Andolana originals

ಖಾಸಗಿ ಶಾಲೆಗಳ ಆರ್ಭಟಕ್ಕೆ ಬಾಡಿದ ಸರ್ಕಾರಿ ಶಾಲೆ

ವರಹಳ್ಳಿ ಆನಂದ

ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಶಾಲೆಯಲ್ಲೀಗ ಕಲಿಯುತ್ತಿರುವುದು ಕೇವಲ ೩೯ ಮಕ್ಕಳು

ಮೈಸೂರು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳ ಆರ್ಭಟಕ್ಕೆ ಬಾಡಿ ಹೋಗಿ, ಇದು ಹಿರಿಯ ಪ್ರಾಥಮಿಕ ಶಾಲೆಯೋ? ಕಿರಿಯ ಪ್ರಾಥಮಿಕ ಶಾಲೆಯೋ? ಎಂಬಂತೆ ಕಾಣುತ್ತಿದೆ.

ಈ ಶತಮಾನ ಶಾಲೆಯಲ್ಲಿ ಪ್ರಸ್ತುತ ಕೇವಲ ೩೯ ಮಕ್ಕಳು ಕಲಿಯುತ್ತಿದ್ದು, ಸುತ್ತಮುತ್ತಲ ಊರುಗಳಲ್ಲಿನ ಖಾಸಗಿ ಶಾಲೆಗಳ ಆರ್ಭಟಕ್ಕೆ ಈ ಶಾಲೆಯಲ್ಲಿ  ಮಕ್ಕಳ ಸಂಖ್ಯೆ ಕುಗ್ಗಿಹೋಗಿದೆ. ಶಾಲೆಯು ಪಾಳಾಗುವ  ಹಂತ  ತಲುಪಿದೆ.

೧೯೧೪ರಲ್ಲಿ ಸ್ಥಾಪಿಸಲಾದ ಈ ಶಾಲೆಗೆ ಈಗ ೧೧೨ ವರ್ಷ.  ೧ನೇ ತರಗತಿಯಿಂದ ೮ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ೨೦೦೬-೨೦೦೭ನೇ ಸಾಲಿನಲ್ಲಿ ೮ನೇ ತರಗತಿಯನ್ನು ಆರಂಭಿಸಲಾಗಿದೆ. ಶಾಲೆಯಲ್ಲಿ ನಾಲ್ಕು ಕೊಠಡಿಗಳಲ್ಲಿದ್ದು, ಮಳೆ  ಬಂದರೆ ಎರಡು ಕೊಠಡಿಗಳಲ್ಲಿ  ನೀರು  ಸೋರುತ್ತದೆ.

ಕಲಿಯುತ್ತಿರುವ ೩೯ ಮಕ್ಕಳೂ ಚುಂಚನಹಳ್ಳಿ ಗ್ರಾಮದವರೇ ಆಗಿದ್ದಾರೆ. ಹಿಂದೆ ಸುತ್ತಮುತ್ತಲ ಊರುಗಳಿಂದ ಮಕ್ಕಳು ಬರುತ್ತಿದ್ದರು. ಶಾಲೆ ತುಂಬಿ ತುಳುಕುತ್ತಿದ್ದ ಕಾಲವೂ ಇತ್ತು. ೨೦೦-೩೦೦ವರೆಗೂ ಮಕ್ಕಳ ದಾಖಲಾತಿ ಇತ್ತು. ತಗಡೂರು,  ದೇವನೂರು, ಕೋಣನೂರು,  ಕವಲಂದೆ, ಉಮತ್ತೂರು,  ಪ್ರಧಾನವಾಗಿ ನಂಜನಗೂಡು ಪಟ್ಟಣದಲ್ಲಿರುವ ಖಾಸಗಿ ಶಾಲೆಗಳು ಈ ಶಾಲೆಗೆ ಸೇರಬೇಕಿದ್ದ ಮಕ್ಕಳನ್ನು ತಮ್ಮತ್ತ ಸೆಳೆದಿವೆ. ಖಾಸಗಿ ಶಾಲೆಯ ವಾಹನಗಳು ಈ ಊರಿಗೆ ಬಂದು ಮಕ್ಕಳನ್ನು ತಮ್ಮ ಶಾಲೆಗಳಿಗೆ ಕರೆದೊಯ್ಯುವುದನ್ನು ಕಾಣಬಹುದಾಗಿದೆ.

