Andolana originals

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಶನಿವಾರಸಂತೆ: ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಸಂಜೆ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಹೆಮ್ಮನೆ ಗ್ರಾಮದ ಕೆಂಕೆರೆ ಕಾಫಿ ತೋಟದಲ್ಲಿ ಪುನೀತ್ (೩೩) ಮೃತ ದೇಹ ಪತ್ತೆಯಾಗಿದೆ.

ಪುನೀತ್ ಅನೇಕ ವರ್ಷಗಳಿಂದ ಪತ್ನಿ ರತ್ನಳೊಂದಿಗೆ ಶನಿವಾರಸಂತೆಯ ಹೆಮ್ಮನೆ ಕೆಂಕೆರೆ ಗ್ರಾಮದಲ್ಲಿ ವಾಸವಿದ್ದುಕೊಂಡು, ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮಾ.೨೯ ರಂದು ಪುನೀತ್ ಇದ್ದಕಿದ್ದಂತೆ ಕಾಣೆಯಾಗಿದ್ದರು. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮಂಗಳವಾರ ಸಂಜೆ ಪುನೀತ್ ಮೃತ ದೇಹ ಹೆಮ್ಮನೆ ಸಮೀಪದ ಕಾಫಿ ತೋಟದಲ್ಲಿ ಪತ್ತೆಯಾಗಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ರತ್ನ, ಪ್ರಿಯಕರ ನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಸಂಬಂಧ ಹೆಮ್ಮನೆ ಗ್ರಾಮದ ಪ್ರವೀಣ್, ಪಾರ್ವತಮ್ಮ, ಪುನೀತ್ ಪತ್ನಿ ರತ್ನ ಮೂವರನ್ನೂ ಪೊಲೀಸರು ಬುಧವಾರ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಪುನೀತ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ಶನಿವಾರಸಂತೆ ವೃತ್ತ ನೀರಿಕ್ಷಕ ಕೃಷ್ಣರಾಜ್, ಪಿಎಸ್‌ಐ ಗೋವಿಂದ ರಾಜ್, ಚಂದ್ರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಈ ಸರಳತೆ ಹೀಗೆಯೇ ಇರಲಿ

ಇಂದಿನ ದುಬಾರಿ ಕಾಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈಭವದ ಮದುವೆಗಳನ್ನು ನಡೆಸಬೇಕೆ ಎಂಬ ಪ್ರಶ್ನೆ ಏಳುತ್ತದೆ. ಮದುವೆ ಹೇಗೆ…

54 mins ago

ಓದುಗರ ಪತ್ರ: ದೊಡ್ಡ ಸಮಾವೇಶಗಳು ಮಹಾರಾಜ ಕಾಲೇಜು ಮೈದಾನದಲ್ಲಿ ಸಲ್ಲದು

ಮೈಸೂರಿನ ಹೃದಯಭಾಗದಲ್ಲಿ ಇರುವ ಮಹಾರಾಜ ಕಾಲೇಜು ಮೈದಾನ ಲಕ್ಷಾಂತರ ಜನರು ಸೇರುವ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಸೂಕ್ತವಲ್ಲ. ಗುರುವಾರ ನಡೆದ…

56 mins ago

ಓದುಗರ ಪತ್ರ: ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಿ

ಸರಗೂರು ತಾಲ್ಲೂಕು ಕಚೇರಿಗೆ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಜನರು ಬರುತ್ತಾರೆ. ಅವರಲ್ಲಿ ಹಿರಿಯರು, ಹೆಂಗಸರು, ವಿದ್ಯಾರ್ಥಿಗಳೂ ಇರುತ್ತಾರೆ.…

58 mins ago

ಓದುಗರ ಪತ್ರ: ಸಂವಿಧಾನ ದಿನಾಚರಣೆ ಒಂದು ಪಕ್ಷದ ಕಾರ್ಯಕ್ರಮವೇ?

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಹಾಗಿರುವಾಗ ಎಲ್ಲ ಪಕ್ಷಗಳ…

1 hour ago

ಕೊಡಗು ಜಿಲ್ಲೆಯಲ್ಲಿ ಮಧುಮೇಹ ಹೆಚ್ಚಳ!

ನವೀನ್ ಡಿಸೋಜ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ರೋಗ ಪತ್ತೆ-ಚಿಕಿತ್ಸೆಗೆ ವಿಶೇಷ ಗಮನ ಮಡಿಕೇರಿ: ಬದಲಾಗುತ್ತಿರುವ…

1 hour ago

ಅವ್ಯವಸ್ಥೆಯ ಆಗರವಾದ ಪಾರ್ಕಿಂಗ್ ಸ್ಟ್ಯಾಂಡ್‌

ಎಂ.ನಾರಾಯಣ ತಿ.ನರಸೀಪುರ ಬಸ್ ನಿಲ್ದಾಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ: ಆರೋಪ  ತಿ.ನರಸೀಪುರ: ನಿತ್ಯ ನೂರಾರು ಪ್ರಯಾಣಿಕರು ಮತ್ತು ದ್ವಿಚಕ್ರ…

1 hour ago