ಆಂದೋಲನ 50

ಅಂತರಾಳದಲ್ಲಿ ಜಾಗ ನೀಡಿ ಶೋಷಿತರ ಏಳ್ಗೆ ಬಯಸಿದ ‘ಆಂದೋಲನ’

ಬಸವರಾಜು ಜಿ. ದೇವೀರಮ್ಮನಹಳ್ಳಿ

ನಾನು ಕಳೆದ ೨೦ ವರ್ಷಗಳಿಂದ ‘ಆಂ ದೋಲನ’ ದ ಓ ದುಗ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಶೋಷಿತ ಸಮುದಾಯಗಳ ಕುರಿತು ಪತ್ರಿಕೆಯು ತೆಗೆ ದುಕೊಂಡ ನಿಲುವು ಹಾಗೂ ತಾಳಿ ದ ಧೋರಣೆಯ ಬಗ್ಗೆ ನನಗೆ ಸದಾ ಹೆಮ್ಮೆಯಿದೆ. ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರನ್ನು ಐದಾರು ಬಾರಿ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಒಮ್ಮೆ ವಿದೇಶದಿಂದ ತಮ್ಮ  ಪ್ರಿಂಟಿಂಗ್‌ ಪ್ರೆಸ್‌ಗೆ ಮಷಿನ್‌ವೊಂದನ್ನು ತಂದಿದ್ದ ಸಂದರ್ಭವದು. ಪ್ರಿಂಟಿಂಗ್‌ ಮಷಿನ್‌ ಅನ್ನು ಸುರಕ್ಷಿತವಾಗಿ ತರಲು ಅದರ ಮೇಲೊದಿಕೆಯಾಗಿ ಮರದ ಶೀಟ್‌ ಗಳನ್ನು ಹಾಕಿ ಮು ದ್ರಣ ಘಟಕಕ್ಕೆ ತರಲಾಗಿತ್ತು. ಈ ಮರದ ಶೀಟ್‌ಗಳ ಬೆಲೆಯೇ ಅಂ ದು ಲಕ್ಷಾಂತರ ರೂಪಾಯಿ ಮೌಲ್ಯ ದಾಗಿತ್ತು. ಈ ಶೀಟ್‌ ಅನ್ನು ಕೊಂಡುಕೊಳ್ಳುವ ಸಲುವಾಗಿ ಅವರ ಬಳಿಗೆ ನಾನು ಹಾಗೂ ನನ್ನ ಸ್ನೇಹಿತ ಇಬ್ಬರೂ ಹೋಗಿದ್ದೆವು. ಈ ವೇಳೆ ಸಮುದಾಯದ ಹಿರಿಯ ನಾಯಕ ವಿ.ಶ್ರೀನಿವಾಸ್‌ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಲ್ಲದೇ ನಾನು ‘ಆಂ ದೋಲನ’ ಓದುಗ ಅಂತ ಪರಿಚಯಿಸಿಕೊಂಡೆ. ಆಗ ಕೋಟಿ ಅವರು ನಾವು ಬಂದ ವಿಚಾರವನ್ನು ಕೇಳಿ ದರು. ನನ್ನ ಸ್ನೇಹಿತ ಮನೆ ಕಟ್ಟುತ್ತಿದ್ದು, ಅದಕ್ಕಾಗಿ ಮಷಿನ್‌ ಮೇಲೊದಿಕೆಯ ಮರ ದ ಶೀಟ್‌ಗಳನ್ನು ನಮಗೆ ನೀಡಿದರೆ ಅನುಕೂಲವಾಗುತ್ತ ದೆ ಎಂದು ನಾನು ವಿನಂತಿಸಿಕೊಂಡೆ.

ಮರು ಮಾತನಾಡದೆ, ಅವರು ಸುಮಾರು ಹತ್ತು ಲಕ್ಷ ರೂಪಾಯಿಗಳ ಬೆಲೆ ಬಾಳುತ್ತಿದ್ದ ಶೀಟ್‌ಗಳನ್ನು ಕೇವಲ ಎರಡು ಲಕ್ಷ
ರೂಪಾಯಿಗಳಿಗೆ ನೀಡಿ ನಮ್ಮನ್ನು ಹರಸಿದರು. ಶೋಷಿತ ಸಮು ದಾಯಗಳ ಜನರು ನಗರ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುವು ದು ಕನಸಿನ ಮಾತು. ಇಂತಹ ಸಂ ದರ್ಭ ದಲ್ಲಿ ಶೋಷಿತ ವರ್ಗ ದ ವ್ಯಕ್ತಿಯೊಬಟರು ಮನೆ ಕಟ್ಟಲು ಮುಂದಾಗಿರುವು ದನ್ನು ನೋಡಿ ಮರದ ಶೀಟ್‌ಗಳನ್ನು ಹಿಂದೆ-ಮುಂದೆ ಯೋಚಿಸದೇ ನಮಗೆ ಕೊಟ್ಟರು. ಈ ಘಟನೆಯು ಶೋಷಿತ ಸಮು ದಾಯಗಳ ಕುರಿತು ರಾಜಶೇಖರ ಕೋಟಿ ಅವರಲ್ಲಿದ ತುಡಿತ ಹಾಗೂ ಮಾನವೀಯ ಅಂತಃಕರಣ ಎಂತಹದು ಎಂಬುದು ಮನವರಿಕೆಯಾಗುತ್ತದೆ. ಪತ್ರಿಕೆಯ ಮುಖಪುಟದಲ್ಲಿ ದೀನ ದಲಿತರ ಸುದಿಗೆ ಜಾಗ ಕೊಟ್ಟಿದ್ದ, ಮನಸ್ಸಿನ ಅಂತರಾಳ ದಲ್ಲಿ ಶೋಷಿತರ ಏಳ್ಗೆ ಬಯಸಿದ್ದ ಕೋಟಿಯವರ ಬದುಕಿನ ನಡೆ ಸರ್ವಕಾಲಕ್ಕೂ ಅನುಕರಣೀಯ. ಅವರ ಆಶಯದ ನೆರಳಿನಲ್ಲಿ ಪತ್ರಿಕೆ ಮುನ್ನಡೆಯಲಿ.

andolana

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

3 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

3 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

3 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

15 hours ago