕ ಕೆಲಸ ಮಾಡಿದೆ.
೨೨ ಶನಿ ವಾರ ‘ಆಂದೋಲನ’ ಒಂದು ಪುಟ ಮೀಸಲಿಟ್ಟು ಮಕ್ಕಳ, ದೊಡ್ಡವರ ಬರಹಗಳನ್ನು, ಚಿತ್ರಗಳನ್ನು ಪ್ರಕಟಿ ಸುವ ಮೂಲಕ ಓದುಗರಿಗೆ ಅನುಭವವಾಗಿಸಿದೆ. ಮಕ್ಕಳನ್ನು ಮತ್ತು ಯುವಕರನ್ನು ಕಣ್ಣ ಮುಂದೆ ಇರಿಸಿಕೊಂಡು ಈ ಕೆಲಸ ನಡೆದಿರುವುದು ಬಹುಮುಖ್ಯವಾದ ಸಂಗತಿ. ಇದು ಆರಂಭ ಎಂದೇ ಭಾವಿಸಬೇಕು. ಮುಂದೆ ನಿತ್ಯ ನಿರಂತರ ಇಂತಹ ಕೆಲಸ ಬೇರೆ ಬೇರೆ ರೀತಿ ಆಗಬೇಕಾಗಿದೆ. ಗಾಂಧೀಯವರ ಆಲೋಚನೆ ಮತ್ತು ಇತಿಹಾಸ ಸೂಕ್ತ ಪರಿಪ್ರೇಕ್ಷ್ಯದಲ್ಲಿ ಯುವಕರನ್ನು ತಲುಪಬೇಕು. ಇದೊಂದು ಮೌನಕ್ರಾಂತಿಯಾದೀತು.
ಕೆ.ವಿ.ಸುರೇಶ್, ರೀಡರ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಗಾಂಧಿ ಅಭಿಯಾನ ಅರಿವಿನಯಾನ ವಿಷಯ ಕುರಿತ ‘ಆಂದೋಲನ’ ದಿನಪತ್ರಿಕೆಯಸರಣಿ ಲೇಖನಗಳು, ಮುಗ್ಧ…
ಸದಾನಂದ ಆರ್., ಆಂಗ್ಲ ಭಾಷಾ ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಹುಣಸೂರು ಇತ್ತೀಚೆಗೆ ದೆಹಲಿಯ ಹಾದಿ ಬೀದಿಗಳಲ್ಲಿ ಜಿರಲೆಗಳು…
ರವಿ ಕೋಟೆ, ಸಂಪಾದಕ ಗಾಂಧೀಜಿಯವರ ಬಗ್ಗೆ ಮಾತನಾಡುವವರು ಇಂದು ಬಹಳ ಮಂದಿ; ಅವರನ್ನು ಹೊಗಳುವವರೂ ಇದ್ದಾರೆ, ತೆಗಳುವವರೂ ಇದ್ದಾರೆ. ಆದರೆ,…
ಕಠ್ಮಂಡು: ನೇಪಾಳದ ಭೀಕರ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 213 ಭಾರತೀಯರನ್ನು ಕಾನೂನುಬದ್ಧವಾಗಿ ಮೃತಪಟ್ಟಿದ್ದಾರೆಂದು ಘೋಷಿಸುವ ಪ್ರಕ್ರಿಯೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ ಎಂದು…
ನವದೆಹಲಿ: ಸಂಸತ್ತಿನ ಉಭಯ ಸದನಗಳು ಮತ್ತೆ ಸಮಾವೇಶಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿದೆ. ನವೆಂಬರ್ 30ರ ಸೋಮವಾರ ಬೆಳಗ್ಗೆ ಲೋಕಸಭೆ…