೧೯೧೪ರಲ್ಲಿ ಶಾಲೆ ಸ್ಥಾಪನೆಗೊಂಡಾಗ ೨೨ ಮಕ್ಕಳು ಪ್ರವೇಶ ಪಡೆದಿರುವುದು ಶಾಲೆಯ ಲೆಡ್ಜರ್‌ನಲ್ಲಿ ದಾಖಲಾಗಿದೆ. ಸದ್ಯ ಈ ಶಾಲೆಯಲ್ಲಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ೧೮ ಮಕ್ಕಳು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ೨೧ ಮಕ್ಕಳು ಕಲಿಯುತ್ತಿದ್ದಾರೆ. ಪ್ರಭಾರ ಮುಖ್ಯೋಪಾಧ್ಯಾಯರಾಗಿ ಸತೀಶ್, ಸಹ ಶಿಕ್ಷಕರಾಗಿ ಪ್ರವೀಣ್ ಕುಮಾರ್, ರಶ್ಮಿ, ಚಂದ್ರಶೇಖರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಈ ಶಾಲೆಯಲ್ಲಿ ಓದಿದ ಹಲವು ಮಂದಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ನವೀನ್ ಎಂಬವರು ಹುಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಮಹಾದೇವಸ್ವಾಮಿ ಎಂಬವರು ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನೇರಳೆ ಗ್ರಾಮದಲ್ಲಿ ನೆಲೆಸಿರುವ ಗೋವಿಂದರಾಜು ಎಂಬವರು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಕಿರಣ್ ಕುಮಾರ್ ಎಂಬವರು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಗರ್ಲೆಯಲ್ಲಿ ನೆಲೆಸಿದ್ದಾರೆ.  ಈ ಶಾಲೆಗೆ ಯಾರದೇ ಸಹಾಯಹಸ್ತ ಸಿಗುತ್ತಿಲ್ಲ.  ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಬೇಕಿದೆ. ಶಾಲೆಗೆ ಸುಣ್ಣ ಬಣ್ಣ ಬಳಿದು ಯಾವ ಕಾಲವಾಗಿದೆಯೋ? ಎಂಬಂತಿದೆ. ಶಾಲೆಯು ಊರಿನ ಮಧ್ಯಭಾಗದಲ್ಲಿ ಇರುವ ಕಾರಣ ಊರಾಚೆ ಇರುವ ಸರ್ಕಾರಿ ಜಾಗದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಅಲ್ಲಿ ಶಾಲೆಯನ್ನು ನಡೆಸುವಂತೆಒತ್ತಾಯಿಸುತ್ತಲೇ ಇದ್ದಾರೆ. ಮಕ್ಕಳ ಆಟೋಟಗಳಿಗೆ ಪೂರಕ ವಾತಾವರಣ ಇಲ್ಲವಾಗಿದೆ. ಮುಖ್ಯವಾಗಿ ಶಿಥಿಲಗೊಂಡಿರುವ ಶಾಲೆಯ ಕಟ್ಟಡವನ್ನು ಭದ್ರಗೊಳಿಸುವ ಕಾರ್ಯ ತ್ವರಿತವಾಗಿ ಆಗಬೇಕಿದೆ ಎಂಬುದು ಶಾಲೆಯ ಮುಖ್ಯ ಬೇಡಿಕೆಯಾಗಿದೆ.

ಪ್ರಭಾರ ಮುಖ್ಯೋಪಾಧ್ಯಾಯರಾದ ಸತೀಶ್ ಅವರು ಬೇಸಿಗೆ ರಜೆ ಇರುವ ಕಾರಣ ಸಂಪರ್ಕಕ್ಕೆಸಿಗಲಿಲ್ಲ. ಹಾಗಾಗಿ ಸಹ ಶಿಕ್ಷಕ ಸತೀಶ್ ಅವರನ್ನು ಮಾತನಾಡಿಸಿದಾಗ, ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಮಕ್ಕಳಿಗೆ ಕಲ್ಪಿಸಿ, ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಇಂಗ್ಲಿಷ್ ಮಾಧ್ಯಮಕ್ಕೆ ಅವಕಾಶ ನೀಡಿದರೆ ಇನ್ನೂ ಒಳ್ಳೆಯದು. ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ನಮ್ಮ ಶಾಲೆಗೆ    ಪ್ರವೇಶಾತಿ ಪಡೆದುಕೊಳ್ಳುವಂತೆ ನೋಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

” ಶಾಲೆಯಲ್ಲಿ ಏನೇನು ಸಮಸ್ಯೆಗಳಿವೆ ಎಂಬ ವರದಿ ತರಿಸಿಕೊಂಡು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ.  ಜೊತೆಗೆ ಮಕ್ಕಳ ದಾಖಲಾತಿಮ ಪ್ರಮಾಣ ಹೆಚ್ಚಿಸಲು ಮನೆಮನೆಗೆ ಆಂದೋಲನವನ್ನು ಪರಿಣಾಮಕಾರಿಯಾಗಿ ಮಾಡುವ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.”

