Andolana originals

ಚಾರಣಕ್ಕೆ ಹೊಸ ಮಾರ್ಗಸೂಚಿ; ಮೆಚ್ಚುಗೆ

ನವೀನ್ ಡಿಸೋಜ

ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ

ಮಡಿಕೇರಿ: ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ಚಾರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲೆಗೆ ಸಂಬಂಽಸಿದಂತೆ ಈ ಬಗ್ಗೆ ಚಾರಣಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಕೃತಿ ಸಂಪತ್ತು ಉಳಿವಿಗೆ ಮತ್ತು ಚಾರಣದ ನಿಜವಾದ ಸವಿಯನ್ನು ಸವಿಯಲು ಇಂತಹ ಮಾರ್ಗಸೂಚಿ ಅನಿವಾರ್ಯವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಹಿಂದೆ ಹಲವು ಟ್ರಕ್ಕಿಂಗ್ ಪ್ರದೇಶ ಗಳಿದ್ದವು. ಆದರೆ, ಈಗ ಅಧಿಕೃತವಾಗಿ ೬-೭ ಪ್ರದೇಶಗಳು ಮಾತ್ರ ಇವೆ. ಅಲ್ಲಿಗೆ ವಾರಂತ್ಯದಲ್ಲಿ ಒಂದೇ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಲ್ಲದೆ, ಪ್ರಮುಖ ಟ್ರಕ್ಕಿಂಗ್ ಪಾಯಿಂಟ್ ತಡಿಯಂಡ ಮೋಳ್ ಸೇರಿದಂತೆ ಕೆಲವೆಡೆ ಮಾನವ ಸಂಚಾರದಿಂದ ಹಸಿರು ಮಾಯವಾಗಿದ್ದು, ರಸ್ತೆಗಳ ದರ್ಶನವಾಗುತ್ತಿದೆ. ಮುಖ್ಯವಾಗಿ ಚಾರಣಕ್ಕೆ ತೆರಳಬೇಕಾದರೆ ಸೂಕ್ತ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ತಲೆಗೆ ಕ್ಯಾಪ್, ನೀರು, ಆಹಾರ ಪದಾರ್ಥ ಇರುವ ಬ್ಯಾಗ್ ಕೊಂಡೊಯ್ಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕೊಂಡೊಯ್ಯುವ ವಸ್ತುಗಳಿಂದ ಅರಣ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಿದೆ. ಆದರೆ, ಜಿಲ್ಲೆಗೆ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಯಾವುದೇ ಸಿದ್ಧತೆ ಇಲ್ಲದೆಯೂ ಚಾರಣ ತಾಣಗಳಿಗೆ ತೆರಳಿ ತಾವು ಸಮಸ್ಯೆಗೊಳಗಾಗುವುದಲ್ಲದೆ, ಸ್ಥಳೀಯರಿಗೂ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ಚಾರಣಕ್ಕೆ ತೆರಳುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಆವಾಸ ಸ್ಥಾನಕ್ಕೆ ತೆರಳುತ್ತಿದ್ದೇವೆ ಎಂಬ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ. ಯಾವುದೇ ಶಬ್ದ ಮಾಡದೆ ಅಲ್ಲಿನ ರಮಣೀಯ ಸೌಂದರ್ಯವನ್ನು ಸವಿಯಬೇಕು. ಆದರೆ, ಈಗ ಚಾರಣಕ್ಕೆ ತೆರಳುವ ಕೆಲವರಲ್ಲಿ ಆ ಪರಿಕಲ್ಪನೆಯೇ ಇಲ್ಲ. ಬೊಬ್ಬೆ ಹೊಡೆಯುವುದು, ಬಂಡೆ ಕಲ್ಲುಗಳ ಮೇಲೆ ಹತ್ತುವುದು ಹೀಗೆ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಸುವವರೇ ಹೆಚ್ಚಾಗಿದ್ದಾರೆ.

ಚಾರಣಕ್ಕೆ ಸಣ್ಣ ಗುಂಪಿನಲ್ಲಿ ತೆರಳಿದರೆ ಅಲ್ಲಿನ ಸೊಗಸಾದ ವಾತಾವರಣವನ್ನು ಸವಿಯಲು ಸಾಧ್ಯವಾಗುತ್ತದೆ. ಹೆಚ್ಚಿನ ಜನ ತೆರಳಿದಾಗ ಅಲ್ಲಿನ ಸೌಂದರ್ಯವನ್ನು ಸರಿಯಾಗಿ ಸವಿ ಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಅಲ್ಲಿನ ಅರಣ್ಯದ ಬಗ್ಗೆ ಮಾಹಿತಿ ಇರುವವರು ಜೊತೆಗೆ ಇದ್ದರೆ ಚಾರಣಕ್ಕೆ ತೆರಳುವವರಿಗೆ ಯಾವ ಸಮಸ್ಯೆ ಯೂ ಆಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಅರಣ್ಯ ಸಚಿವರು ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗೆ ಮೆಚ್ಚುಗೆ ವ್ಯಕ್ತವಾಗಿದೆ.

” ಜಾತ್ರೆಗೆ ಹೋದಂತೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ತೆರಳಿದರೆ ಅಲ್ಲಿನ ಸೌಂದರ್ಯವನ್ನು ಸವಿಯಲು ಸಾಧ್ಯವಾಗುವುದಿಲ್ಲ. ಕೊಡಗಿನ ಎಲ್ಲ ಚಾರಣ ಪ್ರದೇಶಕ್ಕೆ ತೆರಳುತ್ತೇವೆ. ಹಿಂದೆ ಇದ್ದಷ್ಟು ಸೌಂದರ್ಯ ಈಗ ಕಾಣ ಸಿಗುವುದಿಲ್ಲ. ಹಸಿರು ಮಾಯವಾಗುತ್ತಿದ್ದು, ಒಣ ರಸ್ತೆ ಮಾದರಿಯ ಚಿತ್ರಣ ಕಂಡುಬರುತ್ತಿದೆ. ಪ್ರಕೃತಿ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಸಚಿವರ ಈ ನೂತನ ಮಾರ್ಗಸೂಚಿ ಶ್ಲಾಘನೀಯವಾಗಿದೆ.”

-ಮಹೇಶ್, ಆರೋಹಣ ಕೊಡಗು ಚಾರಣ ತಂಡದ ಪ್ರಮುಖ

” ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೊಸ ಮಾರ್ಗಸೂಚಿ ಅನ್ವಯವಾಗಲಿದ್ದು, ಕೊಡಗು ಜಿಲ್ಲೆಗೂ ಅನ್ವಯವಾಗಲಿದೆ. ಹೊಸ ಮಾರ್ಗಸೂಚಿಯ ಅನುಷ್ಠಾನ ಸಂಬಂಧ ಸಿದ್ಧತೆಯಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಚಾರಣ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿಯನ್ನು ಪಾಲಿಸಲಾಗುತ್ತದೆ.”

-ಅಭಿಷೇಕ್, ಉಪಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ

 

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

38 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

4 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

4 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

4 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

5 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago