Andolana originals

ಜನವರಿಗೆ ಕೆರಿಯರ್ ಹಬ್ ಪುನಾರಂಭ

ನಿರುದ್ಯೋಗ ನಿವಾರಣೆಗೆ ಕೆರಿಯರ್ ಹಬ್ ಸ್ಥಾಪನೆ; ಮೈಸೂರು ವಿಶ್ವವಿದ್ಯಾನಿಲಯದಿಂದ ಸಿದ್ಧತೆ

ಅನುಚೇತನ್ ಕೆ.ಎಂ.

ಮೈಸೂರು: ಕೋವಿಡ್ ಕಾರಣಕ್ಕೆ ಅನುದಾನ ಸ್ಥಗಿತಗೊಂಡಿದ್ದರಿಂದ ಮುಚ್ಚಲ್ಪಟ್ಟಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕೌಶಲ ತರಬೇತಿ ಕೇಂದ್ರ (ಕೆರಿಯರ್ ಹಬ್)ವನ್ನು ಹೊಸ ವರ್ಷಾರಂಭದಲ್ಲಿ ಪುನಾರಂಭಿಸಲು ಸಿದ್ಧತೆ ನಡೆದಿದೆ.

ಉನ್ನತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ನಿರುದ್ಯೋಗ ನಿವಾರಣೆಗಾಗಿ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು ೨೦೧೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಈ ಕೆರಿಯರ್ ಹಬ್‌ನ್ನು ಸ್ಥಾಪಿಸಿದ್ದರು. ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಅನುದಾನ ಸ್ಥಗಿತಗೊಂಡ ಕಾರಣ ಸೀಲ್‌ಡೌನ್ ಆದ ಈ ಕೇಂದ್ರ ಕಳೆದ ನಾಲ್ಕು ವರ್ಷಗಳಿಂದ ನಿದ್ರಾವಸ್ಥೆಯಲ್ಲಿತ್ತು.

ಪ್ರಸ್ತುತ ಕುಲಪತಿಯಾಗಿರುವ ಪ್ರೊ.ಎನ್.ಕೆ. ಲೋಕನಾಥ್ ಅವರು, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಆರಂಭಿಸಲು ಉತ್ಸುಕತೆ ತೋರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ -ಲವಾಗಿ ವೃತ್ತಿ ತರಬೇತಿ ನೀಡಲು ಕೇಂದ್ರ ಸರ್ಕಾರದ ರೂಸಾ(ರಾಷ್ಟ್ರೀಯ ಉತ್ಕೃಷ್ಟತಾ ಶಿಕ್ಷಾ ಅಭಿಯಾನ) ವತಿಯಿಂದ ೨ ಕೋಟಿ ರೂ. ಅನುದಾನ ದೊರೆತಿದ್ದು, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ಕೂಡ ೫೦ ಲಕ್ಷ ರೂ. ಅನುದಾನ ನೀಡುತ್ತಿದೆ. ಇದರಿಂದಾಗಿ ಕೆರಿಯರ್ ಹಬ್‌ನ್ನು ಜನವರಿಯಲ್ಲಿ ಪುನಾರಂಭಿಸಲು ವಿವಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

೨೦೧೯ರಲ್ಲಿ ಆರಂಭವಾದ ಈ ಕೆರಿಯರ್ ಹಬ್‌ನಲ್ಲಿ ಎರಡು ವರ್ಷಗಳಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌಶಲ ತರಬೇತಿ ಪಡೆದಿದ್ದು, ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗವನ್ನೂ ಗಿಟ್ಟಿಸಿಕೊಂಡು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ.

ಕೆರಿಯರ್ ಹಬ್ ಗುರಿ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರೈಸಿದ ನಂತರ ಸೂಕ್ತ ಉದ್ಯೋಗ ಗಿಟ್ಟಿಸಿಕೊಳ್ಳಲು, ಕೇಂದ್ರದ ‘ಆತ್ಮ ನಿರ್ಭರ’ಯೋಜನೆಯಡಿ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೂ ಸಕಲ ರೀತಿಯ ಸ್ಪರ್ಧಾತ್ಮಕ ವಿಷಯಗಳ ತರಬೇತಿ, ಕೌಶಲಾಭಿವೃದ್ಧಿ, ಕಂಪ್ಯೂಟರ್, ಸಾ-ವೇರ್, ಹಾರ್ಡ್‌ವೇರ್, ಕೃಷಿ ಸಂಬಂಧಿತ ವಿಷಯಗಳು, ಸ್ಪೋಕನ್ ಇಂಗ್ಲಿಷ್, ಕಮ್ಯುನಿಕೇಷನ್, ಸಂದರ್ಶನ ಎದುರಿಸುವ ತರಬೇತಿ ಸೇರಿದಂತೆ ಹಲವು ರೀತಿಯ ಕೌಶಲಗಳನ್ನು ಕಲಿಸಲಾಗುತ್ತದೆ. ತದ ನಂತರ ಪ್ಲೇಸ್‌ಮೆಂಟ್‌ಗೆ ಅವಕಾಶ ಕಲ್ಪಿಸಿ, ಕೆರಿಯರ್ ಹಬ್ ನಿಂದಲೇ ಕಂಪೆನಿಗಳನ್ನು ಕ್ಯಾಂಪಸ್ ಸಂದರ್ಶನಕ್ಕೆ ಕರೆಸಲಾಗುತ್ತದೆ.

ಕೌಶಲ ತರಬೇತಿ ಪ್ರಕ್ರಿಯೆ: ಮೈಸೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಇದಾಗಿದ್ದು, ಪ್ರಾರಂಭದಲ್ಲಿ ೩,೦೦೦ ಸಾವಿರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ೧,೨೦೦ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಅವರ ವಿಷಯಗಳಿಗೆ ಅನುಗುಣವಾಗಿ ಎಲ್ಲ ರೀತಿಯ ತರಬೇತಿಯನ್ನೂ ನೀಡಲಾಗುತ್ತದೆ. ಇದಕ್ಕಾಗಿ ೫೦ ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಅತ್ಯುತ್ತಮ ತರಬೇತುದಾರರನ್ನು ಆಯ್ಕೆ ಮಾಡಲಾಗಿದೆ. ೧೦ ದಿನಗಳಿಂದ ೬ ತಿಂಗಳವರೆಗೆ ತರಬೇತಿ ನೀಡಲಾಗುತ್ತದೆ. ನಿತ್ಯ ಬೆಳಿಗ್ಗೆ ೮ ರಿಂದ ೧೦ ಗಂಟೆವರೆಗೆ, ಸಂಜೆ ೪ ರಿಂದ ೬ ಗಂಟೆವರೆಗೆ ಹಾಗೂ ರಜಾದಿನಗಳಲ್ಲಿ ದಿನವಿಡಿ ತರಬೇತಿ ನೀಡಲಾಗುತ್ತದೆ.

ತರಬೇತಿ ನೀಡಲಿರುವ ವಿಷಯಗಳು:  ಇಂಡಸ್ಟ್ರಿ ೪.೦, ಡಿಸೈನ್ ಕ್ಷೇತ್ರ, ಪ್ಲೇಸ್‌ಮೆಂಟ್ ಸಂದರ್ಶನ, ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕಂಪ್ಯೂಟರ್ ಕೌಶಲ, ಗೊಂಬೆ ತಯಾರಿಕೆ, ಆಂಡ್ರಾಯ್ಡ್ ಅಪ್ಲಿಕೇಷನ್, ಟಾಯ್ಕಾಥಾನ್, ಧ್ವನಿ ಆಧರಿತ ತರಬೇತಿ.

ಸೌಲಭ್ಯಗಳು ಏನೇನು?: ಸಿಎನ್‌ಸಿ ಮಿಷನ್, ತ್ರಿಡಿ ಪ್ರಿಂಟಿಂಗ್, ಸ್ಕ್ಯಾನಿಂಗ್, ಮಿಕ್ಸಿಂಗ್ ಸ್ಟುಡಿಯೋ, ರೋಬೊಟಿಕ್ ಅಂಡ್ ಆಟೋಮೇಷನ್ ಲ್ಯಾಬ್, ಕೆ-ಟೇರಿಯನ್,ಹೊಲಿಗೆ ಯಂತ್ರಗಳು, ಮೇಕರ್ ಲ್ಯಾಬ್

” ಕೆರಿಯರ್ ಹಬ್ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಕಾಲೇಜು ಕಲಿಕೆಯ ಜೊತೆಗೆ ತರಬೇತಿ ನೀಡುವ ಉದ್ದೇಶದಿಂದ ಈ ಯೋಜನೆ ಸಿದ್ಧಗೊಳಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳ ಬದುಕು ಹಸನಾಗಿಸುವ ಪ್ರಯತ್ನ ನಮ್ಮದಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುವಲ್ಲಿ ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳುವ ಆಶಯವಿದೆ.”

-ಪ್ರೊ.ಆರ್.ಎಸ್.ಉಮಾಕಾಂತ್, ನಿರ್ದೇಶಕರು, ವೃತ್ತಿ ತರಬೇತಿ ಕೇಂದ್ರ

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ನಿಂದ ೫೦ ಲಕ್ಷ ರೂ. ಅನುದಾನ ಕೆರಿಯರ್ ಹಬ್ ತರಬೇತಿಗೆ ಈಗಾಗಲೇ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಿಂದ ೫೦ ಲಕ್ಷ ರೂ.ಮಂಜೂರಾಗಿದ್ದು, ೬ ತಿಂಗಳು ಸಹಾಯಕವಾಗುತ್ತದೆ. ರೂಸಾದಿಂದ ಒಟ್ಟು ೭.೫ ಕೋಟಿ ರೂ. ಅನುದಾನ ದೊರೆಯಲಿದ್ದು, ಪ್ರಸ್ತುತ ೨ ಕೋಟಿ ರೂ. ಬಿಡುಗಡೆಯಾಗಲಿದೆ. ಮೈಸೂರು ವಿವಿ ವ್ಯಾಪ್ತಿಯ ೧೧೧ ಕಾಲೇಜುಗಳ ೧ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಕೇಂದ್ರದ ಪ್ರಯೋಜನ ಸದುಪಯೋಗ ದೊರಕಿಸುವ ಉದ್ದೇಶವಿದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

49 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

51 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

53 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

56 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

1 hour ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

1 hour ago