Andolana originals

ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ | ಐನ್‌ಸ್ಟೀನ್‌ ಕಂಡಂತೆ ಮಹಾತ್ಮ ಗಾಂಧೀಜಿ

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ

ಆಲ್ಬರ್ಟ್ ಐನ್‌ಸ್ಟೀನ್ ಗಾಂಧೀಜಿಯವರನ್ನು ಕುರಿತು ಬರೆಯುತ್ತಾ, ‘ಗಾಂಧಿ ತಮ್ಮದೇ ಆದ ಸಿದ್ಧಾಂತ ಅಹಿಂಸಾ ತತ್ವಕ್ಕೆ ಬಲಿಯಾದರು. ತಮ್ಮ ದೇಶದಲ್ಲಿ ಅವ್ಯವಸ್ಥೆ, ಅಶಾಂತಿಗಳ ಸಮಯದಲ್ಲಿ ಅವರು ಯಾವುದೇ ವೈಯಕ್ತಿಕ ರಕ್ಷಣೆಯನ್ನು ನಿರಾಕರಿಸಿದರು. ನ್ಯಾಯವಾಗಿ ಹೋರಾಡುವವರು ಬಲ ಪ್ರಯೋಗವನ್ನು ಪೂರ್ಣವಾಗಿ ತ್ಯಜಿಸಬೇಕೆಂಬುದು ಅವರ ಅಚಲ ನಂಬಿಕೆಯಾಗಿತ್ತು. ಈ ನಂಬಿಕೆಗೆ ಅವರು ತಮ್ಮ ಇಡೀ ಬದುಕನ್ನು ಸಮರ್ಪಿಸಿದರು. ಈ ನಂಬಿಕೆಯನ್ನು ಹೃದಯ ಮತ್ತು ಮನಸ್ಸುಗಳಲ್ಲಿ ತುಂಬಿಕೊಂಡು ಮಹಾನ್ ರಾಷ್ಟ್ರವೊಂದನ್ನು ಸ್ವಾತಂತ್ರ್ಯದ ಕಡೆಗೆ ನಡೆಸಿದರು. ಜನರ ನಿಷ್ಠೆಯನ್ನು ಗೆಲ್ಲುವುದು ಕೇವಲ ರಾಜಕೀಯ ತಂತ್ರ ಮತ್ತು ಉಪಾಯಗಳಿಂದಲ್ಲ, ನೈತಿಕವಾಗಿ ಹಾಗೂ ಉದಾತ್ತವಾದ ಜೀವನ ಮಾರ್ಗದ ಜೀವಂತ ನಿದರ್ಶನದ ಮೂಲಕ ಎಂಬುದನ್ನವರು ತೋರಿಸಿಕೊಟ್ಟರು. ‘ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಈ ಯುಗದಲ್ಲಿ, ನಾವು ಆದರ್ಶವಾಗಿಟ್ಟುಕೊಳ್ಳಬೇಕಾದ ಮಾನವ ಸಂಬಂಧಗಳ ಕಲ್ಪನೆಯನ್ನು ಪ್ರತಿನಿಧಿಸಿದ ಏಕೈಕ ವ್ಯಕ್ತಿ ಗಾಂಧೀಜಿ’.

ಗಾಂಧೀಜಿ ನಮ್ಮ ಕಾಲದ ರಾಜಕೀಯ ವ್ಯಕ್ತಿಗಳಲ್ಲೆಲ್ಲಾ ಅತ್ಯಂತ ತೀಕ್ಷ್ಣ ದೃಷ್ಟಿಯುಳ್ಳವರೆಂಬುದು ನನ್ನ ನಂಬಿಕೆ. ಅವರ ತತ್ವಗಳಿಗನುಗುಣವಾಗಿ ಕೆಲಸ ಮಾಡಲು ನಾವು ಪ್ರಯತ್ನಿಸಬೇಕು. ನಮ್ಮ ಉದ್ದೇಶಕ್ಕಾಗಿ ಹೋರಾಡುವ ಹಿಂಸೆಯನ್ನು ಬಳಸಕೂಡದು. ಕೆಟ್ಟದ್ದೆಂದು ನಾವು ನಂಬಿರುವ ಯಾವುದರಲ್ಲಿಯೂ ಭಾಗವಹಿಸಬಾರದು ಎಂದು ನಂಬಿ ಬದುಕಿದವರು. ಅತ್ಯಂತ ಶ್ರೇಷ್ಠವೇತ್ತರನ್ನೂ, ವಿಜ್ಞಾನಿಗಳನ್ನೂ, ರಾಜ್ಯಶಾಸಜ್ಞರನ್ನೂ ಪಡೆದಿದ್ದರೂ ನಮ್ಮ ಕಾಲದ ರಾಜ್ಯಶಾಸ, ಆರ್ಥಿಕ ಮತ್ತು ಸಾಮಾ ಜಿಕ ಸಮಸ್ಯೆಗಳ ಪರಿಹಾರ ಕಾರ್ಯದಲ್ಲಿ ವಿಫಲವಾಗಿದ್ದೇವೆ.

