Andolana originals

ನಂಜನಗೂಡಿನ ರಸಬಾಳೆ; ಬಂತು ಜೀವಕಳೆ

10 ಹೆಕ್ಟೇರ್‌ನಿಂದ 79.80 ಹೆಕ್ಟೇರ್‌ ಪ್ರದೇಶಕ್ಕೆ ವ್ಯಾಪಿಸಿದ ಬಾಳೆ ಬೆಳೆ

-ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ದಶಕಗಳ ಹಿಂದೆ ಶಾಲಾ ಪಠ್ಯದಲ್ಲಿ (ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತಳೆ…) ಸ್ಥಾನ ಪಡೆದಿದ್ದ ರಸಬಾಳೆ ನಂಜನಗೂಡು ತಾಲ್ಲೂಕಿನ ಪಾರಂಪರಿಕ, ಘನತೆಯ ಬೆಳೆಯಾಗಿತ್ತು. ಕಾಲ ಕ್ರಮೇಣ ಅವಸಾನದ ಅಂಚಿಗೆ ತಲುಪಿತ್ತು. ಈಗ ರಸಬಾಳೆಗೆ ಮತ್ತೆ ಮಾನ್ಯತೆ ಸಿಗುತ್ತಿದ್ದು, ಇತ್ತೀಚೆಗೆ ರಸಬಾಳೆ ಬೆಳೆಯುವ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಾರೆ. ದಶಕಗಳಿಂದಲೂ ರಸಬಾಳೆ ಬೆಳೆಯುವ ರೈತರ ಸಂಖ್ಯೆ ಕ್ಷೀಣಿಸಿ ಇನ್ನೇನು ವಿಶಿಷ್ಟ ಪಾರಂಪರಿಕ ಬೆಳೆ ಕಣ್ಮರೆಯಾಗಿ ಬಿಡುತ್ತದೆ ಎಂದುಕೊಂಡಿದ್ದ ಸಂದರ್ಭದಲ್ಲಿ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದಿದೆ.

2019-20ರ ವೇಳೆಗೆ ನಂಜನಗೂಡು ತಾಲ್ಲೂಕಿನಲ್ಲಿ ಕೇವಲ 10 ಹೆಕ್ಟೇರ್ ಪ್ರದೇಶದಲ್ಲಿ15 ಮಂದಿ ರೈತರು ಮಾತ್ರ ರಸಬಾಳೆ ಬೆಳೆಯುತ್ತಿದ್ದರು. ಆದರೆ, 2024-25ನೇ ಸಾಲಿನಲ್ಲಿ 164 ರೈತರು 79.80 ಹೆಕ್ಟೇರ್ ಪ್ರದೇಶದಲ್ಲಿ ರಸಬಾಳೆ ಬೆಳೆಯುತ್ತಿದ್ದು, ಜೀವಕಳೆ ಬಂದಿದೆ.

ರಸಬಾಳೆ ಬೆಳೆಯುವ ವಾತಾವರಣವೇ ಇಲ್ಲ. ಹೀಗಾಗಿ ವಿಶ್ವ ವಿಖ್ಯಾತ ರಸಬಾಳೆ ತಳಿಯನ್ನು ಉಳಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಇಂತಹ ಕಠಿಣ ಸಮಯದಲ್ಲಿ ಬೆಳೆಯನ್ನುಉತ್ತೇಜಿಸಲು ರಾಜ್ಯ ಸರ್ಕಾರ ವಿಶೇಷ ಕಾಳಜಿ ತೋರಿತು. ಇದರ  ಫಲವಾಗಿ ರಸಬಾಳೆಯು ಹಂತ ಹಂತವಾಗಿ ಸಂರಕ್ಷಣೆಯ ಪ್ರದೇಶ ವಿಸ್ತೀರ್ಣ, ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಗೊಂಡಿದೆ.

ದಶಕಗಳಿಂದ 10 ಎಕರೆಗೆ ಸೀಮಿತವಾಗಿದ್ದ ಬೆಳೆಯನ್ನು ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ, ಕೋಡಿನರಸೀಪುರ, ವೀರೇ ದೇವನಪುರ, ತಾಂಡವಪುರ, ಹಗಿನಾವಾಳು, ಹಳೇಪುರ, ಕೂಗಲೂರು, ಕುರಹಟ್ಟಿ, ದೇವೀ ರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಚಿನ್ನಂಬಳ್ಳಿ, ಚುಂಚನಹಳ್ಳಿ ಮತ್ತು ಮಾಡ್ರಹಳ್ಳಿ ಗ್ರಾಮಗಳ 79.80 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ.

ತೋಟಗಾರಿಕೆ ಇಲಾಖೆ, ಇಲವಾಲದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯ, ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನೊಳಗೊಂಡ ತಾಂತ್ರಿಕ ಸಮಿತಿಯ ಸೂಚನೆಗಳಂತೆ ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ಪನಾಮಾ ರೋಗ ಹತೋಟಿ ಕುರಿತು ಸಲಹೆ ಮಾರ್ಗದರ್ಶನ ನೀಡಲಾಗುತ್ತಿದೆ.

ರಸಬಾಳೆ ಬೆಳೆಯುವ ಪ್ರದೇಶ ವಿಸ್ತರಣೆಯನ್ನು ಪ್ರೋತ್ಸಾಹಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪ್ರತಿ ಅರ್ಧ ಎಕರೆಗೆ ಶೇ.90 ರಂತೆ 67,311 ಹಾಗೂ ಸಾಮಾನ್ಯ ರೈತರಿಗೆ ಶೇ.75 ರಂತೆ 56,093 ರೂ. ಸಹಾಯ ಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 49 ರೈತರಿಗೆ 9.08 ಹೆ.ಪ್ರದೇಶ ವಿಸ್ತರಣೆಗಾಗಿ 16.83 ಲಕ್ಷ ರೂ. ಸಹಾಯ ಧನ ನೀಡಿದ ಪರಿಣಾಮ ರಸಬಾಳೆ ಬಗ್ಗೆ ರೈತರು ಒಲವು ತೋರಿದ್ದಾರೆ.

ಮೈಸೂರು ಸಂಸ್ಥಾನದ ಕಾಲದಿಂದಲೂ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ವೀಳ್ಯದೆಲೆ ಇಲ್ಲಿನ ಜನರಲ್ಲಿ ಹಾಸು ಹೊಕ್ಕಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅರಮನೆಗೆ ಭೇಟಿ ನೀಡುವ ಗಣ್ಯರು ಹಾಗೂ ವಿದೇಶಿ ಅತಿಥಿಗಳಿಗೆ ರಸಬಾಳೆ, ಅಂಜೂರ ಹಣ್ಣುಗಳನ್ನು ನೀಡಲಾಗುತ್ತಿತ್ತು. ಎರಡನೇ ಬಾರಿಗೆ ಅರಮನೆಗೆ ಬಂದವರು ಮರೆಯದೇ ಈ ಹಣ್ಣುಗಳನ್ನು ಕೇಳಿ ಪಡೆಯುತ್ತಿದ್ದರು. ನಂಜನಗೂಡಿಗೆ ಆಗಮಿಸಿದ ಅತಿಥಿಗಳಿಗೆ ನೀಡುವ ಆತಿಥ್ಯದಲ್ಲಿ ಈ ರಸಬಾಳೆ ಹಣ್ಣಿಗೂ ದೊಡ್ಡ ಸ್ಥಾನ ಇತ್ತು. ಈಗ ಅದೇ ಪರಂಪರೆ ಮುಂದುವರಿಯಲಿದೆ ಎಂಬುದು ರಸಬಾಳೆ ಬೆಳೆಗಾರರ ವಿಶ್ವಾಸವಾಗಿದೆ.

-ಸಿ.ಚಂದ್ರು, ಹಿರಿಯ ಸಹಾಯಕ ನಿರ್ದೇಶಕ, ನಂಜನಗೂಡು ತೋಟಗಾರಿಕೆ ಇಲಾಖೆ.

