ಕೆ.ವಿ.ಸುರೇಶ್, ರೀಡರ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು
ಗಾಂಧಿ ಅಭಿಯಾನ ಅರಿವಿನಯಾನ ವಿಷಯ ಕುರಿತ ‘ಆಂದೋಲನ’ ದಿನಪತ್ರಿಕೆಯಸರಣಿ ಲೇಖನಗಳು, ಮುಗ್ಧ ಮಕ್ಕಳ ಅಂತರಂಗದ ಅನಿಸಿಕೆಗಳು ಓದುಗರನ್ನು ಗಾಢವಾಗಿ ಪ್ರಭಾವಿಸಿವೆ.
ಪತ್ರಿಕೆಯೊಂದರ ಉತ್ತರದಾಯಿತ್ವ ಇಂತಹ ವಿಭಿನ್ನ ಪ್ರಯೋಗಗಳಲ್ಲಿ ನೆಲೆಗೊಂಡಿದೆ. ಜಗತ್ತಿನ ಬಹಳಷ್ಟು ಮುತ್ಸದ್ಧಿಗಳು ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ತತ್ವಗಳ ಕಡೆಗೆ ತಿರುಗುತ್ತಾರೆ. ಅವರು ಆಚರಿಸಿ ತೋರಿಸಿದ ಮಾರ್ಗದಲ್ಲಿ ನಡೆದು ಪರಿಹಾರ, ಶಾಂತಿ ಕಂಡುಕೊಂಡಿದ್ದಾರೆ.
ಇಂದಿನ ಯುವ ಪೀಳಿಗೆಗೆ ಗಾಂಧಿ ವಿಚಾರಧಾರೆ ಸಂಜೀವಿನಿ ಎಂಬುದನ್ನು ಗಾಂಧಿ ಅಭಿಯಾನ ಅರಿವಿನ ಯಾನ ಕಾರ್ಯಕ್ರಮ ಅಕ್ಷರಶಃ ಸಾದರಪಡಿಸಿದೆ.
ಮ್ಯಾನ್ಮಾರ್‌ನ ಸ್ವಾತಂತ್ರ್ಯ ಹೋರಾಟಗಾರ್ತಿ ಆಂಗ್‌ಸಾನ್‌ಸೂಕಿ ೨೦೧೨ರಲ್ಲಿ ನ್ಯೂಯಾರ್ಕ್‌ನ ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಮಾತಾಡುತ್ತಾ, ಗಾಂಧಿಜಿ ನನ್ನ ಬದುಕಿನ ದೊಡ್ಡ ಪ್ರೇರಣೆ, ಮಕ್ಕಳು ಅವರ ಕೃತಿಗಳನ್ನು ಓದಬೇಕು ಎಂದಿದ್ದರು. ಸೂಕಿ ತಮ್ಮ ಚಳವಳಿಯಲ್ಲಿ ಗಾಂಧಿಜಿಯವರ ಮಾದರಿಗಳನ್ನು ಅನುಸರಿಸಿದ್ದರು.
ಸ್ಟೋರಿ ಆಫ್ ಸಿವಿಲೈಜೇಷನ್ ಬರೆದಿರುವ ಜಗತ್ಪ್ರಸಿದ್ಧ ಇತಿಹಾಸಕಾರ ವಿಲ್ ಡ್ಯೂರೆಂಟ್ ಗಾಂಧಿಜಿಯವರ ಬಗ್ಗೆ ಬರೆದಿರುವುದು ಹೀಗೆ ಬುದ್ಧನ ಬಳಿಕ ಬೇರೆ ಯಾವುದೇ ವ್ಯಕ್ತಿಯನ್ನು ಭಾರತ ಹೀಗೆ ಗೌರವಿಸಲಿಲ್ಲ. ಮುಂದಿನ ತಲೆಮಾರುಗಳಿಗೆ ಗಾಂಧಿ ಮಾದರಿ ನಮ್ಮ ಕಾಲದ ಎಲ್ಲ ರಾಜಕೀಯ ವ್ಯಕ್ತಿಗಳಿಗಿಂತ ಗಾಂಧಿಜಿಯವರ ಚಿಂತನೆಗಳು ಹೆಚ್ಚು ಪ್ರಖರವಾಗಿದ್ದವು ಎಂದು. ಇದು ನಿಜಾರ್ಥದ ಗಾಂಧಿ ಪ್ರಭಾವಳಿಯಾಗಿದೆ.
ಕನಿಷ್ಠ ಆರು ಮಂದಿ ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತರು ಗಾಂಧಿಯವರನ್ನು ತಮ್ಮ ಸ್ಪೂರ್ತಿಯಾಗಿ ಉಲ್ಲೇಖಿಸಿದ್ದಾರೆ. ದಕ್ಷಿಣ ಆಫ್ರಿಕಾವನ್ನು ವಸಾಹತು ಶಾಹಿಯಿಂದ ಮುಕ್ತಗೊಳಿಸುವ ಹೋರಾಟದ ನೇತೃತ್ವ ವಹಿಸಿದ್ದ ನಾಯಕ ನೆಲ್ಸನ್ ಮಂಡೇಲಾ ಗಾಂಧೀಜಿ ತಮ್ಮ ದೊಡ್ಡ ಗುರು ಎಂದು ಒಪ್ಪಿದ್ದಾರೆ. ಅವರ ಚಿಂತನೆಯ ಬಲದಿಂದಲೇ ನಾವು ಶೋಷಣೆಯಿಂದ ಮುಕ್ತರಾಗಿದ್ದೇವೆ ಎಂದು ಹೇಳಿದ್ದರು. ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಗಳನ್ನು ಬಿತ್ತುವ ‘ಆಂದೋಲನ’ ಪತ್ರಿಕೆಯ ಈ ಪ್ರಯತ್ನ ಅಭಿನಂದನೀಯ.
ಕೆ.ಪಿ.ಸುರೇಶ್ ರಾಷ್ಟ್ರಪಿತ ಗಾಂಧಿ ಎಂಬ ಅಸ್ತಿತ್ವ ಗಾಳಿಯಷ್ಟೇ ಸಲೀಸು ಎಂಬ ವಾತಾವರಣ ಇತ್ತು. ಆದರೆ ಕಳೆದೊಂದು ದಶಕದಿಂದ ಗಾಂಧಿಯ ಚಾರಿತ್ರ್ಯಹನನ, ಅಪಮಾಹಿತಿಯ…
ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ…
ಸದಾನಂದ ಆರ್., ಆಂಗ್ಲ ಭಾಷಾ ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಹುಣಸೂರು ಇತ್ತೀಚೆಗೆ ದೆಹಲಿಯ ಹಾದಿ ಬೀದಿಗಳಲ್ಲಿ ಜಿರಲೆಗಳು…
ರವಿ ಕೋಟೆ, ಸಂಪಾದಕ ಗಾಂಧೀಜಿಯವರ ಬಗ್ಗೆ ಮಾತನಾಡುವವರು ಇಂದು ಬಹಳ ಮಂದಿ; ಅವರನ್ನು ಹೊಗಳುವವರೂ ಇದ್ದಾರೆ, ತೆಗಳುವವರೂ ಇದ್ದಾರೆ. ಆದರೆ,…
ಕಠ್ಮಂಡು: ನೇಪಾಳದ ಭೀಕರ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 213 ಭಾರತೀಯರನ್ನು ಕಾನೂನುಬದ್ಧವಾಗಿ ಮೃತಪಟ್ಟಿದ್ದಾರೆಂದು ಘೋಷಿಸುವ ಪ್ರಕ್ರಿಯೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ ಎಂದು…