-ಮಹೇಶ್, ಕ್ಷೇತ್ರ ಶಿಕ್ಷಣ ಅಧಿಕಾರಿ, ನಂಜನಗೂಡು

” ಈಗಾಗಲೇ ಊರಾಚೆ ಇರುವ ಸರ್ಕಾರಿ ಜಾಗದಲ್ಲಿ ಶಾಲೆಗೆ ಹೊಸ ಕಟ್ಟಡನಿರ್ಮಾಣ ಮಾಡಲು ಯೋಜನೆ ರೂಪುಗೊಂಡಿದೆ.  ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುವ ಭರವಸೆ ಇದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಗಮನಹರಿಸುತ್ತಿದ್ದಾರೆ.”

-ಸತೀಶ್, ಪ್ರಭಾರ ಮುಖ್ಯೋಪಾಧ್ಯಾಯರು,

” ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚನಹಳ್ಳಿ ನಾನು ಇದೇ ಶಾಲೆಯಲ್ಲಿ ಐದನೇ ತರಗತಿಯವರೆಗೆ ಓದಿದೆ. ಬಸವರಾಜಪುರ,   ಕೆ.ಆರ್.ಪುರ, ಕಕ್ಕರಹಟ್ಟಿ ಗ್ರಾಮ ಗಳಿಂದ ವಿದ್ಯಾಭ್ಯಾಸಕ್ಕೆ ಬರುತ್ತಿದ್ದ ರು. ಒಂದು ಕ್ಲಾಸ್‌ನಲ್ಲಿ ೬೦ ವಿದ್ಯಾರ್ಥಿಗಳು ಓದುತ್ತಿದ್ದರು. ಗ್ರಾಮಸ್ಥರು ಮನಸ್ಸು ಮಾಡಿ ಇಲ್ಲೇ ಮಕ್ಕಳನ್ನು ದಾಖಲಾತಿ ಮಾಡಬೇಕು. ಶಿಕ್ಷಕರು ಮನೆ ಮನೆಗೆ ಹೋಗಿ ದಾಖಲಾತಿ ಪ್ರಮಾಣವನ್ನು ಹೆಚ್ಚ ಳ ಮಾಡಬೇಕು. ಆದರೆ ಇದು ನಡೆಯುತ್ತಿಲ್ಲ. ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು.

-ಶ್ರೀ ಚನ್ನಬಸವ ಸ್ವಾಮೀಜಿ, ಹಳೇ ವಿದ್ಯಾರ್ಥಿ ಹಾಗೂ ಶ್ರೀ ಕಡಕಲಕಟ್ಟೆ ಮಠಾಧೀಶರು, ಚುಂಚನಹಳ್ಳಿ

” ನಾವು ಓದುತ್ತಿದ್ದಾಗ ಪ್ರತಿ ತರಗತಿಯಲ್ಲೂ ೫೦-೬೦ ಮಕ್ಕಳು ಕಲಿಯುತ್ತಿದ್ದರು. ಈಗ ಅಂತಹ ವಾತಾವರಣ ಕಾಣುತ್ತಿಲ್ಲ.  ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಜನಪ್ರತಿನಿಧಿಗಳೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಶಾಲೆಗಳ ಅವನತಿ ಇಲ್ಲಿಂದಲೇ ಶುರುವಾಗುತ್ತಿದೆ.  ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕು ಎಂಬ ಕಠಿಣ ಕಾನೂನು ಜಾರಿಯಾಗಬೇಕು.”