ಶಾಸಕ ದರ್ಶನ್ ಧ್ರುವನಾರಾಯಣ ಅವರು ಹೆಚ್ಚಿನ ಒತ್ತು ನೀಡಿ ಬಜೆಟ್‌ನಲ್ಲಿ ರಸಬಾಳೆ ಬೆಳೆಗೆ ಅನುದಾನ ಮೀಸಲಿಡಲು ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳೆಗೆ ಸವಲತ್ತು ನೀಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಜಾಗೃತಿ ಮೂಡಿಸಿ ಸಬ್ಸಿಡಿ ಹಣದ ಬಗ್ಗೆ ಮಾಹಿತಿ ನೀಡಿದ್ದೆವು. ಹೀಗಾಗಿ ರಸಬಾಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ.

-ಕುರಹಟ್ಟಿ ನಂಜುಂಡಸ್ವಾಮಿ, ರಸಬಾಳೆ ರೈತ.

ಸರ್ಕಾರದ ಪ್ರೋತ್ಸಾಹ ಧನ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ರಸಬಾಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ನನಗೆ ಈ ಬಾರಿ ಒಳ್ಳೆಯ ಇಳುವರಿ ಬಂದಿದೆ. ರಸಬಾಳೆ ಬೆಳೆಯ ಉತ್ತೇಜನಕ್ಕೆ ತಾಲ್ಲೂಕು ತೋಟಗಾರಿಕೆಗೆ ಒತ್ತು ನೀಡಿ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವ ಪರಿಣಾಮ ರೈತರ ಸಂಖ್ಯೆ ಅಧಿಕವಾಗಿದೆ.

 

ಆಂದೋಲನ ಡೆಸ್ಕ್

Recent Posts

ಜನಗಣತಿ ಮಾಡುವ ವೇಳೆಯೇ ಹೃದಯಾಘಾತ: ಶಿಕ್ಷಕ ಸಾವು

ಕೆ.ಆರ್.ನಗರ: ಜನಗಣತಿ ಮಾಡುವ ವೇಳೆ ಸರ್ಕಾರಿ ಶಾಲೆಯ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ…

28 mins ago

ಓದುಗರ ಪತ್ರ: ಪಂಚ.. ತಂತ್ರ !

ಪಂಚ.. ತಂತ್ರ ! ಚುನಾವಣೆಯಲ್ಲಿ ಗೆದ್ದವರಿಗೆ ಸಿಎಂ ಚಿಂತೆ, ಸೋತವರಿಗೆ ಇವಿಎಂನದೇ ಚಿಂತೆ ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

2 hours ago

ಓದುಗರ ಪತ್ರ: ಮರದ ಕೊಂಬೆಯನ್ನು ತೆರವುಗೊಳಿಸಿ

ಮೈಸೂರಿನ ಕುವೆಂಪುನಗರದ ‘ಎಂ’ ಬ್ಲಾಕ್‌ನ ನೃಪತುಂಗ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಹೊಸ…

2 hours ago

ಓದುಗರ ಪತ್ರ: ತಮಿಳುನಾಡಿನಲ್ಲಿ ವಿಜಯ್ ವಿಜಯ

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ೨೩೪ ಕ್ಷೇತ್ರಗಳ ಪೈಕಿ ೧೦೮ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ…

2 hours ago

ಓದುಗರ ಪತ್ರ: ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಪರ್ವ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು ೨೯೪ ಸ್ಥಾನಗಳ ಪೈಕಿ…

2 hours ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ: ಗಾಲಿ ಕುರ್ಚಿಯಿಂದ ಚಿಮ್ಮಿದ ಮೈಂಡ್‌ಸೆಟ್ ಕೋಚ್ ಜೈಕಿಶನ್!

ಲಕ್ಷಾಂತರ ಜನರಿಗೆ ಮೈಂಡ್ ಸೆಟ್ ಕೋಚ್ ಆಗಿ ಮಾರ್ಗದರ್ಶ ಗುಜರಾತಿನ ಅಹ್ಮದ್‌ನಗರದ ೩೮ ವರ್ಷ ಪ್ರಾಯದ ಜೈಕಿಶನ್ ಶರ್ಮಾ ಒಬ್ಬ…

5 hours ago