ರಾಜ್ಯ

ವಿಜಯೇಂದ್ರ ಪರ ಬಣ ಸಭೆ ಪ್ರಾರಂಭ: ಸುಮಾರು 40ಕ್ಕೂ ಅಧಿಕ ನಾಯಕರು ಭಾಗಿ

ದಾವಣಗೆರೆ: ಇಲ್ಲಿನ ಸಾಯಿ ಇಂಟರ್‌ ನ್ಯಾಷನಲ್‌ ಹೋಟೆಲ್‌ನಲ್ಲಿ ಬಿಜೆಪಿ ಪಕ್ಷದ ಸಭೆಗಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರವೆಂದು ಗುರುತಿಸಿಕೊಂಡಿರುವ ಬಣದ ಸುಮಾರು 40ಕ್ಕೂ ಅಧಿಕ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ.

ಈ ಕುರಿತು ಇಂದು(ಡಿಸೆಂಬರ್‌.15) ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಹರತಾಳು ಹಾಲಪ್ಪ, ಸೋಮಶೇಖರ ರೆಡ್ಡಿ, ಎಸ್.ಎ.ರವೀಂದ್ರನಾಥ್‌ ಹಾಗೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸೇರಿದಂತೆ ಸುಮಾರು 40ಕ್ಕೂ ಅಧಿಕ ಬಿಜೆಪಿ ನಾಯಕರು ಭಾಗವಹಿಸಿದ್ದಾರೆ. ಅಲ್ಲದೇ ಈ ಸಭೆಯಲ್ಲಿ ದಾವಣಗೆರೆ ಸಮಾವೇಶ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಬಿಜೆಪಿ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬಣಗಳ ಮಧ್ಯೆ ಇರುವ ಮುನಿಸು ಹೈಕಮಾಂಡ್‌ನ ಮಧ್ಯಪ್ರವೇಶದಿಂದ ತಣ್ಣಾಗಾಗಿದೆ ಎನ್ನುವ ಬೆನ್ನಲ್ಲೇ ಇಂದು
ದಾವಣಗೆರೆಯಲ್ಲಿ ಸೇರಿರುವ ಈ ಸಭೆ ಕುತೂಹಲ ಮೂಡಿಸಿದೆ. ವಿಜಯೇಂದ್ರ ಪರವಾಗಿ ಮಧ್ಯ ಕರ್ನಾಟಕದಲ್ಲಿ ಶಕ್ತಿ ಪ್ರದರ್ಶನದ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸಭೆಗೆ ಹಾಜರಾಗಲು ಶನಿವಾರ(ಡಿ.14) ರಾತ್ರಿ ವೇಳೆಯೇ ಅನೇಕ ನಾಯಕರು ಆಗಮಿಸಿದ್ದರೆ, ಇನ್ನೂ ಕೆಲವು ನಾಯಕರು ಇಂದು ಬೆಳಿಗ್ಗೆ ಆಗಮಿಸಿದ್ದಾರೆ. ಬಳಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಅರ್ಚನ ಎಸ್‌ ಎಸ್

Recent Posts

10 ವರ್ಷದ ಪ್ರೀತಿಗೆ ಮೋಸ,ಹಣವೂ ದೋಖಾ : ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ

ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…

51 mins ago

ವರ್ಷಾಂತ್ಯಕ್ಕೂ ಸಫಾರಿ ಪುನಾರಂಭ ಸಾಧ್ಯತೆ ಕ್ಷೀಣ

ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…

1 hour ago

ಪ್ರತಿಭಟನೆ ಮಾಹಿತಿ ತಿಳಿದು ಕೆರೆಗೆ ನೀರು ತುಂಬಿಸಿದ ಅಧಿಕಾರಿಗಳು!

ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…

4 hours ago

ಓದುಗರ ಪತ್ರ | ರಸ್ತೆ ದುರಸ್ತಿ ಮಾಡಿ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…

4 hours ago

ಓದುಗರ ಪತ್ರ | ತಂಬಾಕುಯುಕ್ತ ದಂತ ಉತ್ಪನ್ನಗಳನ್ನು ನಿಷೇಧಿಸಿ

ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…

4 hours ago

ಓದುಗರ ಪತ್ರ | ರಸ್ತೆಯಲ್ಲಿ ವಾಯುವಿಹಾರ ಅಪಾಯಕಾರಿ

ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…

4 hours ago