Andolana originals

ಖಾಸಗಿ ನಿವೇಶನಗಳ ಖಾತೆ ಪ್ರಕ್ರಿಯೆ ಜೋರು

  • ಮುಡಾದಿಂದ ಹಸ್ತಾಂತರಗೊಂಡ ಬಡಾವಣೆಗಳ ನಿವೇಶನದಾರರಿಂದ ಅರ್ಜಿ
  • ಅಕ್ರಮ, ಅವ್ಯವಹಾರಕ್ಕೆ ದಾರಿಯಾಗದಂತೆ ದಾಖಲೆಗಳ ಮೇಲೆ ನಿಗಾ
  • ಮುಡಾದಿಂದ ಇನ್ನೂ ೨೫ ಸಾವಿರ ಖಾಸಗಿ ನಿವೇಶನಗಳ ದಾಖಲೆ ಸಲ್ಲಿಕೆ ಮುಂದುವರಿಕೆ

ಕೆ. ಬಿ. ರಮೇಶನಾಯಕ
ಮೈಸೂರು: ಮುಡಾದಲ್ಲಿ ನಿವೇಶನದಾರರಿಗೆ ಖಾತೆ ಮಾಡಿಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಸ್ಥಳೀಯ ಸಂಸ್ಥೆಗಳಿಗೆ ಖಾಸಗಿ ಬಡಾವಣೆಗಳನ್ನು ಹಸ್ತಾಂತರ ಮಾಡಿದ ಮೇಲೆ ಮೈಸೂರು ನಗರಪಾಲಿಕೆ ಸೇರಿದಂತೆ ನಾಲ್ಕು ಪಪಂ, ಒಂದು ನಗರಸಭೆಯಲ್ಲಿ ಖಾತೆ ಪ್ರಕ್ರಿಯೆ ಜೋರಾಗಿದ್ದು, ಮೂರ‍್ನಾಲ್ಕು ವರ್ಷಗಳಿಂದ ಆದಾಯ ಇಲ್ಲದೆ ಸೊರಗಿದ್ದ ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ದಾರಿಯಾಗಿದೆ.

ಹೂಟಗಳ್ಳಿ ನಗರಸಭೆಯಾದ ಮೇಲೆ ಇದುವರೆಗೂ ೫೦ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ನಾಲ್ಕು ಪಟ್ಟಣ ಪಂಚಾಯಿತಿಗಳಲ್ಲಿ ಕನಿಷ್ಠ ೨೫ ಕೋಟಿ ರೂ. ನಿಂದ ೪೦ ಕೋಟಿ ರೂ. ಗಳವರೆಗೆ ಆದಾಯ ಸಂಗ್ರಹವಾಗಿದೆ. ಈಗ ಮನೆಗಳು ಮತ್ತು ನಿವೇಶನಗಳಿಗೆ ಖಾತೆ ಪ್ರಕ್ರಿಯೆ ಆರಂಭಿಸಿರುವುದರಿಂದ ಮತ್ತಷ್ಟು ಆದಾಯದ ನಿರೀಕ್ಷೆ ಹೊಂದಲಾಗಿದೆ. ಮೈಸೂರು ನಗರದ ಹೊರವಲಯದ ಗ್ರಾಪಂಗಳನ್ನು ಮೇಲ್ದರ್ಜೇಗೇರಿಸಿ ಬೋಗಾದಿ, ಕಡಕೊಳ, ರಮ್ಮನಹಳ್ಳಿ, ಶ್ರೀರಾಂಪುರವನ್ನು ಪಟ್ಟಣ ಪಂಚಾಯಿತಿ, ಹೂಟಗಳ್ಳಿಯನ್ನು ನಗರಸಭೆಯನ್ನಾಗಿ ರಚಿಸಿ ಆಡಳಿತಾಽಕಾರಿಗಳನ್ನು ನೇಮಕ ಮಾಡಲಾಗಿತ್ತು.

ಪ್ರಾರಂಭದಲ್ಲಿ ಮೂಲಸೌಕರ್ಯ ಒದಗಿಸಲು ಅನು ದಾನದ ಕೊರತೆ ಎದುರಿಸುತ್ತಿದ್ದ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ, ನೀರಿನ ತೆರಿಗೆ ಮೊದಲಾದ ಮೂಲಗಳಿಂದ ಆದಾಯ ಸಂಗ್ರಹಿಸಿಕೊಂಡು ನಿರ್ವಹಣೆ ಮಾಡುವಲ್ಲಿ ಸುಸ್ತಾಗಿದ್ದವು. ಇದರ ನಡುವೆ ಸರ್ಕಾರ ಒಂದಿಷ್ಟು ಅನುದಾನದಿಂದ ನೀಡಿದ್ದರಿಂದ ಅಗತ್ಯ ಸೌಕರ್ಯಗಳನ್ನು ಒದಗಿಸುವುದಕ್ಕೆ ಸೀಮಿತವಾಗಿತ್ತು. ಆದರೆ, ಮುಡಾ ಹಗರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಡಾ ಆಯುಕ್ತ ಎ. ಎನ್. ರಘುನಂದನ್ ಅವರು ಖಾತೆ ಮಾಡುವ ಪ್ರಕ್ರಿಯೆಗೆ ಬ್ರೇಕ್ ಹಾಕಿ, ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಿದ್ದರು.

೭೫೦ ಬಡಾವಣೆಗಳ ನಿವೇಶನಗಳಿಗೆ ಖಾತೆ: ಮುಡಾ ದಿಂದ ಅನುಮೋದನೆಗೊಂಡಿರುವ ೭೫೦ ಖಾಸಗಿ ಬಡಾವಣೆಗಳನ್ನು ಹಸ್ತಾಂತರಿಸುತ್ತಿದ್ದಂತೆ ಅರ್ಜಿದಾರರಿಗೆ ಖಾತೆ ಮಾಡಿಕೊಡುವ ಕೆಲಸ ನಡೆಯುತ್ತಿದೆ. ಅಂದಾಜಿನ ಪ್ರಕಾರ ಈತನಕ ೨೦ ಸಾವಿರ ನಿವೇಶನಗಳ ದಾಖಲೆಗಳನ್ನು ಬೋಗಾದಿ, ಕಡಕೊಳ, ರಮ್ಮನಹಳ್ಳಿ, ಶ್ರೀರಾಂಪುರವನ್ನು ಪಟ್ಟಣ ಪಂಚಾಯಿತಿ, ಹೂಟಗಳ್ಳಿ ನಗರಸಭೆಗೆ ಸಲ್ಲಿಸಿದ್ದು, ಬಾಕಿ ೨೫ ಸಾವಿರ ದಾಖಲೆಗಳನ್ನು ನಿತ್ಯ ರವಾನಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗಿದೆ.

ದಿನಕ್ಕೆ ೪೦ ಖಾತೆ: ಖಾತೆಗಾಗಿ ಪ್ರತಿನಿತ್ಯ ನೂರಾರು ಅರ್ಜಿಗಳು ಸಲ್ಲಿಕೆಯಾದರೂ ದಿನಕ್ಕೆ ೪೦ ಖಾತೆಗಳನ್ನು ಮಾತ್ರ ಮಾಡಲು ಶಕ್ತವಾಗಿದೆ. -ಲಾನುಭವಿಯು ಕೊಡುವ ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಬೇಕು. ಹಾಗಾಗಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶ್ರೀರಾಂಪುರ ಪಪಂ ಮುಖ್ಯಾಽಕಾರಿ ಸುರೇಶ್.

ಫಲಾನುಭವಿಗಳು ಅರ್ಜಿ ಸಲ್ಲಿಸಿದ ತಕ್ಷಣ ಸಿಬ್ಬಂದಿ ಮೇಲೆ ಒತ್ತಡ ಹೇರುತ್ತಾರೆ. ಕಾಯಲು ಸಿದ್ಧವಿಲ್ಲ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ದಾಖಲೆಗಳತ್ತ ನಿಗಾ: ಮುಡಾದಲ್ಲಿ ನಡೆದಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸ್ಥಳೀಯ ಸಂಸ್ಥೆಗಳು ಅಕ್ರಮಕ್ಕೆ ದಾರಿಯಾಗದಂತೆ ನಿಗಾ ಇಟ್ಟಿದ್ದಾರೆ. ಖಾತೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನ ಪ್ರತಿಯೊಂದು ದಾಖಲೆಯೂ ನಿಖರವಾಗಿದ್ದರೆ ಮಾತ್ರ ಖಾತೆ ಮಾಡಿಕೊಡಲಾಗುತ್ತದೆ. ಇದರಿಂದಾಗಿ -ಲಾನುಭವಿ ಹೆಸರಿನಲ್ಲಿ ಮಧ್ಯವರ್ತಿಗಳ ಹಾವಳಿಗೂ ಕಡಿವಾಣಬಿದ್ದಿದೆ.

ಖಾತೆಗೆ ದಿನಕ್ಕೆ ನೂರು ಅರ್ಜಿಗಳು ಬಂದರೂ ನಾವು ೫೦ ಖಾತೆ ಮಾಡಲು ಟಾರ್ಗೆಟ್ ಇಟ್ಟುಕೊಂಡಿದ್ದೇವೆ. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದಕ್ಕೆ ಸಮಯ ಹಿಡಿಯಲಿದೆ. ಖಾಸಗಿ ಬಡಾವಣೆಗಳ ಹಸ್ತಾಂತರವಾದ ಮೇಲೆ ವರ್ಕ್‌ಲೋಡ್ ಜಾಸ್ತಿಯಾಗಿದೆ. -ಸುರೇಶ್, ಮುಖ್ಯಾಧಿಕಾರಿ, ಶ್ರೀರಾಂಪುರ ಪಪಂ.

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

11 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

11 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

11 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

12 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

12 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

18 hours ago