Andolana originals

ಕೊಡಗು ಜಿಲ್ಲೆಯಲ್ಲಿ ಮಧುಮೇಹ ಹೆಚ್ಚಳ!

ನವೀನ್ ಡಿಸೋಜ

ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ರೋಗ ಪತ್ತೆ-ಚಿಕಿತ್ಸೆಗೆ ವಿಶೇಷ ಗಮನ

ಮಡಿಕೇರಿ: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಧುಮೇಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ತಪಾಸಣೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ೩೦ ವರ್ಷ ಮೇಲ್ಪಟ್ಟವರಲ್ಲಿ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ (ಎನ್‌ಪಿ-ಎನ್‌ಸಿಡಿ) ವಿಶೇಷ ಗಮನ ಹರಿಸಲಾಗಿದೆ.

ಜಿಲ್ಲೆಯಲ್ಲಿ ಒಂದೂವರೆ ವರ್ಷದ ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಮಧುಮೇಹದ ವ್ಯಾಪಕತೆಯನ್ನು ಎತ್ತಿ ತೋರಿಸುತ್ತಿವೆ. ೨೦೨೫ರ ಏಪ್ರಿಲ್‌ನಿಂದ ೨೦೨೬ರ ಮಾರ್ಚ್ವರೆಗೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಟ್ಟು ೨,೩೧,೭೯೬ ಮಂದಿಯನ್ನು ಮಧುಮೇಹ ತಪಾಸಣೆಗೆ ಒಳಪಡಿಸಲಾಗಿದ್ದು, ನಿಗದಿತ ಗುರಿಯ ಶೇ.೮೭ರಷ್ಟು ಸಾಧಿಸಲಾಗಿದೆ. ಈ ಅವಧಿಯಲ್ಲಿ ೩೬,೨೪೭ ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.

ಇನ್ನು ೨೦೨೬ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ೮೫,೧೦೧ ಮಂದಿಗೆ ತಪಾಸಣೆ ನಡೆಸಲಾಗಿದ್ದು, ೪,೪೬೪ ಮಂದಿಯಲ್ಲಿ ಹೊಸದಾಗಿ ಮಧುಮೇಹ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ ೮೧,೩೧೪ ಮಂದಿಗೆ ಅಧಿಕ ರಕ್ತದೊತ್ತಡತಪಾಸಣೆ ನಡೆಸಿದಾಗ ೭,೦೭೯ ಮಂದಿಯಲ್ಲಿ ಕಾಯಿಲೆ ಪತ್ತೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಕಾಯಿಲೆ ಪತ್ತೆಹಚ್ಚುವುದಷ್ಟೇ ಅಲ್ಲದೆ, ರೋಗಿಗಳಿಗೆ ನಿರಂತರ ಚಿಕಿತ್ಸೆ ಒದಗಿಸಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ೨೦೨೬ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ವರದಿಯ ಪ್ರಕಾರ ಜಿಲ್ಲೆಯಲ್ಲಿ ೩೬,೨೭೩ ಮಧುಮೇಹ ರೋಗಿಗಳನ್ನು ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ. ಇವರಲ್ಲಿ ೩೦,೮೯೭ ಮಂದಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದು, ನಿಯಂತ್ರಣದ ಪ್ರಮಾಣ ಶೇ.೮೫ರಷ್ಟಿದೆ.

ತಾಲ್ಲೂಕುವಾರು ಮಧುಮೇಹ ನಿಯಂತ್ರಣದ ಪ್ರಮಾಣ ಗಮನಿಸಿದರೆ ಮಡಿಕೇರಿಯಲ್ಲಿ ಶೇ.೮೧, ಸೋಮವಾರಪೇಟೆಯಲ್ಲಿ ಶೇ.೮೬, ಕುಶಾಲನಗರದಲ್ಲಿ ಶೇ.೮೫, ವಿರಾಜಪೇಟೆಯಲ್ಲಿ ಶೇ.೮೬ ಹಾಗೂ ಪೊನ್ನಂಪೇಟೆಯಲ್ಲಿ ಶೇ.೮೮ರಷ್ಟಿದೆ. ಮನೆಯಲ್ಲಿಯೇ ಕಾಯಿಲೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಗೃಹ ಆರೋಗ್ಯ ಯೋಜನೆಯಡಿ ೨೦೨೫ರ ಆಗಸ್ಟ್‌ನಿಂದ ೨೦೨೬ರ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ ೨,೪೦,೨೮೩ ಮಂದಿಯನ್ನು ಮಧುಮೇಹ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ೩,೬೬೪ ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗಿದೆ. ಈಗಾಗಲೇ ಕಾಯಿಲೆ ಹೊಂದಿದ್ದವರೂ ಸೇರಿದಂತೆ ಒಟ್ಟು ೩೪,೮೩೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಹಸಿವು, ಸುಸ್ತು, ಅನಿರೀಕ್ಷಿತ ತೂಕ ಇಳಿಕೆ, ದೃಷ್ಟಿ ಮಂದವಾಗುವುದು ಹಾಗೂ ಗಾಯಗಳು ನಿಧಾನವಾಗಿ ವಾಸಿಯಾಗುವುದು ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ.

ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸದಿದ್ದರೆ ಹೃದಯ, ಮೂತ್ರಪಿಂಡ, ಕಣ್ಣು ಹಾಗೂ ನರಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳುಎದುರಾಗುವ ಸಾಧ್ಯತೆಯಿದೆ. ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆ ಅತ್ಯಂತ ಅಗತ್ಯವಾಗಿದೆ.

” ಜಿಲ್ಲೆಯಲ್ಲಿ ೩೬,೨೭೩ ಮಧುಮೇಹ ರೋಗಿಗಳನ್ನು ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ. ಕಾಯಿಲೆ ಉಲ್ಬಣಿಸಿದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಆರಂಭದಲ್ಲಿಯೇ ಪತ್ತೆಹಚ್ಚಿ ನಿಯಂತ್ರಿಸುವುದು ಉತ್ತಮ. ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ನಡೆಯುತ್ತಿರುವ ತಪಾಸಣೆ, ಆರಂಭಿಕ ಪತ್ತೆ ಹಾಗೂ ನಿರಂತರ ಚಿಕಿತ್ಸಾ ಅನುಸರಣೆ ಕಾರ್ಯಕ್ರಮಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.”

ಡಾ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಆರೋಗ್ಯ ಇಲಾಖೆ 

ಜೀವನಶೈಲಿ ಬದಲಾವಣೆ ಅಗತ್ಯ:  ಮಧುಮೇಹ ನಿಯಂತ್ರಣಕ್ಕೆ ಆಹಾರ ಪದ್ಧತಿ ಹಾಗೂ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ, ತರಕಾರಿ, ಸೊಪ್ಪು ಹಾಗೂ ನಾರಿನಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಪ್ರತಿದಿನ ಕನಿಷ್ಠ ೩೦ ನಿಮಿಷಗಳ ಕಾಲ ನಡಿಗೆ ಅಥವಾ ವ್ಯಾಯಾಮ ಮಾಡಬೇಕು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆಯಬೇಕು. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಎಚ್‌ಬಿಎ೧ಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ಸ್ಥಗಿತಗೊಳಿಸಬಾರದು.

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಂವಿಧಾನ ದಿನಾಚರಣೆ ಒಂದು ಪಕ್ಷದ ಕಾರ್ಯಕ್ರಮವೇ?

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಹಾಗಿರುವಾಗ ಎಲ್ಲ ಪಕ್ಷಗಳ…

1 min ago

ಅವ್ಯವಸ್ಥೆಯ ಆಗರವಾದ ಪಾರ್ಕಿಂಗ್ ಸ್ಟ್ಯಾಂಡ್‌

ಎಂ.ನಾರಾಯಣ ತಿ.ನರಸೀಪುರ ಬಸ್ ನಿಲ್ದಾಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ: ಆರೋಪ  ತಿ.ನರಸೀಪುರ: ನಿತ್ಯ ನೂರಾರು ಪ್ರಯಾಣಿಕರು ಮತ್ತು ದ್ವಿಚಕ್ರ…

10 mins ago

ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ

ಆದರ್ಶ ಜೀವನಕ್ಕೆ ಪ್ರೇರಣೆ: ಮಹಾತ್ಮ ಗಾಂಧೀಜಿ ಬಗ್ಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಶಿಕ್ಷಕರಾದ ಯಶೋಧ ಮಿಸ್ ನನಗೆ ಪ್ರೇರಣೆ…

33 mins ago

ಗಾಂಧಿ ಎಂಬ ಮರುಕಳಿಕೆ

ಕೆ.ಪಿ.ಸುರೇಶ್ ರಾಷ್ಟ್ರಪಿತ ಗಾಂಧಿ ಎಂಬ ಅಸ್ತಿತ್ವ ಗಾಳಿಯಷ್ಟೇ ಸಲೀಸು ಎಂಬ ವಾತಾವರಣ ಇತ್ತು. ಆದರೆ ಕಳೆದೊಂದು ದಶಕದಿಂದ ಗಾಂಧಿಯ ಚಾರಿತ್ರ್ಯಹನನ, ಅಪಮಾಹಿತಿಯ…

40 mins ago

ಗಾಂಧಿ ಪ್ರಭಾವಳಿ

ಕೆ.ವಿ.ಸುರೇಶ್, ರೀಡರ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಗಾಂಧಿ ಅಭಿಯಾನ ಅರಿವಿನಯಾನ ವಿಷಯ ಕುರಿತ ‘ಆಂದೋಲನ’ ದಿನಪತ್ರಿಕೆಯಸರಣಿ ಲೇಖನಗಳು, ಮುಗ್ಧ…

49 mins ago

ಒಂದು ಅಪೂರ್ವ, ಸಾರ್ಥಕ ಪ್ರಯತ್ನ

ಕೆ.ವೆಂಕಟರಾಜು, ರಂಗಕರ್ಮಿ, ಚಾಮರಾಜನಗರ ಗಾಂಧೀಜಿಯವರ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ಗೆ ೧೦೦ ವರ್ಷ. ದೇಶದ ಒಳಗೆ ಗಾಂಧೀಜಿಯವರ ಬಗ್ಗೆ ಅವಜ್ಞೆ ಹಬ್ಬುತ್ತಿರುವ…

57 mins ago