Andolana originals

ಹುಲಿಯ ಡಿಎನ್ಎ ಪರೀಕ್ಷೆಗೂ ನೆರೆ ರಾಜ್ಯದ ಆಶ್ರಯ

ಮಾದರಿ ಪರೀಕ್ಷೆ ವರದಿಗಾಗಿ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ

ವ್ಯಾಘ್ರಗಳ ಕೂದಲು ಮತ್ತು ಎಂಜಲು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ರವಾನೆ

ಎಸ್.ಪ್ರಶಾಂತ್

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನುಗು, ಮೊಳೆಯೂರು ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿ ಮೂವರು ರೈತರನ್ನು ಬಲಿ ಪಡೆದಿದ್ದ ಹುಲಿಯ ಡಿಎನ್‌ಎ ಮಾದರಿ ಪರೀಕ್ಷೆಗೂ ನೆರೆಯ ತೆಲಂಗಾಣದ ರಾಜ್ಯದ ಪ್ರಯೋಗಾಲಯವನ್ನೇ ಅವಲಂಬಿಸಬೇಕಾಗಿದ್ದು, ವರದಿಗಾಗಿ ತಿಂಗಳುಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ಸರಗೂರು, ನಂಜನಗೂಡು, ಹುಣಸೂರು ತಾಲೂಕಿನ ಕಾಡಂಚಿನ ಭಾಗಗಳಲ್ಲಿ ಹಾಗೂ ಮೈಸೂರು ತಾಲೂಕಿನ ಇಲವಾಲ ಸುತ್ತಮುತ್ತಲಿನಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ಆರಂಭಗೊಂಡಿದೆ. ಅರಣ್ಯ ಇಲಾಖೆ ನಂಜನಗೂಡು ವ್ಯಾಪ್ತಿಯಲ್ಲಿ ಎರಡು ಹುಲಿಗಳನ್ನು ಸೆರೆ ಹಿಡಿದಿದೆ.

ವರದಿ ಬರಲು ವಿಳಂಬ: ಮೂವರನ್ನು ಬಲಿ ಪಡೆದ ಹುಲಿ ಯಾವುದು ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಸೆರೆಸಿಕ್ಕ ಎರಡು ಹುಲಿಗಳ ಮಾದರಿಯನ್ನು ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲ ಯಕ್ಕೆ ಕಳುಹಿಸಲಾಗಿದೆ. ಇಲ್ಲಿಗೆ ದೇಶದ ವಿವಿಧ ಪ್ರಕರಣಗಳ ಮಾದರಿ ಬರುವುದರಿಂದ ವರದಿ ಬರಲು ಇನ್ನೂ ಒಂದು ತಿಂಗಳು ವಿಳಂಬವಾಗಬಹುದು ಎನ್ನಲಾ ಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ೨.೭ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಏಕೆ ಕಾರ್ಯಾರಂಭ ಮಾಡಿಲ್ಲ? ಎಂಬ ಪ್ರಶ್ನೆಯೂ ಮೂಡಿದೆ.

ತರಬೇತಿ ನಿರತ ಸಿಬ್ಬಂದಿ ವನ್ಯಜೀವಿಗೆ ಸಂಬಂಧಿಸಿದ ಅಪರಾಧಗಳ ತನಿಖೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತದೆ. ಈ ಪ್ರಯೋಗಾಲಯವು ಆಧುನಿಕ ಉಪಕರಣಗಳನ್ನು ಹೊಂದಿರುವುದರಿಂದ ತನಿಖೆಗೆ ಸಂಬಂಧಿಸಿದಂತೆ ಸ್ಪಷ್ಟ ವಿಶ್ಲೇಷಣೆ ಮತ್ತು ವರದಿಗಳನ್ನು ಒದಗಿಸುತ್ತದೆ. ಅಲ್ಲದೇ, ಸೆರೆಸಿಕ್ಕ ಹುಲಿಯ ಉಗುರು, ಕೂದಲು, ರಕ್ತ ಸೇರಿದಂತೆ ಇತರ ಮಾದರಿಗಳಿಂದ ಮನುಷ್ಯನನ್ನು ಕೊಂದ ಹುಲಿ ಯಾವುದು ಎಂಬುದು ತಿಳಿದು ಬರಲಿದೆ. ಆದರೆ, ರಾಜ್ಯದಲ್ಲಿ ಸ್ಥಾಪಿಸಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗೆ ತರಬೇತಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸುವುದು ಅನಿವಾರ್ಯವಾಗಿದೆ.

ವರದಿ ಬಂದರೆ ಖಾತ್ರಿ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಮಾಹಿತಿ ನಿರ್ಣಾಯಕ. ಆದರೆ, ಪ್ರಯೋಗಾಲಯ ಸ್ಥಾಪನೆ ದಶಕದಿಂದ ಆಮೆಗತಿಯಲ್ಲಿದೆ.

ಎರಡು ಹುಲಿಗಳ ಮಾದರಿ ರವಾನೆ:  ಅರಣ್ಯ ಇಲಾಖೆ ಅ.೨೮ರಂದು ನಂಜನಗೂಡಿನ ಈರೇಗೌಡನಹುಂಡಿಯಲ್ಲಿ ಹಾಗೂ ನ.೮ರಂದು ಮೊಳೆಯೂರು ಸಮೀಪ ಎರಡು ಹುಲಿಗಳನ್ನು ಸೆರೆಹಿಡಿದಿತ್ತು. ಈ ಎರಡೂ ಹುಲಿಗಳ ಕೂದಲು, ಎಂಜಲಿನ ಸ್ಯಾಂಪಲ್ ಸೇರಿದಂತೆ ಡಿಎನ್‌ಎ ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಲಾಗಿದೆ. ಆದರೆ, ವರದಿ ಬರಲು ಇನ್ನೂ ತಡವಾಗುವ ಕಾರಣ ಅರಣ್ಯ ಇಲಾಖೆ ಕೂಂಬಿಂಗ್ ಮುಂದುವರೆಸಿದೆ. ಅಲ್ಲದೇ, ತೊಂದರೆ ಮಾಡದ ಹುಲಿಗಳನ್ನು ಸೆರೆ ಹಿಡಿಯುವುದು ಅನಿವಾರ್ಯವಾಗಿದೆ. ವರದಿ ತಡವಾಗಿರುವ ಕಾರಣ ಸೆರೆಸಿಕ್ಕ ಹುಲಿಯೇ ದಾಳಿ ಮಾಡಿತ್ತೇ ಅಥವಾ ಬೇರೆ ಹುಲಿಯೇ ಎಂಬ ಗೊಂದಲ ಗ್ರಾಮಸ್ಥರಲ್ಲಿ ಮೂಡಿದೆ.

” ವರದಿ ಶೀಘ್ರ ಬರಲಿ ಎಂಬ ಉದ್ದೇಶದಿಂದ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸೆರೆ ಸಿಕ್ಕ ಹುಲಿಯ ಡಿಎನ್‌ಎ ಮಾದರಿಗಳನ್ನು ರವಾನಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಪ್ರಕರಣಗಳ ಮಾದರಿಯನ್ನು ಹೈದರಾಬಾದ್‌ಗೆ ಕಳುಹಿಸಿರುವುದರಿಂದ ವರದಿ ಬರಲು ತಿಂಗಳಾಗಬಹುದು.”

-ಪರಮೇಶ್, ಎಸಿಎಫ್, ಹೆಡಿಯಾಲ ಉಪವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

37 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

39 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

41 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

44 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

49 mins ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

57 mins ago