ವಿಶ್ವಶಾಂತಿ ಮತ್ತು ಅಂತಾರಾಷ್ಟ್ರೀಯ ಸೌಹಾರ್ದಯುತ ಸಹಕಾರಕ್ಕೆ ಬುನಾದಿಯಾಗುವ ರಾಜಕೀಯ ಮತ್ತು ಆರ್ಥಿಕ ರಚನೆಗಳನ್ನು ರೂಪಿಸಿಕೊಳ್ಳಲು ಅಸಮರ್ಥರಾಗಿದ್ದೇವೆ. ನಮ್ಮ ಕಾಲದ ಎಲ್ಲಾ ರಾಜ ನೀತಿಜ್ಞರಲ್ಲಿ ಮಹಾತ್ಮ ಗಾಂಧಿಯವರ ವಿಚಾರಗಳೇ ಅತ್ಯಂತ ಪ್ರಜ್ಞಾಪೂರ್ವಕ ನಿಲುವು ಅನಿಸುತ್ತದೆ. ಅವರು ಸೂಚಿಸಿರುವ ರೀತಿಯಲ್ಲಿ ಅವರ ನಿಷ್ಠೆಗಳನ್ನು ಅಂಗೀಕರಿಸಿ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಹಿಂಸಾರಹಿತ ಕ್ರಾಂತಿ, ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಿಧಾನ. ಅಂತರರಾಷ್ಟ್ರೀಯ ಬುನಾದಿಯ ಮೇಲೆ ವಿಶ್ವಕ್ಕೆ ಶಾಂತಿಯನ್ನು ದೊರಕಿಸುವುದು. ಇಂತಹ ಗಾಂಧಿ ಮಾರ್ಗದ ಬಳಕೆಯಿಂದ ಮಾತ್ರವೇ ವಿಶ್ವದ ಸಮಸ್ಯೆಗಳು ಪರಿಹಾರವಾಗುವುದೆಂಬುದು ನನ್ನ ನಂಬಿಕೆ. ಆಲ್ಬರ್ಟ್ ಐನ್‌ಸ್ಟೀನ್ ತಾನು ೧೯೩೫ರಲ್ಲಿ ಅಮೆರಿಕದಲ್ಲಿ ಖರೀದಿಸಿದ್ದ ಹೊಸಮನೆಗೆ ಯಾವ ಅಲಂಕಾರಕ್ಕೂ ಒಪ್ಪಲಿಲ್ಲ. ಆದರೆ, ಅವರ ಕೊಠಡಿಯಲ್ಲಿ ಗಾಂಧೀಜಿ ಅವರ ಭಾವಚಿತ್ರವನ್ನು ಮಾತ್ರ ತೂಗುಹಾಕಲಾಗಿತ್ತು.

ಈ ಕುರಿತು ಸ್ನೇಹಿತರು ಐನ್‌ಸ್ಟೀನ್ ಅವರನ್ನು ಕೇಳಿದಾಗ ‘ಗಾಂಧೀಜಿ ಈ ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿ. ಹಾಗೆಯೇ, ಜಗತ್ತಿನ ಸಕಲ ಜೀವಿಗಳ ರಕ್ಷಣೆಗೆ ಮತ್ತು ಒಳಿತಿಗಾಗಿ ಹಂಬಲಿಸುವ ವ್ಯಕ್ತಿ’ ಎಂದಿದ್ದರಂತೆ. ನಿಜಕ್ಕೂ ಈ ಹೇಳಿಕೆ ಆಶ್ಚರ್ಯಕರವಾದದ್ದು ಮತ್ತು ಗಾಂಧೀಜಿಯವರ ವ್ಯಕ್ತಿತ್ವದ ಹಿರಿಮೆಯನ್ನು ಹೇಳುವಂತಹದ್ದಾಗಿದೆ.

ಡಾ.ಎಂ.ಡಿ.ಉಮೇಶ
(ಲೇಖಕರು ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರು) drumeshmd@yahoo.in

ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

11 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

12 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

13 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

13 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

19 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

19 hours ago