-ಸಿ.ಎಂ.ಸುಗಂಧರಾಜು, ಹಳೇ ವಿದ್ಯಾರ್ಥಿ ಹಾಗೂ ಪತ್ರಕರ್ತ, ಚುಂಚನಹಳ್ಳಿ

” ಶಾಲಾ ದಾಖಲಾತಿ ಕಡಿಮೆ ಆಗುವುದಕ್ಕೆ ಶಾಲೆಯ ಶೈಕ್ಷಣಿಕ ವಾತಾವರಣ ಪ್ರಮುಖ ಕಾರಣವಾಗುತ್ತದೆ. ಹಾಗಾಗಿ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಉನ್ನತೀಕರಿಸಬೇಕು. ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಶಿಕ್ಷಕರ ನೇಮಕಾತಿ ಕಾಲಕ್ಕೆ ತಕ್ಕಂತೆ ನಡೆಯಬೇಕು. ಇಂತಹ ಯಾವ ಕೆಲಸಗಳೂ ಆಗದೇ ಇದ್ದಾಗ, ಪೋಷಕರು ಸಾಮಾನ್ಯವಾಗಿ ಖಾಸಗಿ ಶಾಲೆಗೆ ಹೋಗುವ ಆಲೋಚನೆಯನ್ನು ಮಾಡೇ ಮಾಡುತ್ತಾರೆ.”

-ಚನ್ನಬಸಪ್ಪ, ನಿವೃತ್ತ ಶಿಕ್ಷಕರು, ಚುಂಚನಹಳ್ಳಿ

” ಮನೆ ಮನೆಗೆ ಹೋಗಿ ಮಕ್ಕಳ ದಾಖಲಾತಿ ಆಂದೋಲನ ನಡೆಸುತ್ತಿದ್ದರು. ಈಗ ಆ ಬದ್ಧತೆ ಕಾಣುತ್ತಿಲ್ಲ. ಶಿಕ್ಷಕರು ನಾಮಕಾವಸ್ಥೆಗೆ ದಾಖಲಾತಿ ಆಂದೋಲನ ನಡೆಸುತ್ತಾರೆ. ಅದರಲ್ಲಿ ಪರಿಣಾಮಕಾರಿ ನಡೆ ಕಾಣುತ್ತಿಲ್ಲ.”

-ಪುಟ್ಟಣ್ಣ, ಚುಂಚನಹಳ್ಳಿ

” ಶಾಲೆಗೆ ಆಧುನಿಕ ಪರಿಕರಗಳನ್ನು ಒದಗಿಸುವ ಮೂಲಕ ಈಗಿನ ಕಾಲಕೆ  ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ. ಅಂದರೆ ಶಾಲೆಗಳನ್ನು ಉನ್ನತೀಕರಿಸುವ ಕೆಲಸ ಸರ್ಕಾರದಿಂದಲೇ ಆಗಬೇಕಿದೆ.  ಕಾಲಕಾಲಕ್ಕೆ  ತಕ್ಕಂತೆ ಹೇಗೆ ಸಮಾಜ ಬದಲಾಗುತ್ತದೋ, ಅದೇ ರೀತಿ ಶಾಲೆಯೂ ಬದಲಾಗಬೇಕು.”

-ನಂದಿನಿ ಚಂದ್ರು, ಅಧ್ಯಕ್ಷರು,   ಶಾಲಾ ಅಭಿವೃದ್ಧಿ ಸಮಿತಿ, ಚುಂಚನಹಳ್ಳಿ

 

 

ಆಂದೋಲನ ಡೆಸ್ಕ್

Recent Posts

ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರು ಕಂಗಾಲು

ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…

11 hours ago

ಹನೂರು| ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಳೆ ನಾಶ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು…

11 hours ago

ಗುಂಡ್ಲುಪೇಟೆ| ಭಾರೀ ಗಾಳಿ ಮಳೆಗೆ ಬಾಳೆ ಬೆಳೆ ನಾಶ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ‌ ಬುಧವಾರ ಸುರಿದ ಬಿರುಗಾಳಿ ಮಳೆಗೆ ಬಾಲೆ ಬೆಳೆ ನಾಶವಾಗಿರುವ ಘಟನೆ…

11 hours ago

ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಸಾವು: ಕಾರ್ಯಪಾಲಕ ಎಂಜಿನಿಯರ್‌ ಅಮಾನತ್ತಿಗೆ ಸಿಎಂ ಆದೇಶ

ಬೆಂಗಳೂರು: ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿಯಾಗಿದ್ದ ಪ್ರಕರಣದಲ್ಲಿ ಸಂಬಂಧಪಟ್ಟ ಎಂಜಿನಿಯರ್‌ ಅನ್ನು ಕೂಡಲೇ ಅಮಾನತು…

11 hours ago

ಗುಂಡ್ಲುಪೇಟೆ| ಮನೆ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು…

11 hours ago

ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಗೊಂದಲಗಳನ್ನು ಆದಷ್ಟು…

11 hours ago