ಸರಗೂರು ತಾಲ್ಲೂಕು ಕಚೇರಿಗೆ ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಜನರು ಬರುತ್ತಾರೆ. ಅವರಲ್ಲಿ ಹಿರಿಯರು, ಹೆಂಗಸರು, ವಿದ್ಯಾರ್ಥಿಗಳೂ ಇರುತ್ತಾರೆ.
ಜಾತಿ ದೃಢೀಕರಣ ಪತ್ರ, ವಿಧವಾ ಪಿಂಚಣಿ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ ವಿಷಯಕ್ಕೆ ಬರುವವರು ಒಂದು ಕಡೆಯಾದರೆ, ಜಮೀನಿನ ವ್ಯವಹಾರ ಹಾಗೂ ಇತರೆ ಕಾರ್ಯಗಳಿಗೆ ಬರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಜನಸಾಂದ್ರತೆ ಇರುವ ಕಡೆ ಕನಿಷ್ಠ ಶೌಚಾಲಯ ವ್ಯವಸ್ಥೆ ಇರಬೇಕಾಗುತ್ತದೆ.
ಆದರೆ ಇಲ್ಲಿ ಅದು ಇಲ್ಲ. ಮೂತ್ರವಿಸರ್ಜನೆಗೆ ತುರ್ತು ಕರೆ ಬಂದವರು ಪಕ್ಕದಲ್ಲಿ ಇರುವ ಗಿಡ ಗಂಟಿಗಳ ಪೊದೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ೪೦೦ ರಿಂದ ೫೦೦ ಮೀಟರ್ ದೂರದಲ್ಲಿರುವ ಕೆಎಸ್‌ಆರ್ಟಿ ಸಿ ಬಸ್ಸು ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕು ಕಚೇರಿಯ ಸೂಕ್ತ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡುವತ್ತ ಗಮನಹರಿಸಬೇಕು. ಮೊದಲು ಜನಪ್ರತಿನಿಧಿಗಳು ಈ ಕಾರ್ಯ ಚುರುಕಾಗುವಂತೆ ನೋಡಿಕೊಂಡು ಮತದಾರ ಪ್ರಭುಗಳ ಮನ ಗೆಲ್ಲುವತ್ತ ಮನಸ್ಸು ಮಾಡಬೇಕಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು
ಇಂದಿನ ದುಬಾರಿ ಕಾಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈಭವದ ಮದುವೆಗಳನ್ನು ನಡೆಸಬೇಕೆ ಎಂಬ ಪ್ರಶ್ನೆ ಏಳುತ್ತದೆ. ಮದುವೆ ಹೇಗೆ…
ಮೈಸೂರಿನ ಹೃದಯಭಾಗದಲ್ಲಿ ಇರುವ ಮಹಾರಾಜ ಕಾಲೇಜು ಮೈದಾನ ಲಕ್ಷಾಂತರ ಜನರು ಸೇರುವ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಸೂಕ್ತವಲ್ಲ. ಗುರುವಾರ ನಡೆದ…
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಹಾಗಿರುವಾಗ ಎಲ್ಲ ಪಕ್ಷಗಳ…
ನವೀನ್ ಡಿಸೋಜ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ರೋಗ ಪತ್ತೆ-ಚಿಕಿತ್ಸೆಗೆ ವಿಶೇಷ ಗಮನ ಮಡಿಕೇರಿ: ಬದಲಾಗುತ್ತಿರುವ…
ಎಂ.ನಾರಾಯಣ ತಿ.ನರಸೀಪುರ ಬಸ್ ನಿಲ್ದಾಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ: ಆರೋಪ ತಿ.ನರಸೀಪುರ: ನಿತ್ಯ ನೂರಾರು ಪ್ರಯಾಣಿಕರು ಮತ್ತು ದ್ವಿಚಕ್ರ…
ಆದರ್ಶ ಜೀವನಕ್ಕೆ ಪ್ರೇರಣೆ: ಮಹಾತ್ಮ ಗಾಂಧೀಜಿ ಬಗ್ಗೆ ಪ್ರಬಂಧ ಬರೆಯಲು ನಮ್ಮ ಶಾಲೆಯ ಶಿಕ್ಷಕರಾದ ಯಶೋಧ ಮಿಸ್ ನನಗೆ ಪ್ರೇರಣೆ…