Andolana originals

‘ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತದೆ…’

ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ

ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ. ಈ ಸಮಯದಲ್ಲಿ ಆ ದೇಶ ನನಗೆ ಅಪಾರ ಪ್ರೀತಿ ಮತ್ತು ಅವಕಾಶಗಳನ್ನು ನೀಡಿದೆ. ಅಲ್ಲಿನ ರಾಜಕೀಯ, ಧಾರ್ಮಿಕತೆ, ವ್ಯಾಪಾರ, ಆರ್ಥಿ ಕತೆ, ಇತಿಹಾಸ, ವಿದೇಶಾಂಗ ನೀತಿ, ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ನಾನು ನನ್ನ ಅಮೆರಿಕನ್ ಮಿತ್ರರೊಂದಿಗೆ ಕಟು ಟೀಕೆಯ ಮಾತುಗಳಾಡಿದ್ದೇನೆ. ಚರ್ಚಿಸಿದ್ದೇನೆ.

ಬರೆದಿದೆ ನೆ  ಸಹ. ಆದರೆ, ಇವು, ಒಮ್ಮೆಯೂ ನನಗೆ ಭಯ-ಆತಂಕದ ಅನುಭವ ನೀಡಿಲ್ಲ. ೨೦೦೧ ರ ಸೆಪ್ಟೆಂಬರ್ ೧೧ ರ ಘಟನೆ ನನ್ನ ಜೀವನದ ಅತ್ಯಂತ ಭಯಾನಕ ಕ್ಷಣ. ಆ ದಿನ ಅಲ್ ಕೈದಾ ದುರುಳರ ದಾಳಿಗೆ ವರ್ಲ್ಡ್ ಟ್ರೇಡ್ ಸೆಂಟರ್ ಕುಸಿಯುವಾಗ ಅಕ್ಷರಶಃ ನಾನು ಅದರ ಕೆಳಗೆ ಸಿಲುಕಿದ್ದೆ. ನಂತರದಲ್ಲಿ ನನ್ನಲ್ಲಿ ಒಂದು ಆತಂಕವಿತ್ತು- ಈ ದೇಶ ನಮ್ಮಂತಹ ವಿದೇಶಿಯರನ್ನು ಹೇಗೆ ನೋಡಬಹುದು ಅಂತ. ಆದರೆ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಅವರು, ಆ ದಿನ ಮುಸ್ಲಿಂ ಮತ್ತು ಅರಬ್ ಅಮೆರಿಕನ್ನರ ಪಕ್ಕದಲ್ಲಿ ನಿಂತು, ಭಯೋತ್ಪಾದನೆಗೂ ಸಾಮಾನ್ಯ ಜನರಿಗೂ ಸಂಬಂಧವಿಲ್ಲ ಎಂದು ಹೇಳಿ ದೇಶವನ್ನು ಒಂದಾಗಿಟ್ಟರು.

ಹೊರಗಿನಿಂದ ಬಂದವರು ಎಸಗಿದ ದಾಳಿಯಲ್ಲಿ ಮೂರು ಸಾವಿರ ಅಮೆರಿಕನ್ನರು ಹತರಾಗಿದ್ದರೂ ಬಹುಮಟ್ಟಿಗೆ ಇಡೀ ದೇಶ ಅದಕ್ಕೆ ಶಾಂತಿಯಿಂದಲೇ ಪ್ರತಿಕ್ರಿಯಿಸಿತು. ನನ್ನ ಆತಂಕ ಹೆಚ್ಚು ದಿನ ಉಳಿಯಲಿಲ್ಲ. ವೈಯಕ್ತಿಕವಾಗಿ ನನಗೆ ಯಾವುದೇ ಜನಾಂಗೀಯ ನಿಂದನೆಯ ಅನುಭವ ಆಗಿಲ್ಲ. ಆದರೆ,  ಇಂದು ಪರಿಸ್ಥಿತಿ ಬದಲಾಗಿದೆ. ಟ್ರಂಪ್ ಅಂತಹ ನಾಯಕರಿಂದಾಗಿ, ದ್ವೇಷ ಸಾಮಾನ್ಯವಾಗುವುದನ್ನು ಕಂಡಾಗ, ಅಮೆರಿಕದಲ್ಲೇ ನೆಲೆ ಕಂಡು ಕೊಂಡಿರುವ ನನ್ನ ಇಬ್ಬರು ಮಕ್ಕಳಂತಹವರ ಭವಿಷ್ಯದ ಬಗ್ಗೆ ಖಂಡಿತ ಆತಂಕ ಮೂಡುತ್ತದೆ.  ಹಿಟ್ಲರ್ ಕಾಲದ ಜರ್ಮನ್ ಸಮಾಜದ ಬಗೆ  ಮಾರ್ಟಿನ್ ನಿಮ್ಮೊಲ್ಲರ್ ಹೇಳಿದ ಮಾತುಗಳನ್ನು ನೆನಪಿಸುತ್ತವೆ:

” ‘ಅವರು ಬೇರೆಯವರಿಗೆಂದು ಬಂದಾಗ ನಾನು ಸುಮ್ಮನಿದ್ದೆ,  ಕೊನೆಗೆ, ಅವರು ನನಗೆಂದು ಬಂದಾಗ ನನ್ನ ಪರ ನಿಲ್ಲಲು ಯಾರೂ ಇರಲಿಲ್ಲ’. ಅಂತಹ ಪರಿಸ್ಥಿತಿ ನಮಗೆ ಬರಬಾರದು ಅಷ್ಟೇ.”

-ಶೇಷಾದ್ರಿ ಗಂಜೂರು,  ಮಾಧ್ಯಮ ತಜ್ಞರು

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

6 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

6 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

12 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

12 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

12 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

12 hours ago